Yash: ಅಭಿಷೇಕ್ ಅಂಬರೀಶ್ ಮದುವೆಯಲ್ಲಿ ಯಶ್ ಧರಿಸಿದ ಬಟ್ಟೆಯ ಬೆಲೆ ಎಷ್ಟು ಗೊತ್ತಾ?

Yash ಅಭಿಷೇಕ್ ಅಂಬರೀಶ್(Abhishek Ambareesh) ಅವರ ಮದುವೆಗೆ ಇಡೀ ಕನ್ನಡ ಚಿತ್ರರಂಗವೇ ತಮ್ಮ ಸ್ವಂತ ಮನೆಯ ಹುಡುಗನ ಮದುವೆಯನ್ನು ರೀತಿಯಲ್ಲಿ ಭಾಗವಹಿಸಿತ್ತು ಎನ್ನುವುದನ್ನು ಮಾಧ್ಯಮಗಳ ಮೂಲಕ ಈಗಾಗಲೇ ನೀವೆಲ್ಲರೂ ತಿಳಿದುಕೊಂಡಿದ್ದೀರಿ. ಸಾಕಷ್ಟು ವರ್ಷಗಳ ಕಾಲ ನಡೆದಿರುವಂತಹ ಇವರಿಬ್ಬರ ಪ್ರೀತಿ ಈಗ ದಾಂಪತ್ಯ ಜೀವನದ ಮೂಲಕ ಮುಂದಿನ ಹಂತವನ್ನು ಪಡೆದುಕೊಂಡಿದೆ.

ಇನ್ನು ಈ ಮದುವೆಗೆ ಬಹುತೇಕ ಕನ್ನಡ ಹಾಗೂ ತಮಿಳು ತೆಲುಗು ಸೇರಿದಂತೆ ಭಾರತೀಯ ಚಿತ್ರರಂಗದ ಮತ್ತು ರಾಜಕೀಯ ಕ್ಷೇತ್ರದ ಗಣ್ಯಾತಿ ಗಣ್ಯರು ಕೂಡ ಆಗಮಿಸಿ ನವ ವಧು-ವರರನ್ನು ಹಾರೈಸಿದ್ದಾರೆ. ಅದರಲ್ಲೂ ಸೂಪರ್ ಸ್ಟಾರ್ ರಜನಿಕಾಂತ್(Rajinikanth) ಕೂಡ ಆಗಮಿಸಿ ತಮ್ಮ ಗೆಳೆಯನ ಮಗನನ್ನು ಹಾರೈಸಿದ್ದಾರೆ.

ಇನ್ನು ಈ ಕಾರ್ಯಕ್ರಮಕ್ಕೆ ರಾಕಿಂಗ್ ಸ್ಟಾರ್ ಯಶ್(Rocking Star Yash) ಕೂಡ ತಮ್ಮ ಪತ್ನಿ ರಾಧಿಕಾ ಪಂಡಿತ್(Radhika Pandit) ರವರ ಒಡಗೂಡಿ ಆಗಮಿಸಿದ್ದು ತಮ್ಮ ಸ್ವಂತ ಸಹೋದರನ ರೀತಿಯಲ್ಲಿ ಇರುವಂತಹ ಅಭಿಷೇಕ್ ಅಂಬರೀಶ್ ಅವರ ಮದುವೆಯ ಮೆರಗನ್ನು ಇನ್ನಷ್ಟು ಹೆಚ್ಚಿಸಿದ್ದಾರೆ.

ಇನ್ನು ಈ ಮದುವೆ ಸಮಾರಂಭದಲ್ಲಿ ರಾಕಿಂಗ್ ಸ್ಟಾರ್ ಯಶ್ ರವರು ಧರಿಸಿರುವಂತಹ ಬಟ್ಟೆಯ ಬೆಲೆ ಕೂಡ ಸಾಮಾನ್ಯದ್ದೇನಲ್ಲ. ಹೌದು ಮಿತ್ರರೇ, ದೇಶದ ಪ್ರತಿಷ್ಠಿತ ಡಿಸೈನರ್ ಬಳಿ ಹೋಲಿಸಿರುವಂತಹ ಈ ಬಟ್ಟೆಯ ಬೆಲೆ ಭರ್ಜರಿ 3 ಲಕ್ಷಕ್ಕೂ ಅಧಿಕ ರೂಪಾಯಿಗಳು ಎಂಬುದಾಗಿ ತಿಳಿದು ಬಂದಿದ್ದು ಈ ಬಟ್ಟೆಯಲ್ಲಿ ಸ್ವತಹ ರಾಕಿಂಗ್ ಸ್ಟಾರ್ ಯಶ್(Yash) ರವರೆ ಮದುಮಗನ ರೀತಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದರೆ ತಪ್ಪಾಗಲಾರದು.

Leave a Comment

error: Content is protected !!