ಈ ವರ್ಷ ಪುನೀತ್ ರಾಜ್ ಕುಮಾರ್ ಅವರ ಬದಲಾಗಿ ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮದ ನಿರೂಪಣೆ ಮಾಡಲಿರುವ ಕನ್ನಡ ನಟ ಯಾರು ಗೊತ್ತಾ

ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮ ಕರ್ನಾಟಕದ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ. ಇದನ್ನು ಗೇಮ್ ಶೋ ಎಂದು ಕೂಡ ಕರೆಯುತ್ತಾರೆ. ಈ ಗೇಮ್ ಶೋನಲ್ಲಿ ಸ್ಪರ್ಧಿಗಳಿಗೆ ರಸ ಪ್ರಶ್ನೆಗಳನ್ನು ಕೇಳಲಾಗುತ್ತೆ.ಮತ್ತು ಸ್ಪರ್ಧಿಗಳು ಸರಿ ಉತ್ತರ ಕೊಟ್ಟರೆ ಬಹುಮಾನದ ರೂಪದಲ್ಲಿ ಹಣ ಸಿಗುತ್ತೆ. ಈ ಕಾರ್ಯಕ್ರಮವು ಮೂಲತಃ ಇಂಗ್ಲಿಷ್ ನ ಹೂ ವಾಂಟ್ಸ್ ಟು ಬಿ ಮಿಲಿಯನೇರ್ ಎಂಬ ಕಾರ್ಯಕ್ರಮದ ಐಡಿಯಾ. ಇದೇ ಕಾರ್ಯಕ್ರಮ ಹಿಂದಿಯಲ್ಲಿ ಕೌನ್ ಬನೇಗಾ ಕರೋಡ್ ಪತಿ ಎಂಬ ಹೆಸರಿನಲ್ಲಿ ಪ್ರಸಾರವಾಗುತ್ತೆ. ಹಿಂದಿಯಲ್ಲಿ ಅಮಿತಾಬ್ ಬಚ್ಚನ್ ಅವರು ಈ ಕಾರ್ಯಕ್ರಮದ ನಿರೂಪಣೆ ಮಾಡುತ್ತಾರೆ.

ಕನ್ನಡದಲ್ಲಿ ಪುನೀತ್ ರಾಜ್ ಕುಮಾರ್ ಅವರು ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮದ ನಿರೂಪಣೆ ಮಾಡುತ್ತಿದ್ದರು. ಅಪ್ಪು ಅವರು ಎಷ್ಟು ಚೆನ್ನಾಗಿ ನಿರೂಪಣೆ ಮಾಡುತ್ತಿದ್ದರು ಎಂದರೆ ಅವರ ಬದಲಾಗಿ ಬೇರೊಬ್ಬ ನಿರೂಪಕ ಬಂದರೆ ಜನರು ಒಪ್ಪುತ್ತಲೇ ಇರಲಿಲ್ಲ. ಇಲ್ಲಿಯವರೆಗೆ ಕನ್ನಡದಲ್ಲಿ ಒಟ್ಟು ನಾಲ್ಕು ಸೀಸನ್ ಗಳು ಕಳೆದಿವೆ ಇದರಲ್ಲಿ ಒಂದು ಎರಾಡು ಮತ್ತು ನಾಲ್ಕನೇ ಸೀಸನ್ ನನ್ನು ಪುನೀತ್ ನಡೆಸಿಕೊಟ್ಟಿದ್ದಾರೆ . ಮೂರನೇ ಸೀಸನ್ ಮಾತ್ರ ರಮೇಶ್ ಅರವಿಂದ್ ಅವರು ನಿರೂಪಣೆ ಮಾಡಿದ್ದರು. ರಮೇಶ್ ಅರವಿಂದ್ ಅವರು ಕೂಡ ಈ ಕಾರ್ಯಕ್ರಮದ ನಿರೂಪಣೆಯನ್ನು ಅಚ್ಚುಕಟ್ಟಾಗಿ ನಡೆಸಿಕೊಟ್ಟಿದ್ದರು.

ಆದರೆ ಪುನೀತ್ ಅವರು ಈ ಕಾರ್ಯಕ್ರಮದಲ್ಲಿ ತುಂಬಾ ಸರಳವಾಗಿ ಸಹಜವಾಗಿ,ಸ್ನೇಹವಾಗಿ ಸ್ಪರ್ಧಿಗಳ ಮುಂದೆ ಮಾತನಾಡುತ್ತಿದ್ದರು. ಯಾವಾಗಲೂ ನಗು ಮುಖ ದಿಂದ ಸ್ಪರ್ಧಿಗಳ ಜೋತೆ ಮಾತನಾಡುತ್ತಿದ್ದರು. ಅಪ್ಪು ಅವರ ಈ ಗುಣ ಸ್ಪರ್ಧಿಗಳಿಗೆ ಮತ್ತು ವೀಕ್ಷಕರಿಗೆ ತುಂಬ ಇಷ್ಟವಾಗುತ್ತಿತ್ತು. ಪುನೀತ್ ಅವರನ್ನು ನೋಡಬೇಕೆಂದೇ ಲಕ್ಷಾಂತರ ಜನಗಳು ಈ ಕಾರ್ಯಕ್ರಮವನ್ನು ವೀಕ್ಷಿಸುತ್ತಿದ್ದರು. ಮನೆಮಂದಿಯೆಲ್ಲಾ ಕೂತು ನೋಡುವಂತಹ ಕಾರ್ಯಕ್ರಮವಿದು.ಆದರೆ ದುರದೃಷ್ಟವಶಾತ್ ಇನ್ಮುಂದೆ ಈ ಅದೃಷ್ಟ ನಮಗೆ ಸಿಗೋದಿಲ್ಲ.

ಇದೀಗ ಕನ್ನಡದ ಕೋಟ್ಯಾಧಿಪತಿ ಸೀಸನ್ 5 ಶುರುವಾಗಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಇದೀಗ ವೀಕ್ಷಕರಲ್ಲಿ ಕುತೂಹಲ ಮೂಡಿರುವ ವಿಷಯವೇನೆಂದರೆ ಈ ಕಾರ್ಯಕ್ರಮವನ್ನು ಪುನೀತ್ ರಾಜ್ ಕುಮಾರ್ ಅವರಿಗಿಂತ ಅಚ್ಚುಕಟ್ಟಾಗಿ ನಿರೂಪಣೆ ಮಾಡಬಲ್ಲ ನಟನು ಯಾರೆಂದು. ಪುನೀತ್ ಅವರ ಬದಲಾಗಿ ಕೆಲವು ಹೆಸರುಗಳು ಕೇಳಿಬರುತ್ತಿವೆ ಈ ಹೆಸರುಗಳಲ್ಲಿ ಕಿಚ್ಚ ಸುದೀಪ್ ,ಶಿವರಾಜ್ ಕುಮಾರ್ ,ರಮೇಶ್ ಅರವಿಂದ್ ಮತ್ತು ಯಶ್ ಅವರ ಹೆಸರಿದೆ.

ಯಶ್ ಅವರು ಕೆಜಿಎಫ್-3 ಚಿತ್ರದಲ್ಲಿ ಬ್ಯುಸಿಯಾಗಿರುವುದರಿಂದ ಅವರು ನಡೆಸಿಕೊಡೋಕೆ ಸಾಧ್ಯವಿಲ್ಲ. ಹಾಗೆ ಕಿಚ್ಚ ಸುದೀಪ್ ಅವರು ಬಿಗ್ ಬಾಸ್ ಕಾರ್ಯಕ್ರಮವನ್ನು ನಿರೂಪಣೆ ಮಾಡುವುದರಲ್ಲಿ ತಲ್ಲೀನರಾಗಿರುತ್ತಾರೆ. ಆದ್ದರಿಂದ ಕಿಚ್ಚ ಸುದೀಪ್ ಅವರು ಕೂಡ ಕೋಟ್ಯಾಧಿಪತಿ ಕಾರ್ಯಕ್ರಮದಲ್ಲಿ ನಿರೂಪಣೆ ಮಾಡೋಕೆ ಸಾಧ್ಯವಿಲ್ಲ. ಆದ್ದರಿಂದ ಶಿವರಾಜ್ ಕುಮಾರ್ ಅಥವಾ ರಮೇಶ್ ಅರವಿಂದ್ ಇಬ್ಬರಲ್ಲಿ ಒಬ್ಬರು ಹೊಸ ಸೀಸನ್ ನ ನಿರೂಪಣೆ ಮಾಡಲಿದ್ದಾರೆ. ಪುನೀತ್ ಅವರ ಜಾಗವನ್ನು ತುಂಬಲು ಯಾರಿಂದಲೂ ಸಾಧ್ಯವಿಲ್ಲ ಆದರೆ ಶಿವರಾಜ್ ಕುಮಾರ್ ಅವರು ಅಪ್ಪು ಅವರ ಜಾಗವನ್ನು ತುಂಬಲು ಪ್ರಯತ್ನಪಟ್ಟರೇ ಅಭಿಮಾನಿಗಳು ಖುಷಿಯಾಗುವುದು ಖಡಾಖಂಡಿತ ಎಂಬುದು ಹಲವರ ಅಭಿಪ್ರಾಯ.

Leave A Reply

Your email address will not be published.

error: Content is protected !!