ಸುದೀಪ್ ಮತ್ತು ಯಶ್ ಮಧ್ಯೆ ಶುರುವಾಯ್ತು ಸ್ಟಾರ್ ವಾರ್ ! ಸುದೀಪ್ ಕೆಜಿಎಫ್ ಬಗ್ಗೆ ಮಾತನಾಡಿರೋ ವಿಡಿಯೋ ವೈರಲ್

ಸ್ಟಾರ್ ವಾರ್ ಗಳು ಚಿತ್ರರಂಗದಲ್ಲಿ ಸರ್ವೇಸಾಮಾನ್ಯ. ಹೀರೋಗಳ ಫ್ಯಾನ್ಸ್ ಗಳ ಮಧ್ಯೆ ಕಿತ್ತಾಟ ನಡೆಯುತ್ತಲೇ ಇರುತ್ತೆ. ಕನ್ನಡ ಚಿತ್ರರಂಗದಲ್ಲಿ ಸದ್ಯದ ಮಟ್ಟಿಗೆ ಸ್ಟಾರ್ ವಾರ್ ಗಳು ದೊಡ್ಡದಾಗಿ ನಡೆಯುತ್ತಿದೆ. ಇಂತಹ ಸ್ಟಾರ್ ವಾರ್ ಗಳು ಕನ್ನಡ ಚಿತ್ರರಂಗದ ಬೆಳವಣಿಗೆಗೆ ಒಳಿತಲ್ಲ. ಕಿಚ್ಚ ಸುದೀಪ್ ಮತ್ತು ಯಶ್ ಅವರ ಅಭಿಮಾನಿಗಳ ಕಿತ್ತಾಟ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಜೋರಾಗಿದೆ. ಒಂದು ಕಡೆ ಯಶ್ ಅವರ ಕೆಜಿಎಫ್ ಚಿತ್ರ ಭರ್ಜರಿ ಪ್ರದರ್ಶನ ಗೊಳ್ಳುತ್ತಿದ್ದರೆ ಇನ್ನೊಂದು ಕಡೆ ಸುದೀಪ್ ಮತ್ತು ಯಶ್ ಅಭಿಮಾನಿಗಳ ವೈಮನಸ್ಸು ಜೋರಾಗಿದೆ.

ಸುದೀಪ್ ಮತ್ತು ಯಶ್ ಅವರು ವೈಯಕ್ತಿಕವಾಗಿ ಅನ್ಯೋನ್ಯವಾಗಿದ್ದಾರೆ. ಸುದೀಪ್ ಮತ್ತು ಯಶ್ ಅವರು ಇಬ್ಬರೂ ಸೇರಿ ಕ್ರಿಕೆಟ್ ಆಡಿದ್ದರು ಮತ್ತು ಹಲವಾರು ಫಂಕ್ಷನ್ ಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದು ಇದೆ.ಸುದೀಪ್ ಯಶ್ ಅವರು ಒಬ್ಬರನ್ನು ಕಂಡರೆ ಇನ್ನೊಬ್ಬರು ಗೌರವಿಸುತ್ತಾರೆ. ಹಾಗಾದರೆ ಇದೀಗ ಸುದೀಪ್ ಮತ್ತು ಯಶ್ ಅವರ ಮಧ್ಯೆ ತಂದಿಟ್ಟು ತಮಾಷೆ ನೋಡುತ್ತಿರುವುದು ಯಾರು ಮತ್ತು ಸುದೀಪ್ ಯಶ್ ಅವರಿಗೆ ಆ ಒಂದು ವಿಡಿಯೋದಲ್ಲಿ ಹೇಳಿದ್ದಾದರೂ ಏನು ಎನ್ನುವುದು ಕುತೂಹಲದ ಪ್ರಶ್ನೆ.

2021 ಜನವರಿಯಲ್ಲಿ ಸುದೀಪ್ ಅವರು ಗೋವಾ ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಗೆ ಮುಖ್ಯ ಅತಿಥಿಯಾಗಿ ಹೋಗಿದ್ದರು. ಇದನ್ನು ಪ್ರತಿಷ್ಠಿತ ಚಲನಚಿತ್ರೋತ್ಸವ ಎಂದೇ ಕರೆಯುತ್ತಾರೆ. ಹಾಗೆ 50 ವರ್ಷಗಳಲ್ಲಿ ಮೊದಲ ಬಾರಿಗೆ ಕನ್ನಡದ ಈ ನಟನನ್ನು ಈ ಚಲನಚಿತ್ರೋತ್ಸವಕ್ಕೆ ಅತಿಥಿಯಾಗಿ ಕರೆದಿದ್ದರು. ಸುದೀಪ್ ಅವರು ಈ ಒಂದು ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಹೋಗಿದ್ದು ನಮಗೆಲ್ಲ ಹೆಮ್ಮೆಯ ವಿಷಯ.ಸುದೀಪ್ ಅವರು ಈ ಕಾರ್ಯಕ್ರಮಕ್ಕೆ ಹೋದಾಗ ಸಂದರ್ಶನವೊಂದರಲ್ಲಿ ರಿಪೋಟರ್ ಅವರು ಕೇಳಿದ ಪ್ರಶ್ನೆಗೆ ಸುದೀಪ್ ಅವರು ಕೊಟ್ಟ ಉತ್ತರ ಇದೀಗ ಕಾಂಟ್ರವರ್ಸಿ ಹುಟ್ಟುಹಾಕಿದೆ.

ಗೋವಾ ಚಲನಚಿತ್ರೋತ್ಸವದಲ್ಲಿ ಸುದೀಪ್ ಅವರಿಗೆ ರಿಪೋರ್ಟರ್ ಒಬ್ಬರು ಕೆಜಿಎಫ್ ಸಿನಿಮಾದಲ್ಲಿ ನಿಮ್ಮ ಪಾತ್ರ ದ ಬಗ್ಗೆ ಮಾತನಾಡಿ ಎಂದು ಕೇಳಿದರು. ಆಗ ಕೆಜಿಎಫ್ ಮೊದಲ ಭಾಗ ಬಿಡುಗಡೆಗೊಂಡಿತ್ತು. ಸುದೀಪ್ ಅವರು ಕೆಜಿಎಫ್ ಚಾಪ್ಟರ್ -೨ ನಲ್ಲಿ ಅಭಿನಯಿಸುತ್ತಾರೆ ಎಂಬ ಗಾಳಿ ಸುದ್ದಿ ಹಬ್ಬಿತ್ತು. ಈ ಕಾರಣದಿಂದ ರಿಪೋರ್ಟರ್ ಸುದೀಪ್ ಅವರ ಬಳಿ ನೀವು ಕೆಜಿಎಫ್ -2 ಚಿತ್ರದಲ್ಲಿ ಯಾವ ಪಾತ್ರ ಮಾಡಲಿದ್ದೀರಿ ಎಂದು ಕೇಳುತ್ತಾರೆ.. ಆಗ ಸುದೀಪ್ ಅವರು ಇಲ್ಲ ನಾನು ಕೆಜಿಎಫ್ ಚಿತ್ರದಲ್ಲಿ ಯಾವುದೇ ಪಾತ್ರ ಮಾಡುತ್ತಿಲ್ಲ ಕೆಜಿಎಫ್ ಗೆ ನನಗೆ ಸಂಬಂಧ ಇಲ್ಲ. ನಾನು ಕೆಜಿಎಫ್ ನಲ್ಲಿ ಇಲ್ಲ ಎಂದು ಖಡಕ್ಕಾಗಿ ಹೇಳಿದ್ದಾರೆ.

ಸುದೀಪ್ ಅವರು ಸಂದರ್ಶನದಲ್ಲಿ ಹೇಳಿದ ಮಾತುಗಳನ್ನು ಇದೀಗ ಬೇರೆ ರೀತಿ ಚಿತ್ರೀಕರಿಸಲಾಗುತ್ತಿದೆ. ಕೆಜಿಎಫ್ ಚಿತ್ರದ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎಂದು ಕೇಳಿದಾಗ ಕಿಚ್ಚ ಸುದೀಪ್ ಅವರು ನನಗೂ ಕೆಜಿಎಫ್ ಗೂ ಸಂಬಂಧ ಇಲ್ಲ ಎಂದು ಹೇಳಿದರು ಅಂತ ಎಲ್ಲಾ ಕಡೆ ಇದೀಗ ಚಿತ್ರೀಕರಿಸಲಾಗುತ್ತಿದೆ. ಅಷ್ಟು ದೊಡ್ಡ ಕಾರ್ಯಕ್ರಮಕ್ಕೆ ಹೋಗಿ ನಮ್ಮ ಹೆಮ್ಮೆಯ ಕೆಜಿಎಫ್ ಚಿತ್ರದ ಬಗ್ಗೆ ಮಾತನಾಡುವ ಯೋಗ್ಯತೆ ಸುದೀಪ್ ಅವರಿಗೆ ಇಲ್ವಾ ಎಂದು ಸುದೀಪ್ ಅವರ ಮೇಲೆ ಯಶ್ ಅಭಿಮಾನಿಗಳು ಕೋಪಗೊಳ್ಳುತ್ತಿದ್ದಾರೆ.

ಆದರೆ ಅಲ್ಲಿ ನಿಜವಾಗಲೂ ನಡೆದಿದ್ದೇ ಬೇರೆ ಸುದೀಪ್ ಅವರ ಬಳಿ ನೀವು ಕೆಜಿಎಫ್ ಬಗ್ಗೆ ಮಾತನಾಡಿ ಎಂದು ಕೇಳಿಲ್ಲ ಕೆಜಿಎಫ್ ನಲ್ಲಿ ನಿಮ್ಮ ಪಾತ್ರ ಇದೆಯೇ ಎಂದು ಪ್ರಶ್ನೆ ಕೇಳಿದ್ದರು. ಆದ್ದರಿಂದ ಸುದೀಪ್ ಅವರು ಕೆಜಿಎಫ್ ಚಿತ್ರಕ್ಕೂ ನನಗೂ ಸಂಬಂಧ ಇಲ್ಲ ಎಂಬ ಉತ್ತರ ಕೊಟ್ಟಿದ್ದರು. ಕೆಜಿಎಫ್ ಚಾಪ್ಟರ್ ಚಿತ್ರ ಬಟ್ಟೇರಿ ಪ್ರದರ್ಶನಗೊಳ್ಳುವ ಇಂತಹ ಸಂದರ್ಭದಲ್ಲಿ ಸುದೀಪ್ ಅವರ ವಿಡಿಯೋ ಹೇಳಿರುವ ಹಳೆ ಸಂದರ್ಶನದ ವಿಡಿಯೋ ವನ್ನು ವೈರಲ್ ಮಾಡಿದ್ದಾರೆ. ಸುದೀಪ್ ಮತ್ತು ಯಶ್ ಅವರ ಮಧ್ಯೆ ತಂದಿಕ್ಕಿ ತಮಾಷೆ ನೋಡೋಕೆ ಕೆಲವು ಕಿಡಿಗೇ ಡಿ ನೆಟ್ಟಿಗರು ಇಂಥ ಕೆಟ್ಟ ಕೆಲಸಗಳನ್ನು ಮಾಡುತ್ತಿದ್ದಾರೆ. ಕನ್ನಡ ಚಿತ್ರರಂಗ ದೊಡ್ಡ ಯಶಸ್ಸು ಕಾಣಬೇಕಾದರೆ ನಾವು ನಮ್ಮಲ್ಲೇ ಇಂತಹ ವಿಷ ಬಿತ್ತುವ ಕೆಲಸವನ್ನು ಬಿಡಬೇಕು.

Leave A Reply

Your email address will not be published.

error: Content is protected !!