ರವಿಚಂದ್ರನ್ ಅವರ ಯಾರೇ ನೀನು ಚೆಲುವೆ ಸಿನಿಮಾ, ಒಂದು ಕಾಲದಲ್ಲಿ ಸಂಚಲನ ಮೂಡಿಸಿದ್ದ ಚಿತ್ರ. ಈ ಸಿನಿಮಾದ ನಟಿ ಈಗ ಎಲ್ಲಿದ್ದಾರೆ ಏನ್ಮಾಡ್ತಿದಾರೆ ಗೊತ್ತಾ

ಪ್ರಿಯ ಓದುಗರೇ ನಾವು ನಿಮಗೆ ಸಿನಿಮಾದ ಹಲವು ಇಂಟ್ರೆಸ್ಟಿಂಗ್ ವಿಚಾರಗಳನ್ನು ಪ್ರತಿದಿನ ಅಪ್ಡೇಟ್ ಮಾಡುತ್ತಲೇ ಇರುತ್ತೇವೆ ಇವತ್ತಿನ ಲೇಖನದಲ್ಲಿ ಯಾರೆನೀನು ಚಲುವೆ ಸಿನಿಮಾದ ನಟಿ ಎಲ್ಲಿದ್ದಾರೆ ಏನ್ಮಾಡ್ತಿದ್ದಾರೆ ಅನ್ನೋದನ್ನ ಈ ಮೂಲಕ ತಿಳಿಸಿಕೊಡುತ್ತೇವೆ ಬನ್ನಿ ರವಿಚಂದ್ರನ್ ಅವರ ಕೆಲವು ಸಿನಿಮಾಗಳು ಭರ್ಜರಿ ಹಿಟ್ ಆಗಿದೆ. ಅವರ ಹಿಟ್ ಸಿನಿಮಾಗಳಲ್ಲಿ ಒಂದಾದ ಯಾರೇ ನೀನು ಚೆಲುವೆ ಸಿನಿಮಾದಲ್ಲಿ ನಟಿಸಿದ ಸಂಗೀತ ಅವರು ನಂತರ ಸಿನಿಮಾಗಳಲ್ಲಿ ನಟಿಸಲಿಲ್ಲ ಅದಕ್ಕೆ ಕಾರಣವೇನು ಅವರು ಈಗ ಏನು ಮಾಡುತ್ತಿದ್ದಾರೆ ಎಂಬ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.

ಕ್ರೇಜಿ ಸ್ಟಾರ್ ರವಿಚಂದ್ರನ್ ಅವರು ನಟಿಸಿದ ಯಾರೇ ನೀನು ಚೆಲುವೆ ಸಿನಿಮಾ ಒಂದು ಕಾಲದಲ್ಲಿ ಸಂಚಲನ ಮೂಡಿಸಿದ್ದ ಚಿತ್ರ. ಈ ಸಿನಿಮಾ ನೋಡಿದ ನಂತರ ಬಹಳ ಪ್ರೇಮಿಗಳು ಹುಟ್ಟಿಕೊಂಡರು ಎಂದರೆ ತಪ್ಪಾಗಲಾರದು. ಈ ಸಿನಿಮಾದಲ್ಲಿ ನಟಿಸಿದ ಸಂಗೀತ ಅವರನ್ನು ಯುವಕರು ಡ್ರೀಮ್ ಗರ್ಲ್ ಎಂದು ಊಹಿಸಿಕೊಂಡರು. ಅವರು ಯಾರೇ ನೀನು ಚೆಲುವೆ ಸಿನಿಮಾ ನಂತರ ಚಿತ್ರರಂಗದಲ್ಲಿ ಕಾಣಿಸಿಕೊಳ್ಳಲಿಲ್ಲ. ಸಂಗೀತ ಅವರು ದಕ್ಷಿಣ ಭಾರತದ ನಾಲ್ಕು ಭಾಷೆಗಳಲ್ಲಿ ನಟಿಸಿ ಜನರ ಮನದಲ್ಲಿ ಮನೆ ಮಾಡಿದ್ದರು. ಜೊತೆಗೆ ಅವರು ಒಳ್ಳೆಯ ವ್ಯಕ್ತಿತ್ವವನ್ನು ಹೊಂದಿದ್ದರು. 2000 ರಲ್ಲಿ ಕ್ಯಾಮೆರಾ ಮ್ಯಾನ್ ಸರ್ವಣ್ಣ ಅವರನ್ನು ಮದುವೆಯಾದರು. ಮದುವೆಯಾದ ನಂತರ ಸಂಗೀತ ಅವರು ನಾನು ಇನ್ನುಮುಂದೆ ಯಾವ ಚಿತ್ರದಲ್ಲೂ ನಟಿಸುವುದಿಲ್ಲ ಎಂದು ಪ್ರಕಟಿಸಿದರು.

ಸಾಮಾನ್ಯ ಜೀವನವನ್ನು ನಡೆಸಲು ಇಚ್ಛಿಸುವ ಇವರು ಯಾವುದೇ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಿರಲಿಲ್ಲ. ತಾನಾಯಿತು ತನ್ನ ಕುಟುಂಬವಾಯಿತು ಎಂದು ಸಂಗೀತ ಅವರು ಇದ್ದಾರೆ. ಈಗ ಸಂಗೀತ ಅವರು ಅವರ ಗಂಡ ಸಿನಿಮಾದಲ್ಲಿ ಕ್ಯಾಮರಾಮೆನ್ ಆಗಿ ಕೆಲಸ ಮಾಡುವಾಗ ಅವರ ಅಸಿಸ್ಟಂಟ್ ಆಗಿ ಕೆಲಸ ಮಾಡುತ್ತಾರೆ. ಕ್ಯಾಮೆರಾ ಮುಂದೆ ನಟಿಸಿದ ಇವರು ಈಗ ಕ್ಯಾಮೆರಾ ಹಿಂದೆ ನಿಂತು ಗಂಡನಿಗೆ ಸಹಾಯ ಮಾಡುತ್ತಿರುವುದು ವಿಭಿನ್ನವೆನಿಸುತ್ತದೆ.

ಒಂದು ಕಾಲದಲ್ಲಿ ಸ್ಟಾರ್ ನಟಿಯಾಗಿ ಮಿಂಚಿದ ಸಂಗೀತ ಅವರು ಈಗ ಅಸಿಸ್ಟಂಟ್ ಆಗಿ ಕೆಲಸ ಮಾಡಲು ಯಾವುದೇ ರೀತಿಯಲ್ಲಿ ಬೇಸರ ಮಾಡಿಕೊಳ್ಳುವುದಿಲ್ಲ ಅವರು ಆ ಕೆಲಸವನ್ನು ಇಷ್ಟಪಟ್ಟು ಮಾಡುತ್ತಾರೆ. ಅವರು ನಾನು ಕೆಲಸ ಮಾಡುತ್ತಿರುವುದು ನನ್ನ ಗಂಡನ ಜೊತೆ ಹಾಗೂ ಅವರಿಗಾಗಿ ಈ ಕೆಲಸ ನನಗೆ ಖುಷಿ ಕೊಟ್ಟಿದೆ ಎಂದು ಹೇಳುತ್ತಾರೆ. ಅವರಿಗೆ ಇದು ಇಷ್ಟವಾದ ಕೆಲಸವೇ ಇಂಥ ಹೆಂಡತಿಯನ್ನು ಪಡೆದ ಸರ್ವಣ್ಣ ಅದೃಷ್ಟವಂತರು. ನಟಿ ಸಂಗೀತಾ ಅವರು ತಮ್ಮ ಕುಟುಂಬದವರೊಂದಿಗೆ ಸಂತೋಷವಾಗಿರಲಿ ಎಂದು ಆಶಿಸೋಣ.

Leave A Reply

Your email address will not be published.

error: Content is protected !!