ಆ ಒಂದು ಸುದ್ದಿಯನ್ನು ಕೇಳಿ ಯಶ್ ಅವರ ತಂದೆ ಗಳಗಳನೆ ಅತ್ತು ಮೂರು ದಿವಸ ಊಟಾನೇ ಮಾಡಿಲ್ವಂತೆ

ಸಾಮಾನ್ಯ ಮಧ್ಯಮ ಕುಟುಂಬದಲ್ಲಿ ಬೆಳೆದು ಬಂದ ಯಶ್ ಅವರು ಇದೀಗ ದೇಶದಾದ್ಯಂತ ದೊಡ್ಡ ಮಟ್ಟದ ಹೆಸರು ಮಾಡಿದ್ದಾರೆ. ಯಶ್ ರವರ ಕಷ್ಟದ ದಿನಗಳನ್ನು ಹಾಗೂ ಏಳು ಬೀಳುಗಳನ್ನು ನಾವೆಲ್ಲ ಕಂಡಿದ್ದೇವೆ ಮತ್ತು ಯಶ್ ಅವರ ಬಾಯಲ್ಲೇ ಹಲವಾರು ಸಲ ಕೇಳಿದ್ದೇವೆ. ಯಶ್ ಅವರನ್ನು ಬೆಳೆಸಲು ಹಾಗೂ ಅವರನ್ನು ಒಬ್ಬ ನಟನನ್ನಾಗಿ ಮಾಡಲು ಅವರ ತಂದೆ ತಾಯಿಯವರ ಪರಿಶ್ರಮವು ಕೂಡ ಪ್ರಮುಖ ಕಾರಣ.

ಯಶ್ ಅವರ ತಂದೆ ಒಬ್ಬ ಸಾಧಾರಣ ಬಸ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದರು. ತಮಗೆ ಬರುತ್ತಿದ್ದ ಸಂಬಳದಲ್ಲಿ ಅರ್ಧಕ್ಕಿಂತ ಹೆಚ್ಚು ತನ್ನ ಮಗನ ಆರೈಕೆಗೆ ವೆಚ್ಚ ಮಾಡುತ್ತಿದ್ದರು. ಮಗನೆಂದರೆ ಯಶ್ ಅವರ ತಂದೆಗೆ ತುಂಬಾ ಪ್ರೀತಿ. ಬಸ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದರೂ ಕೂಡ ಯಶ್ ಅವರ ತಂದೆಗೆ ತನ್ನ ಮಗ ದೊಡ್ಡ ಬ್ಯುಸಿನೆಸ್ ಮೆನ್ ಮಗನ ಹಾಗೆ ಶ್ರೀಮಂತ ನಾಗಿ ಬದುಕಬೇಕು ಎನ್ನುವ ಆಸೆ ಇತ್ತು.

ಯಶ್ ಅವರು ಚಿಕ್ಕ ವಯಸ್ಸಿನಲ್ಲಿದ್ದಾಗ ಅವರ ತಂದೆ ಮಗನಿಗೆ ಹೈ ಕ್ವಾಲಿಟಿ ಬಟ್ಟೆಗಳನ್ನು ಮತ್ತು ವಸ್ತುಗಳನ್ನು ಖರೀದಿ ಮಾಡುತ್ತಿದ್ದರು. ಊಟ ಬಟ್ಟೆಗೆ ಯಾವುದಕ್ಕೂ ಕಡಿಮೆ ಮಾಡದೆ ಮಗನನ್ನು ರಾಯಲ್ ಆಗಿ ಬೆಳೆಸಿದರು. ಅದಕ್ಕೆ ಸಿಕ್ಕ ಪ್ರತಿಫಲವೇ ಇಂದು ಯಶ್ ಅವರ ತಂದೆ ಅನುಭವಿಸುತ್ತಿದ್ದಾರೆ. ಇದೀಗ ಯಶ್ ಅವರು ತಮ್ಮ ತಂದೆ ತಾಯಿಯನ್ನು ರಾಯಲ್ಲಾಗಿ ನೋಡಿಕೊಳ್ಳುತ್ತಿದ್ದಾರೆ. ಹಾಸನದಲ್ಲಿ ತಂದೆ ತಾಯಿಗೆ ದೊಡ್ಡದಾದ 5 ಕಿಲೋ ಮೀಟರ್ ವಿಸ್ತೀರ್ಣ ಹೊಂದಿರುವ ಫಾರ್ಮ್ ಹೌಸ್ ಅನ್ನು ಖರೀದಿ ಮಾಡಿದ್ದಾರೆ. ಫಾರ್ಮ್ ಹೌಸ್ ನಲ್ಲಿ ಯಶ್ ಅವರ ತಂದೆ ಇದೀಗ ಆರಾಮದಾಯಕವಾದ ಜೀವನವನ್ನು ನಡೆಸುತ್ತಿದ್ದಾರೆ.

ಯಶ್ ಅವರ ತಂದೆಗೆ ಸಿನಿಮಾವೆಂದರೆ ಹುಚ್ಚು ಪ್ರೀತಿ. ತನ್ನ ಮಗನ ಸಿನಿಮಾವನ್ನು ಮೊದಲ ದಿನವೇ ಥಿಯೇಟರ್ ಗೆ ಹೋಗಿ ನೋಡುತ್ತಾರೆ. ಹಾಗೆ ಅವರ ತಂದೆಗೆ ತನ್ನ ಮಗನಿಗಿಂತ ಪುನೀತ್ ಅವರ ಸಿನಿಮಾಗಳೆಂದರೆ ತುಂಬಾ ಇಷ್ಟವಂತೆ. ಪುನೀತ್ ಅವರನ್ನು ತನ್ನ ಮಗನಂತೆ ಕಾಣು ತ್ತಿದ್ದರು. ಯಶ್ ಅವರ ತಂದೆ ಲಾರಿ ಡ್ರೈವರ್ ಆಗಿದ್ದ ಸಮಯದಲ್ಲಿ ಪುನೀತ್ ಅವರು ಬಾಲನಟನಾಗಿ ದ್ದರು. ಯಶ್ ಅವರ ತಂದೆ ಲಾರಿ ಓಡಿಸುವ ಸಮಯದಲ್ಲಿ ಪುನೀತ್ ಅವರ ಚಿಕ್ಕವಯಸ್ಸಿನ ಸಿನಿಮಾಗಳ ಶೂಟಿಂಗ್ ಗಳನ್ನೆಲ್ಲ ಶೂಟಿಂಗ್ ಜಾಗಕ್ಕೆ ಹೋಗಿ ನೋಡುತ್ತಿದ್ದರು. ಜಗತ್ತಿನಲ್ಲಿ ಮನುಷ್ಯ ಅವರ ತಂದೆ ಪುನೀತ್ ಅವರ ದೊಡ್ಡ ಅಭಿಮಾನಿ.

ವೈಯಕ್ತಿಕವಾಗಿ ಪುನೀತ್ ಅವರ ಮೇಲೆ ಅಪಾರವಾದ ಪ್ರೀತಿಯನ್ನು ಹೊಂದಿದ್ದ ಯಶ್ ಅವರ ತಂದೆಗೆ ಪುನೀತ್ ಅವರ ಸಾ ವಿನ ಸುದ್ದಿಯನ್ನು ಕೇಳಿ ನಿಜಕ್ಕೂ ಮನಸ್ಸಿಗೆ ಆ ಘಾತವಾಯಿತು. ಮಗನಂತೆ ನೋಡುತ್ತಿದ್ದ ಪುನೀತ್ ರಾಜ್ ಕುಮಾರ್ ಅವರು ಇಲ್ಲ ಎಂಬ ಸುದ್ದಿ ಕೇಳಿ ಯಶ್ ಅವರ ತಂದೆ ಗಳಗಳನೇ ಅತ್ತುಬಿಟ್ಟರಂತೆ. ಪುನೀತ್ ಅವರ ದೇಹವನ್ನು ಮಣ್ಣು ಮಾಡುವವರೆಗೂ ಯಶ್ ಅವರ ತಂದೆ ಊಟ ನೀರು ಬಿಟ್ಟಿದ್ದರು. ಮೂರು ದಿನಗಳ ಕಾಲ ಊಟವನ್ನೇ ಮಾಡಿಲ್ಲ. ಯಶ್ ಅವರ ತಂದೆ ಜೀವಮಾನದಲ್ಲಿ ಇಷ್ಟೊಂದು ಭಾವುಕರಾಗಿದ್ದು ಇದೇ ಮೊದಲ ಬಾರಿ ಎಂದು ಯಶ್ ಅವರ ತಾಯಿ ಕೂಡ ಹೇಳಿಕೊಂಡಿದ್ದಾರೆ.

Leave A Reply

Your email address will not be published.

error: Content is protected !!