ಯಶ್ ಹತ್ರ ಏನು ಇರ್ಲಿಲ್ಲ ಆವಾಗ್ಲೇ ಪ್ರೀತಿಸಲು ಶುರು ಮಾಡಿದ್ದ ರಾಧಿಕಾಪಂಡಿತ್, ಯಶ್ ಗಾಗಿ ಮಾಡಿದ ದೊಡ್ಡ ತ್ಯಾಗ ಏನು ಗೊತ್ತಾ

ಪ್ರೀತಿ ಹೇಗೆ ಹುಟ್ಟುತ್ತದೆ ಎನ್ನುವುದು ಯಾರಿಗೂ ಗೊತ್ತಿಲ್ಲ ಅದು ಎರಡು ಹೃದಯಗಳ ನಡುವೆ ಉಂಟಾಗುವ ನವಿರಾದ ಸುಮಧುರ ಕ್ಷಣ ನಿಜವಾದ ಪ್ರೀತಿಗೆ ಯಾವುದೇ ಆಸ್ತಿ ಅಂತಸ್ತು ಜಾತಿ ಯಾವುದರ ಬಗ್ಗೆಯೂ ಪ್ರೀತಿಯಲ್ಲಿ ಬಿದ್ದವರಿಗೆ ಗಣನೆ ಬರುವುದಿಲ್ಲ. ಇನ್ನು ನಿಜವಾಗಿ ಪ್ರೀತಿಸಿ ಮದುವೆಯಾದ ಜೋಡಿ ಅತಿ ವಿರಳ

ಸ್ಯಾಂಡಲ್ ವುಡ್ ಕನ್ನಡ ಚಿತ್ರರಂಗದಲ್ಲಿ ಅನೇಕ ತಾರ ನಟ ನಟಿಯರು ಪ್ರೀತಿಸಿ ಮದುವೆಯಾದ ಉದಾಹರಣೆ ತುಂಬಾ ಇದ್ದಾವೆ ಅಂಬರೀಶ ಮತ್ತು ಸುಮಲತಾ ವಿಷ್ಣುವರ್ಧನ್ ಮತ್ತು ಭಾರತಿ ಉಪೇಂದ್ರ ಮತ್ತು ಪ್ರಿಯಾಂಕಾ ಇತ್ಯಾದಿ ಹಲವಾರು ನಟರು ಪ್ರೀತಿಸಿ ತಮ್ಮ ದಾಂಪತ್ಯ ಜೀವನದಲ್ಲಿ ಸುಖಕರವಾಗಿ ಜೀವನ ನಡೆಸುತ್ತಿದ್ದಾರೆ . ಕನ್ನಡ ಚಿತ್ರರಂಗದಲ್ಲಿ ಮುದ್ದಾದ ಜೋಡಿಗಳಲ್ಲಿ ಒಂದಾದ ಜೋಡಿ ಕೂಡ ಒಬ್ಬರು ರಾಧಿಕಾ ಪಂಡಿತ್ ಹಾಗೂ ಯಶ್ ದಂಪತಿ ಆಗಿದ್ದು ಇವರ ಪ್ರೀತಿ ಪ್ರೇಮದ ಬಗ್ಗೆ ಇಂದಿನ ಲೇಖನದಲ್ಲಿ ತಿಳಿದುಕೊಳ್ಳೋಣ

ಯಶ್ ಮತ್ತು ರಾಧಿಕಾ ಜೋಡಿ ಕಿರುತೆರೆಯ ಮೂಲಕ ಪರದೆ ಮೇಲೆ ಬಂದ ಜೋಡಿಗಳು ಮೊದಲ ಸಿನಿಮಾದಲ್ಲೂ ಕೂಡ ಒಟ್ಟಿಗೆ ನಟಿಸಿ ಸೈ ಎನಿಸಿಕೊಂಡಿದ್ದಾರೆ ಅವರ ಸಿನಿಮಾ ಅತ್ಯಂತ ಸೊಗಸಾಗಿದೆ ಇನ್ನು ಯಶ್ ಅವರ ಜೀವನ ಚರಿತ್ರೆ ಎಲ್ಲರಿಗೂ ತಿಳಿದಿದೆ ಯಶ್ ತಂದೆ ಒಬ್ಬರು ಕೆ ಎಸ್ ಆರ್ ಟಿ ಸಿ ಹಾಗೂ ಬಿ ಎಂ ಟಿ ಸಿ ಚಾಲಕರಾಗಿದ್ದು ಇನ್ನು ಇವರು ಮದ್ಯಮ ವರ್ಗದವರು ಆಗಿದ್ದು ಸಿನಿಮಾ ರಂಗಕ್ಕೆ ಬರುವ ಮೊದಲು ಹಲವಾರು ಕಡೆ ಕೆಲಸ ಮಾಡಿ ತಮ್ಮಂದೇ ಮನೆಯವರು ನಡೆಸುತ್ತಿದ್ದ ದಿನಸಿ ಅಂಗಡಿ ಅಲ್ಲಿ ಕೆಲಸ ಮಾಡುತಿದ್ದರು

ನಂತರ ಬೆನಕ ಅಲ್ಲಿ ನಟನೆ ಮಾಡಿದರು ಕ್ರಮೇಣ ಉತ್ತರಾಯಣ ನಂದಗೋಕುಲ ಮಳೆಬಿಲ್ಲು ಪ್ರೀತಿ ಇಲ್ಲದ ಮೇಲೆ ಧಾರಾವಾಹಿಯಲ್ಲಿ ನಟಿಸಿದರು ನಂತರ 2007ರಲ್ಲಿ ಜಂಭದ ಹುಡುಗಿ ಸಿನಿಮಾ ಅಲ್ಲಿ ನಟಿಸಿದ್ದು ಹಾಗೆ ತಮ್ಮ ಪದವಿಯನ್ನು ನಟನೆ ಮಾಡುತ್ತಾನೆ ಮುಗಿಸಿದರು ಕ್ರಮೇಣ ಮೊಗ್ಗಿನ ಮನಸ್ಸು ಕಿರಾತಕ ರಾಜಾಹುಲಿ ರಾಜಧಾನಿ ಕಳ್ಳರ ಸಂತೆ ರಾಕಿ ಮುಂತಾದ ಸಿನಿಮಾ ಅಲ್ಲಿ ನಟಿಸಿದ್ದು ಸಿನಿಮಾ ಇಂಡಸ್ಟ್ರಿ ಅಲ್ಲಿ ತಮ್ಮದೇ ಅದ ಛಾಪನ್ನು ಮೂಡಿಸಿ ಇಂದು ಬಹುಬೇಡಿಕೆಯ ನಟ ಆಗಿದ್ದಾರೆ ಇನ್ನು ಇವರ ಕೆಜಿಎಫ್ ಕನ್ನಡ ಇಂಡಸ್ಟ್ರಿ ಬಾಕ್ಸ್ ಆಫೀಸ್ ಅಲ್ಲಿ ಧೂಳೆಬ್ಬಿಸಿದ ಸಿನಿಮಾ .

ಇನ್ನು ರಾಧಿಕಾ ಪಂಡಿತ್ ಅವರು ಮೊದಲೇ ಸಿರಿವಂತ ಕುಟುಂಬದಲ್ಲಿ ಬೆಳೆದಿದ್ದು ಇನ್ನು ಇವರು ಪದವಿಯನ್ನು ಮುಗಿಸಿದ್ದಾರೆ ಇನ್ನು ಇವರು ನಟನೆಯಲ್ಲಿ ಒಲವು ತೋರಿದ್ದರು ಹಾಗಾಗಿ ನಂದಗೋಕುಲ ಧಾರಾವಾಹಿಯಲ್ಲಿ ನಟಿಸಿದ್ದರು ಆವಾಗ ನಟನ ಪಾತ್ರ ಬೇರೊಬ್ಬ ವ್ಯಕ್ತಿಯೊಂದಿಗೆ ಇದ್ದು ಅವರ ಪಾತ್ರವನ್ನು ಕೊನೆಗೆ ಯಶ್ ನಿಭಾಯಿಸಿದ್ದು ಆಗಾ ರಾಧಿಕಾ ಪಂಡಿತ್ ಅವರ ಸ್ನೇಹ ಆಗಿತು ಹಾಗೆಯೇ ಮೊಗ್ಗಿನ ಮನಸ್ಸು ಸಿನಿಮಾ ಅಲ್ಲಿ ಒಟ್ಟಾಗಿ ನಟಿಸಿದ್ದು ಇವರಿಬ್ಬರ ಜೋಡಿ ಜನರ ಅಚ್ಚುಮೆಚ್ಚು ಆಗೀತು ಹಾಗೂ ಸಿನಿಮಾ ಕೂಡ ಹಿಟ್ ಆಗಿದ್ದು ನಂತರ ರಾಧಿಕಾ ಅವರು ಹುಡುಗರು ಬಹದ್ದೂರ್ ಎಂದೆಂದಿಗೂ ಕಡ್ಡಿಪುಡಿ ದಿಲವಾಲ್ ಬ್ರೇಕಿಂಗ್ ನ್ಯೂಸ್ ಅಲೆಮಾರಿ ಅದ್ದೂರಿ ಸಾಗರ್ ಮುಂತಾದ ಅನೇಕ ಸಿನಿಮಾ ಅಲ್ಲಿ ಬೇಡಿಕೆ ಉಳ್ಳ ನಟರೊಂದಿಗೆ ನಟನೆ ಮಾಡಿ ಚಿತ್ರರಂಗದಲ್ಲಿ ಬೇಡಿಕೆ ಉಳ್ಳ ನಟಿ ಆಗಿದ್ದಾರೆ.

ಯಶ್ ಅವರಿಗೆ ನಂದ ಗೋಕುಲ್ ಧಾರಾವಾಹಿಯಲ್ಲಿ ರಾಧಿಕಾ ಅವರ ಮೇಲೆ ಪ್ರೇಮಾಂಕುರವಾಗಿತ್ತು ಕೊನೆಗೆ ಡ್ರಾಮಾ ಸಿನಿಮಾ ಅಲ್ಲಿ ಒಟ್ಟಾಗಿ ನಟಿಸುವ ಅವಕಾಶ ಸಿಕ್ಕಿತು ಕೊನೆಗೆ ಯಶ್ ಅವರು ತನ್ನ ಪ್ರೇಮ ನಿವೇದನೆ ಮಾಡುತ್ತಾರೆ ಆದರೆ ತಕ್ಷಣ ಒಪ್ಪಿಕೊಳ್ಳದೆ ಸುಮಾರು ಆರು ತಿಂಗಳ ಕಾಲ ಸಮಯವನ್ನು ಕೇಳಿಕೊಳ್ಳುತ್ತಾರೆ ಕೊನೆಗೆ ಉತ್ತಮ ಸ್ನೇಹಿತರಾಗಿ ಇರುತ್ತಾರೆ ಒಮ್ಮೆ ವರಮಹಾಲಕ್ಷ್ಮಿ ಹಬ್ಬಕ್ಕೆ ಮನೆಗೆ ಕರೆದುಕೊಂಡು ಹೋಗಿ ತಾವಿಬ್ಬರೂ ಪ್ರೀತಿಸುತ್ತಾ ಇದೀನಿ ಎಂದು ಪರಿಚಯಿಸುತ್ತಾರೆ ಕ್ರಮೇಣ ಸಿನಿಮಾ ರಂಗದಲ್ಲಿ ಒಟ್ಟಿಗೆ ಮಿಸ್ಟರ್ ಆಂಡ್ ಮಿಸ್ಸೆಸ್ ರಾಮಾಚಾರಿ ಸಂತು ಸ್ಟ್ರೇಟ್ ಫಾರ್ವರ್ಡ್ ಮೊಗ್ಗಿನ ಮನಸ್ಸು ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದು ಎಲ್ಲೂ ಕೂಡ ತನ್ನ ಪ್ರೇಮ ಪ್ರೀತಿ ಪ್ರಣಯದ ಬಗ್ಗೆ ಪ್ರಸ್ತಾಪ ಮಾಡಿಲ್ಲ ಆದರೆ ರಾಮಾಚಾರಿ ಸಿನಿಮಾ ನೋಡಿದ ಜನರಲ್ಲಿ ಇವರಿಬ್ಬರಿಗೆ ರಚಿಸಿದ ಸಿನಿಮಾ ಎಂಬ ಅನುಮಾನ ವ್ಯಕ್ತ ಆಗಿತ್ತು

ನಿಜ ಹೇಳ್ಬೇಕು ಅಂದರೆ ಎಲ್ಲೂ ಕೂಡ ಒಂದು ಚಿಕ್ಕ ಅನುಮಾನ ಬಾರದ ಹಾಗೆ ಮತ್ತು ಸಿನಿಮಾ ರಂಗದಲ್ಲಿ ಎಲ್ಲೂ ಕೂಡ ಒಂದು ಚಿಕ್ಕ ಕಪ್ಪು ಚುಕ್ಕೆ ಇರದ ಜೋಡಿ ಇವರದ್ದು ಕೊನೆಗೆ 2016 ರಲ್ಲಿ ಸತಿಪತಿ ಆಗಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು . ಮದುವೆಯ ನಂತರ ರಾಧಿಕಾ ಪಂಡಿತ್ ಅವರು ಒಂದು ಸಿನಿಮಾ ಅಲ್ಲಿ ನಟನೆ ಮಾಡಿದ್ದು ಅದು ಅಷ್ಟೊಂದು ಹಿಟ್ ಆಗಿಲ್ಲ ಇತ್ತೀಚಿಗೆ ರಾಧಿಕಾ ಪಂಡಿತ್ ಮತ್ತು ಯಶ್ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದು ಮದುವೆಯ ನಂತರದ ಜೀವನವನ್ನು ಸಂಪೂರ್ಣವಾಗಿ ತಮ್ಮ ಸಂಸಾರದ ಜವಾಬ್ದಾರಿ ನಿರ್ವಹಿಸಲು ತೊಡಗಿಸಿಕೊಂಡಿದ್ದಾರೆ

ಇದರಿಂದ ರಾಧಿಕಾ ಪಂಡಿತ್ ಅವರ ಗುಣ ನಡತೆಯ ಬಗ್ಗೆ ಅರಿವು ನಮಗೆ ಆಗುವುದು ನಿಜ ಯಶ್ ಅವರು ನಂದ ಗೋಕುಲ ಅಲ್ಲಿ ನಟಿಸುವ ವೇಳೆ ಅವರು ಹತ್ತಿರ ಏನು ಇರಲ್ಲಿಲ್ಲ ಹಾಗೂ ಪ್ರೇಮ ನಿವೇದನೆ ವೇಳೆಯಲ್ಲಿ ಕೂಡ ಅಷ್ಟೊಂದು ಪ್ರತಿಭಾವಂತ ನಟ ಆಗಿರ್ಲಿಲ್ಲ ಆದರೆ ರಾಧಿಕಾ ಪಂಡಿತ್ ಒಬ್ಬ ಬೇಡಿಕೆಯ ನಟಿ ಇನ್ನು ಶ್ರೀಮಂತ ಮನೆಯಿಂದ ಬಂದ ನಟಿ ಆದರೂ ಕೂಡ ಯಶ್ ಅವರ ಹಿಂದಿನ ಜೀವನದ ಬಗ್ಗೆ ಎಲ್ಲೂ ತಾತ್ಸಾರ ಭಾವನೆ ಇಲ್ಲದೆ ತುಂಬು ಮನಸಿಂದ ಪ್ರೀತಿಸಿ ಮದುವೆಯಾದ ಹೆಗ್ಗಳಿಕೆ.

ನಿಜ ಯುವ ಪೀಳಿಗೆಯಲ್ಲಿ ಬರೀ ಹಣ ಆಸ್ತಿ ಅಂತಸ್ತು ನೋಡುತ್ತಾರೆ ಇನ್ನು ಶ್ರೀಮಂತ ಹುಡುಗ ಆದರೆ ಹಿಂದು ಮುಂದೆ ಯೋಚಿಸದೆ ಪ್ರೇಮ ಜಾಲದಲ್ಲಿ ಬೀಳುತ್ತಾರೆ ಹಾಗೂ ಬಡವ ಹುಡುಗ ಆದರೆ ಹಿಯಾಳಿಸಿ ಅವರ ಅಮೃತ ಪ್ರೀತಿಯನ್ನು ನಿರಾಕರಿಸುವ ಯುವ ಪೀಳಿಗೆಯಲ್ಲಿ ಇವರಿಬ್ಬರ ಪ್ರೀತಿಯನ್ನು ನೋಡಿ ಕಲಿತು ಕೊಳ್ಳಬೇಕು ಅಲ್ಲವೇ ಕಷ್ಟ ಅಂತ ಬಂದರೆ ದಂಪತಿಯಲ್ಲಿ ಏನಾದರೂ ತಿಳುವಳಿಕೆಯಲ್ಲಿ ಏರುಪೇರು ಉಂಟಾದಲ್ಲಿ ನೇರ ವಿಚ್ಛೇದನ ಇಂದಿನ ಪೀಳಿಗೆಗೆ ಇವರಿಬ್ಬರ ಪ್ರೀತಿಯನ್ನು ನೋಡಿ ಕಲಿಯಬೇಕು

ಏನು ಇಲ್ಲದ ಸಂದರ್ಭದಲ್ಲಿ ಪ್ರೀತಿಸಿ ಮನೆಯವರ ಒಪ್ಪಿಗೆ ಮೇರೆಗೆ ಮದುವೆ ಆಗಿ ನಂತರ ತನಗೆ ಬಹುಬೇಡಿಕೆ ಇದ್ದರೂ ಕೂಡ ಅದರ ಬಗ್ಗೆ ಗಮನ ಕೊಡದೆ ತನ್ನ ಪೂರ್ತಿ ಜೀವನವನ್ನು ಯಶ್ ಹಾಗೂ ತನ್ನ ಇಬ್ಬರು ಮಕ್ಕಳ ಲಾಲನೆ ಪಾಲನೆಗೆ ತೊಡಗಿಸಿಕೊಂಡು ಇರುವುದು ಅವರ ಈ ಗುಣಕ್ಕೆ ತಲೆಬಾಗಲೇಬೇಕು . ಇನ್ನು ಹೀಗೆ ಅವರ ಸುಖ ಸಂಸಾರಕ್ಕೆ ಯಾವುದೇ ಕೆಟ್ಟ ಕಣ್ಣು ಬೀಳದೆ ನೂರಾರು ಕಾಲ ಸುಖವಾಗಿ ಬಾಳಿ ಬದುಕಲಿ ಎಂದು ಹಾರೈಸೋಣ..

Leave a Comment

error: Content is protected !!