
ರಾತ್ರಿ ಮಲಗುವ ಮುಂಚೆ ಇದನ್ನ ಹಚ್ಚಿದ್ರೆ ಕಣ್ಣಿನ ಸುತ್ತಲಿನ ಕಪ್ಪವು ಕಲೆ ಶಾಶ್ವತವಾಗಿ ಹೋಗತ್ತೆ
ಕಣ್ಣುಗಳು ಮನುಷ್ಯನ ಮುಖದ ಅಂದವನ್ನು ಹೆಚ್ಚಿಸುತ್ತವೆ. ಆದರೆ ಕಣ್ಣಿನ ಕೆಳಗೆ ಕೆಲವರಿಗೆ ಕಪ್ಪು ಕಲೆಗಳು ಅಥವಾ ವರ್ತುಲಗಳು ಉಂಟಾಗಿರುತ್ತದೆ. ಇದರಿಂದ ಮುಖದ ಅಂದ ಹೊರಟುಹೋಗುತ್ತದೆ. ಇದನ್ನು ಬೇಗ ನಿವಾರಿಸಿಕೊಳ್ಳಬೇಕು. ಕಣ್ಣಿನ ಕೆಳಗೆ ವರ್ತುಲಗಳು ಉಂಟಾಗಲು ಕಾರಣ ಹಲವಾರು ಇವೆ. ಆದ್ದರಿಂದಲೇ ಕಣ್ಣಿನ ಕೆಳಗೆ ಇರುವ ಕಪ್ಪು ಕಲೆಗಳನ್ನು ಮಾಯವಾಗಿಸಿಕೊಳ್ಳಲು ಪರಿಹಾರದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ಇತ್ತೀಚಿನ ದಿನಗಳಲ್ಲಿ ಆರೋಗ್ಯ ಎನ್ನುವುದು ಹೆಚ್ಚಾಗಿ ಎಲ್ಲರಿಗೂ ಅಪರೂಪವೇ ಆಗಿದೆ. ಏಕೆಂದರೆ ತಮ್ಮ ದುಡಿಮೆಯ ಉದ್ದೇಶದಿಂದ ಆರೋಗ್ಯದ ಬಗ್ಗೆ ಕಾಳಜಿ ವಹಿಸುವವರು ಕಡಿಮೆಯಾಗಿದ್ದಾರೆ. ಹಾಗೆಯೇ ಎಲ್ಲರ ಕೈಯಲ್ಲಿರುವ ಮೊಬೈಲ್ ಕೂಡ ಮನುಷ್ಯರ ನಿದ್ರೆಯನ್ನು ಹಾಳುಮಾಡುತ್ತಿದೆ. ಇದರಿಂದ ಕಣ್ಣಿನ ಕೆಳಗೆ ಕಪ್ಪು ಕಲೆಗಳು ಉಂಟಾಗುತ್ತದೆ. ಹಾಗೆಯೇ ಮಾನಸಿಕ ಒತ್ತಡದಿಂದ ಕೂಡ ಇದು ಆಗುತ್ತದೆ. ಪೌಷ್ಟಿಕ ಆಹಾರಗಳನ್ನು ಸೇವನೆ ಮಾಡದೇ ಇರುವುದರಿಂದ ಕಣ್ಣಿನ ಕೆಳಗಡೆ ಕಲೆಗಳು ಉಂಟಾಗಬಹುದು.

ಕಣ್ಣಿನ ಮೇಲಿನ ಹೊರಪದರ ಅಂದರೆ ಕಣ್ಣಿನ ಮೇಲೆ ಮತ್ತು ಕೆಳಗಿನ ಚರ್ಮಗಳು ಬಹಳ ಸೂಕ್ಷ್ಮವಾಗಿರುತ್ತದೆ. ಆಲೂಗಡ್ಡೆ ಇದು ತರಕಾರಿಗಳಲ್ಲಿ ಒಂದು ಇದಕ್ಕೆ ಮುಖದ ಚರ್ಮವನ್ನು ಚರ್ಮದ ಕಾಂತಿಯನ್ನು ಹೆಚ್ಚಿಸುವ ಗುಣವಿದೆ. ಇದರಲ್ಲಿ ವಿಟಮಿನ್ ಎ ಮತ್ತು ಡಿ ಇದೆ. ಇದನ್ನು ಕಣ್ಣಿನ ಮೇಲೆ ಹಚ್ಚುವುದರಿಂದ ಕಣ್ಣಿನ ಕೆಳಗೆ ಮೇಲೆ ಇರುವ ಕಲೆಗಳು ಮಾಯವಾಗುತ್ತದೆ. ಹಾಗೆಯೇ ಪುದೀನಾ ಎಲೆ ವಿಟಮಿನ್ ಸಿ ಯನ್ನು ಹೊಂದಿರುತ್ತದೆ. ಎಲ್ಲರ ಮನೆಯಲ್ಲಿ ಇರುವುದಿಲ್ಲ. ಇದನ್ನು ಹೆಚ್ಚಾಗಿ ಮಾರುಕಟ್ಟೆಯಲ್ಲಿ ಕೊಳ್ಳುವವರು ಜಾಸ್ತಿ.
ಮೊದಲು ಆಲೂಗಡ್ಡೆಯನ್ನು ತೊಳೆದು ಸಿಪ್ಪೆಯನ್ನು ತೆಗೆದುಕೊಳ್ಳಬೇಕು. ನಂತರ ಚಿಕ್ಕ ಚಿಕ್ಕ ಚೂರುಗಳಾಗಿ ಕತ್ತರಿಸಿ ಕೊಳ್ಳಬೇಕು. ಹಾಗೆಯೇ ಇದರ ಜೊತೆ ಸುಮಾರು 10 ಎಲೆಗಳನ್ನು ಹಾಕಿ ಮಿಕ್ಸಿ ಜಾರಿಯಲ್ಲಿ ಮಿಕ್ಸಿ ಮಾಡಬೇಕು. ಇಲ್ಲವಾದಲ್ಲಿ ಕಲ್ಲಿನಲ್ಲಿ ಜಜ್ಜಿಕೊಂಡರು ಬರುತ್ತದೆ. ನಂತರ ಈ ಪೇಸ್ಟ್ ಅನ್ನು ತೆಗೆದುಕೊಂಡು ಒಂದು ಪಾತ್ರೆಗೆ ಹಾಕಬೇಕು. ಅದಕ್ಕೆ ಒಂದು ಚಮಚ ಅಲೋವೆರಾ ಜೆಲ್ ನ್ನು ಹಾಕಬೇಕು ಅಲೋವೆರಾ ಕೂಡ ಮುಖಕ್ಕೆ ಬಹಳ ಒಳ್ಳೆಯದು. ಕೊನೆಯದಾಗಿ ಎಲ್ಲವನ್ನು ಚೆನ್ನಾಗಿ ಮಿಶ್ರಣ ಮಾಡಿ ಕಣ್ಣಿನ ಮೇಲೆ ಮತ್ತು ಕೆಳಗೆ ಹಚ್ಚಬೇಕು. ರಾತ್ರಿ ಮಲಗುವ ಮುನ್ನ ಇದನ್ನು ಮಾಡಿ ಹಚ್ಚಿಕೊಂಡು ಅರ್ಧ ಗಂಟೆ ಬಿಟ್ಟು ನೀರಿನಲ್ಲಿ ಮುಖವನ್ನು ತೊಳೆಯಬೇಕು. ಇದನ್ನು ದಿನನಿತ್ಯ ಮಾಡಿದಲ್ಲಿ ಕಣ್ಣಿನ ಕಲೆಗಳು ಮಾಯವಾಗುತ್ತವೆ