
ಗರ್ಭಿಣಿ ಸ್ತ್ರೀಯರಿಗೆ ದಾಳಿಂಬೆಹಣ್ಣು ಎಷ್ಟೊಂದು ಲಾಭ ನೀಡುತ್ತೆ ನೋಡಿ
ಮದುವೆಯಾದ ಪ್ರತಿ ದಂಪತಿಗಳಿಗೆ ಮುದ್ದಾದ ಮಗುವನ್ನು ಪಡೆಯಬೇಕು ಎಂಬ ಸಹಜ ಆಸೆ ಇರುತ್ತದೆ. ಈಗಿನ ಆಹಾರ ಕ್ರಮ, ಜೀವನಶೈಲಿ, ತಡವಾಗಿ ಮದುವೆಯಾಗುವುದರಿಂದ ಮಕ್ಕಳಾಗುವ ಸಾಧ್ಯತೆ ಕಡಿಮೆ ಇರುತ್ತದೆ. ಗರ್ಭಿಣಿ ಸ್ತ್ರೀಯರು ತಮ್ಮ ಮಗುವಿನ ಆರೋಗ್ಯ, ಬೆಳವಣಿಗೆಗೆ ಪೂರಕ ಆಹಾರ ಕ್ರಮವನ್ನು ಅನುಸರಿಸಬೇಕು. ಅವರು ಅನುಸರಿಸುವ ಆಹಾರ ಕ್ರಮ ಹೇಗಿರಬೇಕು ಎಂಬ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.
ಮದುವೆಯಾದ ದಂಪತಿಗಳ ಕನಸು ಮುದ್ದಾದ ಮಗು ಪಡೆಯುವುದು. ಮಹಿಳೆಯ ಗರ್ಭಾವಸ್ಥೆಯ ಸಮಯದಲ್ಲಿ ಮಗು ಆರೋಗ್ಯಯುತವಾಗಿ ಬೆಳೆಯಬೇಕು ಆದ್ದರಿಂದ ತಾಯಿ ಸರಿಯಾದ ಆಹಾರವನ್ನು ಸೇವಿಸಬೇಕು ಜೊತೆಗೆ ತಾಯಿ ಮತ್ತು ಮಗುವಿನ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಮುಂಜಾಗ್ರತೆ ವಹಿಸಬೇಕು. ತಾಯಿ ಯಾವ ರೀತಿಯ ಆಹಾರವನ್ನು ಸೇವಿಸುತ್ತಾಳೆ ಎನ್ನುವುದರ ಮೇಲೆ ಮಗುವಿನ ಆರೋಗ್ಯ, ಬೆಳವಣಿಗೆ ವೃದ್ಧಿಯಾಗುತ್ತದೆ. ಗರ್ಭಿಣಿ ಮಹಿಳೆಯರು ತರಕಾರಿಯನ್ನು ಸೇವಿಸಬೇಕು ಅದರಲ್ಲಿ ಕ್ಯಾರೆಟ್ ಬಹಳ ಒಳ್ಳೆಯದು. ಕ್ಯಾರೆಟ್ ಮಗುವಿನ ಆರೋಗ್ಯಕ್ಕೆ ಒಳ್ಳೆಯದು ಹಾಗೂ ಬೆಳವಣಿಗೆಗೆ ಸಹಾಯಕಾರಿ. ಹಣ್ಣುಗಳನ್ನು ಹೆಚ್ಚು ಸೇವಿಸಬೇಕು ಎಲ್ಲ ರೀತಿಯ ಹಣ್ಣುಗಳನ್ನು ತಿನ್ನಬೇಕು ಅದರಲ್ಲೂ ಹೆಚ್ಚಾಗಿ ಸೇಬು ತಿನ್ನಬೇಕು ಇದರಿಂದ ಮಗು ಉತ್ತಮವಾಗಿ ಬೆಳೆಯುತ್ತದೆ. ಕಿತ್ತಳೆ ಹಣ್ಣನ್ನು ತಿನ್ನಬೇಕು ಇದರಿಂದ ಮಗು ದೈಹಿಕವಾಗಿ, ಮಾನಸಿಕವಾಗಿ ಬೆಳವಣಿಗೆ ಹೊಂದುತ್ತದೆ. ಧಾಳಿಂಬೆ ಹಣ್ಣನ್ನು ಹೆಚ್ಚಾಗಿ ತಿನ್ನಬೇಕು ಮಗು ಕಲರ್ ಬರಲು ಸಹಾಯಕವಾಗುತ್ತದೆ ಅಲ್ಲದೇ ದೇಹದಲ್ಲಿ ರಕ್ತ ಹೆಚ್ಚಾಗುತ್ತದೆ.

ಇದರ ಜೊತೆಗೆ ಹಸಿರು ಸೊಪ್ಪುಗಳನ್ನು ಹೆಚ್ಚಾಗಿ ಸೇವಿಸಬೇಕು. ಹೆಚ್ಚಾಗಿ ಪಾಲಕ್ ಸೊಪ್ಪನ್ನು ಸೇವಿಸಬೇಕು. ಎಲ್ಲ ರೀತಿಯ ಹಸಿರು ಸೊಪ್ಪನ್ನು ತಿನ್ನಬೇಕು ಅದರಲ್ಲಿ ಫೈಬರ್ ಅಂಶ ಹೆಚ್ಚಾಗಿ ಇರುತ್ತದೆ. ಮಹಿಳೆಯು ಗರ್ಭಿಣಿಯಾಗಿ 3 ತಿಂಗಳ ನಂತರ ರಾಗಿ ರೋಟಿ, ದೋಸೆ, ಮುದ್ದೆ ಮಾಡಿಕೊಂಡು ತಿನ್ನಬಹುದು ಇದರಿಂದ ರಾಗಿಯ ಅಂಶ ದೇಹಕ್ಕೆ ಸೇರುತ್ತದೆ. ಇದರ ಜೊತೆಗೆ ಹಾಲನ್ನು ಹೆಚ್ಚು ಕುಡಿಯಬೇಕು. ದಿನಕ್ಕೆ ಮೂರು ಸಲ ಬೆಳಿಗ್ಗೆ, ಮಧ್ಯಾಹ್ನ, ರಾತ್ರಿ ಹಾಲು ಕುಡಿಯುವುದು ಒಳ್ಳೆಯದು. ಹಾಲಿಗೆ ಪೌಡರ್ ಅಂದರೆ ಮದರ್ ಹಾರ್ಲಿಕ್ಸ್ ಈ ರೀತಿಯ ಪೌಡರ್ ಹಾಕಿಕೊಂಡು ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದು. ಗರ್ಭಿಣಿ ಸ್ತ್ರೀಯರು ನೀರನ್ನು ಹೆಚ್ಚು ಕುಡಿಯಬೇಕು. ದಿನಕ್ಕೆ 3-4 ಲೀಟರ್ ನೀರನ್ನು ಕುಡಿಯಬೇಕು ಇದರಿಂದ ತಾಯಿ ಹಾಗೂ ಮಗುವಿನ ಆರೋಗ್ಯಕ್ಕೆ ಒಳ್ಳೆಯದು. ಗರ್ಭಿಣಿ ಸ್ತ್ರೀಯರು ಎಲ್ಲಾ ರೀತಿಯ ತರಕಾರಿ, ಹಣ್ಣು, ಸೊಪ್ಪು ಇವುಗಳನ್ನು ತಿನ್ನುತ್ತಿರಬೇಕು. ಪ್ರೊಟೀನ್, ವಿಟಮಿನ್ಸ್ ಇರುವ ಆಹಾರವನ್ನು ಹೆಚ್ಚು ಸೇವಿಸಬೇಕು. ಗರ್ಭಾವಸ್ಥೆಯ ಸಮಯದಲ್ಲಿ ಆಲ್ಕೋಹಾಲ್, ಸಿಗರೇಟ್ ಈ ರೀತಿಯ ಮದ್ಯಪಾನಗಳನ್ನು ಸೇವಿಸಬಾರದು.