ಅಪ್ಪು ಬಾಡಿಗಾರ್ಡ್ ಚಲಪತಿ ಕೆಲಸ ಬಿಡುತ್ತೇನೆ ಎಂದು ಹೇಳಿದಾಗ ಅಶ್ವಿನಿ ಅವರು ಹೇಳಿದ್ದೇನು ಗೊತ್ತಾ

ಪುನೀತ್ ಅವರ ಅಭಿಮಾನಿಗಳೆ ಆಗಲಿ ಅಥವಾ ಅವರ ಮನೆಯವರಾಗಲಿ ಅಪ್ಪು ನಮ್ಮನ್ನಗಲಿ ಎಂಟು ತಿಂಗಳಾಯಿತು ಎಂಬುದನ್ನು ಒಪ್ಪಿಕೊಳ್ಳಲು ತಯಾರಿಲ್ಲ. ಇನ್ನು ಅಪ್ಪು ಅವರ ಜೊತೆಗೆ ಹತ್ತು ವರ್ಷಗಳ ಕಾಲ ಗನ್ ಮ್ಯಾನ್ ಆಗಿ ಕೆಲಸ ಮಾಡಿದ್ದ ಚಲಪತಿ ಅವರ ಬಗ್ಗೆಯಂತೂ ಕೇಳಲೇಬೇಡಿ. ಈಗಲೂ ನನ್ನ ದೇವರು ನನ್ನ ಜೊತೆಯೇ ಇದ್ದಾರೆ ಎಂದು ಹೇಳುತ್ತಾರೆ ಚಲಪತಿ.ಪುನೀತ್ ಅವರ ಗನ್ ಮ್ಯಾನ್ ಆಗಿ ಕೆಲಸ ಮಾಡಲು ಮಿಲಿಟ್ರಿ ತೊರೆದು ಬಂದವರು ಚಲಪತಿ. ಕಳೆದ ಹತ್ತು ವರ್ಷಗಳಿಂದ ಪುನೀತ್ ಅವರು ಎಲ್ಲೇ ಹೋಗಲಿ ಎಲ್ಲಿ ಬರಲಿ ಯಾವುದೇ ಶೂಟಿಂಗ್ ಇರಲಿ ಸಮಾರಂಭಗಳಿರಲಿ, ಒಟ್ಟಿನಲ್ಲಿ ಪುನೀತ್ ಇದ್ದಲ್ಲಿ ಚಲಪತಿ ಅವರ ಹಿಂದೆಯೇ ಇರುತ್ತಿದ್ದರು.

ಪುನೀತ್ ಅವರ ಮುಖ ಅಂತಾನೇ ಅವರ ಬಗ್ಗೆ ಯಾಕೆ ಇಷ್ಟೊಂದು ವಿವರಣೆ ಕೊಡುತ್ತಿದ್ದೀರಾ ಅಂತ ನೀವು ಕೇಳಬಹುದು. ಅದಕ್ಕೂ ಕಾರಣವಿದೆ. ಚಲಪತಿಯವರನ್ನು ಪುನೀತ್ ಯಾವಾಗಲೂ ತನ್ನ ಕೆಲಸದವರಂತೆ ನೋಡಲೇ ಇಲ್ಲ. ಬಹಳ ಪ್ರೀತಿಯಿಂದ ಒಬ್ಬ ಗೆಳೆಯನಂತೆ ನೋಡಿಕೊಳ್ಳುತ್ತಿದ್ದರು ಪುನೀತ್. ಪುನೀತ್ ರಾಜಕುಮಾರ್ ಅವರ ವ್ಯಕ್ತಿತ್ವವೇ ಹಾಗೆ. ಅವರು ಯಾರನ್ನು ಕೀಳಾಗಿ ಕಂಡವರಲ್ಲ, ಕೆಲಸದವರು ಎಂದು ಹೇಳಿದವರೂ ಅಲ್ಲ. ಎಲ್ಲರನ್ನೂ ಬಹಳ ಪ್ರೀತಿಯಿಂದಲೇ ನೋಡಿಕೊಳ್ಳುತ್ತಿದ್ದರು. ಹಾಗಾಗಿ ಪುನೀತ್ ಅವರ ಗನ್ ಮ್ಯಾನ್ ಆಗಿದ್ದ ಚಲಪತಿ ಅವರಿಗೂ ಹತ್ತು ವರ್ಷ ಅವರ ಜೊತೆ ಕೆಲಸ ಮಾಡುತ್ತಿದ್ದೆ ಎನ್ನುವುದಕ್ಕಿಂತ ಪುನೀತ್ ಅವರ ಜೊತೆಗೆ ಇದೆ ಎನ್ನುವ ಖುಷಿ ಇದೆ.

ಇದೀಗ ಚಲಪತಿ ಪುನೀತ್ ರಾಜಕುಮಾರ್ ಅವರ ಮನೆಯ ಕೆಲಸವನ್ನು ಬಿಟ್ಟಿದ್ದಾರೆ ಎನ್ನುವ ಸುದ್ದಿ ಜೋರಾಗಿ ಹಬ್ಬಿತ್ತು. ಈ ವಿಷಯದ ಬಗ್ಗೆ ಚಲಪತಿ ಸ್ಪಷ್ಟನೆಯನ್ನು ಕೊಟ್ಟಿದ್ದಾರೆ.. ಹೌದು ಪುನೀತರಾಜಕುಮಾರ್ ನಮ್ಮನ್ನಗಲಿದ ನಂತರ ಇದುವರೆಗೆ ಅಂದರೆ ಎಂಟು ತಿಂಗಳುಗಳ ಕಾಲ ಚಲಪತಿ ಅವರ ಮನೆಯಲ್ಲಿಯೇ ಕೆಲಸ ಮಾಡುತ್ತಿದ್ದರು. ಆದರೆ ಚಲಪತಿ ಒಬ್ಬ ಗನ್ ಮ್ಯಾನ್. ಅವರು ಯಾರಿಗಾದರೂ ಸೆಕ್ಯುರಿಟಿ ಕೊಡಬಹುದು. ಇಷ್ಟು ದಿನ ಪುನೀತ್ ಅವರ ಪತ್ನಿ ಅಶ್ವಿನಿ ಅವರಿಗೆ ಸೆಕ್ಯೂರಿಟಿ ಆಗಿದ್ದರೂ ಕೂಡ, ಅವರ ಮನೆಯಲ್ಲಿ ಅವರಿಗೆ ಹೆಚ್ಚಾಗಿ ಕೆಲಸವೇನು ಇರಲಿಲ್ಲ. ಹಾಗಾಗಿ ಅಶ್ವಿನಿ ಅವರು ಕೂಡ ನೀವು ಬೇರೆ ಕೆಲಸ ಸಿಕ್ಕರೆ ನೋಡಿಕೊಳ್ಳಬಹುದು. ನಾವು ಸದಾ ನಿಮ್ಮೊಂದಿಗೆ ಇರುತ್ತೇವೆ. ಆದರೆ ನಿಮ್ಮ ಕಮೆಂಟ್ಮೆಂಟ್ ಗಳಿಗೆ ಅನುಕೂಲವಾಗುವ ಹಾಗೆ ಬೇರೆ ಕೆಲಸ ಸಿಕ್ಕರೆ ಹೋಗಬಹುದು ಎಂದು ಹೇಳಿದ್ದಾರೆ.

ಜನಪತಿ ಪುನೀತ್ ರಾಜಕುಮಾರ್ ಅವರ ಮನೆಯಲ್ಲಿ ಕೆಲಸವನ್ನು ಬಿಟ್ಟರು ಕೂಡ, ಅಶ್ವಿನಿ ಅವರಿಗೆ ಯಾವುದೇ ತುರ್ತು ಸಮಯದಲ್ಲಿ ಅಗತ್ಯವಿದ್ದರೆ ಚಲಪತಿ ಅಲ್ಲಿ ಹಾಜರಿರುತ್ತಾರೆ. ಚಲಪತಿ ಇದೀಗ ಬೆಳಗಾವಿಯಲ್ಲಿ ಕೆಲಸಕ್ಕೆ ಸೇರುವ ಸಾಧ್ಯತೆ ಇದೆ. ತಾನು ಇನ್ನು ಮುಂದೆ ಯಾವುದೇ ಎರಡರ ಜೊತೆಗೆ ಕೆಲಸ ಮಾಡುವುದಿಲ್ಲ ಯಾಕಂದ್ರೆ ನನಗೆ ನನ್ನ ಯಜಮಾನರನ್ನು ಮರೆಯುವುದಕ್ಕೆ ಇಷ್ಟವಿಲ್ಲ. ಅವರ ಜೊತೆಗೆ ಕಳೆದ ಕ್ಷಣ ಸದಾ ಹಸಿರಾಗಿರಬೇಕು. ಹಾಗಾಗಿ ನಾನು ಬೇರೆ ಯಾರಿಗೂ ಗನ್ ಮ್ಯಾನ್ ಆಗಿ ಕೆಲಸ ಮಾಡುವುದಿಲ್ಲ ಎಂದು ಚಲಪತಿ ಹೇಳಿದ್ದರು. ಅಷ್ಟೇ ಅಲ್ಲ ಬೆಳಗಾವಿಯಲ್ಲಿ ಪುನೀತ್ ಅವರ ಅಭಿಮಾನಿ ಒಬ್ಬರ ಜೊತೆ ಚಲಪತಿ ಕೆಲಸ ಮಾಡಲಿದ್ದಾರೆ.

ಪುನೀತ್ ನಡೆದ ದಾರಿಯಲ್ಲೇ ನಡೆಯುವ ಆ ವ್ಯಕ್ತಿ ಅಪ್ಪುವಿನಂತೆ ಸಾಕಷ್ಟು ಸಮಾಜಪರ ಕಾರ್ಯಗಳನ್ನು ಮಾಡಲಿದ್ದಾರೆ. ಹಾಗಾಗಿ ನಮ್ಮ ಅಪ್ಪು ಜೊತೆ ಇದ್ದ ನೀವು ನಮ್ಮ ಜೊತೆ ಕೈಜೋಡಿಸಿದರೆ ನಮಗೂ ಖುಷಿ ಅಂತ ಚಲಪತಿಯವರನ್ನ ಕರೆದಿದ್ದಾರೆ. ಹಾಗಾಗಿ ಸದ್ಯದಲ್ಲೇ ಬೆಂಗಳೂರು ತೊರೆದು ಬೆಳಗಾವಿ ಸೇರಲಿರುವ ಚಲಪತಿ, ನನ್ನ ದೇವರಿದ್ದ, ಯಜಮಾನರ ಮನೆಯನ್ನು ಮಾತ್ರ ಎಂದಿಗೂ ಮರೆಯುವುದಿಲ್ಲ. ಮತ್ತೆ ಮತ್ತೆ ಅಪ್ಪು ಅವರ ಮನೆಗೆ ಹೋಗುತ್ತಿರುತ್ತಾನೆ. ಸಾಯುವವರೆಗೂ ಅವರ ಮನೆ ಸೇವೆ ಮಾಡುತ್ತೇನೆ ಎಂದು ಭಾವುಕರಾಗಿ ನುಡಿದಿದ್ದಾರೆ.

Leave a Comment

error: Content is protected !!