1000 ಕೋಟಿ ಕಲೆಕ್ಷನ್ ಮಾಡಿದ ಕೆಜಿಎಫ್ ಸಿನೆಮಾ. ಇದರಲ್ಲಿ ಯಶ್ ಗೆ ಸಿಗುವ ಹಣ ಎಷ್ಟು ಗೊತ್ತೇ

ಎಪ್ರಿಲ್ 14 ಕ್ಕೆ ಬಿಡುಗಡೆಯಾದ ಕೆಜಿಎಫ್ ಚಾಪ್ಟರ್-2 ಚಿತ್ರ ಸತತ ಎರಡು ವಾರಗಳ ಕಾಲ ಯಶಸ್ವಿ ಪ್ರದರ್ಶನ ಕಂಡಿದೆ. ಭಾರತದ ಸಿನೆಮದ ಬಾಕ್ಸ್ ಆಫೀಸ್ ನಲ್ಲಿ ಕೆಜಿಎಫ್ ಚಿತ್ರ ಎರಡು ವಾರಗಳಿಂದ ಮೊದಲ ಸ್ಥಾನವನ್ನು ಗಳಿಸಿಕೊಂಡಿದೆ. ಭಾರತ ಚಿತ್ರರಂಗದ ಬಾಕ್ಸ್ ಆಫೀಸ್ ಅನ್ನು ಕನ್ನಡ ಚಿತ್ರರಂಗ ರಾಜಾರೋಷವಾಗಿ ಕೊಳ್ಳೆ ಹೊಡೆಯುತ್ತಿರುವುದು ಇದೇ ಮೊದಲು. ಕನ್ನಡದ ಕೀರ್ತಿ ಪತಾಕೆಯನ್ನು ದೇಶ ಮಟ್ಟದಲ್ಲಿ ಅಷ್ಟೇ ಅಲ್ಲದೆ ವಿದೇಶದಲ್ಲೂ ಕೂಡ ಹಾರಿಸುತ್ತಿದೆ.

ಕೆಜಿಎಫ್ ಚಾಪ್ಟರ್ 2 ಚಿತ್ರವನ್ನು ನಿರ್ಮಾಣ ಮಾಡಲು ನೂರು ಕೋಟಿ ರುಪಾಯಿಗಳನ್ನು ಹೂಡಿಕೆ ಮಾಡಲಾಗಿತ್ತು. ನೂರು ಕೋಟಿ ರೂಪಾಯಿಗಳ ಬಂಡವಾಳ ಹಾಕಿ ಇದೀಗ ಚಿತ್ರತಂಡದವರು ಸಾವಿರ ಕೋಟಿ ರೂಪಾಯಿಗಳ ಲಾಭ ಪಡೆದಿದ್ದಾರೆ. ಹೌದು ಸ್ನೇಹಿತರ ಕೆಜಿಎಫ್ ಚಿತ್ರ 14 ದಿನಗಳಲ್ಲಿ ಒಂದು ಸಾವಿರ ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ. ಕೇವಲ ಹಿಂದಿ ಭಾಷೆಯಲ್ಲಿ ಕೆಜಿಎಫ್ ಚಿತ್ರಕ್ಕೆ 350 ಕೋಟಿಗೂ ಅಧಿಕ ಕಲೆಕ್ಷನ್ ಆಗಿದೆ.

ಕೆಜಿಎಫ್ ಚಿತ್ರದ ಕಲೆಕ್ಷನ್ ನೋಡಿ ಸ್ವತಃ ಚಿತ್ರದ ನಿರ್ಮಾಪಕ ರೇ ದಂಗಾಗಿದ್ದಾರೆ. ನ್ನು ಕೆಜಿಎಫ್ ಚಿತ್ರ ಕೋಟಿ ಕೋಟಿ ಹಣ ಮಾಡುತ್ತಿರುವುದನ್ನು ನೋಡಿ ಪ್ರೇಕ್ಷಕರಿಗಲ್ಲ ಕೆಜಿಎಫ್ ಚಿತ್ರದ ನಟರ ಸಂಭಾವನೆಯ ಬಗ್ಗೆ ತಿಳಿದು ಕೊಳ್ಳುವ ಕುತೂಹಲ ಹುಟ್ಟುತ್ತಿದೆ. ಮೊದಲಿಗೆ ಕೆಜಿಎಫ್ ಚಿತ್ರದ ನಟಿ ಶ್ರೀನಿಧಿ ಶೆಟ್ಟಿ ಅವರು ಆರು ವರ್ಷ ಕೆಜಿಎಫ್ ಚಿತ್ರದಲ್ಲಿ ಭಾಗಿಯಾಗಿದ್ದರು. ಇವರು ಕೆಜಿಎಫ್ ಚಿತ್ರಕ್ಕೆ ಆರು ಕೋಟಿ ಸಂಭಾವನೆ ಪಡೆದಿದ್ದಾರೆ. ಹಾಗೆ ಕೆಜಿಎಫ್ ಚಾಪ್ಟರ್ 2 ನಲ್ಲಿ ದೇಶದ ಪ್ರಧಾನಮಂತ್ರಿ ಪಾತ್ರದಲ್ಲಿ ಕಾಣಿಸಿಕೊಂಡ ರಮಿಕಾ ಸೇನ್ ಅಂದರೆ ರವೀನಾ ಟಂಡನ್ ಅವರು ಒಂದೂವರೆ ಕೋಟಿ ರುಪಾಯಿಗಳನ್ನು ತೆಗೆದುಕೊಂಡಿದ್ದಾರೆ.

ಹಾಗೆ ಸಂಜಯ್ ದತ್ ಅವರು ಕೆಜಿಎಫ್ 2 ನ ವಿಲನ್ ಪಾತ್ರ ಮಾಡೋಕೆ ಹತ್ತು ಕೋಟಿ ರುಪಾಯಿಗಳನ್ನು ತೆಗೆದುಕೊಂಡಿದ್ದಾರಂತೆ. ಈ ಚಿತ್ರದ ನಿರ್ದೇಶಕ ಪ್ರಶಾಂತ್ ನೀಲ್ ಅವರು ಕೆಜಿಎಫ್ ಚಾಪ್ಟರ್ ೧ ಮತ್ತು ಕೆಜಿಎಫ್ ಚಾಪ್ಟರ್ 2 ಸೇರಿ ಇಪ್ಪತ್ತು ಕೋಟಿ ರೂಪಾಯಿಗಳನ್ನು ಪಡೆದಿದ್ದಾರೆ. ಇನ್ನೂ ಯಶ್ಅ ವರ ವಿಚಾರಕ್ಕೆ ಬಂದರೆ ಯಶ್ ಅವರು ಕೆಜಿಎಫ್ ಚಿತ್ರಕ್ಕೋಸ್ಕರ ಎಂಟು ವರ್ಷಗಳ ಕಾಲ ಸತತವಾಗಿ ಕೆಲಸ ಮಾಡಿದ್ದಾರೆ. ಆದ್ದರಿಂದ ಯಶ್ ಅವರು ಕೆಜಿಎಫ್ ಚಿತ್ರಕ್ಕೆ ಕೇವಲ ಸಂಭಾವನೆಯನ್ನು ಮಾತ್ರ ತಗೊಂಡಿಲ್ಲ.

ಯಶ್ ಅವರು ಕೆಜಿಎಫ್ ಚಿತ್ರಕ್ಕೋಸ್ಕರ ಸಂಭಾವನೆಯ ಜೊತೆಗೆ ಸಿನಿಮಾದ ಲಾಭದಲ್ಲಿ ಬಂದ ಶೇರ್ ಕೂಡ ತಗೊಳ್ತಾರೆ. ಸಂಭಾವನೆಯ ವಿಚಾರಕ್ಕೆ ಯಶ್ ಅವರು ಸುಮಾರು ಮೂವತ್ತು ಕೋಟಿ ರುಪಾಯಿಗಳ ಸಂಭಾವನೆ ಪಡೆದಿದ್ದಾರೆ ಎಂದು ಬಲ್ಲ ಮೂಲಗಳು ತಿಳಿಸಿವೆ. ಅಷ್ಟೇ ಅಲ್ಲದೆ ಯಶ್ ಅವರಿಗೆ ಸಿನಿಮಾದಲ್ಲಿ ಬಂದ ಲಾಭದಲ್ಲಿ ಸುಮಾರು ಶೇಕಡ ಹತ್ತು ರಷ್ಟು ಲಾಭ ಸಿಗಲಿದೆ. ಯಶ್ ಅವರಿಗೆ ಇಷ್ಟೊಂದು ಹಣ ಏಕೆ ಅಂತ ನೀವೆಲ್ಲಾ ಕೇಳಿದ್ರೆ ಅದಕ್ಕೆ ಕಾರಣ.. ಕೆಜಿಎಫ್ ಚಿತ್ರವನ್ನು ಪ್ಯಾನ್ ಇಂಡಿಯಾ ಲೆವೆಲ್ ಗೆ ತೆಗೆದುಕೊಂಡು ಹೋಗಬೇಕೆಂಬ ಐಡಿಯಾ ಕೊಟ್ಟಿದ್ದು ಯಶ್ ಮತ್ತು ಅದಕ್ಕೋಸ್ಕರ ಹಗಲು ರಾತ್ರಿ ಶ್ರಮ ಪಟ್ಟಿದ್ದು ಯಶ್ ಅವರೇ..

Leave a Comment

error: Content is protected !!