ಸೊಳ್ಳೆಗಳ ಕಾಟವೇ ಇಲ್ಲಿದೆ ಸುಲಭ ಉಪಾಯ

ಸೊಳ್ಳೆಗಳು ಕಚ್ಚುವುದರಿಂದ ನಾನಾ ರೀತಿಯ ರೋಗಗಳು ಬರುತ್ತವೆ. ಸುಳ್ಳುಗಳು ಮಳೆಗಾಲದಲ್ಲಿ ಜಾಸ್ತಿ ಕಂಡುಬರುತ್ತವೆ. ಸೊಳ್ಳೆಗಳಿಂದ ಹಲವಾರು ಅಪಾಯಕಾರಿ ರೋಗಗಳ ಸಹ ಬರುತ್ತದೆ. ಹಾಗಾಗಿ ನಮ್ಮ ಮನೆಯ ಸುತ್ತಮುತ್ತಲೂ ಸೊಳ್ಳೆಗಳು ಬರದಂತೆ ಹೇಗೆ ನಮ್ಮನ್ನು ನಾವು ರಕ್ಷಿಸಿಕೊಳ್ಳುವುದು ಅನ್ನೋದರ ಬಗ್ಗೆ ತಿಳಿದುಕೊಳ್ಳೋಣ.

ಸೊಳ್ಳೆಗಳನ್ನು ಓಡಿಸಲು ಕಹಿಬೇವಿನ ಎಲೆ ತುಂಬಾನೇ ಸಹಾಯಮಾಡುತ್ತದೆ ಕಹಿ ಬೇವಿನ ಎಲೆಯ ವಾಸನೆಗೆ ಸೊಳ್ಳೆಗಳು ಓಡಿಹೋಗುತ್ತದೆ. ಕೈ ಬೇವಿನ ಎಲೆಗಳನ್ನು ಬಳೆಸಿಕೊಂಡು ಮಾತ್ರೆಗಳನ್ನು ಆಗಿ ಮಾಡಿ ಅದರ ಮೂಲಕ ಸೊಳ್ಳೆಗಳನ್ನು ಓಡಿಸಬಹುದು. ಕೈ ಬೇವಿನ ಎಲೆಯನ್ನು ಬಳಸಿಕೊಂಡು ಸೊಳ್ಳೆಗಳನ್ನು ಹೇಗೆ ಓಡಿಸುವುದು ಹಾಗೂ ಮಾತ್ರೆಗಳನ್ನು ಹೇಗೆ ಮಾಡುವುದನ್ನು ದಿನ ತಿಳಿದುಕೊಳ್ಳೋಣ. ಕಹಿಬೇವಿನ ಎಲೆಗಳನ್ನು ಕೊಯ್ದು ತಂದು ಅದನ್ನು ಸ್ವಚ್ಛವಾಗಿ ತೊಳೆದು ಒಂದು ಮಿಕ್ಸಿ ಜಾರಿಗೆ ಎಲೆಗಳನ್ನು ಹಾಕಿ ಸ್ವಲ್ಪವೇ ನೀರನ್ನು ಹಾಕಿ ಚೆನ್ನಾಗಿ ಪೇಸ್ಟ್ ತರ ಮಾಡಿಕೊಂಡು ಒಂದೆರಡು ದಿನಗಳ ಕಾಲ ಬಿಸಿಲಿನಲ್ಲಿ ಒಣಗಿಸಬೇಕು.

ಬಿಸಿಲಿನಲ್ಲಿ ಒಣಗಿಸಿ ತಯಾರಾಗಿರುವಂತೆ ಬೇವಿನ ಮಾತ್ರೆಗಳನ್ನು ಹೇಗೆ ಬಳಸುವುದು ಅನ್ನೋದನ್ನು ನೋಡೋಣ. ಒಂದು ಬೇಡವಾದ ಲೇಟಾದ್ರೆ ಯಾವುದಕ್ಕಾದರೂ ಒಂದೆರಡು ಕರ್ಪೂರವನ್ನು ಹಾಕಿಕೊಂಡು ಅದರ ಜೊತೆಗೆ ಕಹಿಬೇವಿನ ಮಾತ್ರೆಯನ್ನು ಸಹ ಸೇರಿಸಿ ಅದಕ್ಕೆ ಬೆಂಕಿ ಹಚ್ಚ ಬೇಕು. ಕರ್ಪೂರ ಹಾಗೂ ಕಹಿಬೇವಿನ ಈ ವಾಸನೆಗೆ ಸೊಳ್ಳೆಗಳು ಓಡಿಹೋಗುತ್ತವೆ ಹೊಗೆಯನ್ನು ಮನೆಯ ಮೂಲೆ ಮೂಲೆಗೂ ಸೋಕಿಸಬಹುದು. ರಾಸಾಯನಿಕಗಳಿಂದ ಇರುವ ಗಿಡಗಳನ್ನು ಬೆಳೆಸುವ ಬದಲು ಈ ರೀತಿ ನೈಸರ್ಗಿಕವಾಗಿ ನಾವೇ ಮನೆಯಲ್ಲಿ ತಯಾರಿಸಿಕೊಂಡು ಸೊಳ್ಳೆಗಳನ್ನು ಓಡಿಸುವುದರಿಂದ ನಮ್ಮ ಆರೋಗ್ಯಕ್ಕೂ ಸಹ ಯಾವುದೇ ರೀತಿಯ ಅಡ್ಡ ಪರಿಣಾಮ ಉಂಟಾಗುವುದಿಲ್ಲ. ಒಂದು ವೇಳೆ ಕಹಿ ಬೇವಿನ ಎಲೆಗಳು ಸಿಗದೇ ಇದ್ದಲ್ಲಿ ಬೇವಿನ ಎಲೆಯ ಬದಲು ಆಯುರ್ವೇದ ಅಂಗಡಿಗಳಲ್ಲಿ ಸಿಗುವಂತಹ ಕಹೀಬೇವಿನ ಎಣ್ಣೆ ಅದನ್ನು ಬಳಸಿ ದೀಪವನ್ನು ಹಚ್ಚಿ ಆ ಮೂಲಕ ಸಹ ಸೊಳ್ಳೆಗಳನ್ನು ಓಡಿಸಬಹುದು.

Leave A Reply

Your email address will not be published.

error: Content is protected !!