ಮುಖದ ಮೇಲಿನ ಬೇಡವಾದ ಕೂದಲನ್ನು ಶಾಶ್ವತವಾಗಿ ನಿವಾರಿಸುವ ವಿಧಾನ

ಕೂದಲು ಮನುಷ್ಯನಲ್ಲಿ ಅಂದವನ್ನು ಹೆಚ್ಚಿಸುವಂತಹ ಅಂಗ ಅದರಲ್ಲಿಯೂ ಮಹಿಳೆಯರಲ್ಲಂತೂ ಕೂದಲುಗಳೇ ಅತ್ಯಾಕರ್ಷಣೆ ಹಾಗಾಗಿ ಎಲ್ಲರೂ ತಮ್ಮ ಕೂದಲುಗಳ ರಕ್ಷಣೆಯನ್ನು ಮಾಡಿಕೊಳ್ಳುತ್ತಾರೆ ತಲೆ ಕೂದಲನ್ನು ನಾವು ಇನ್ನಷ್ಟು ಚೆನ್ನಾಗಿ ಬೆಳೆಯುವಂತೆ ಉದ್ದವಾಗಿ ಮತ್ತು ಸೊಂಪಾಗಿ ಬೆಳೆಯಲು ಹಲವಾರು ರೀತಿಯ ಕ್ರಮಗಳನ್ನು ಅನುಸರಿಸುತ್ತೇವೆ ಆದರೆ ಮಹಿಳೆಯರಲ್ಲಿ ಕೆಲವರಲ್ಲಿ ಮುಖದ ಮೇಲೆಯೂ ಕೂಡಾ ಕೂದಲುಗಳು ಬೆಳೆದಿರುವುದನ್ನು ನಾವು ಕಾಣುತ್ತೇವೆ ಮಹಿಳೆಯರಲ್ಲಿ ಮುಖದ ಮೇಲಿನ ಕೂದಲುಗಳು ಅವರ ಅಂದವನ್ನು ಹಾಳು ಮಾಡುತ್ತವೆ ಆದ್ದರಿಂದ ಮಹಿಳೆಯರಲ್ಲಿ ಕೆಲವರು ಇಂತಹ ಸಮಸ್ಯೆಗಳನ್ನು ಕಳೆದುಕೊಳ್ಳುವುದು ಸವಾಲಾಗಿಬಿಡುತ್ತದೆ

ಆದರೆ ಕೆಲವರು ಈ ರೀತಿಯ ಮುಖದ ಮೇಲಿನ ಕೂದಲುಗಳನ್ನು ತೆಗೆಯಲು ರೇಸರ್ ಗಳನ್ನು ಬಳಸುತ್ತಾರೆ ಹೀಗೆ ಮಾಡುವುದರಿಂದ ನಿಮ್ಮ ಮುಖದ ಮೇಲಿನ ಕೂದಲುಗಳನ್ನು ತೆಗೆಯಬಹುದು ಆದರೆ ಕೂದಲುಗಳು ಮತ್ತೆ ಮೊದಲಿಗಿಂತಲೂ ಹೆಚ್ಚಾಗಿ ಬೆಳೆಯುತ್ತವೆ ಆದ್ದರಿಂದ ಮಹಿಳೆಯರು ತಮ್ಮ ಮುಖದ ಮೇಲಿನ ಕೂದಲುಗಳನ್ನು ತೆಗೆಯಲು ರೇಸರ್ ಗಳನ್ನು ಬಳಸುವುದು ಸೂಕ್ತವಲ್ಲ

ಇನ್ನೂ ಕೆಲವರು ಮಹಿಳೆಯರು ತಮ್ಮ ಮುಖದ ಮೇಲಿನ ಕೂದಲನ್ನು ಶಾಶ್ವತವಾಗಿ ತೆಗೆಯಲು ಲೇಸರ್ ಟ್ರೀಟ್ಮೆಂಟ್ ನ ಮೊರೆ ಹೋಗುತ್ತಾರೆ ಹೀಗೆ ಮಾಡುವುದರಿಂದ ತಮ್ಮ ಮುಖದ ಮೇಲಿನ ಕೂದಲುಗಳನ್ನು ಶಾಶ್ವತವಾಗಿ ತೆಗೆದುಕೊಳ್ಳಬಹುದು ಆದರೆ ಲೇಸರ್ ಟ್ರೀಟ್ಮೆಂಟ್ ನ ಖರ್ಚನ್ನು ಎಲ್ಲರಿಂದಲೂ ಬರಿಸಲು ಸಾಧ್ಯವಾಗುವುದಿಲ್ಲ ಅದರಲ್ಲಿಯೂ ಹಾರ್ಮೋನ್ ಗಳ ಸಮಸ್ಯೆ ಇರುವ ಕೆಲವು ಮಹಿಳೆಯರಲ್ಲಿ ಈ ರೀತಿಯ ಟ್ರೀಟ್ಮೆಂಟ್ ಫಲಿಸುವುದೂ ಇಲ್ಲ

ಹಾಗಾಗಿ ನಾವು ಹೇಳುವ ಒಂದು ಸುಲಭ ಮನೆ ಮದ್ಧನ್ನು ನೀವು ಉಪಯೋಗಿಸುವ ಮೂಲಕ ನಿಮ ಮುಖದ ಮೇಲಿನ ಬೇಡವಾದ ಕೂದಲುಗಳನ್ನು ಯಾವುದೇ ಅಡ್ಡ ಪರಿಣಾಮಗಳಿಲ್ಲದೇ ಶಾಶ್ವತವಾಗಿ ತೆಗೆಯಬಹುದಾಗಿದೆ ಬನ್ನಿ ಹಾಗಾದ್ರೆ ಆ ಸುಲಭ ಮನೆ ಮದ್ಧನ್ನು ತಯಾರಿಸುವ ವಿಧಾನವನ್ನು ಮತ್ತು ಅದನ್ನು ಉಪಯೋಗಿಸುವ ಕ್ರಮಗಳನ್ನು ನೋಡೋಣ. ಆಯುರ್ವೇದದ ಅಂಗಡಿಗಳಲ್ಲಿ ದೊರೆಯುವ ಆಲಮ್ ಅಂದರೆ ಪಟಕ ವನ್ನು ತೆಗೆದುಕೊಂಡು ಅದನ್ನು ಕುಟ್ಟಿ ಪುಡಿ ಮಾಡಿಕೊಳ್ಳಬೇಕು.

ನಂತರ ಅರ್ಧ ಚಮಚ ಕುಟ್ಟಿ ಪುಡಿ ಮಾಡಿದ ಆಲಮ್ ನೊಂದಿಗೆ ಅರ್ಧ ಚಮಚ ಕೊಬ್ಬರಿ ಎಣ್ಣೆ ಮತ್ತು ಅರ್ಧ ಚಮಚ ರೋಸ್ ವಾಟರ್ ಅನ್ನು ಹಾಕಿಕೊಂಡು ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು ಇಷ್ಟು ಮಾಡಿಕೊಂಡರೆ ನೀವು ತಯಾರಿಸಬೇಕಾದ ಮನೆ ಮದ್ಧು ಸಿದ್ಧವಾದಂತೆ ತಯಾರಿಸಿಕೊಂಡ ಮಿಶ್ರಣವನ್ನು ನೀವು ಒಂದು ಚಿಕ್ಕ ಹತ್ತಿ ಉಂಡೆಯ ಸಹಾಯದಿಂದ ನಿಮ್ಮ ಮುಖದ ಮೇಲೆ ಕೂದಲುಗಳು ಇರುವ ಜಾಗಕ್ಕೆ ನಯವಾಗಿ ಹಚ್ಚಿಕೊಳಬೇಕು ನೀವು ಹಚ್ಚಿಕೊಳ್ಳುವ ಸಮಯದಲ್ಲಿ ಯಾವುದೇ ಕಾರಣಕ್ಕೂ ಈ ಮಿಶ್ರಣ ನಿಮ್ಮ ತಲೆ ಕೂದಲುಗಳಿಗೆ ಮತ್ತು ಕಣ್ಣು ಹುಬ್ಬುಗಳಿಗೆ ತಗುಲದಂತೆ ನೋಡಿಕೊಳ್ಳುವುದು ಉತ್ತಮ ಹೀಗೆ ಮುಖಕ್ಕೆ ಹಚ್ಚಿಕೊಂಡ ಮಿಶ್ರಣವನ್ನು ಸ್ವಲ್ಪ ಹೊತ್ತು ಒಣಗಲು ಬಿಡಬೇಕು.

ಮತ್ತೆ ಅದೇ ಮಿಶ್ರಣವನ್ನು ನಿಮ್ಮ ಮುಖಕ್ಕೆ ಮತ್ತೊಂದು ಎಳೆ ಬರುವ ಹಾಗೇ ಹಚ್ಚಿಕೊಳ್ಳಬೇಕು ಹಚ್ಚಿಕೊಂಡ ನಂತರ ಒಂದು ಗಂಟೆ ಇದನ್ನು ಒಣಗಲು ಬಿಟ್ಟು ಉಗುರು ಬೆಚ್ಚಗಿನ ನೀರಿನಿಂದ ತೊಳೆದುಕೊಳ್ಳಬೇಕು ಈ ರೀತಿಯಾಗಿ ನೀವು ಈ ಕ್ರಮವನ್ನು ವಾರದಲ್ಲಿ ಮೂರರಿಂದ ನಾಲ್ಕು ಬಾರಿಯಾದರೂ ಅನುಸರಿಸಬೇಕು ಹೀಗೆ ಮಾಡುವುದರಿಂದ ನಿಮ್ಮ ಮುಖದ ಮೇಲಿನ ಕೂದಲುಗಳು ಶಾಶ್ವತವಾಗಿ ಮಾಯವಾಗುವುದರಲ್ಲಿ ಎರಡು ಮಾತಿಲ್ಲ

Leave a Comment

error: Content is protected !!