ಶ್ರೀಮಂತ ಮುಖೇಶ್ ಅಂಬಾನಿ ಅವರ ಕಾರು ಚಾಲಕನ ಸಂಬಳ ಎಷ್ಟಿದೆ ಗೊತ್ತೇ?

ಕಾರ್ ಕಾರ್ ಎಲ್ನೋಡಿ ಕಾರ್ ಎಂಬ ಹಾಡನ್ನು ಸಿನಿಮಾಗಳಲ್ಲಿ ನೋಡಬಹುದು. ಜಗತ್ತಿನ ಅತಿ ಶ್ರೀಮಂತ ಮುಖೇಶ್ ಅಂಬಾನಿ ಅವರ ಬಳಿ ಸಾಕಷ್ಟು ದೇಶ, ವಿದೇಶಗಳ ಕಾರನ್ನು ನೋಡಬಹುದು. ಜಗತ್ತಿನ ಅತಿ ಶ್ರೀಮಂತ ಮುಖೇಶ್ ಅಂಬಾನಿ ಅವರ ಬಳಿ ಯಾವ ಯಾವ ಕಾರುಗಳಿವೆ ಹಾಗೂ ಅವರ ಕಾರಿನ ಚಾಲಕರ ವೇತನ ಎಷ್ಟು ಎಂಬ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.

ವಿಶ್ವದ ಅತೀ ಶ್ರೀಮಂತ ಪಟ್ಟಿಯಲ್ಲಿ ಅಂಬಾನಿ ಕುಟುಂಬ ಇದೆ. ಅವರ ಜೀವನ ಶೈಲಿ ಸದಾ ಚರ್ಚೆಯಾಗುತ್ತಿದೆ. ಮುಖೇಶ್ ಅಂಬಾನಿ ಏಷ್ಯಾದ ಅತಿ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಮುಖೇಶ್ ಅಂಬಾನಿ ಹಾಗೂ ನೀತಾ ಬಳಿ ಹಲವು ದುಬಾರಿ ಕಾರುಗಳಿವೆ. ಮುಖೇಶ್ ಅಂಬಾನಿ ತಮ್ಮ ಪ್ರೀತಿಯ ಪತ್ನಿಗೆ ವಿಶೇಷವಾದ ಕಾರನ್ನು ವರ್ಷಕ್ಕೊಮ್ಮೆ ಖರೀದಿಸುತ್ತಾರೆ. ಇತ್ತೀಚಿಗಿನ ನೀತಾ ಅಂಬಾನಿಯ ಕಾರು ಒಡಿ ಕಂಪನಿಯದ್ದಾಗಿದೆ. ಈ ಕಾರನ್ನು ವಿಶೇಷವಾಗಿ ಶ್ರೀಮಂತರಿಗಾಗಿ ತಯಾರಿಸಲಾಗುತ್ತದೆ. ಈ ಕಾರನ್ನು ವಿದೇಶದಿಂದ ತರಿಸಲಾಗಿದೆ.

ಈ ಕಾರಿನ ಬೆಲೆ ಬರೋಬ್ಬರಿ 95 ಕೋಟಿ ಆದರೆ ಭಾರತಕ್ಕೆ ಬಂದು ಸೇರುವವರೆಗೆ ಅದರ ಖರ್ಚು 130 ಕೋಟಿ. ಮರ್ಸಿಡಿಸ್ ಬೆಂಜ್ ಎ ಕ್ಲಾಸ್ , ರೋಲ್ಸ್ ರಾಯ್ಸ್, ಬಿಎಮ್ ಡಬ್ಲ್ಯೂ ಸೀರೀಸ್ 7 ಮುಂತಾದ ದುಬಾರಿ ಕಾರುಗಳು ಮುಖೇಶ್ ಅಂಬಾನಿ ಹಾಗೂ ನೀತಾ ಅಂಬಾನಿ ಅವರ ಗ್ಯಾರೇಜ್ ನಲ್ಲಿ ಇದೆ. ಇತ್ತೀಚಿನ ವರದಿಗಳ ಪ್ರಕಾರ ಮುಖೇಶ್ ಅಂಬಾನಿ ಅವರು ತಮ್ಮ ಚಾಲಕರಿಗೆ ಪ್ರತಿ ವರ್ಷಕ್ಕೆ 28 ಲಕ್ಷ ರೂಪಾಯಿ ಸಂಬಳ ನೀಡುತ್ತಿದ್ದಾರೆ.

ಇಷ್ಟು ಸಂಬಳ ಭಾರತದ ಕಂಪನಿಯ ಕೆಲಸದವರು ಪಡೆಯುವುದಿಲ್ಲ. ದುಬಾರಿ, ಒಳ್ಳೆಯ ಕಾರು ರಸ್ತೆಯ ಮೇಲೆ ಹೋದರೆ ಎಲ್ಲರ ಕಣ್ಣು ಕಾರಿನ ಮೇಲೆ ಅಷ್ಟರ ಮಟ್ಟಿಗೆ ಸೂಪರ್ ಕಾರುಗಳು ಮೋಡಿ ಮಾಡಿವೆ. ದುಬಾರಿ ಕಾರುಗಳು ಇಟಲಿ ಮೂಲದ ಪಗಾನಿ ಹೊಯ್ರ ಈ ಕಾರುಗಳ ಬೆಲೆ 4.6 ಮಿಲಿಯನ್ ಅಮೆರಿಕ ಡಾಲರ್. ಭಾರತದ ರೂಪಾಯಿಗಳಲ್ಲಿ 34, 60,00,000, ಇದು 3 ಸೆಕೆಂಡಿಗೆ 96 ಕಿಮೀ ವೇಗ ತಲುಪುತ್ತದೆ, 6.5 ಲೀಟರ್ ವಿ ಟ್ವೆಲ್ ಇಂಜಿನ್ ಹಾಗೂ 10,500 ಆರ್ಪಿಎಮ್ ಹೊಂದಿದೆ. ಸ್ವೀಡನ್ ಮೂಲದ ಐಶಾರಾಮಿ ಕಾರು ಇದರ ಬೆಲೆ ಭಾರತೀಯ ರೂಪಾಯಿ 31 ಕೋಟಿ.

ಬೋಗಾಟಿ ಸೂಪರ್ ಕಾರು ಫ್ರೆಂಚ್ ಆಟೋ ಮೇಕರ್ ಬೋಗಾಟಿ ಸೂಪರ್ ಕಾರು ದುಬಾರಿ ಕಾರುಗಳಲ್ಲಿ ಒಂದು. ಬೋಗಾಟಿ ಚಿರೋನ್ ಕಾರಿನ ಬೆಲೆ 35, 34,00,000 ರೂಪಾಯಿ. ಮರ್ಸಿಡಿಸ್ ಬೆಂಜ್ ಕಂಪನಿಯ ಇಂಜಿನ್ ಒನ್ ಸೂಪರ್ ಕಾರಿನ ಬೆಲೆ 28 ಕೋಟಿ ರೂಪಾಯಿಯಾಗಿದೆ. ಸವರ ಬೋಗಾಟಿ ಲಾ ವೈಚರ್ ನೊಯ್ರ ಕಾರು ವಿಶ್ವದ ಅತ್ಯಂತ ಶ್ರೀಮಂತ ಕಾರು. ಈ ಕಾರು ಆರ್ಡರ್ ಇದ್ದರೆ ಮಾತ್ರ ಪ್ರೊಡಕ್ಷನ್ ಗೆ ಹೋಗುತ್ತದೆ. ಈ ಕಾರಿನ ಬೆಲೆ 141 ಕೋಟಿ ರೂಪಾಯಿಯಾಗಿದೆ. ಈ ಕಾರನ್ನು ಶ್ರೀಸಾಮಾನ್ಯನಿಗೆ ಖರೀದಿಸಲು ಸಾಧ್ಯವಿಲ್ಲ. ಪ್ರತಿಯೊಬ್ಬರಿಗೂ ತಮ್ಮದೇ ಆದ ಒಂದು ಒಳ್ಳೆಯ ಕಂಪನಿಯ ಕಾರನ್ನು ಖರೀದಿಸಬೇಕು ಎಂಬ ಆಸೆ ಇರುತ್ತದೆ. ತಮ್ಮ ಕನಸಿನ ಕಾರನ್ನು ಎಲ್ಲರೂ ಖರೀದಿಸಿ ಅದರಲ್ಲಿ ಓಡಾಡಬೇಕು ಅದರಲ್ಲಿ ಸಿಗುವ ಖುಷಿ ಉತ್ತಮ.

Leave A Reply

Your email address will not be published.

error: Content is protected !!