ಮಗನನ್ನು ಗದರಿಸಿದ ಯಶ್! ಅಪ್ಪನ ಘರ್ಜನೆಗೆ ಓಡಿಹೋದ ಮಗ ಯಥರ್ವ. ಇಲ್ಲಿದೆ ನೋಡಿ ಯಶ್ ಮತ್ತು ಮಗನ ವಿಡಿಯೋ

ಯಶ್ ಅವರು ಕೆಜಿಎಫ್ ಚಿತ್ರಕ್ಕೆ ಸತತ 8 ವರ್ಷಗಳ ಕಾಲ ಪರಿಶ್ರಮಪಟ್ಟಿದ್ದರು. ಅದರ ಪರಿಶ್ರಮದ ಪ್ರತಿಫಲವಾಗಿ ಇಂದು ಕೆಜಿಎಫ್ ಚಿತ್ರ ವಿಶ್ವದಾದ್ಯಂತ ದೊಡ್ಡ ಮಟ್ಟದಲ್ಲಿ ಯಶಸ್ವಿಯಾಗಿದೆ ಎಲ್ಲ ಕಡೆಗಳಿಂದಲೂ ಯಶ್ ಅಭಿನಂದನೆಗಳು ಸಿಗುತ್ತಿವೆ. ಹಿಂದೆಂದೂ ನೋಡಿರದ ದಾಖಲೆಗಳನ್ನು ಕೆಜಿಎಫ್ ಚಿತ್ರ ಸೃಷ್ಟಿ ಮಾಡಿದೆ. ಭಾರತದಲ್ಲಿಯೇ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಎರಡನೇ ಸ್ಥಾನವನ್ನು ಕೆಜಿಎಫ್ ಚಿತ್ರ ಗಳಿಸಿಕೊಂಡಿದೆ.

ಸದ್ಯದ ಮಟ್ಟಿಗೆ ಯಶ್ ಅವರು ಭಾರತದಲ್ಲಿಯೇ ನಂಬರ್ ಒಂದು ಹೀರೋ ಸ್ಥಾನವನ್ನು ಗಳಿಸಿಕೊಂಡಿದ್ದಾರೆ. ಯಶ್ ಅವರನ್ನು ಸಿ ಇ ಓ ಆಫ್ ಇಂಡಿಯಾ ಎಂದೇ ಕರೆಯಲಾಗುತ್ತಿದೆ. ಕೆಜಿಎಫ್ ಚಾಪ್ಟರ್ 2 ಸಿನಿಮಾ ಸಕ್ಸಸ್ ಸಾಗುತ್ತಿದ್ದಂತೆ ಎಸ್ಪಿಯವರು ಕಣ್ಮರೆಯಾಗಿದ್ದಾರೆ. ಯಾರ ಕಣ್ಣಿಗೂ ಬೀಳದೆ ಯಶ್ ಅವರು ಕುಟುಂಬದ ಜೊತೆ ಅಮೂಲ್ಯ ಕ್ಷಣಗಳನ್ನು ಕಳೆಯುತ್ತಿದ್ದಾರೆ. ಹೆಂಡತಿ ಮಕ್ಕಳ ಜೊತೆಗೆ ಯಶ್ ಅವರು ಪ್ರವಾಸಕ್ಕೆ ತೆರಳಿದ್ದಾರೆ. ಯಶ್ ಅವರು ಯಾವಾಗಲೂ ತಮ್ಮ ಫ್ಯಾಮಿಲಿ ಜೊತೆ ಹೆಚ್ಚಿನ ಸಮಯ ಕೊಡೋಕೆ ಇಷ್ಟಪಡುತ್ತಾರೆ

ಸುಮಾರು ಒಂದು ವಾರಗಳ ಕಾಲ ಯಶ್ ಅವರು ರಾಧಿಕಾ ಪಂಡಿತ್ ಮತ್ತು ಇಬ್ಬರು ಮಕ್ಕಳೊಡನೆ ಗೋವಾದಲ್ಲಿ ಎಂಜಾಯ್ ಮಾಡಿದ್ದಾರೆ. ಕೆಜಿಎಫ್ ಚಾಪ್ಟರ್ 2 ಸಿನಿಮಾ ಹಿಟ್ ಆಗುತ್ತಿದ್ದಂತೆ ಯಶ್ ಅವರು ಸುಮಾರು ಒಂದು ತಿಂಗಳುಗಳ ಕಾಲ ವಿಶ್ರಾಂತಿ ಪಡೆದಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಯಶ್ ಅವರು ತಮ್ಮ ಮಕ್ಕಳೊಡನೆ ಮನೆಯಲ್ಲಿ ಆಟವಾಡುತ್ತಿರುವ ಸುಂದರ ಕ್ಷಣಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಇತ್ತೀಚೆಗೆ ತಮ್ಮ ಮಗಳು ಐರಾ ಜೊತೆ ಆಟವಾಡುತ್ತಿದ್ದ ವೀಡಿಯೋ ಹಂಚಿಕೊಂಡಿದ್ದರು.

ಯಶ್ ಅವರ ಮುದ್ದಾದ ಮಗಳು ಐರಾ ಪತ್ನಿಗೆ ಸಲಾಮ್ ರಾಕಿ ಭಾಯ್ ಎನ್ನುವ ವೀಡಿಯೊವನ್ನು ಯಶ್ ಅವರು ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದರು. ಇದೀಗ ತಮ್ಮ ಮಗನ ಜೊತೆ ಆಟವಾಡುತ್ತಿರುವ ಇನ್ನೊಂದು ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಯಶ್ ಕಿರಿ ಮಗ ಯಥರ್ವ ಅಪ್ಪನ ಬಳಿ ನಾನು ಡೈನೋಸರ್ ಎಂದು ಹೇಳುತ್ತಾನೆ ಆಗ ಯಶ್ ಅಯ್ಯೋ ನನಗೆ ಹೆದರಿಕೆಯಾಗುತ್ತಿದೆ.. ಈಗ ಅಪ್ಪ ಹುಲಿಯಾಗಿ ಬದಲಾಗುತ್ತಿದ್ದೇನೆ ಎಂದು ಯಥರ್ವ್ ಬಳಿ ಹೇಳಿ ಯಶ್ ಘರ್ಜನೆ ಮಾಡುತ್ತಾರೆ. ಅಪ್ಪನ ಘರ್ಜನೆ ಕೇಳಿ ಬೆದರಿದ ಮಗ ಹಾಗೆ ಒಳಗಡೆ ಓಡಿಹೋಗಿದ್ದಾನೆ. ಈ ಒಂದು ಹಾಸ್ಯಮಯ ದೃಶ್ಯವನ್ನು ಯಶ್ ಅವರು ವೀಡಿಯೋ ಮಾಡಿ ಚಿತ್ರೀಕರಿಸಿ ಹಂಚಿಕೊಂಡಿದ್ದಾರೆ.

Leave A Reply

Your email address will not be published.

error: Content is protected !!