Yuvarajkumar: ದೊಡ್ಮನೆ ಸಿಂಹದ ಮರಿ ಎಂಟ್ರಿಗೆ ಡೇಟ್ ಫಿಕ್ಸ್. ಎದುರಾಳಿಗಳ ಎದೆಯಲ್ಲಿ ನಡುಕ.

Yuvarajkumar ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಮರಣ ನಂತರ ಅವರ ಸ್ಥಾನವನ್ನು ತುಂಬ ಬಲ್ಲಂತಹ ನಟ ಎನ್ನುವುದಾಗಿ ಅಪ್ಪು ಅಭಿಮಾನಿಗಳು ನಿರ್ಧರಿಸುವ ನಟ ಯಾರು ಎಂದರೆ ಅದು ಅವರ ಅಣ್ಣ ಆಗಿರುವ ರಾಘವೇಂದ್ರ ರಾಜಕುಮಾರ್(Raghavendra Rajkumar) ಅವರ ಪುತ್ರ ಆಗಿರುವ ಯುವ ರಾಜಕುಮಾರ್. ಪ್ರತಿಯೊಂದು ವಿಧದಲ್ಲಿಯೂ ತಮ್ಮ ಚಿಕ್ಕಪ್ಪನನ್ನು ಹೋಲುವ ಪ್ರತಿಭೆ ಅವರಲ್ಲಿದೆ ಎನ್ನುವುದು ಎಲ್ಲರ ಅಭಿಪ್ರಾಯ.

ಅದಕ್ಕೆ ತಕ್ಕಂತೆ ನಿರ್ದೇಶಕ ಸಂತೋಷ್ ಆನಂದ್ ರಾಮ್ ಹಾಗೂ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಆಗಿರುವ ಹೊಂಬಾಳೆ ಫಿಲಂಸ್(Hombale Films) ಕಾಂಬಿನೇಷನ್ ನಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್(Puneeth Rajkumar) ರವರನ್ನು ಹಾಕಿಕೊಂಡು ಮಾಡಬೇಕಾಗಿದ್ದ ಸಿನಿಮಾವನ್ನು ಈಗ ಯುವರಾಜ್ ಕುಮಾರ್ ಅವರ ಲಾಂಚ್ ಸಿನಿಮಾ ವನ್ನಾಗಿ ಪರಿವರ್ತಿಸಿಕೊಂಡಿದ್ದಾರೆ. ಸಾಕಷ್ಟು ದಿನಗಳಿಂದ ಈ ಸಿನಿಮಾದ ಅಪ್ಡೇಟ್ಗಾಗಿ ಅಭಿಮಾನಿಗಳು ಕಾತರರಾಗಿದ್ದರು.

ಕೊನೆಗೂ ಟೈಟಲ್ ಅನೌನ್ಸ್ಮೆಂಟ್ ದಿನಾಂಕ ನಿಗದಿಯಾಗಿದ್ದು ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ. ಹೌದು ನಾಳೆ ಅಂದರೆ ಮಾರ್ಚ್ ಮೂರರಂದು ಸಂಜೆ 6:55ಕ್ಕೆ ಅಧಿಕೃತವಾಗಿ ಯುವರಾಜ್ ಕುಮಾರ್(Yuvarajkumar) ಅವರ ಮೊದಲ ಸಿನಿಮಾದ ಟೈಟಲ್ ಅನೌನ್ಸ್ಮೆಂಟ್ ಆಗಲಿದೆ.

ಈಗಾಗಲೇ ತಮ್ಮ ನೇರ ನುಡಿ ಹಾಗೂ ನಿಖರ ನಡೆಯಿಂದ ಒಂದು ಕಡೆ ದೊಡ್ಡ ಮಟ್ಟದ ಅಭಿಮಾನಿಗಳನ್ನು ಕೂಡ ಹೊಂದಿರುವ ಹಾಗೂ ಇನ್ನೊಂದು ಕಡೆ ಸಾಕಷ್ಟು ಶ’ತ್ರುಗಳನ್ನು ಕೂಡ ಇಂಡಸ್ಟ್ರಿಯಲ್ಲಿ ಹೊಂದಿದ್ದಾರೆ. ಅಂದರೆ ಈಗಾಗಲೇ ಅವರನ್ನು ಕೆಲವೊಂದು ನಟರ ಅಭಿಮಾನಿಗಳು ವಿರೋಧಿಸುವುದಕ್ಕೆ ಆರಂಭಿಸಿದ್ದು ಈಗ ಅವರ ಎಂಟ್ರಿಯಿಂದ ಎಲ್ಲರ ಎದೆಯಲಿ ನಡುಕ ಶುರುವಾಗಿದೆ ಎಂದರು ತಪ್ಪಾಗಲಾರದು.

Leave A Reply

Your email address will not be published.

error: Content is protected !!