Yash: ರಾಕಿ ಬಾಯ್ ನಿಂದ ರಾವಣ ಆಗೋಕೆ ಹೊರಟ ರಾಕಿಂಗ್ ಸ್ಟಾರ್ ಯಶ್.

Yash ಕನ್ನಡ ಚಿತ್ರರಂಗದ ಖ್ಯಾತ ನಾಯಕನಟ ಆಗಿರುವಂತಹ ರಾಕಿಂಗ್ ಸ್ಟಾರ್ ಯಶ್(Rocking Star Yash) ರವರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕೆಜಿಎಫ್ ಸರಣಿ ಸಿನಿಮಾಗಳ ಮೂಲಕ ಕೇವಲ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ಬಾಲಿವುಡ್ ನಂತಹ ದೇಶದ ಅತ್ಯಂತ ದೊಡ್ಡ ಚಿತ್ರರಂಗದಲ್ಲಿ ಕೂಡ ಸೂಪರ್ ಸ್ಟಾರ್ ಪಟ್ಟವನ್ನು ಗಳಿಸಿದ್ದಾರೆ.

ರಾಕಿಂಗ್ ಸ್ಟಾರ್ ಯಶ್ ಅವರ ಮುಂದಿನ ಸಿನಿಮಾ ಯಾವುದು ಎನ್ನುವುದರ ಬಗ್ಗೆ ಇಂದಿಗೂ ಕೂಡ ಬಗೆಹರಿಯದ ಚರ್ಚೆಗಳು ನಡೆಯುತ್ತಲೇ ಇವೆ. ಆದರೆ ಉತ್ತರ ಮಾತ್ರ ಅಧಿಕೃತವಾಗಿ ಯಾವುದು ಕೂಡ ಸಿಗುತ್ತಿಲ್ಲ ಎನ್ನುವುದು ಅಭಿಮಾನಿಗಳಿಗೆ ಬೇಸರಾಗುತ್ತಿರುವುದು.

ಆಗಾಗ ಕೆಲವೊಂದು ಗಾಳಿ ಸುದ್ದಿಗಳನ್ನು ಕೇಳಿಸಿಕೊಂಡು ಅದು ಸುಳ್ಳು ಎಂಬುದಾಗಿ ತಿಳಿದಿದ್ದರೂ ಕೂಡ ಅದನ್ನೇ ನಿಜವೆಂಬುದಾಗಿ ಭಾವಿಸಿ ಅಭಿಮಾನಿಗಳು ಸಂತೋಷ ಪಡುವಂತಹ ಪ್ರಮೇಯ ಎದುರಾಗಿದೆ. ಆದರೆ ಇದರ ನಡುವಲ್ಲಿಯೇ ಬಾಲಿವುಡ್ ಚಿತ್ರರಂಗದಿಂದಲೂ ಕೂಡ ಮತ್ತೊಂದು ಗಾಳಿ ಸುದ್ದಿ ಎದ್ದು ಬಂದಿದೆ.

ನಿತೇಶ್ ತಿವಾರಿ ನಿರ್ದೇಶನದಲ್ಲಿ ಮೂಡಿ ಬರಲಿರುವಂತಹ ರಾಮಾಯಣ ಸಿನಿಮಾದಲ್ಲಿ ರಾಕಿಂಗ್ ಸ್ಟಾರ್ ಯಶ್(Yash) ರವರು ರಾವಣನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವಂತಹ ಸುದ್ದಿಗಳು ಕೂಡ ಕೇಳಿ ಬರುತ್ತಿದ್ದು ಇದು ಎಷ್ಟರ ಮಟ್ಟಿಗೆ ನಿಜ ಅಥವಾ ಸುಳ್ಳು ಎನ್ನುವುದನ್ನು ನಾವು ಮುಂದಿನ ದಿನಗಳಲ್ಲಿ ಅಧಿಕೃತವಾಗಿ ಸಿನಿಮಾ ತಂಡದಿಂದಲೇ ತಿಳಿದುಕೊಳ್ಳಬೇಕಾಗಿದೆ.

Leave A Reply

Your email address will not be published.

error: Content is protected !!