ಬೆಳಗ್ಗೆ ಖಾಲಿ ಹೊಟ್ಟೆಗೆ ನೀರು ಕುಡಿಯುವುದರಿಂದ ಶರೀರಕ್ಕೆ ಎಷ್ಟೊಂದು ಲಾಭವಿದೆ ನೋಡಿ

ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದರಿಂದ ಸಾಕಷ್ಟು ಪ್ರಯೋಜನಗಳಿವೆ ಅವುಗಳ ಬಗ್ಗೆ ಈ ಲೇಖನದ ಮೂಲಕ ತಿಳಿಯೋಣ.

ನೀರು ಕುಡಿಯುವುದು ಒಳ್ಳೆಯದು. ಅದರಲ್ಲೂ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೀರನ್ನು ಕುಡಿಯುವುದರಿಂದ ಅನೇಕ ಪ್ರಯೋಜನಗಳಿವೆ. ನಮ್ಮ ದೇಹದಲ್ಲಿರುವ ವಿಷ ಪದಾರ್ಥ ಹೊರಹೋಗಲು ಸಹಾಯಕಾರಿ. ರಾತ್ರಿ ಹೊತ್ತು ದೇಹ ತನ್ನಿಂತಾನೆ ರಿಪೇರಿ ಮಾಡಿಕೊಂಡು ವಿಷಕಾರಿ ಪದಾರ್ಥಗಳನ್ನು ಬೇರೆಯಾಗಿಡುತ್ತದೆ ನೀರನ್ನು ಕುಡಿಯುವುದರಿಂದ ದೇಹದಿಂದ ಸುಲಭವಾಗಿ ಹೊರಹೋಗುತ್ತದೆ. ಮಾಂಸಖಂಡಗಳ ಜೀವಕೋಶ ಹೊಸ ರಕ್ತಕಣಗಳ ಉತ್ಪಾದಿಸುತ್ತದೆ. ಜೀರ್ಣಶಕ್ತಿ ಸುಮಾರು 24 ಪ್ರತಿಶತ ಹೆಚ್ಚಾಗುತ್ತದೆ. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದರಿಂದ ದೊಡ್ಡ ಕರುಳು ಕ್ಲೀನ್ ಆಗುತ್ತದೆ ಮತ್ತು ಅದು ಪೋಷಕಾಂಶಗಳನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಅಲ್ಲದೇ ಯಾವುದೇ ಅಡ್ಡ ಪರಿಣಾಮವಿಲ್ಲದೆ ತೂಕ ಕಡಿಮೆಯಾಗುತ್ತದೆ. ಬೊಜ್ಜು ಕರಗುತ್ತದೆ.

ಎದೆ ಉರಿ, ಅಜೀರ್ಣ ನಿವಾರಣೆಯಾಗುತ್ತದೆ. ಅಜೀರ್ಣವಾಗಲು ಕಾರಣ ಅಸಿಡಿಟಿ ನೀರನ್ನು ಕುಡಿಯುವುದರಿಂದ ಅಸಿಡಿಟಿ ನಿವಾರಣೆಯಾಗುತ್ತದೆ. ನೀರು ಕುಡಿಯುವುದರಿಂದ ಚರ್ಮ ಕಾಂತಿಯುತವಾಗುತ್ತದೆ ಹಾಗೂ ಹೊಳೆಯುತ್ತದೆ. ದೇಹದಲ್ಲಿ ನೀರಿನಂಶ ಕಡಿಮೆಯಾದರೆ ಚರ್ಮ ಸುಕ್ಕಾಗುತ್ತದೆ. ಸ್ಟಡಿ ಪ್ರಕಾರ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ 500 ml ನೀರು ಕುಡಿಯುವುದರಿಂದ ಚರ್ಮದಲ್ಲಿ ಸರಿಯಾಗಿ ರಕ್ತ ಚಲನೆಯಾಗಿ ಚರ್ಮ ಹೊಳೆಯುತ್ತದೆ. ನೀರು ಕುಡಿಯುವುದರಿಂದ ಆರೋಗ್ಯಯುತ ಕಪ್ಪನೆಯ ಕೂದಲು ನಿಮ್ಮದಾಗುತ್ತದೆ. ನೀರಿನಿಂದ ಕೂದಲಿಗೆ ಬೇಕಾದ ಪೋಷಣೆ ದೊರೆಯುತ್ತದೆ. ನೀರು ಕುಡಿಯದೆ ಇದ್ದರೆ ಕೂದಲು ಒರಟಾಗುತ್ತದೆ.ನೀರು ಕುಡಿಯುವುದರಿಂದ ಕಿಡ್ನಿಯಲ್ಲಿ ಕಲ್ಲಾಗುವುದಿಲ್ಲ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಹೀಗೆ ನೀರು ಕುಡಿಯುವುದರಿಂದ ಹಲವಾರು ಪ್ರಯೋಜನಗಳಿವೆ ಆದ್ದರಿಂದ ಎಲ್ಲರೂ ತಪ್ಪದೆ ಬೆಳಗ್ಗೆ ಎದ್ದ ಕೂಡಲೇ ಮಿನಿಮಮ್ 2 ಲೋಟ ನೀರು ಕುಡಿಯಬೇಕು. ಈ ಮಾಹಿತಿಯನ್ನು ಎಲ್ಲರಿಗೂ ತಿಳಿಸಿ.

Leave a Comment

error: Content is protected !!