ನಿಮ್ಮ ಮುಖದ ಕಾಂತಿಯನ್ನು ಹೆಚ್ಚಿಸಿಕೊಳ್ಳಲು ಇಲ್ಲಿದೆ ನೋಡಿ ಮೂರೂ ಸರಳ ಮಾರ್ಗ

ಯಾರಿಗೆ ತಾನೇ ತಮ್ಮ ಮುಖ ಸೌಂದರ್ಯ ಯುತವಾಗಿ ಇರುವುದು ಇಷ್ಟವಿಲ್ಲ ಹೇಳಿ ಎಲ್ಲರಿಗೂ ತಮ್ಮ ಮುಖದ ಸೌಂದರ್ಯ ಹೆಚ್ಚು ಮಾಡಿಕೊಳ್ಳುವ ಬಗ್ಗೆ ಒಲವು ಇದ್ದೇ ಇರುತ್ತದೆ ಅಷ್ಟೇ ಅಲ್ಲದೆ ನಾವು ಸಾಕಷ್ಟು ಜನರ ಮಧ್ಯದಲ್ಲಿ ಇದ್ದಂತಹ ಸಂದರ್ಭದಲ್ಲಿ ನಾನು ಎಲ್ಲರನ್ನು ಆಕರ್ಷಿಸುವಂತಹ ಕಾಂತಿಯನ್ನು ಹೊಂದಿರಬೇಕು ಎಂಬುದು ಕೂಡ ನಮ್ಮೆಲ್ಲರ ಆಶಯ ವಾಗಿರುತ್ತದೆ

ಅಷ್ಟೇ ಅಲ್ಲದೆ ಮುಖದ ಕಾಂತಿಯು ಅಂದರೆ ಮುಖದ ಸೌಂದರ್ಯವು ನಮ್ಮ ದೇಹದ ಸೌಂದರ್ಯವನ್ನು ಹೊರಜಗತ್ತಿಗೆ ಮತ್ತಷ್ಟು ಅಂದವಾಗಿ ಕಾಣುವಂತೆ ಮಾಡುವುದರಲ್ಲಿ ಯಾವುದೇ ಸಂಶಯವಿಲ್ಲ, ನಾವು ದೈಹಿಕವಾಗಿ ಎಷ್ಟೇ ಫಿಟ್ ಅಂಡ್ ಫೈನ್ ಆಗಿದ್ದರೂ ಕೂಡ ನಮ್ಮ ಮುಖ ನೋಡಲು ಚೆನ್ನಾಗಿಲ್ಲದಿದ್ದರೆ ಅಂದರೆ ಕಾಂತಿಯನ್ನು ಕಳೆದುಕೊಂಡಿದ್ದರೆ ಅಂದರೆ ಕಳೆಗುಂದಿದ್ದ ರೆ ಅದು ನಮ್ಮನ್ನು ನೋಡುವ ರನ್ನು ನಮ್ಮತ್ತ ಆಕರ್ಷಿಸ ಲಾರದು

ಹಾಗಾಗಿ ಈ ದಿನ ನಾವು ನಿಮಗಾಗಿ ಕೆಲವೊಂದಷ್ಟು ಮುಖದ ಕಾಂತಿಯನ್ನು ಹೆಚ್ಚಿಸುವುದಕ್ಕಾಗಿ ಬಳಸಬಹುದಾದ ಮನೆಮದ್ದುಗಳನ್ನು ತಿಳಿಸಿ ಕೊಡಲಿದ್ದೇವೆ. ನಾವು ಈ ಕೆಳಗೆ ತಿಳಿಸಿ ಕೊಡುವಂತಹ ಮನೆಮದ್ದುಗಳನ್ನು ತಾವು ಅನುಸರಿಸುತ್ತಾ ಬಂದಲ್ಲಿ ತಮ್ಮ ಮುಖವು ಕಾಂತಿಯುತವಾಗಿ ಇರುವುದರಲ್ಲಿ ಸಂಶಯವಿಲ್ಲ, ಹಾಗಾದರೆ ತಡ ಯಾಕೆ ಈಗಲೇ ಮನೆ ಮದ್ದುಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ

ಮೊದಲಿಗೆ ನೋಡುವುದಾದರೆ ನಾವು ದಿನನಿತ್ಯ ನಮ್ಮ ಮನೆಯ ಪರಿಸರದಲ್ಲಿ ಕಾಣುವಂತಹ ಲೋಳೆರಸ ಅಂದರೆ ಅಲೋವೆರಾ ದಲ್ಲಿರುವ ಜಲ್ ಅನ್ನು ತೆಗೆದುಕೊಂಡು ಅದನ್ನು ತಮ್ಮ ಮುಖಕ್ಕೆ ಲೇಪಿಸುವುದು, ಲೇಪಿಸಿದ ನಂತರ ಅದನ್ನು 15 ನಿಮಿಷಗಳ ಕಾಲ ಒಣಗಲು ಬಿಟ್ಟು ತದನಂತರದಲ್ಲಿ ಶುದ್ಧ ನೀರಿನಿಂದ ಮುಖವನ್ನು ತೊಳೆಯುವುದರಿಂದ ನಿಮ್ಮ ಮುಖ ಕಾಂತಿಯುತವಾಗಿ ಕಾಣುತ್ತದೆ, ಆದರೆ ಯಾವುದೇ ಕಾರಣಕ್ಕೂ ಅಲೋವೆರಾ ಜೆಲ್ ಅನ್ನು ಹಚ್ಚಿದ ನಂತರ ಅತಿ ಹೆಚ್ಚಿನ ಸಮಯದವರೆಗೆ ಅದನ್ನು ತೊಳೆಯದೆ ಬಿಡುವುದು ಉತ್ತಮವಲ್ಲ.

ನಂತರದಲ್ಲಿ ನೋಡುವುದಾದರೆ ಹುತ್ತದ ಮಣ್ಣಿನಿಂದ ಲೇಪವನ್ನು ತಯಾರಿಸಿ (ಅಂದರೆ ಹುತ್ತದ ಮಣ್ಣನ್ನು ತೆಗೆದುಕೊಂಡು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ ಹದವಾಗಿ ಕಲಸಿ) ಹೀಗೆ ಮಾಡಿಕೊಂಡ ಲೇಪವನ್ನು ಮುಖಕ್ಕೆ ಫೇಸ್ ಪ್ಯಾಕ್ ಮಾಡಿಕೊಳ್ಳಬೇಕು, ಹೀಗೆ ಮಾಡಿಕೊಂಡ ಫೇಸ್ ಪ್ಯಾಕ್ ಅನ್ನು ಒಣಚರ್ಮದವರು ಐದರಿಂದ ಆರು ನಿಮಿಷಗಳ ಕಾಲ ಮತ್ತು ಎಣ್ಣೆ ಚರ್ಮದವರು 15 ನಿಮಿಷಗಳ ಕಾಲ ಬಿಟ್ಟು ಅದನ್ನು ಸ್ವಲ್ಪ ಬೆಚ್ಚಗಿನ ನೀರಿನಿಂದ ತೊಳೆದುಕೊಳ್ಳುವುದರಿಂದ ಮುಖದ ಕಾಂತಿ ಹೆಚ್ಚಾಗುತ್ತದೆ,

ಒಣ ಚರ್ಮ ಹೊಂದಿರುವ ಯುವಕ ಅಥವಾ ಯುವತಿಯರು ಯಾವುದೇ ಕಾರಣಕ್ಕೂ ತಾವು ಹೀಗೆ ಹಚ್ಚಿಕೊಂಡ ಲೇಪನವನ್ನು ಹೆಚ್ಚಿನ ಕಾಲ ಒಣಗಿಸುವುದರಿಂದ ತಮ್ಮ ಚರ್ಮ ಇನ್ನೂ ಹೆಚ್ಚು ಒಣಚಾರ್ಮಾವಾಗಿ ಮಾರ್ಪಡುತ್ತದೆ.

ಮೂರನೆಯದಾಗಿ ನೋಡುವುದಾದರೆ ಟೊಮ್ಯಾಟೊ ಮತ್ತು ನಿಂಬೆ ಹಣ್ಣಿನ ಫೇಸ್ ಪ್ಯಾಕ್, ಈ ಫೇಸ್ ಪ್ಯಾಕ್ ಅನ್ನು ಹೇಗೆ ತಯಾರಿಸುವುದು ಎಂದರೆ ನಾವು ಟೊಮೆಟೋ ಹಣ್ಣನ್ನು ಮೊದಲಿಗೆ ಲೇಪವನ್ನು ಮಾಡಿಕೊಳ್ಳಬೇಕು ನಂತರದಲ್ಲಿ ಲೇಪಕ್ಕೆ ಸ್ವಲ್ಪವೇ ನಿಂಬೆಹಣ್ಣಿನ ರಸವನ್ನು ಬೆರೆಸಿ ನಂತರ ಇದನ್ನು ಮುಖಕ್ಕೆ ಫೇಸ್ ಪ್ಯಾಕ್ ನ ರೀತಿ ಹಚ್ಚುವುದರಿಂದ ಮುಖದಲ್ಲಿನ ರಕ್ತಪರಿಚಲನೆ ಹೆಚ್ಚಾಗುವುದು ಅಲ್ಲದೆ ಇದು ಮುಖಕ್ಕೆ ಅತಿಹೆಚ್ಚಿನ ಕಾಂತಿಯನ್ನು ಒದಗಿಸುತ್ತದೆ ಒಂದು ನೈಸರ್ಗಿಕ ಫೇಸ್ ಪ್ಯಾಕ್ ಆಗಿ ಕೆಲಸ ಮಾಡುತ್ತದೆ.

ನಾವು ಮೇಲೆ ಹೇಳಲಾಗಿರುವ ಮೂರು ವಿಧಾನಗಳು ನಮ್ಮ ಮುಖವನ್ನು ಹೊರಗಿನಿಂದ ಕಾಂತಿಯುತವಾಗಿ ಮಾಡಿಕೊಳ್ಳುವುದರ ಬಗ್ಗೆ ಆಗಿದೆ, ಅಷ್ಟೇ ಅಲ್ಲದೆ ನಮ್ಮ ಮುಖಕ್ಕೆ ಅಥವಾ ನಮ್ಮ ದೇಹಕ್ಕೆ ನಾವು ತಿನ್ನುವ ಆಹಾರದ ಮೂಲಕವೂ ಕಾಂತಿ ಹೆಚ್ಚುವಂತೆ ಮಾಡಿಕೊಳ್ಳಬಹುದು.

ಅದು ಹೇಗೆಂದರೆ ನಾವು ಅತಿ ಹೆಚ್ಚು ಕೊಬ್ಬು ಹೊಂದಿರುವ ಆಹಾರವನ್ನು ಆದಷ್ಟು ಕಡಿಮೆ ಸೇವನೆ ಮಾಡಬೇಕು ಅಂದರೆ ಕಾರ್ಬೋಹೈಡ್ರೇಟ್ ಹೊಂದಿರುವ ಆಹಾರವನ್ನು ಕಡಿಮೆ ಮಾಡಬೇಕಾಗುತ್ತದೆ ಜೊತೆಗೆ ಹಣ್ಣು ಸೊಪ್ಪು ತರಕಾರಿಗಳನ್ನು ತಿನ್ನುವುದನ್ನು ರೂಡಿ ಮಾಡಿಕೊಳ್ಳಬೇಕಾಗುತ್ತದೆ, ಅಷ್ಟೇ ಅಲ್ಲದೆ ಹೆಚ್ಚು ಡ್ರೈಫ್ರೂಟ್ಸ್ ಗಳನ್ನು ತಿನ್ನುವುದು ನಮ್ಮ ಮುಖದ ಕಾಂತಿಯನ್ನು ಹೆಚ್ಚಿಸುವಲ್ಲಿ ಸಹಾಯಕವಾಗುತ್ತದೆ ಮತ್ತು ಮುಖವನ್ನು ಆದಷ್ಟು ಸೂರ್ಯನ ಬಿಸಿಲಿಗೆ ಒಡ್ಡದಂತೆ ಇರುವುದು ಕೂಡ ನಮ್ಮ ಚರ್ಮಕ್ಕೆ ಅಷ್ಟೇ ಉತ್ತಮವಾಗಿರುತ್ತದೆ

Leave A Reply

Your email address will not be published.

error: Content is protected !!