ತಲೆನೋವು ಕ್ಷಣದಲ್ಲೇ ನಿವಾರಿಸುವ ಮನೆಮದ್ದು

ಇತ್ತೀಚಿನ ದಿನಗಳಲ್ಲಿ ಜೀವನ ಶೈಲಿ, ಆಹಾರ ಪದ್ಧತಿ ಮುಂತಾದ ಕಾರಣಗಳಿಂದ ತಲೆನೋವು ಸಾಮಾನ್ಯವಾಗಿ ಬರುತ್ತದೆ. ದೈನಂದಿನ ಟೆನ್ಷನ್ ಗಳಿಂದ ತಲೆನೋವು ಬರುವುದು ಸಹಜ. ಈ ತಲೆನೋವಿಗೆ ಟ್ಯಾಬ್ಲೆಟ್ ತೆಗೆದುಕೊಳ್ಳುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ತಲೆನೋವಿಗೆ ಮನೆಯಲ್ಲೇ ಇರುವ ಸಾಮಗ್ರಿಗಳನ್ನು ಬಳಸಿ ಮನೆ ಮದ್ದನ್ನು ಮಾಡಿಕೊಂಡು ತಲೆನೋವನ್ನು ನಿವಾರಿಸಿಕೊಳ್ಳಬಹುದು. ಹಾಗಾದರೆ ತಲೆನೋವಿಗೆ ಸುಲಭವಾದ ಮನೆ ಮದ್ದನ್ನು ಹೇಗೆ ಮಾಡುವುದು ಎಂಬೆಲ್ಲಾ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.

ಇತ್ತೀಚಿನ ದಿನಗಳಲ್ಲಿ ತಲೆನೋವು ಸಾಮಾನ್ಯವಾಗಿ ಕಂಡುಬರುತ್ತದೆ. ಯಾವುದಾದರೂ ಒಂದು ಸಮಸ್ಯೆಗೆ ಸಿಲುಕಿ ತಲೆನೋವು ಬಂದಿರುತ್ತದೆ. ತಲೆ ನೋವು ಬಂದಾಗ ಯಾವುದೇ ಕೆಲಸ ಮಾಡಲು ಮನಸ್ಸು ಬರುವುದಿಲ್ಲ. ಕೆಲಸದ ಒತ್ತಡ, ನಿದ್ರಾ ಹೀನತೆ ಮೊದಲಾದ ಸಮಸ್ಯೆಗಳು ಕಂಡುಬರುತ್ತದೆ. ತಲೆನೋವು ಬಂದಾಗ ಕೆಲವರು ಮೆಡಿಸಿನ್ ತೆಗೆದುಕೊಳ್ಳುತ್ತಾರೆ ಆದರೆ ಅದು ಪ್ರತಿ ಸಲ ತೆಗೆದುಕೊಳ್ಳುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ತಲೆನೋವನ್ನು ನೈಸರ್ಗಿಕ ವಿಧಾನಗಳ ಮೂಲಕ ಕಡಿಮೆ ಮಾಡಿಕೊಳ್ಳಬೇಕು.

ತಲೆನೋವು ನಿವಾರಣೆಗೆ ಶುಂಠಿ ಸಹಾಯ ಮಾಡುತ್ತದೆ ಶುಂಠಿಯಲ್ಲಿ ಔಷಧಿಯ ಗುಣಗಳಿವೆ ಶುಂಠಿಯ ರಸವನ್ನು ತಲೆಗೆ ಹಚ್ಚಿಕೊಳ್ಳಬೇಕು. ನರಗಳ ಒತ್ತಡವನ್ನು ಕಡಿಮೆ ಮಾಡಿ ತಲೆನೋವನ್ನು ದೂರಮಾಡುತ್ತದೆ. ಒಂದು ಸ್ಪೂನ್ ಶುಂಠಿ ರಸಕ್ಕೆ ನಿಂಬೆ ರಸವನ್ನು ಸೇರಿಸಿ ತೆಗೆದುಕೊಳ್ಳುವುದರಿಂದ ತಲೆ ನೋವು ಬೇಗನೆ ನಿವಾರಣೆಯಾಗುತ್ತದೆ. ತುಳಸಿ ಎಲೆಯನ್ನು ನೀರಿನಲ್ಲಿ ಹಾಕಿ ಕುದಿಸಿ ಉಗುರು ಬೆಚ್ಚಗೆ ಇರುವಾಗ ಕುಡಿಯಬೇಕು ಇದರಿಂದ ತಲೆನೋವು ನಿವಾರಣೆಯಾಗುತ್ತದೆ. ತುಳಸಿಯಲ್ಲಿ ಕೆಲವು ಔಷಧಿಯ ಗುಣಗಳಿದ್ದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಕೆಲವರಿಗೆ ಬೆಳಗ್ಗೆ ಎದ್ದಾಗಿನಿಂದ ತಲೆನೋವು ಇರುತ್ತದೆ ಅವರು ಸೇಬು ಹಣ್ಣಿಗೆ ಉಪ್ಪನ್ನು ಹಾಕಿ ತಿಂದು ಒಂದು ಗ್ಲಾಸ್ ನೀರನ್ನು ಕುಡಿಯಬೇಕು ಆಗ ತಲೆನೋವು ನಿವಾರಣೆಯಾಗುತ್ತದೆ. 10-15 ಪುದೀನಾ ಎಲೆಗಳನ್ನು ಒಂದು ಗ್ಲಾಸ್ ನೀರಿನಲ್ಲಿ ಹಾಕಿ ಕುದಿಸಿ ಕುಡಿಯಬೇಕು. ವೀಳ್ಯದೆಲೆ ತಲೆನೋವನ್ನು ನಿವಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ತಲೆನೋವು ಇದ್ದಾಗ ಎರಡು ವೀಳ್ಯದೆಲೆಯನ್ನು ಚೆನ್ನಾಗಿ ಅರೆದು ತಿನ್ನುವುದರಿಂದ ಮತ್ತು ವೀಳ್ಯದೆಲೆಯ ಪೇಸ್ಟ್ ಮಾಡಿಕೊಂಡು ತಲೆಗೆ ಹಚ್ಚಿಕೊಳ್ಳುವುದರಿಂದ ತಲೆನೋವು ಬೇಗ ನಿವಾರಣೆಯಾಗುತ್ತದೆ. ನೈಸರ್ಗಿಕ ಉಪಾಯಗಳನ್ನು ಮಾಡಿಕೊಂಡು ತಲೆನೋವನ್ನು ಕಡಿಮೆ ಮಾಡಿಕೊಳ್ಳಬೇಕು. ಪೇನ್ ಕ್ಯೂಲರ್ ತೆಗೆದುಕೊಳ್ಳುವುದು ಆರೋಗ್ಯಕ್ಕೆ ಒಳ್ಳೆಯದಲ್ಲ ಹಾಗಾಗಿ ನೈಸರ್ಗಿಕವಾಗಿ ತಲೆನೋವನ್ನು ನಿವಾರಿಸಿಕೊಳ್ಳುವುದು ಉತ್ತಮ. ಅತಿಯಾದ ತಲೆನೋವು ಇದ್ದರೆ ವೈದ್ಯರ ಬಳಿ ಹೋಗುವುದು ಒಳ್ಳೆಯದು. ಈ ಮಾಹಿತಿಯನ್ನು ತಪ್ಪದೇ ಎಲ್ಲರಿಗೂ ತಿಳಿಸಿ.

Leave a Comment

error: Content is protected !!