ಕೋಟಿ ಕೋಟಿ ಕೊಟ್ಟರೂ ನಾನು ಈ ಕೆಲಸ ಮಾಡಲ್ಲ ಎಂದು ಹೇಳಿ ನಿಜ ಜೀವನದಲ್ಲೂ ಹೀರೋ ಎನಿಸಿಕೊಂಡ ರಾಕಿಂಗ್ ಸ್ಟಾರ್ ಯಶ್

ಸಿನಿಮಾದಲ್ಲಿ ವಿಲನ್ ಗಳ ಜೊತೆ ಫೈಟ್ ಮಾಡಿ ಹೀರೋಯಿನ್ ರಕ್ಷಿಸಿದರೆ ಮಾತ್ರ ಹೀರೋ ಆಗಲ್ಲ. ನಿಜಜೀವನ ಸಿನಿಮಾಗಳ ಹಾಗೆ ಇರಲ್ಲ ನಿಜ ಜೀವನದಲ್ಲಿ ಒಳ್ಳೆಯ ಗುಣ ವ್ಯಕ್ತಿತ್ವ ಹೊಂದಿರುವ ವ್ಯಕ್ತಿ ಹೀರೋ ಎನಿಸಿಕೊಳ್ಳುತ್ತಾನೆ. ಸಮಾಜದಲ್ಲಿ ನಾಲ್ಕು ಜನರಿಗೆ ನಮ್ಮಿಂದ ಒಳ್ಳೆಯ ಕೆಲಸ ಆಗಬೇಕು. ಸಿನಿಮಾಗಳಲ್ಲಿ ಹೀರೋ ಎನಿಸಿಕೊಂಡವರು ನಿಜ ಜೀವನದಲ್ಲೂ ಕೂಡ ಹೀರೋ ಆಗಬಹುದು ಎಂದು ನಟ ಯಶ್ ಅವರು ಸಾಬೀತುಪಡಿಸಿದ್ದಾರೆ.

ಇತ್ತೀಚೆಗೆ ಯಶ್ ನಟನೆ ಮಾಡಿರುವ ಕೆಜಿಎಫ್ ಚಾಪ್ಟರ್ ಚಿತ್ರ ದೇಶದಾದ್ಯಂತ ಬಿಡುಗಡೆಗೊಂಡಿತ್ತು. ಈ ಸಿನೆಮಾ ಇಡೀ ದೇಶವೇ ತಿರುಗಿ ನೋಡುವಂತಹ ಯಶಸ್ಸು ಕಂಡಿವೆ. ಒಂದು ಸಾವಿರ ಕೋಟಿ ರುಪಾಯಿಗಳ ಕಲೆಕ್ಷನ್ ಮಾಡಿದೆ.ಭಾರತೀಯ ಸಿನಿಮಾ ಇತಿಹಾಸದಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡಿರುವ ಪಟ್ಟಿಯಲ್ಲಿ ಕೆಜಿಎಫ್ ಚಿತ್ರ ನಾಲ್ಕನೇ ಸ್ಥಾನವನ್ನು ಪಡೆದಿದೆ. ಕೆಜಿಎಫ್ ಚಿತ್ರವನ್ನ ನೋಡಿದ ಅನ್ಯಭಾಷೆಯ ವೀಕ್ಷಕರು ಕೆಜಿಎಫ್ ಚಿತ್ರವನ್ನ ಹಾಡಿ ಹೊಗಳಿದ್ದಾರೆ. ಹಾಗೆ ಕೆಜಿಎಫ್ ಚಿತ್ರದ ಬಗ್ಗೆ ಅಸಮಾಧಾನ ಕೂಡ ಹೊರಹಾಕಿದ ಕೆಲವು ಮಂದಿ ಇದ್ದಾರೆ.

ಕೆಜಿಎಫ್ ಚಿತ್ರದಲ್ಲಿ ತೋರಿಸಿರುವ ರೌ’ಡಿಸಂ ಅತಿಯಾದ ಕ್ರೌರ್ಯ ಹೊಡಿ ಬಡಿ ದೃಶ್ಯಗಳು ಕೆಲವು ಸಾಮಾಜಿಕ ಕಾರ್ಯಕರ್ತರಿಗೆ ನಿರಾಸೆ ಮೂಡಿಸಿತ್ತು. ಹಾಗೆ ಹಲವು ಜನ ಸಾಮಾಜಿಕ ಜಾಲತಾಣಗಳಲ್ಲಿ ಕೆಜಿಎಫ್ ಚಿತ್ರ ಮತ್ತು ನಟ ಯಶ್ ಮೇಲೆ ಆಕ್ರೋಶ ಕೂಡ ವ್ಯಕ್ತಪಡಿಸಿದ್ದರು. ನಿಮ್ಮಿಂದ ಸಮಾಜಕ್ಕೆ ಮತ್ತು ಯುವಕರಿಗೆ ಯಾವ ಒಳ್ಳೆಯ ಸಂದೇಶ ಸಿಗುತ್ತದೆ ಎಂಬ ಪ್ರಶ್ನೆ ಹಾಕಿದ್ದರು. ಕೆಜಿಎಫ್ ಚಿತ್ರ ಮತ್ತು ಯಶ್ ಅವರ ಮೇಲೆ ಈ ರೀತಿಯ ಟೀಕೆ ಮಾಡಿದವರಿಗೆ ಈಗ ಯಶ್ ಅವರು ತಮ್ಮ ಕೆಲಸದ ಮೂಲಕ ಉತ್ತರ ನೀಡಿದ್ದಾರೆ.

ಹೌದು ಬಂಧುಗಳೇ ನಟ ಯಶ್ ಅವರು ಸಮಾಜಕ್ಕೆ ಮತ್ತು ಯುವಕರಿಗೆ ಒಳ್ಳೆಯ ಸಂದೇಶವನ್ನು ಕೊಡುವ ಕೆಲಸ ಮಾಡಿದ್ದಾರೆ. ಕೆಜಿಎಫ್ ಚಿತ್ರ ಹಿಟ್ ಆದ ತಕ್ಷಣವೇ ಯಶ್ ಅವರಿಗೆ ಪಾನ್ ಮಸಾಲ ಕಂಪೆನಿಯವರು ತಮ್ಮ ಜಾಹೀರಾತಿನಲ್ಲಿ ನಟನೆ ಮಾಡೋ ಆಫರ್ ಬಂದಿದೆ. ಹತ್ತು ಸೆಕೆಂಡ್ ಗಳ ಈ ಜಾಹೀರಾತಿನಲ್ಲಿ ಯಶ್ ಅವರ ನಟನೆ ಮಾಡಿದರೆ ಕೋಟಿ ಕೋಟಿ ಕೊಡುತ್ತೇವೆ ಎಂದು ಡಿಮ್ಯಾಂಡ್ ಮಾಡಿದ್ದಾರೆ. ವರ್ಷಕ್ಕೆ 5ಕೋಟಿಗೂ ಅಧಿಕ ಹಣವನ್ನು ನೀಡಲು ಈ ಕಂಪನಿಯವರು ರೆಡ್ಡಿ ಇದ್ದರು. ಯಶ್ ಅವರ ಜಾಗದಲ್ಲಿ ಬೇರೆ ನಟರು ಇದ್ದಿದ್ದರೆ ಕೋಟಿ ಕೋಟಿ ಹಣ ಸಿಗುತ್ತದೆ ಎಂಬ ಆಸೆಯಿಂದ ಈ ಜಾಹೀರಾತಿನಲ್ಲಿ ನಟನೆ ಮಾಡೋಕೆ ಒಪ್ಪಿಕೊಳ್ಳುತ್ತಿದ್ದರೇನೊ ಆದರೆ..

ಒಂದು ಕ್ಷಣ ಕೂಡ ಯೋಚನೆ ಮಾಡದೆ ಇಂತಹ ಜಾಹೀರಾತಿನಲ್ಲಿ ನಾನು ಅಭಿನಯ ಮಾಡೋದಿಲ್ಲ ಇದರಿಂದ ಯುವಜನತೆ ಗೆ ಕೆಟ್ಟ ಸಂದೇಶ ರವಾನೆಯಾಗುತ್ತದೆ. ನಾನು ನನ್ನ ಅಭಿಮಾನಿಗಳಿಗೆ ಮತ್ತು ಯುವಕರಿಗೆ ಯಾವಾಗಲೂ ಸ್ಫೂರ್ತಿಯಾಗಿ ಬದುಕೋಕೆ ಇಚ್ಛೆಪಡುತ್ತೇನೆ ನನ್ನಿಂದ ನಾಲ್ಕು ಜನ ಪ್ರೇರಣೆಗೊಂಡು ಸಮಾಜಕ್ಕೆ ಒಳ್ಳೆಯ ಕೆಲಸ ಮಾಡಬೇಕೆ ಹೊರತು ಇಂತಹ ಜಾಹೀರಾತುಗಳಿಂದ ಯುವಕರು ಕೆಟ್ಟ ದಾರಿ ಹಿಡಿಯುವುದು ನನಗೆ ಇಷ್ಟವಿಲ್ಲ ಎಂದು ಅವರು ಖಡಕ್ಕಾಗಿ ಹೇಳಿ ಪಾನ್ ಮಸಾಲ ಜಾಹೀರಾತಿನಲ್ಲಿ ನಟಿಸಲು ತಿರಸ್ಕರಿಸಿದ್ದಾರೆ. ನಟರು ಕೇವಲ ಹಣಕ್ಕೋಸ್ಕರ ಕೆಲಸ ಮಾಡದೆ ಇಂತಹ ಸಾಮಾಜಿಕ ಕಳಕಳಿ ಮನೋಭಾವ ಹೊಂದಿದ್ದರೆ ಅವರ ಮೇಲೆ ಗೌರವ ಜಾಸ್ತಿಯಾಗುತ್ತೆ.

Leave A Reply

Your email address will not be published.

error: Content is protected !!