ಎಷ್ಟೇ ತಿಂದ್ರು ದಪ್ಪ ಆಗುತ್ತಿಲ್ವಾ, ಈ ಕಾಳು ತಿಂದ್ರೆ ತಿಂಗಳಲ್ಲೇ ದಪ್ಪ ಆಗೋದು ಖಚಿತ .!

ಬಹಳ ಸಣ್ಣಗಿರುವವರು ದಪ್ಪ ಆಗಲು ಆಸೆಪಡುತ್ತಾರೆ, ಬಹಳ ದಪ್ಪ ಇರುವವರು ಸಣ್ಣಗಾಗಲು ಆಸೆಪಡುತ್ತಾರೆ. ಬಹಳ ದಪ್ಪ ಇರುವುದಾಗಲಿ, ಬಹಳ ಸಣ್ಣವಿರುವುದಾಗಲಿ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ನಮ್ಮ ಎತ್ತರಕ್ಕೆ ತಕ್ಕಂತೆ ತೂಕವನ್ನು ಹೊಂದುವುದು ಅವಶ್ಯಕ. ನಮ್ಮ ಸಮಸ್ಯೆಗಳಿಗೆ ಮನೆಯಲ್ಲಿ ಸಿಗುವ ಸಾಮಗ್ರಿಗಳನ್ನು ಬಳಸಿಕೊಂಡು ಯಾವುದೇ ಅಡ್ಡ ಪರಿಣಾಮವಿಲ್ಲದೆ
ಆರೋಗ್ಯಕರವಾಗಿ ಆಯುರ್ವೇದದ ಪ್ರಕಾರ ಪರಿಹಾರವನ್ನು ಪಡೆಯಬಹುದು. ಅದೇ ರೀತಿ ಆಯುರ್ವೇದದ ಪ್ರಕಾರ ದಪ್ಪ ಆಗುವುದು ಹೇಗೆ ಯಾವ ಆಹಾರ ಕ್ರಮವನ್ನು ಅನುಸರಿಸಬೇಕು ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ.

ಅತಿಯಾಗಿ ತೆಳ್ಳಗಿರುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ಕೆಲವರು ಎಷ್ಟೇ ಊಟ ಮಾಡಿದರು ದಪ್ಪ ಆಗುವುದಿಲ್ಲ. ಕೆಲವರು ತೆಳ್ಳಗೆ ಇರುವುದಕ್ಕೆ ಕಾರಣ ಇದೆ ನಮ್ಮ ದೇಹ ಸಪ್ತ ಧಾತುವಿನಿಂದ ಮಾಡಲ್ಪಟ್ಟಿರುತ್ತದೆ. ಆಯುರ್ವೇದದ ಪ್ರಕಾರ ಸಪ್ತಧಾತುಗಳೆಂದರೆ ರಸ, ರಕ್ತ, ಮಾಂಸ, ಮೇಧ, ಅಸ್ತಿ, ಮಜ್ಜ, ಶುಕ್ರ ಈ ಏಳು ಧಾತುಗಳಿಂದ ನಮ್ಮ ದೇಹ ನಿರ್ಮಿತವಾಗಿದೆ. ತೆಳ್ಳಗಿರುವವರಲ್ಲಿ ಮಾಂಸ ಧಾತು ಕಡಿಮೆಯಾಗಿರುತ್ತದೆ. ಅವರ ದೇಹದಲ್ಲಿ ಉಳಿದ ಧಾತುಗಳು ಸರಿಯಾದ ಪ್ರಮಾಣದಲ್ಲಿ ಇರುತ್ತದೆ ಆದರೆ ಮಾಂಸ ಧಾತು ಕೊರತೆಯಾಗಿರುತ್ತದೆ. ದೇಹದಲ್ಲಿ ಮಾಂಸ ಧಾತುವನ್ನು ವೃದ್ಧಿ ಮಾಡುವ ಆಹಾರವನ್ನು ಸೇವಿಸಿದಾಗ ತೆಳ್ಳಗಿರುವವರು ಸಹ ದಪ್ಪ ಆಗುತ್ತಾರೆ. ತೆಳ್ಳಗಿರುವವರಿಗೆ ಆರೋಗ್ಯದ ಯಾವುದೇ ಸಮಸ್ಯೆಗಳಿರುವುದಿಲ್ಲ ಆದರೆ ನೋಡಲು ಸಣಕಲು ದೇಹವನ್ನು ಹೊಂದಿದವರಂತೆ ಕಾಣುತ್ತಾರೆ. ಕೆಲವರಿಗೆ ಅಶಕ್ತತೆಯಿಂದ ಬೇಗನೆ ಆಯಾಸವಾಗುತ್ತದೆ. ತೆಳ್ಳಗಿರುವವರ ಮುಖದಲ್ಲಿ ಕಾಂತಿ, ಹೊಳಪು ಇರುವುದಿಲ್ಲ. ಈ ಸಮಸ್ಯೆಗೆ ಪರಿಹಾರವೆಂದರೆ ಮಾಂಸ ಧಾತುವಿನ ಗುಣ ಹೊಂದಿರುವ ಆಹಾರವನ್ನು ಸೇವಿಸಬೇಕು. ಹೆಚ್ಚು ಮಾಂಸದ ಗುಣವನ್ನು ಹೊಂದಿರುವ ಉದ್ದಿನಬೇಳೆ, ಉದ್ದಿನ ಕಾಳುಗಳನ್ನು ಸೇವಿಸಬೇಕು. ಉದ್ದನ್ನು ಸೇವಿಸಲು ಪದ್ಧತಿಯಿದೆ ಹೇಗೆಂದರೆ ಉದ್ದಿನ ಕಾಳು ಅಥವಾ ಉದ್ದಿನ ಬೇಳೆಯನ್ನು ಮೊಳಕೆ ತರಿಸಿ ಬೆಳಿಗ್ಗೆ ಮತ್ತು ಸಾಯಂಕಾಲ 2-3 ಸ್ಪೂನ್ ಖಾಲಿಹೊಟ್ಟೆಯಲ್ಲಿ ತಿನ್ನುವುದರಿಂದ ದೇಹದಲ್ಲಿ ಕೊರತೆ ಇರುವ ಮಾಂಸ ಧಾತು ವೃದ್ಧಿಯಾಗುತ್ತಾ ಹೋಗುತ್ತದೆ.

ಅದರ ಜೊತೆಗೆ ತುಪ್ಪ ತಿನ್ನುವವರು ಎಮ್ಮೆಯ ತುಪ್ಪವನ್ನು ಹೆಚ್ಚು ಸೇವಿಸಬೇಕು. ಆಕಳ ತುಪ್ಪವನ್ನು ಸೇವಿಸಿದರೆ ದಪ್ಪ ಆಗುವುದಿಲ್ಲ ಬುದ್ಧಿವಂತಿಕೆ ಹೆಚ್ಚಾಗುತ್ತದೆ. ಎಮ್ಮೆಯ ತುಪ್ಪ ತಿನ್ನುವುದರಿಂದ ದಷ್ಟಪುಷ್ಟವಾಗಿ ಬೆಳವಣಿಗೆ ಹೊಂದಲು ಸಾಧ್ಯ. ದಪ್ಪ ಆಗಬೇಕು ಎಂದು ಇರುವವರು ಎಮ್ಮೆ ತುಪ್ಪವನ್ನು ಸೇವಿಸಬೇಕು ಅದು ದೇಹದಾರ್ಢ್ಯತೆಯನ್ನು ಹೆಚ್ಚಿಸಿ ಬಲವನ್ನು ಕೊಡುತ್ತದೆ. ಎಮ್ಮೆ ತುಪ್ಪವನ್ನು ತಿನ್ನುವುದರಿಂದ ಬಿಸಿಲಲ್ಲಿ ಜಾಸ್ತಿ ಹೊತ್ತು ನಿಂತುಕೊಂಡರು ಯಾವುದೇ ಸಮಸ್ಯೆ ಆಗುವುದಿಲ್ಲ. ಎಮ್ಮೆ ತುಪ್ಪ ಹಾಗೂ ಎಮ್ಮೆಯ ಹಾಲನ್ನು ಸೇವಿಸುವುದರಿಂದ ತೆಳ್ಳಗಿರುವವರು ದಪ್ಪ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಕೇವಲ ತುಪ್ಪವನ್ನು ತಿನ್ನಲು ಕಷ್ಟವಾಗುವವರು ಅನ್ನಕ್ಕೆ ಸೇರಿಸಿ ತಿನ್ನಬಹುದು ಮತ್ತು ಪ್ರತಿದಿನ ಹಾಲನ್ನು ಕುಡಿಯಬಹುದು. ಹೀಗೆ ಮಾಡುವುದರಿಂದ ದಷ್ಟಪುಷ್ಟವಾಗಿ, ಚರ್ಮ ಹೊಳಪಿನಿಂದ ಕೂಡಿದ್ದು ಸುಂದರವಾಗಿ ಕಾಣಬಹುದು. ಉದ್ದಿನಬೇಳೆ, ಎಮ್ಮೆ ತುಪ್ಪ, ಹಾಲು ಸೇವಿಸುವುದರಿಂದ ಯಾವುದೇ ಅಡ್ಡ ಪರಿಣಾಮವಾಗುವುದಿಲ್ಲ. ಹೀಗೆ ಮಾಡಿದರೆ ಯಾವುದೇ ಪ್ರಯೋಜನವಾಗದೇ ಇದ್ದಲ್ಲಿ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

Leave a Comment

error: Content is protected !!