ಸತತ ಎಂಟು ವರ್ಷಗಳ ಕಾಲ ಕೆಜಿಎಫ್ ಚಿತ್ರಕ್ಕೋಸ್ಕರ ಕೆಲಸ ಮಾಡಿದ ಯಶ್ ತೆಗೆದುಕೊಂಡ ಸಂಭಾವನೆ ಎಷ್ಟು ಗೊತ್ತಾ ಕೇಳಿದರೆ ಬೆಚ್ಚಿ ಬೀಳ್ತಿರಾ

ನಟ ಯಶ್ ಅವರ ಹೆಸರು ಇದೀಗ ಇಡೀ ಭಾರತದಲ್ಲೇ ದೊಡ್ಡ ಮಟ್ಟದಲ್ಲಿ ಸಂಚಲನ ಸೃಷ್ಟಿ ಮಾಡುತ್ತಿದೆ. ಯಶ್ ಅವರ ನಟನೆಯ ಕೆಜಿಎಫ್ ಚಾಪ್ಟರ್-2 ಚಿತ್ರ ಇದೀಗ ಪ್ರಪಂಚದೆಲ್ಲೆಡೆ ಬಿಡುಗಡೆ ಹೊಂದಿದೆ. ಬಿಡುಗಡೆಯಾದ ಮೊದಲ ದಿನವೇ ಅದ್ಭುತ ರೆಸ್ಪಾನ್ಸ್ ಸಿಕ್ಕಿದೆ. ಎಲ್ಲೆಲ್ಲಿಯೂ ಕೆಜಿಎಫ್ ಜಾತ್ರೆ ಶುರುವಾಗಿದೆ. ಇಡೀ ಭಾರತದಲ್ಲಿ ಯಶ್ ಅವರು ಮನೆಮಾತಾಗಿದ್ದಾರೆ. ನಮ್ಮ ಕನ್ನಡದ ನಟ ಪ್ಯಾನ್ ಇಂಡಿಯನ್ ಸ್ಟಾರ್ ಆಗಿರುವುದು ನಮಗೆಲ್ಲ ಹೆಮ್ಮೆ ಇದೆ.

ಬಿಡುಗಡೆಯಾಗಿದ್ದ ಕೆಜಿಎಫ್ ಚಾಪ್ಟರ್-2 ಚಿತ್ರ 70 ಕ್ಕೂ ಹೆಚ್ಚು ದೇಶಗಳಲ್ಲಿ ಬಿಡುಗಡೆಯಾಗಿದೆ ಮತ್ತು ಹತ್ತು ಸಾವಿರಕ್ಕೂ ಹೆಚ್ಚು ತೆರೆಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಮೊದಲ ದಿನವೇ ಎರಡು ನೂರು ಕೋಟಿಗೂ ಅಧಿಕ ಕಲೆಕ್ಷನ್ ಮಾಡುವ ಎಲ್ಲಾ ಸಾಧ್ಯತೆಗಳನ್ನು ಹುಟ್ಟುಹಾಕಿದೆ. ಸದ್ಯದ ಮಟ್ಟಿಗಂತೂ ಕೆಜಿಎಫ್ ಹವಾ ಹೇಗಿದೆ ಅಂದರೆ ಇಡೀ ಭಾರತದಲ್ಲೇ ಇಂತಹ ಸಿನೆಮಾ ಹಿಂದೆಂದೂ ಬಂದಿರಲಿಲ್ಲ ಎಂಬ ಹೋಲಿಕೆಗಳು ಕೇಳುತ್ತಿವೆ. ಒಟ್ಟಿನಲ್ಲಿ ವಿಶ್ವದಾದ್ಯಂತ ಕೆಜಿಎಫ್ ಚಿತ್ರ ಬಿರುಗಾಳಿ ಎಬ್ಬಿಸಿದೆ.

ಬಿಡುಗಡೆಗೆ ಮುನ್ನವೇ ನೂರಕ್ಕೂ ಹೆಚ್ಚು ಕೋಟಿ ಲಾಭ ಪಡೆದಿರುವ ಕೆಜಿಎಫ್ ಚಿತ್ರದ ನಟನ ಸಂಭಾವನೆ ತಿಳಿದುಕೊಳ್ಳುವ ಕುತೂಹಲ ಪ್ರತಿಯೊಬ್ಬರಿಗೂ ಇದ್ದೇ ಇರುತ್ತೆ. ಅದರಲ್ಲೂ ವಿಶೇಷವಾಗಿ ಯಶ್ ಅವರು ಕೆಜಿಎಫ್ ಚಿತ್ರಕ್ಕೆ ಎಂಟು ವವರ್ಷಗಳನ್ನು ಮುಡುಪಾಗಿಟ್ಟಿದ್ದ ಕಳೆದ ಎಂಟು ವರ್ಷಗಳಿಂದ ಯಶ್ ಅವರು ಕೆಜಿಎಫ್ ಚಿತ್ರಕ್ಕೂ ಕೆಲಸ ಮಾಡುತ್ತಿದ್ದರು. ಹಾಗಾದರೆ ಇಷ್ಟೊಂದು ವರ್ಷಗಳ ಕಾಲ ಮುಡಿಪಾಗಿಟ್ಟಿರುವ ಯಶ್ ಅವರಿಗೆ ಕೆ ಜಿ ಎಫ್ ಚಿತ್ರತಂಡದಿಂದ ಸಿಕ್ಕ ಒಟ್ಟು ಸಂಬಳ ಎಷ್ಟು ಅಂತ ತಿಳಿದುಕೊಳ್ಳೋಣ ಬನ್ನಿ.

ಕೆಜಿಎಫ್ ಚಿತ್ರಕ್ಕೂ ಮುನ್ನ ಯಶ್ ಅವರು ಒಂದು ಚಿತ್ರಕ್ಕೆ ನಾಲ್ಕರಿಂದ ಐದು ಕೋಟಿ ರುಪಾಯಿಗಳ ಸಂಭಾವನೆ ಪಡೆಯುತ್ತಿದ್ದರು. ಆದರೆ ಕೆಜಿಎಫ್ ಮೊದಲ ಭಾಗಕ್ಕೆ ಯಶ್ ಅವರು ಆರು ಕೋಟಿ ರುಪಾಯಿಗಳನ್ನು ಪಡೆದಿದ್ದರು. ಕೆಜಿಎಫ್ ಮೊದಲ ಭಾಗ ದೇಶದಾದ್ಯಂತ ಬಿಡುಗಡೆಯಾಗಿ ಒಳ್ಳೆಯ ಪ್ರದರ್ಶನ ಕಂಡಿತ್ತು. ಕೆಜಿಎಫ್ ಚಿತ್ರದಿಂದ ಯಶ್ ಪ್ಯಾನ್ ಇಂಡಿಯಾ ಸ್ಟಾರ್ ನಟನಾದರು. ಯಶ್ ಅವರ ಪ್ರಸಿದ್ಧಿ ಹೆಚ್ಚಾದಂತೆ ಅವರ ಸಂಭಾವನೆ ಕೂಡ ಹೆಚ್ಚಾಯ್ತು. ಕೆಜಿಎಫ್ ಎರಡನೆಯ ಭಾಗಕ್ಕೆ ಮೊದಲನೆಯ ಭಾಗಕ್ಕೆ ತೆಗೆದುಕೊಂಡ ಹಣಕ್ಕಿಂತ ಐದು ಪಟ್ಟು ಹೆಚ್ಚು ಹಣವನ್ನು ಪಡೆದಿದ್ದಾರೆ.

ಯಶ್ ಅವರು ಇದೀಗ ಕನ್ನಡದಲ್ಲಿ ಅತಿಹೆಚ್ಚು ಸಂಭಾವನೆ ಪಡೆದಿರುವ ಮೊದಲ ನಟ. ಸಾಮಾನ್ಯವಾಗಿ ಕನ್ನಡ ಚಿತ್ರರಂಗದಲ್ಲಿ ಹತ್ತು ಕೋಟಿ ರೂಪಾಯಿಗಿಂತ ಹೆಚ್ಚಿನ ಸಂಭಾವನೆ ಯಾವ ನಟನೂ ಇಲ್ಲಿಯವರೆಗೆ ಪಡೆದಿಲ್ಲ ಆದರೆ ಯಶ್ ಅವರು ಈ ರೆಕಾರ್ಡ್ ಬ್ರೇಕ್ ಮಾಡಿದ್ದಾರೆ ಹೌದು ಗೆಳೆಯರೇ, ಯಶ್ ಅವರು ಕೆಜಿಎಫ್ ಚಾಪ್ಟರ್-2 ಸಿನಿಮಾಗೆ ಇಪ್ಪತ್ತೈದರಿಂದ ಮೂವತ್ತು ಕೋಟಿ ರುಪಾಯಿಯನ್ನು ಪಡೆದಿದ್ದಾರಂತೆ. ಒಟ್ಟಾರೆ ಕೆಜಿಎಫ್ ಚಿತ್ರಕ್ಕೆ ಯಶ್ ಅವರು ಮೂವತ್ತೈದರಿಂದ ನಲವತ್ತು ಕೋಟಿ ರೂಪಾಯಿಗಳನ್ನು ಸಂಭಾವನೆ ರೂಪದಲ್ಲಿ ಪಡೆದಿದ್ದಾರೆ ಎಂಬ ಮಾಹಿತಿ ಇದೆ.

Leave A Reply

Your email address will not be published.

error: Content is protected !!