ಖಾಲಿ ಕೈ ಅಲ್ಲಿ ಬೆಂಗಳೂರಿಗೆ ಬಂದ ಯಶ್ ಇದೀಗ ಕೈಗೆ ಧರಿಸುವ ದುಬಾರಿ ವಾಚ್ ನ ಬೆಲೆ ಎಷ್ಟು ಗೊತ್ತಾ ಕೇಳಿದ್ರೆ ಶಾಕ್ ಆಗ್ತೀರಾ ?

ಮನುಷ್ಯ ಸಾಧಿಸುವ ಛಲ ಇದ್ದರೆ ಯಾವ ಹಂತಕ್ಕೆ ತಲುಪಬಹುದು. ಬಡ ಹಾಗೂ ಮಧ್ಯಮ ಕುಟುಂಬದ ಜನರು ಶ್ರೀಮಂತರಾಗುವ ಅಥವಾ ಸಾಧನೆ ಮಾಡೋಕೆ ಸಾಧ್ಯವಿಲ್ಲ ಎಂದು ತಿಳಿದುಕೊಳ್ಳುವುದು ತಪ್ಪು. ಛಲವಿದ್ದರೆ ಮನುಷ್ಯ ಒಂದಲ್ಲ ಒಂದು ದಿನ ಸಾಧಿಸಿ ಸಾಧಿಸುತ್ತಾನೆ. ಇದಕ್ಕೆ ನಟ ಯಶ್ ಅವರೇ ಉದಾಹರಣೆ. ಸಾಧಾರಣ ಬಸ್ ಡ್ರೈವರ್ ಮಗ ಇಂದು ನ್ಯಾಷನಲ್ ಸ್ಟಾರ್ ಆಗಿ ಬೆಳೆದಿದ್ದಾರೆ.

ನಟ ಯಶ್ ಅವರು ಹಾಸನದ ಒಂದು ಸಾಮಾನ್ಯ ಮಧ್ಯಮ ಕುಟುಂಬದಲ್ಲಿ ಹುಟ್ಟಿದ್ದಾರೆ. ಚಿಕ್ಕ ವಯಸ್ಸಿನಿಂದಲೂ ನಟನಾಗಬೇಕೆಂಬ ಆಸೆ ಹೊಂದಿದ್ದರು. ನಟನೆ ಹಾಗೂ ಸಿನಿಮಾದ ಮೇಲೆ ಹುಚ್ಚು ಪ್ರೀತಿಯನ್ನು ಹೊಂದಿದ್ದರು. ನಟನಾಗಲೇ ಬೇಕು ಎಂದು ಬೆಂಗಳೂರಿಗೆ ಬಂದ ಯಶ್ ರಾತ್ರಿಯೆಲ್ಲ ಮೆಜೆಸ್ಟಿಕ್ ನಲ್ಲಿ ಮಲಗಿರುವ ದಿನಗಳು ಕೂಡ ಇವೆ. ಕಷ್ಟಪಟ್ಟು ಬೆಳೆದು ಬಂದ ರೀತಿಯನ್ನು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಸ್ವತಃ ಯಶ್ ಅವರೇ ಹೇಳಿಕೊಂಡಿದ್ದಾರೆ.

ಒಬ್ಬ ಬಸ್ ಡ್ರೈವರ್ ಮಗನಾಗಿ ಯಾವುದೇ ಬ್ಯಾಗ್ರೌಂಡ್ ಇಲ್ಲದೆ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಸ್ಟಾರ್ ನಟನಾಗಬೇಕೆಂದು ಸುಲಭದ ಕೆಲಸವಲ್ಲ. ಅಂತಹದರಲ್ಲಿ ಅವರು ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಮಾತ್ರವಲ್ಲದೆ ಇಡೀ ಇಂಡಿಯನ್ ಸಿನಿಮಾ ಇಂಡಸ್ಟ್ರಿಯಲ್ಲಿ ಇದೀಗ ಯಶ್ ಸದ್ದು ಮಾಡುತ್ತಿದ್ದಾರೆ. ಕೆಜಿಎಫ್ ಎಂಬ ಪ್ಯಾನ್ ಇಂಡಿಯನ್ ಸಿನೆಮಾ ದಿಂದ ಪಾನ್ಸೆ ಇಂಡಿಯನ್ ಸೆಲೆಬ್ರಿಟಿಯಾಗಿದ್ದಾರೆ. ಭಾರತದ ಎಲ್ಲ ರಾಜ್ಯಗಳಲ್ಲೂ ಯಶ್ ಅವರಿಗೆ ಅಭಿಮಾನಿಗಳಿದ್ದಾರೆ.

ಮೊದ ಮೊದಲು ಧಾರಾವಾಹಿಗಳಲ್ಲಿ ಅಭಿನಯಿಸುತ್ತಿದ್ದ ಯಶ್ ಅವರು ತಿಂಗಳಿಗೆ ಸಾವಿರಾರು ರೂಪಾಯಿ ಸಂಬಳವನ್ನು ಪಡೆಯುತ್ತಿದ್ದರು. ಆದರೆ ಇದೀಗ ಅವರು ಒಂದು ಸಿನಿಮಾಗೆ ಕೋಟಿ ಕೋಟಿ ಸಂಭಾವನೆಯನ್ನು ಪಡೆಯುತ್ತಾರೆ. ಅದರಲ್ಲೂ ವಿಶೇಷವಾಗಿ ಕೆಜಿಎಫ್ ಚಿತ್ರ ಹಿಟ್ ಆದ ಮೇಲೆ ಯಶ್ ಅವರ ಸಂಭಾವನೆ ಹತ್ತು ಪಟ್ಟು ಹೆಚ್ಚಾಗಿದೆ. ಹಾಗೆ ಅವರ ಜೀವನಶೈಲಿ ಕೂಡ ಇದೀಗ ಬದಲಾಗಿದೆ. ಯಶ್ ಅವರು ಕೈಗೆ ಹಾಕಿಕೊಳ್ಳುವ ವಾಚ್ ನ ಬೆಲೆ ಎಷ್ಟು ಗೊತ್ತಾ ನಿಮ್ಗೆಲ್ಲಾ ನಿಜಕ್ಕೂ ಕೇಳಿದ್ರೆ ಬೆರಗಾಗ್ತೀರಾ.

ಯಶ್ ಅವರು ಯಾವಾಗಲೂ ತುಂಬ ಸ್ಟೈಲಿಷ್ ಆಗಿರಲು ಇಷ್ಟ ಪಡುತ್ತಾರೆ. ಯಶ್ ಅವರು ಕೆಜಿಎಫ್ ಚಿತ್ರದ ಪ್ರಚಾರಕ್ಕೋಸ್ಕರ ಬೇರೆ ಬೇರೆ ರಾಜ್ಯಗಳಿಗೆ ಹೋಗಬೇಕಾಗುತ್ತದೆ ಆದಕಾರಣ ಯಶ್ ಅವರು ಸ್ಟೈಲಿಶ್ ಬಟ್ಟೆಗಳನ್ನು ಮತ್ತು ದುಬಾರಿ ವಾಚ್ ಗಳನ್ನು ಧರಿಸುತ್ತಾರೆ. ಇತ್ತೀಚೆಗೆ ನಡೆದ ಕೆಜಿಎಫ್ ಚಾಪ್ಟರ್ ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಯಶ್ ಅವರು ನೋಟಿಲಸ್ ಫುಲ್ ಗೋಲ್ಡ್ 5980 ಕ್ರೋನೋಗ್ರಾಫ್ ಎಂಬ ವಾಚನ್ನು ಧರಿಸಿದ್ದರು. ಈ ವಾಚ್ ಇಡೀ ಜಗತ್ತಿನಲ್ಲಿಯೇ ಅತ್ಯಂತ ದುಬಾರಿ ವಾಚ್. ಈ ವಾಚ್ ನ ಬೆಲೆ ಮೂರೂವರೆ ಕೋಟಿ ರುಪಾಯಿಗಳು. ಅಬ್ಬಬ್ಬ ನಾವೆಲ್ಲ ಇಂಥ ವಾಚ್ ಅನ್ನು ಖರೀದಿಸಬೇಕೆಂದು ಊಹಿಸಲು ಕೂಡ ಸಾಧ್ಯವಿಲ್ಲ.

ಹಾಗಾದರೆ ಯಶ್ ಅವರು ಮೂರೂವರೆ ಕೋಟಿ ಕೊಟ್ಟು ಖರೀದಿಸಿರುವ ಈ ನೌಟಿಲಸ್ ವಾಚ್ ನಲ್ಲಿ ಅಂತಹ ವಿಶೇಷತೆ ಏನಿರಬಹುದು ಎಂದು ನಿಮಗೆಲ್ಲ ಕುತೂಹಲ ಇರುತ್ತದೆ. ಈ ವಾಚ್ ನ ವಿಶೇಷತೆ ಏನಪ್ಪಾ ಅಂದ್ರೆ ಈ ವಾಚ್ ಅನ್ನು 18 k ರೋಸ್ ಗೋಲ್ಡ್ ನಿಂದ ತಯಾರು ಮಾಡಲಾಗಿದೆ. ಮೊಸಳೆ ಚರ್ಮದ ಬೆಲ್ಟ್ ಗಳನ್ನು ಅಳವಡಿಸಲಾಗಿದೆ ಮತ್ತು ಜಗತ್ತಿನಲ್ಲೇ ಅತ್ಯಂತ ದುಬಾರಿ ಯುತ ಲೋಹಗಳನ್ನು ಈ ವಾಚ್ ನಲ್ಲಿ ಅಳವಡಿಸಲಾಗಿದೆ. ಈ ವಾಚ್ ಭಾರತದಲ್ಲಿ ಕೆಲವೇ ಕೆಲವು ವ್ಯಕ್ತಿಗಳ ಬಳಿ ಇದೆ ಅವರಲ್ಲಿ ನಮ್ಮ ಯಶ್ ಅವರು ಕೂಡ ಒಬ್ಬರು.

Leave a Comment

error: Content is protected !!