ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ನಡುವಿನ ವಯಸ್ಸಿನ ಅಂತರ ಎಷ್ಟು ಗೊತ್ತಾ

ಪ್ರೀತಿ ಮಾಡೋಕೆ ವಯಸ್ಸು ಮುಖ್ಯವಲ್ಲ ವಯಸ್ಸಿನ ಅಂತರ ಎಷ್ಟೇ ಇರಲಿ ಪ್ರೀತಿ ಎರಡು ಮನಸ್ಸಿನ ಮಧ್ಯೆ ಹುಟ್ಟೋಕೆ ಒಂದು ಕ್ಷಣ ಸಾಕು. 50 ವರ್ಷದ ಮಹಿಳೆ 20 ವರ್ಷದ ಯುವಕನನ್ನು ಹಾಗೂ ಇಪ್ಪತ್ತು ವರ್ಷದ ಯುವತಿ 50 ವರ್ಷದ ಪುರುಷನನ್ನು ಮದುವೆಯಾಗಿರುವ ಹಲವಾರು ಘಟನೆಗಳು ನಡೆದಿವೆ. ವಯಸ್ಸಿನ ಅಂತರವನ್ನು ಲೆಕ್ಕಿಸದೆ ಮದುವೆಯಾಗಿರುವ ಹಲವಾರು ಸೆಲೆಬ್ರಿಟಿಗಳು ಕೂಡ ಇದ್ದಾರೆ. ಇವರ ಪಟ್ಟಿಯಲ್ಲಿ ನಮ್ಮ ಯಶ್ ಮತ್ತು ರಾಧಿಕಾ ಅವರ ಹೆಸರು ಕೂಡ ಇದೆ.

ಪ್ರಖ್ಯಾತ ಸೆಲೆಬ್ರಿಟಿಗಳಾದ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ದಂಪತಿಗಳು, ದನುಷ್ ಮತ್ತು ಐಶ್ವರ್ಯಾ ರಜನಿಕಾಂತ್, ಮಹೇಶ್ ಬಾಬು ಮತ್ತು ನಮೃತಾ, ಪ್ರಿಯಾಂಕ ಚೋಪ್ರಾ ಮತ್ತು ನಿಕ್ ಜೋನಾಸ್ ಹೀಗೆ ಹೇಳುತ್ತಾ ಹೋದರೆ ಸೆಲೆಬ್ರಿಟಿಗಳ ಹೆಸರು ಮುಗಿಯಲ್ಲ. ಈ ಮೇಲಿನ ಎಲ್ಲಾ ಸೆಲೆಬ್ರಿಟಿ ದಂಪತಿಗಳು ಕೂಡ ತಮಗಿಂತ ಹಿರಿಯ ವಯಸ್ಸಿನ ಹೆಣ್ಣುಮಗಳನ್ನು ಮದುವೆಯಾಗಿದ್ದಾರೆ. ಈ ಸೆಲೆಬ್ರಿಟಿಗಳ ಪಟ್ಟಿಗೆ ಯಶ್ ಮತ್ತು ರಾಧಿಕಾ ಪಂಡಿತ್ ಅವರು ಕೂಡ ಸೇರಿಕೊಂಡಿದ್ದಾರೆ.

ತಮಗಿಂತ ಹೆಚ್ಚು ವಯಸ್ಸಿನ ಹುಡುಗಿಯನ್ನು ಮದುವೆಯಾದ ಬಹುತೇಕ ಎಲ್ಲಾ ಸೆಲೆಬ್ರಿಟಿಗಳು ಲವ್ ಮ್ಯಾರೇಜ್ ಆಗಿದ್ದಾರೆ. ನಮ್ಮ ಯಶ್ ಮತ್ತು ರಾಧಿಕಾ ಪಂಡಿತ್ ಅವರು ಕೂಡ ಲವ್ ಮ್ಯಾರೇಜ್ ಆಗಿದ್ದಾರೆ. 2004 ರಲ್ಲಿ ನಂದಗೋಕುಲ ಧಾರಾವಾಹಿಯ ಮೂಲಕ ರಾಧಿಕಾ ಮತ್ತು ಯಶ್ ಇಬ್ಬರು ವೃತ್ತಿಜೀವನವನ್ನು ಪ್ರಾರಂಭಿಸಿದ್ದಾರೆ. 2004 ರಿಂದಲೇ ಯಶ್ ಮತ್ತು ರಾಧಿಕಾ ಒಬ್ಬರನ್ನೊಬ್ಬರು ಇಷ್ಟಪಡುತ್ತಿದ್ದರು. ಆದರೆ ಈ ವಿಷಯವನ್ನು ಒಬ್ಬರು ಇನ್ನೊಬ್ಬರಿಗೆ ಹೇಳಿಕೊಂಡಿರಲಿಲ್ಲ ಇಬ್ಬರೂ ಸ್ನೇಹಿತರಾಗಿದ್ದರು.

2008 ರಲ್ಲಿ ರಾಧಿಕಾ ಮತ್ತು ಯಶ್ ಇಬ್ಬರು ಒಟ್ಟಿಗೆ ಮೊಗ್ಗಿನ ಮನಸ್ಸು ಎಂಬ ಚಿತ್ರದಲ್ಲಿ ನಟನೆ ಮಾಡಿದ್ದರು ಆಗ ಇವರಿಬ್ಬರ ಗೆಳೆತನದ ಸಂಬಂಧ ಇನ್ನೂ ಹೆಚ್ಚಾಯಿತು. ತದನಂತರ 2012 ರಲ್ಲಿ ಮತ್ತೆ ಯಶ್ ಮತ್ತು ರಾಧಿಕ ಡ್ರಾಮಾ ಚಿತ್ರದ ಮೂಲಕ ಬೆಳ್ಳಿ ಪರದೆ ಮೇಲೆ ಇನ್ನೊಮ್ಮೆ ಮಿಂಚಿದರು. ಡ್ರಾಮಾ ಚಿತ್ರ ಯಶಸ್ಸನ್ನು ಕಂಡಿತ್ತು. ಅದೇ ವರ್ಷ ಯಶ್ ಅವರು ರಾಧಿಕಾ ಅವರಿಗೆ ಪ್ರಪೋಸ್ ಮಾಡಿದ್ದರಂತೆ. ರಾಧಿಕಾ ಅವರು ಕಣ್ಣು ಮುಚ್ಚಿಕೊಂಡು ಯಶ್ ಅವರನ್ನ ಒಪ್ಪಿಕೊಂಡರು. ಆ ಸಮಯದಲ್ಲಿ ಇವರಿಗೆ ಯಾವುದೇ ರೀತಿಯ ವಯಸ್ಸಿನ ಅಂತರ ಅಡ್ಡಿಯಾಗಿಲ್ಲ. ಯಾಕೆಂದರೆ ನಿಷ್ಕಲ್ಮಶ ಪ್ರೀತಿಗೆ ವಯಸ್ಸು ಅಡ್ಡಿಯಾಗುವುದಿಲ್ಲ.

ಸುಮಾರು ಎರಡು ವರ್ಷಗಳ ಕಾಲ ಪ್ರೀತಿಯಲ್ಲಿದ್ದರೂ ಸಹ ಯಶ್ ಮತ್ತು ರಾಧಿಕಾ ಪಬ್ಲಿಕ್ ನಲ್ಲಿ ಈ ಗುಟ್ಟನ್ನು ಬಿಟ್ಟುಕೊಡಲಿಲ್ಲ. 2016 ರಲ್ಲಿ ಯಶ್ ಮತ್ತು ರಾಧಿಕ ನಿಶ್ಚಿತಾರ್ಥವನ್ನು ಮಾಡಿಕೊಂಡು ಅಧಿಕೃತವಾಗಿ ಅಭಿಮಾನಿಗಳಿಗೆ ತಮ್ಮ ಪ್ರೀತಿಯ ವಿಷಯವನ್ನು ಹಂಚಿಕೊಂಡಿದ್ದರು. 2018 ರಲ್ಲಿ ಯಶ್ ಮತ್ತು ರಾಧಿಕಾ ಅದ್ಧೂರಿಯಾಗಿ ಮದುವೆಯಾಗಿದ್ದಾರೆ. ಇದೀಗ ಯಶ್ ಮತ್ತು ರಾಧಿಕಾ ಅವರಿಗೆ ಇಬ್ಬರು ಮುದ್ದಾದ ಮಕ್ಕಳು ಕೂಡ ಇದ್ದಾರೆ ಸುಖಸಂಸಾರವನ್ನು ನಡೆಸುತ್ತಿದ್ದಾರೆ.

ಸೆಲೆಬ್ರಿಟಿಗಳು ಮದುವೆಯಾದ ಮೇಲೆ ಅವರ ವಯಸ್ಸಿನ ಅಂತರದ ಬಗ್ಗೆ ಆಗಾಗ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿರುತ್ತವೆ. ಯಶ್ ಮತ್ತು ರಾಧಿಕಾ ಅವರ ವಯಸ್ಸಿನ ಅಂತರದ ಬಗ್ಗೆ ಹಲವಾರು ಜನರಿಗೆ ತಿಳಿದಿದೆ ಇನ್ನು ಕೆಲವರಿಗೆ ತಿಳಿದಿಲ್ಲ. ವಿಷಯ ಏನೆಂದರೆ ರಾಧಿಕಾ ಪಂಡಿತ್ ಅವರು ಅವರಿಗಿಂತ ಎರಡು ವರ್ಷ ದೊಡ್ಡವರು. ಯಶ್ ರವರು ಹುಟ್ಟಿದ್ದು 1986 ಜನವರಿ 6 ರಲ್ಲಿ. ಮತ್ತು ರಾಧಿಕಾ ಅವರು ಜನಿಸಿದ್ದು ಮಾರ್ಚ್ 7, 1984 ರಲ್ಲಿ. ಆದರೆ ಈ ಇಬ್ಬರು ಆದರ್ಶ ದಂಪತಿಗಳು ನಡೆಸುತ್ತಿರುವ ಸುಖಸಂಸಾರ ಪ್ರತಿಯೊಬ್ಬರಿಗೂ ಮಾದರಿಯಾಗಿದೆ

Leave a Comment

error: Content is protected !!