ಯಶ್ ಅವರು ಈ ರೀತಿಯ ಸಿನೆಮಾಗಳಲ್ಲಿ ನಟಿಸಿದರೆ ನನಗೆ ಸ್ವಲ್ಪ ಕೂಡ ಇಷ್ಟವಾಗುವುದಿಲ್ಲ ಎಂದು ಹೇಳಿದ ಯಶ್ ಅಮ್ಮ

ಸದ್ಯ ಸ್ಯಾಂಡಲ್ ವುಡ್ ನ್ನು ಮಾತ್ರವಲ್ಲ ಇಡೀ ದೇಶದ ಚಿತ್ರರಂಗವನ್ನ ಬೆಚ್ಚಿ ಬೀಳಿಸಿದ್ದು ಯಸ್ ನಟನೆಯ ಕೆಜಿಎಫ್ ಸಿನಿಮಾ. ಅದರಲ್ಲೂ ಕೆಜಿಎಫ್ 2 ವಿದೇಶದಲ್ಲೆಲ್ಲಾ ಧೂಳೆಬ್ಬಿಸಿಬಿಟ್ಟಿದೆ. ಎಪ್ರೀಲ್ 14ಕ್ಕೆ ಶೂರುವಾದ ಕೆಜಿಎಫ್ ಹಬ್ಬ ಇನ್ನು ನಿಂತಿಲ್ಲ. ಬಾಕ್ಸ್ ಆಫೀಸ್ ದಾಖಲೆ ಮುರಿಯೋಕೆ ಅಂತದ್ದೊಂದು ಚಿತ್ರ ಮತ್ತೆ ನಿರ್ಮಾಣವಾಗಬೇಕು.

ರಾಜ ಮೌಳಿಯ ಆರ್ ಆರ್ ಆರ್ ಚಿತ್ರದ ಮೊದಲನೆ ವಾರದ ಕಲೆಕ್ಷನ್ ನೋಡಿ ಅದನ್ನು ಕೆಜಿಎಫ್ ಮೀರಿಸೋಕೆ ಸಾಧ್ಯವೇ ಇಲ್ಲ ಎನ್ನುವ ಭಾವನೆ ಹಲವರಲ್ಲಿತ್ತು. ಆದ್ರೆ ಅದೆಲ್ಲಾ ದಾಖಲೆಗಳನ್ನ ಮೀರಿ 1200 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ರಾರಾಜಿಸುತ್ತಿದೆ ಕೆಜಿಎಫ್ 2. ಕೆಜಿಎಫ್ 2 ಕೇವಲ ಕಲೆಕ್ಷನ್ ನಲ್ಲಿ ಮಾತ್ರವಲ್ಲ ಇನ್ನೂ ಹತ್ತು ಹಲವು ದಾಖಲೆಗಳನ್ನ ಸೃಷ್ಟಿಸಿದೆ. ಭಾರತ ಚಿತ್ರರಂಗದಲ್ಲಿಯೇ ಹೊಸ ಇತಿಹಾಸವನ್ನು ಸೃಷ್ಟಿಸಿದೆ ಎಂದ್ರೆ ತಪ್ಪಾಗಲಿಕ್ಕಿಲ್ಲ. ಮುಂದಿನ ಚಿತ್ರ ನಿರ್ದೇಶಿಸೋರೆಲ್ಲಾ ಕೆಜಿಎಫ್ ನ್ನ ಮೀರಿಸೋವಂಥ ಸಿನಿಮಾ ಮಾಡೋದು ಹೇಗೆ ಅಂತ ತಲೆಕೆಡಿಸಿಕೊಂಡಿದ್ದಾರೆ. ಬಾಲಿವುಡ್ ನಲ್ಲಿಯಂತೂ ಕೆಜಿಎಫ್ 2 ಬಹಳ ದೊಡ್ಡ ಸಂಚಲನವನ್ನೇ ಸೃಷ್ಟಿಸಿದೆ.

ಕೆಜಿಎಫ್ ಚಾಪ್ಟರ್ 2 ಚಿತ್ರವನ್ನ ಎಲ್ಲರೂ ಮೆಚ್ಚಿಕೊಂಡಿದ್ದಾರೆ. ಇನ್ನು ಯಶ್ ಅಭಿನಯ ಹಾಗೂ ಅವರ ಗೆಲುವಿಗಾಗಿ ಅವರ ಕುಟುಂಬವೂ ಕೂದ ಅಭಿನಂದನೆ ಸಲ್ಲಿಸಿದೆ. ಅಲ್ಲದೇ ಯಶ್ ಅವರ ಮಗಳು ಮುದ್ದು ಮುದ್ದಾಗಿ ಸಲಾಂ ರಾಕಿ ಬಾಯ್ ಅಂದ ಡೈಲಾಗ್ ಅಂತೂ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಆದರೆ ಈ ನಡುವೆ ಮಗನ ಅಭಿನಯದ ಬಗ್ಗೆ ಮಾತನಾಡಿದ ಯಶ್ ತಾಯಿ ಬೇರೆಯದೇ ಮಾತುಗಳನ್ನಾಡಿದ್ದಾರೆ. ಯಶ್ ತಾಯಿ ಹೇಳಿದ್ದೇನು ಗೊತ್ತಾ?

ಮಕ್ಕಳು ಯಶಸ್ಸನ್ನ ಸಾಧಿಸಿದರೆ ಸಹಜವಾಗಿಯೇ ತಂದೆ ತಾಯಿಯಂದಿರಿಗೆ ಎಲ್ಲಿಲ್ಲದ ಸಂತೋಷವಾಗುತ್ತೆ. ಮಗನ ಗೆಲುವಿನ ಸಾರ್ಥಕತೆಯನ್ನ ತಾಯಿಯ ಮುಖದಲ್ಲಿಯೇ ಕಾಣಬಹುದು. ಹಾಗೆಯೇ ರಾಕಿಂಗ್ ಸ್ಟಾರ್ ಯಶ್ ತಾಯಿಯೂ ಕೂಡ ಕೆಜಿಎಫ್ ಚಿತ್ರಕ್ಕಾಗಿ ಮಗನ ಡೆಡಿಕೇಶನ್ ನೆನೆದು ಸಂತೋಷ ವ್ಯಕ್ತಪಡಿಸಿದ್ದಾರೆ. ಆದರೂ ಯಶ್ ಗೆ ರಾಕಿ ಭಾಯ್ ಗಿಂತ ಲವ್ವರ್ ಬಾಯ್ ಪಾತ್ರಗಳೇ ಇಷ್ಟವಾಗುತ್ತಂತೆ!

ಹೌದು ಇದು ಯಶ್ ತಾಯಿ ಸಂದರ್ಶನವೊಂದರಲ್ಲಿ ಹೇಳಿರುವ ಮಾತು. ಯಶ್ ಮೊದಲಿನ ಹಾಗೆ ಗೂಗ್ಲಿ, ಲಕ್ಕಿ ಚಿತ್ರಗಳನ್ನ ಮಾಡಬೇಕು. ಅದರಲ್ಲಿ ಅವನ ಸ್ಟೈಲ್, ಡ್ರೆಸ್ಸಿಂಗ್ ಎಲ್ಲಾ ಅವನಿಗೆ ತುಂಬಾ ಚೆನ್ನಾಗಿ ಒಪ್ಪುತ್ತೆ. ನನ್ನ ಮಗ ನನಗೆ ಸುಂದರವಾಗಿಯೇ ಕಾಣುತ್ತಾನೆ. ಹಾಗಾಗಿ ಅವನಿಗೆ ಇಂಥ ಪಾತ್ರಗಳು ಸೂಟ್ ಆಗತ್ತೆ ಅಂದಿದ್ದಾರೆ. ರೌಡಿಸಂ ಚಿತ್ರಗಳಲ್ಲಿ ಅಭಿನಯಿಸಿದರೆ ಯಶ್ ಅಮ್ಮ ಯಶ್ ಗೆ ಬೈತಾರಂತೆ. ಅಷ್ಟೇ ಅಲ್ಲ ಯಶ್ ಗಡ್ದಧಾರಿಯಾಗಿರುವುದಕ್ಕೂ ಯಶ್ ತಾಯಿ ಅಸಮಾಧಾನವಿತ್ತಂತೆ. ರಾಜಧಾನಿ ಚಿತ್ರದಲ್ಲಿ ರೌ’ಡಿ’ ಸಂ ಪಾತ್ರದಲ್ಲಿ ನಟಿಸಿದ್ದಕ್ಕೆ ಇಂಥ ಪಾತ್ರಗಳಲ್ಲಿ ನಟಿಸಬೇಡ ಅಂದಿದ್ದರಂತೆ.

ಯಶ್ ತಾಯಿ ಸ್ವತಃ ರಾಜಕುಮಾರ್, ರಮೇಶ್ ಅವರ ಸಿನಿಮಾಗಳನ್ನು ಇಷ್ಟಪಟ್ಟವರು. ಹಾಗಾಗಿ ನೀನು ರಮೇಶ್ ಅರವಿಂದ್ ತರ ಸಾಪ್ಟ್ ಪಾತ್ರಗಳಲ್ಲಿ ನಟಿಸಿದರೆ ಚೆನ್ನ ಎಂದಿದ್ದರಂತೆ. ಯಶ್ ಕೆಜಿಎಫ್ ಚಿತ್ರ ಮಾಡೋಕೆ ಹೊರಟಾಗ ಕೂಡ ಅಮ್ಮ ರೌ”ಡಿ”ಸಂ ಚಿತ್ರ ಮಾಡೋದು ಬೇಡ ಅಂತ ಯಶ್ ಗೆ ಬುದ್ಧಿ ಮಾತು ಹೇಳಿದ್ದರು. ಅಮ್ಮ ನಿನ್ನ ಕಾಲದ ಸಿನಿಮಾ ಈಗ ಓಡಲ್ಲ ಈಗೆಲ್ಲ ಇದೆ ರೀತಿಯ ಸಿನೆಮಾ ಓಡುತ್ತೆ ಅಂತ ಯಶ್ ಸುಮ್ಮನಾಗಿಸಿದ್ದರಂತೆ. ಇನ್ನು ಯಶ್ ತಂದೆಗೆ ಗಡ್ಡ ಬೆಳೆಸುವುದು ಇಷ್ಟ. ಆದರೆ ತಯಿಗೆ ಸುತಾರಾಂ ಇಷ್ಟವಿರಲಿಲ್ಲ. ಮೊದಲೆಲ್ಲಾ ಸಣ್ಣದಾಗಿ ಗಡ್ದ ಬಿಡುತ್ತಿದ್ದ, ಈಗಿನಷ್ಟು ಉದ್ದವಿರಲಿಲ್ಲ. ಆದರೆ ಸಿನಿಮಾಕ್ಕಾಗಿ ಗಡ್ದ ಬೆಳೆಸಲೇ ಬೇಕು ಅಂದಾಗ ಅದೆಲ್ಲಾ ಮಾಮೂಲಿ ಅಂತ ನಾನೇ ಸುಮ್ಮನಾದೆ ಎಂದು ಯಶ್ ಗಡ್ದದ ಬಗ್ಗೆ ಹುಸಿ ಮುನಿಸು ತೋರಿಸುತ್ತಾರೆ ಯಶ್ ತಾಯಿ.

Leave A Reply

Your email address will not be published.

error: Content is protected !!