ಒಣಕೆಮ್ಮಿಗೆ ಬೆಸ್ಟ್ ಮನೆಮದ್ದು ಮನೆಯಲ್ಲೇ ಮಾಡಿಕೊಳ್ಳಬಹುದು

ನಾವಿಂದು ನಿಮಗೆ ಒಣ ಕೆಮ್ಮನ್ನು ಹೋಗಲಾಡಿಸುವುದಕ್ಕೆ ಮನೆಯಲ್ಲೇ ಮಾಡಿಕೊಳ್ಳಬಹುದಾದ ಉತ್ತಮ ಪರಿಣಾಮಕಾರಿಯಾದ ಔಷಧವನ್ನು ಹೇಗೆ ತಯಾರಿಸಬಹುದು ಅದರಿಂದ ಯಾವ ರೀತಿ ಪ್ರಯೋಜನವಾಗುತ್ತದೆ ಎಂಬುದನ್ನು ತಿಳಿಸಿ ಕೊಡುತ್ತೇವೆ. ಈ ಮನೆಮದ್ದನ್ನು ನೀವು ಮಾಡುವುದರಿಂದ ಖಂಡಿತವಾಗಿಯೂ ಒಣಕೆಮ್ಮು ಸಂಪೂರ್ಣವಾಗಿ ಕಡಿಮೆಯಾಗುತ್ತದೆ ಹಾಗಾದರೆ ಔಷಧವನ್ನು ತಯಾರಿಸುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ.

ಯಾವಾಗ ನಮ್ಮ ಲಂಕ್ಸ್ ಅಥವಾ ಶ್ವಾಸಕೋಶದಲ್ಲಿ ಕಫ ಗಟ್ಟಿಯಾಗುತ್ತದೆ ಅದನ್ನೇ ಒಣ ಕಫ ಎಂದು ಹೇಳುತ್ತಾರೆ. ಇದನ್ನ ನಾಯಿಕೆಮ್ಮು ಒಣಕೆಮ್ಮು ಎಂದು ಕೂಡ ಹೇಳುತ್ತಾರೆ. ನಿಮಗೆಲ್ಲ ತಿಳಿದಿರುವಂತೆ ಕೆಮ್ಮು ಹೆಚ್ಚುದಿನ ಇರಬಾರದು ಎರಡು ವಾರಕ್ಕಿಂತ ಹೆಚ್ಚು ಕೆಮ್ಮು ಕಾಣಿಸಿಕೊಂಡರೆ ಅದು ಟಿಬಿ ಕಾಯಿಲೆಯ ಲಕ್ಷಣವಾಗಿರಬಹುದು ಅಥವಾ ನಿಮೋನಿಯಾ ಕಾಯಿಲೆ ಬರುವುದಕ್ಕೆ ಅವಕಾಶ ಮಾಡಿಕೊಡಬಹುದು. ಜೊತೆಗೆ ಉಸಿರಾಟದ ಸಮಸ್ಯೆಗೆ ಕೂಡ ದಾರಿಮಾಡಿಕೊಡುತ್ತದೆ. ಅಸ್ತಮ ಲಂಕ್ಸ್ ಇಂಪ್ಲಿಮೆಶನ್ ಅಥವಾ ಶ್ವಾಸಕೋಶದ ಕಾಯಿಲೆಗಳಿಗೆ ಕೆಮ್ಮು ಕಾರಣವಾಗಿರಬಹುದು.

ಹಾಗಾಗಿ ನಮ್ಮ ಲಂಗ್ಸ್ ಅಲ್ಲಿ ಶ್ವಾಸಕೋಶದಲ್ಲಿ ಕಫ ಗಟ್ಟಿಯಾಗದಂತೆ ನೋಡಿಕೊಳ್ಳಬೇಕು ಹಾಗೆ ಮಾಡುವುದಕ್ಕೆ ಕೆಲವೊಂದು ಮನೆಯ ಔಷಧಗಳಿವೆ ಅದನ್ನು ನೀವು ಮಾಡಿಕೊಂಡರೆ ಒಣ ಕಫದಿಂದ ದೂರವಿರಬಹುದು. ಮನೆ ಮದ್ದನ್ನು ಮಾಡಿಕೊಳ್ಳುವುದಕ್ಕೆ ಯಾವ ವಸ್ತುಗಳು ಬೇಕು ಎಂದರೆ ಅರ್ಧ ಚಮಚ ಜೇಷ್ಠ ಮದ್ದು ಜೊತೆಗೆ ಹತ್ತು ತುಳಸಿ ಎಲೆಗಳು ಹಾಗೆ ಒಂದು ಚಮಚ ಜೇನುತುಪ್ಪ ಈ ಮೂರರ ಮಿಶ್ರಣವನ್ನು ದಿನದಲ್ಲಿ ಮೂರು ಸಲ ತಿನ್ನಬೇಕು ಊಟವಾದ ಅರ್ಧ ಗಂಟೆ ನಂತರ ದಿನದಲ್ಲಿ ಮೂರು ಸಲ ಇದನ್ನು ತೆಗೆದುಕೊಳ್ಳಬೇಕು. ಇದು ಒಣ ಕಫ ಅಥವಾ ಒಣ ಕೆಮ್ಮನ್ನು ಬೇಗ ಕಡಿಮೆ ಮಾಡುತ್ತದೆ.

ಇನ್ನೊಂದು ಮನೆ ಔಷಧವನ್ನು ಮಾಡಿಕೊಳ್ಳುವುದಕ್ಕೆ ಬೇಕಾದಂತಹ ವಸ್ತುಗಳು ಎರಡು ಚಿಟಿಕೆ ಕಾಳುಮೆಣಸಿನ ಪುಡಿ ಅರ್ಧ ಚಮಚ ಕಲ್ಲುಸಕ್ಕರೆ ಮತ್ತು ಒಂದು ಚಮಚ ಜೇನುತುಪ್ಪ. ಈ ಮೂರರ ಮಿಶ್ರಣವು ಕೂಡ ಕಫ ಅಥವಾ ಕೆಮ್ಮನ್ನು ಕಡಿಮೆ ಮಾಡುವುದಕ್ಕೆ ತುಂಬಾ ಸಹಾಯಕವಾಗಿದೆ. ಇದನ್ನು ಸಹ ದಿನದಲ್ಲಿ ಮೂರರಿಂದ ನಾಲ್ಕು ಬಾರಿ ತೆಗೆದುಕೊಂಡರೆ ಉತ್ತಮ ಪರಿಣಾಮ ಉಂಟಾಗುತ್ತದೆ. ಮೂರನೆಯ ಮನೆಮದ್ದನ್ನು ಮಾಡಿಕೊಳ್ಳುವುದಕ್ಕೆ ಬೇಕಾದಂತಹ ವಸ್ತುಗಳು ನಾಲ್ಕರಿಂದ ಐದು ಲವಂಗ ಮತ್ತು ತುಳಸಿ ಎಲೆಗಳು. ನಾಲ್ಕರಿಂದ ಐದು ಲವಂಗವನ್ನು ಲೈಟಾಗಿ ಹುರಿದುಕೊಳ್ಳಬೇಕು. ಇದರ ಜೊತೆಗೆ ಹತ್ತು ತುಳಸಿ ಎಲೆಗಳನ್ನು ಸೇರಿಸಿ ಅದನ್ನು ಹಾಗೇ ಜಗಿದು ತಿನ್ನಬೇಕು ದಿನದಲ್ಲಿ ಒಂದೆರಡು ಬಾರಿ ಈ ರೀತಿಯಾಗಿ ಮಾಡುವುದರಿಂದ ಕಫ ಕರಗುತ್ತದೆ ಕೆಮ್ಮು ಕೂಡ ಬೇಗ ಗುಣವಾಗುತ್ತದೆ.

ಇನ್ನೊಂದು ಉತ್ತಮವಾದ ಮನೆಮದ್ದನ್ನು ಮಾಡಿಕೊಳ್ಳುವುದಕ್ಕೆ ಅರ್ಧ ಇಂಚು ಅರಿಶಿನದ ಕೊಂಬನ್ನು ತುಪ್ಪದಲ್ಲಿ ಸ್ವಲ್ಪ ಹುರಿದುಕೊಳ್ಳಬೇಕು ಅದನ್ನು ರಾತ್ರಿ ಮಲಗುವಾಗ ಬಾಯಲ್ಲಿ ಹಾಕಿಕೊಂಡು ಸ್ವಲ್ಪ ಹೊತ್ತು ಹಾಗೆ ಇಟ್ಟುಕೊಳ್ಳಬೇಕು ನಂತರ ಅದನ್ನು ಜಗಿದು ತಿನ್ನಬೇಕು ಹೀಗೆ ಒಂದು ವಾರದ ತನಕ ಮಾಡಿದರೆ ಕಫ ಕರಗುತ್ತದೆ ಜೊತೆಗೆ ಕೆಮ್ಮು ಕೂಡ ಕಡಿಮೆಯಾಗುತ್ತದೆ. ಈ ರೀತಿಯಾಗಿ ಸುಲಭವಾಗಿ ಮನೆಯಲ್ಲಿಯೇ ಸಿಗುವ ವಸ್ತುಗಳನ್ನು ಬಳಸಿಕೊಂಡು ಔಷಧಗಳನ್ನು ತಯಾರಿಸಿಕೊಳ್ಳಬಹುದು ಇದರಲ್ಲಿ ಯಾವುದಾದರೂ ಒಂದು ಔಷಧವನ್ನು ಒಂದು ವಾರ ನಿರಂತರವಾಗಿ ತೆಗೆದುಕೊಳ್ಳುವುದರಿಂದ ನೀವು ಒಣ ಕಫ ಮತ್ತು ಒಣ ಕೆಮ್ಮಿನಿಂದ ಮುಕ್ತಿಯನ್ನು ಪಡೆಯಬಹುದಾಗಿದೆ.

Leave a Comment

error: Content is protected !!