ಸಿನಿಮಾದಲ್ಲಿ ಕಲಾವಿದರು ಬಳಸಿದ ಬಟ್ಟೆಯನ್ನ ಏನು ಮಾಡ್ತಾರೆ ಗೊತ್ತಾ? ಕೇಳಿದ್ರೆ ನಿಮಗೇ ಆಶ್ಚರ್ಯವಾಗಬಹುದು!

ಸಿನಿಮಾ ಇಂಡಸ್ಟ್ರಿ ಅನ್ನೋದು ಒಂದು ಬಣ್ಣದ ಲೋಕ. ಇಲ್ಲಿ ಕಲಾವಿದರು ನಟಿಸುತ್ತಾರೆ. ಸಿನಿಮಾ ಗೆದ್ದರೆ ದುಡ್ದು ಇಲ್ಲವಾದರೆ ಮತ್ತೊಂದು ಪ್ರಯತ್ನ. ಸಿನಿಮಾ ರಂಗದಲ್ಲಿ ಹಾಗಿರಬಹುದು ಹಾಗಿರಬಹುದು ಎನ್ನುವ ಕಲ್ಪನೆ ನಮ್ಮದು. ಸಿನಿಮಾವನ್ನು ಹೇಗೆ ನಿರ್ಮಾಣ ಮಾಡುತ್ತಾರೆ ಅನ್ನೋದರಿಂದ ಹಿಡಿದು, ಸಿನಿಮಾಗಳಲ್ಲಿ ಕಲಾವಿದರು ತೊಟ್ಟ ಬಟ್ಟೆಗಳನ್ನ ಏನು ಮಾಡುತ್ತಾರೆ? ಎನ್ನುವವರೆಗೆ ಕಲವಾರು ಕುತೂಹಲ ಅಂಶಗಳು ನಮ್ಮನ್ನು ಕಾಡುತ್ತಲೇ ಇರುತ್ತವೆ.

ಹೌದು, ಒಂದು ಸಿನಿಮಾವಾಗಲಿ ಅಥವಾ ಧಾರಾವಾಹಿಯಾಗಲಿ ಅದರಲ್ಲಿ ನಟಿಸುವ ಕಲಾವಿದರು ತರಾವರಿ ಬಟ್ಟೆಗಳನ್ನ ತೊಡಬೇಕಾಗುತ್ತದೆ. ಯಾರೂ ಇಡೀ ಸಿನಿಮಾದಲ್ಲಿ ಒಂದೇ ಬಟ್ಟೆಯನ್ನ ತೊಡುವುದಿಲ್ಲ. ಇಂಥ ಬಟ್ಟೆಗಳು ದುಬಾರಿಯೂ, ಉತ್ತಮ ಗುಣಮಟ್ಟದ್ದೂ ಆಗಿರುತ್ತವೆ. ಅದರಲ್ಲೂ ಸೆಲಿಬ್ರೆಟಿ, ಸ್ಟಾರ್ ನಟ ನಟಿಯರಾದ್ರಂತೂ ಒಂದೊಂದು ಹಾಡಿಗೂ ನಾಲೈದು ಬಟ್ಟೆ ಬದಲಿಸುತ್ತಾರೆ. ಹೌದು, ಇದಕ್ಕೆ ತಗುಲುವ ವೆಚ್ಚಚೂ ಅಧಿಕವೇ. ಸೆಲಿಬ್ರೆಟಿಗಳ ಕಾಸ್ಟ್ಯೂಮ್ ಗಳಿಗಂತೂ 15- 20 ಲಕ್ಷ ಹಣವನ್ನ ವ್ಯಯಿಸುತ್ತಾರೆ ನಿರ್ಮಾಪಕರು. ಅಂದಹಾಗೆ ಈ ಬಟ್ಟೆಗಳ್ಯಾವುದೂ ನಟರ ಸ್ವಂತದ್ದಾಗಿರುವುದಿಲ್ಲ. ಅಥವಾ ಒಮ್ಮೆ ನಟನೆಗೆ ಬಳಸಿದರೆ ಮತ್ತೆ ಅದನ್ನ ಅವರೇ ಇರಿಸಿಕೊಳ್ಳುವುದಿಲ್ಲ. ಕೆಲವೊಂದು ಸಂದರ್ಭಗಳಲ್ಲಿ ಮಾತ್ರ ಅವರಿಗೆ ಇಷ್ಟವಾದ ಬಟ್ಟೆಯನ್ನ ತೆಗೆದುಕೊಂಡು ಹೋಗಬಹುದು ಅಥವಾ ಅವರ ಬಟ್ಟೆಯನ್ನ ಅವರೇ ಆಯ್ಕೆ ಮಾಡಿಕೊಳ್ಳಬಹುದು.

ಹಾಗಾದರೆ ಈ ಬಟ್ಟೆಗಳನ್ನೆಲ್ಲಾ ಏನು ಮಾಡುತ್ತಾರೆ? ಮೊದಲನೆಯದಾಗಿ ಬಟ್ಟೆಯನ್ನ ಅರೇಂಜ್ ಮಾಡಿಕೊಡುವ ಕೆಲಸ ಆಯಾ ಸಿನಿಮಾದ ಪ್ರೊಡಕ್ಷನ್ ಹೌಸ್ ನದ್ದು. ದೊಡ್ದ ದೊಡ್ದ ಸಿನಿಮಾಗಳಲ್ಲಿ ಸೆಲಿಬ್ರೆಟಿಗಳು ಬಳಸಿದ ಬಟ್ಟೆಯನ್ನ ನಿರ್ಮಾಪಕರು ಮಾರಾಟ ಮಾಡುತ್ತಾರೆ. ಅಥವಾ ಮುಂದೆ ಅಗತ್ಯ ಬೀಳುವಂಥ ಬಟ್ಟೆ ಅಥವಾ ವಸ್ತುಗಳನ್ನು ತಮ್ಮ ಬಳಿಯೇ ಇರಿಸಿಕೊಳ್ಳುತ್ತಾರೆ. ಅಷ್ಟೇ ಅಲ್ಲ, ಸೆಲಿಬ್ರೆಟಿ ಅಥವಾ ಸ್ಟಾರ್ ಬಟ್ಟೆಗಳನ್ನ ಮಾರಾಟ ಮಾಡುವ ಆನ್ ಲೈನ್ ಸೈಟ್ ಗಳೇ ಇರುತ್ತವೆ. ಇಲ್ಲಿ ಯಾರು ಹೆಚ್ಚು ಬೆಲೆಗೆ ಬಿಡ್ ಮಾಡುತ್ತಾರೋ ಅವರಿಗೆ ಆ ಬಟ್ಟೆಗಳನ್ನ ನೀಡಲಾಗುತ್ತದೆ. ಕೆಲವೊಮ್ಮೆ ಸಾವಿರದ ಬಟ್ಟೆಗಳು ಲಕ್ಷಕ್ಕೆ ಸೇಲ್ ಆಗಬಹುದು. ಇನ್ನೂ ಕೆಲವು ಬಾರಿ 10 ಲಕ್ಷದ ಬಟ್ಟೆಯೂ ಒಂದು ಲಕ್ಷಕ್ಕೆ ಮಾರಾಟವಾಗಬಹುದು. ಅದೇನೆ ಲಾಭ ನಷ್ಟಗಳಿದ್ದರೂ ಅದರ ಜವಾಬ್ದಾರಿ ಮಾತ್ರ ನಿರ್ಮಾಪಕರದ್ದು.

ಮಾತ್ರವಲ್ಲ, ಇಂಥ ಬೆಲೆಬಾಳುವ ಬಟ್ಟೆಗಳನ್ನ ಮಾರಾಟ ಮಾಡಲು ಬೇರೆ ಮಾರ್ಗವೂ ಇದೆ. ಮುಂಬೈನಂತ ಶಹರದಲ್ಲಿ ಸಿನಿಮಾ ಕಾಸ್ಟ್ಯೂಮ್ ಮಾರಾಟ ಮಾಡುವ ದೊಡ್ದ ಮಾರುಕಟ್ಟೆಯೇ ಇರುತ್ತದೆ. ಇಲ್ಲಿ ಒಮ್ಮೆ ಬಳಸಿದ ಬಟ್ಟೆ ಹಾಗೂ ಇತರ ವಸ್ತುಗಳನ್ನು ನಿರ್ಮಾಪಕರು ಮಾರಾಟ ಮಾಡಬಹುದು. ಇಲ್ಲಿಂದಲೇ ಕೆಲವರು ಕೊಂಡುಕೊಳ್ಳುತ್ತಾರೆ.

ಇನ್ನು ಧಾರಾವಾಹಿಯ ವಿಷಯಕ್ಕೆ ಬರೋಣ. ಇತ್ತಿಚಿಗೆ ಧಾರಾವಾಹಿಗಳಲ್ಲಿ ಕಲಾವಿದರ ಔಟ್ ಫಿಟ್ ಗಳಿಗೆ ಹೆಚ್ಚಿನ ಗಮನ ಕೊಡಲಾಗುತ್ತದೆ. ಖಳನಾಯಕಿ ಪಾತ್ರಧಾರಿಗಳಂತೂ ತರಾವರಿ ಕಾಸ್ಟ್ಯೂಮ್ ಧರಿಸುತ್ತಾರೆ. ಇತ್ತೀಚಿಗೆ ಕಲಾವಿದರೆ ಅವರ ಬಟ್ಟೆಗಳನ್ನ ಆಯ್ದುಕೊಳ್ಳುವ ಪ್ರಕ್ರಿಯೆ ನಡೆಯುತ್ತದೆ. ಆದರೆ ಧಾರಾವಾಹಿಗಳಲ್ಲಿ ಕೆಲವು ಬಟ್ಟೆಗಳನ್ನ ಆಗಲೇ ಸಿದ್ಧಪಡಿಸಿಟ್ಟು ಕಲಾವಿದರ ಸೈಜ್ ಗೆ ಅನುಗುಣವಾಗಿ ಹೊಂದಿಸಿಕೊಡಲಾಗುತ್ತದೆ. ಉದಾಹರಣೆಗೆ ಧಾರಾವಾಹಿಗಳಲ್ಲಿ ತೊಡುವ ಬೌಸ್ ಗಳನ್ನು ಮೊದಲೇ ಸಾಮಾನ್ಯ ಅಳತೆಗೆ ಸಿದ್ಧಪಡಿಸಿಡಲಾಗುತ್ತದೆ. ಕಲಾವಿದರ ಗಾತ್ರಕ್ಕೆ ತಕ್ಕಗಾಗೆ ಅದನ್ನ ಆ ಸಮಯಕ್ಕೆ ಮಾತ್ರ ಸರಿಪಡಿಸಿಕೊಡಲಾಗುತ್ತದೆ.

ಸಾಮಾನ್ಯವಾಗಿ ಸೆಲಿಬ್ರೆಟಿಗಳು ಬಳಸಿದ ಬಟ್ಟೆಗಳನ್ನ ಮಾರಾಟ ಮಾಡಿ ಅದರಿಂದ ಬಂದ ಹಣವನ್ನು ಸಮಾಯ ಸೇವೆಗೆ ಮೀಸಲಿಡುತ್ತಾರೆ ಎನ್ನುವುದನ್ನು ನೀವು ಕೇಳಿರಬಹುದು. ಹಾಗೆಯೇ ಸಿನಿಮಾದಲ್ಲಿ ಬಳಸಿದ ಬಟ್ಟೆಗಳೂ ಮಾರಾಟವಾಗುತ್ತವೆ ಹಾಗೆಯೇ ಕೆಲವೊಮ್ಮೆ ಈ ಹಣವನ್ನು ಉತ್ತಮ ಕಾರ್ಯಕ್ಕಾಗಿ ಬಳಸುವುದೂ ಉಂಟು. ಆದರೆ ಇದು ಆಯಾ ಸಿನಿಮಾದ ನಿರ್ಮಾಪಕರ ನಿರ್ಧಾರಕ್ಕೆ ಬಿಟ್ಟಿದ್ದು!

Leave a Comment

error: Content is protected !!