
ಹಸಿವು ಆದಾಗ ಬಾಳೆಹಣ್ಣು ತಿನ್ನುವ ಅಭ್ಯಾಸ ಇದೆಯೇ? ಏನಾಗತ್ತೆ ಗಮನಿಸಿ
ಬಾಳೆಹಣ್ಣಿನ ಸೇವನೆಯಿಂದ ನಮ್ಮ ದೇಹಕ್ಕೆ ಹಲವು ರೀತಿಯಲ್ಲಿ ಉಪಯೋಗವಿದೆ. ಬಾಳೆಹಣ್ಣಿನ ಸೇವನೆಯಿಂದಾಗುವ ಪ್ರಯೋಜನಗಳು ಯಾವುವು ಎಂಬುದನ್ನು ಈ ಲೇಖನದ ಮೂಲಕ ತಿಳಿಯೋಣ.
ಎಲ್ಲ ಋತುಗಳಲ್ಲಿ ಸಿಗುವ ಸಂಪದ್ಭರಿತ ಹಣ್ಣುಗಳಲ್ಲಿ ಬಾಳೆಹಣ್ಣು ಒಂದು. ಬಾಳೆಹಣ್ಣು ತಿನ್ನುವುದರಿಂದ ಕಣ್ಣುಗಳಿಗೆ, ಉದರಕ್ಕೆ, ಮೂಳೆ, ಕಿಡ್ನಿ ಹೀಗೆ ಶರೀರದ ಪ್ರತಿಯೊಂದು ಭಾಗಕ್ಕೂ ಒಳ್ಳೆಯದು. ಜೀರ್ಣ ಸಂಬಂಧಿತ ವ್ಯಾಧಿಗಳ ನಿವಾರಣೆಯಲ್ಲಿ ಬಾಳೆಹಣ್ಣು ಸಾಕಷ್ಟು ಉತ್ತಮವಾಗಿದೆ. ಶರೀರದಲ್ಲಿ ರಕ್ತವನ್ನು ಹೆಚ್ಚು ಮಾಡುತ್ತದೆ. ಅನಾರೋಗ್ಯದಿಂದ, ಅಶಕ್ತತೆಯಿಂದ ಬಳಲುವವರು ದಿನಕ್ಕೆ 2 ಬಾಳೆಹಣ್ಣು ತಿನ್ನುವುದರಿಂದ ಬಹು ಬೇಗ ಆರೋಗ್ಯ ಸುಧಾರಣೆಯಾಗುತ್ತದೆ. ಬಾಳೆಹಣ್ಣು ಹಾರ್ಟ್ ಸಮಸ್ಯೆಗಳಿಗೆ ಉತ್ತಮವಾಗಿದೆ ಎಂದು ಸಂಶೋಧನೆಯಲ್ಲಿ ತಿಳಿದು ಬಂದಿದೆ. ಬೆಳಗ್ಗೆ ಬ್ರೇಕ್ ಫಾಸ್ಟ್ ಆದ ನಂತರ ಒಂದು, ಲಂಚ್ ಆದ ನಂತರ ಒಂದು ತಿನ್ನಬೇಕು ಇದರಿಂದ ಶರೀರಕ್ಕೆ ಹೆಚ್ಚು ಶಕ್ತಿ ಒದಗಿಸುತ್ತದೆ. ಮೆದುಳು ಸಂಬಂಧಿತ ರೋಗವನ್ನು 20% ಬಾಳೆಹಣ್ಣು ಕಡಿಮೆಮಾಡುತ್ತದೆ. ಬಾಳೆಹಣ್ಣನ್ನು ತಿನ್ನುವುದರಿಂದ ತೂಕ ಹೆಚ್ಚುತ್ತದೆ, ಮಲಬದ್ಧತೆ ಉಂಟಾಗುತ್ತದೆ ಎಂದು ಹೇಳುತ್ತಾರೆ ಅದು ಸುಳ್ಳು ಮಲಬದ್ಧತೆಯನ್ನು ಕಡಿಮೆ ಮಾಡುತ್ತದೆ.
ಇದರಲ್ಲಿ ಕಾರ್ಬೋಹೈಡ್ರೇಟ್ಸ್, ಕ್ಯಾಲ್ಶಿಯಂ ವಿಟಮಿನ್ ಗಳು ಹೆಚ್ಚಾಗಿದ್ದು ಪೋಷಕ ಆಹಾರವಾಗಿದೆ. ಕರುಳಿನ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ಕೆನೆ ತೆಗೆದ ಹಾಲಿನಲ್ಲಿ ಬಾಳೆಹಣ್ಣನ್ನು ಬೆರೆಸಿ ಸೇವಿಸುವುದರಿಂದ 15 ದಿನಗಳಲ್ಲಿ ಶಾರೀರಿಕ ಶಕ್ತಿ ಹೆಚ್ಚಾಗುತ್ತದೆ. ಎರಡು ಬಾಳೆಹಣ್ಣು 90 ನಿಮಿಷ ಕೆಲಸ ಮಾಡುತ್ತದೆ ಎಂದು ಸಂಶೋಧನೆ ತಿಳಿಸುತ್ತದೆ. ರಕ್ತ ಹೀನತೆ ಇರುವವರು ಇದನ್ನು ಸೇವಿಸಬೇಕು. ಬಾಳೆಹಣ್ಣನ್ನು ಸೇವಿಸುವುದರಿಂದ ಹಿಮೋಗ್ಲೋಬಿನ್ ಮಟ್ಟ ಹೆಚ್ಚಾಗುತ್ತದೆ. ಬಿಪಿ ಇರುವವರು ಬಾಳೆಹಣ್ಣು ತಿನ್ನಬೇಕು. ಉದರ ಸಂಬಂಧಿ ಸಮಸ್ಯೆಗೆ ಬಾಳೆಹಣ್ಣು, ಮೊಸರು, ಸಕ್ಕರೆ ಸೇವಿಸುವುದರಿಂದ ಉತ್ತಮ. ಅಲ್ಸರ್ ವ್ಯಾಧಿಗೆ ಬಾಳೆಹಣ್ಣು ಜ್ಯೂಸ್ ಉತ್ತಮವಾಗಿದೆ. ಗರ್ಭಿಣಿ ಮಹಿಳೆಯರಿಗೆ ಇದು ಉತ್ತಮವಾಗಿದೆ. ಬಾಳೆಹಣ್ಣು ನಿಂಬೆ ಸೇರಿಸಿ ತಲೆಗೆ ಹಚ್ಚುವುದರಿಂದ ತಲೆ ಕೂದಲು ಉದುರುವುದು ನಿಲ್ಲುತ್ತದೆ. ಬಾಳೆಹಣ್ಣಿಗೆ ಎರಡು ಚಮಚ ಜೇನು ತುಪ್ಪ ಸೇರಿಸಿ ತಿನ್ನುವುದರಿಂದ ಎದೆ ನೋವು ನಿವಾರಣೆಯಾಗುತ್ತದೆ. ಬಾಳೆಹಣ್ಣನ್ನು ಹೆಚ್ಚು ಎಲ್ಲರೂ ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದು.
