ಫಿಡ್ಸ್ ಏಕೆ ಬರುತ್ತದೆ? ಬಹಳಷ್ಟು ಜನಕ್ಕೆ ಗೊತ್ತಿಲ್ಲದ ಸತ್ಯ ಸತ್ಯತೆಗಳಿವು

ಎಲ್ಲರಿಗೂ ಕೆಲವೊಂದು ಪ್ರಶ್ನೆಗಳು ಹುಟ್ಟುವುದು ಸಹಜವಾಗಿದೆ. ವಯಸ್ಸಿಗೆ ತಕ್ಕಂತೆ ಮನುಷ್ಯನ ಬುದ್ಧಿ ಕೂಡ ಬದಲಾವಣೆ ಆಗುತ್ತಾ ಹೋಗುತ್ತದೆ. ನಾವು ಇಲ್ಲಿ ತಲೆಯಲ್ಲಿ ಹುಟ್ಟಿಕೊಳ್ಳುವ ಕೆಲವು ಪ್ರಶ್ನೆಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಫಿಡ್ಸ್ ಏಕೆ ಬರುತ್ತದೆ?
ಮನುಷ್ಯನ ಮೆದುಳು ದೇಹದಲ್ಲಿ ನಡೆಯುವ ಎಲ್ಲಾ ಕೆಲಸಗಳನ್ನು ನಿಯಂತ್ರಣದಲ್ಲಿ ಇಡುತ್ತದೆ. ಯಾವುದೇ ಕೆಲಸ ಆಗಬೇಕು ಎಂದರು ಮೆದುಳು ಸೂಚನೆ ನೀಡಿದಾಗ ಮಾತ್ರ ಆಗುತ್ತದೆ. ಪ್ರತಿ ಸೆಕೆಂಡ್ ಗೆ 70 ರಿಂದ 80 ಸಿಗ್ನಲ್ ಗಳು ಸಿಗುತ್ತವೆ. ಕೆಲವು ಸಮಯದಲ್ಲಿ ಮೆದುಳಿನಲ್ಲಿ ಇರುವ ರಾಸಾಯನಿಕ ಕ್ರಿಯೆಯ ಮೂಲಕ 150 ರಿಂದ 180ಕ್ಕೆ ಸಿಗ್ನಲ್ ಗಳು ಏರಿಕೆಯಾಗುತ್ತದೆ. ಆಗ ದೇಹದ ಭಾಗಗಳು ಬಹಳ ವೇಗದಲ್ಲಿ ಶೇಕ್ ಆಗುತ್ತವೆ. ಇದರಿಂದ ಫಿಡ್ಸ್ ಉಂಟಾಗುತ್ತದೆ.

ಜೇನುಹುಳುಗಳು ಒಂದೇ ಸ್ಥಿತಿಯಲ್ಲಿ ಇರುವುದಿಲ್ಲ ಏಕೆ?
ಅದಕ್ಕೆ ಕಾರಣವೇನೆಂದರೆ ಒಂದು ಜೇನುಹುಳು ಮತ್ತೊಂದು ಹುಳಕ್ಕೆ ಕದಲುತ್ತಾ ಸಂದೇಶವನ್ನು ನೀಡುತ್ತದೆ. ಸಂದೇಶ ಏನೆಂದರೆ ಮುಂದೆ ಎಲ್ಲಿ ಹೋಗಬೇಕು ಏನು ಮಾಡಬೇಕು ಎನ್ನುವುದು. ಜೇನುಹುಳುಗಳು ಅಲ್ಲಿಯೇ ಹಾರುತ್ತಿದ್ದರೆ ಅಲ್ಲಿಯೇ ಹತ್ತಿರದಲ್ಲಿ ಜೇನುಹುಳುಗಳ ಗೂಡು ಇದೆ ಎಂದು ಅರ್ಥ. ಇದನ್ನು ಹುಳುಗಳು ಅರ್ಥ ಮಾಡಿಕೊಳ್ಳುತ್ತವೆ.

ಅಗ್ನಿ ಕುಂಡಗಳ ಮೇಲೆ ನಡೆದರೆ ಕಾಲು ಕೆಲವರಿಗೆ ಸುಡುವುದಿಲ್ಲ ಏಕೆ?
ಬೆಂಕಿ ಮನುಷ್ಯನ ಚರ್ಮಕ್ಕೆ ತಾಗಬೇಕು ಎಂದಾದರೆ ಅದಕ್ಕೆ ಒಂದು ನಿಗದಿತ ಅವಧಿ ಇರುತ್ತದೆ. ಕಟ್ಟಿಗೆಯನ್ನು ಚೆನ್ನಾಗಿ ಉರಿಸಿ ಇದ್ದಿಲುಗಳನ್ನು ಹಾಕಿರುತ್ತಾರೆ. ಇದ್ದಿಲಿನಲ್ಲಿ ಇರುವ ಬಿಸಿ ಚರ್ಮಕ್ಕೆ ತಾಗಬೇಕು ಎಂದಾದರೆ ಸ್ವಲ್ಪ ಸಮಯ ಬೇಕು. ಒಂದು ಕಾಲನ್ನು ಇಟ್ಟು ತಕ್ಷಣವೇ ಇನ್ನೊಂದು ಕಾಲನ್ನು ಮುಂದಕ್ಕೆ ಇಡುತ್ತಾರೆ. ಹೀಗಾಗಿ ಕಾಲು ಸುಡುವುದಿಲ್ಲ. ಹಾಗೆಯೇ ಇದರ ಮೇಲೆ ಸ್ವಲ್ಪ ಬೂದಿಯನ್ನು ಹಾಕಿರುತ್ತಾರೆ. ಇದರಿಂದ ಬಿಸಿ ಪಾದಗಳಿಗೆ ಸ್ವಲ್ಪ ಕಡಿಮೆ ತಾಗುತ್ತದೆ.

ಮನುಷ್ಯನಿಗೆ ಐ ಸೈಟ್ ಏಕೆ ಬರುತ್ತದೆ? ದೂರ ದೃಷ್ಟಿಗಳು ಕಾಣದೇ ಇದ್ದರೆ ಅದನ್ನು ಮಯೋಪಿಯಾ ಎಂದು ಕರೆಯಲಾಗುತ್ತದೆ. ಹಾಗೆಯೇ ಹತ್ತಿರದ ದೃಷ್ಟಿಗಳು ಕಾಣದೇ ಇದ್ದರೆ ಅದನ್ನು ಹೈಪರ್ ಮೆಟ್ರೋಪಿಯಾ ಎಂದು ಕರೆಯಲಾಗುತ್ತದೆ. ಅತಿ ಹೆಚ್ಚು ಟಿವಿ ನೋಡುವುದು, ರಾತ್ರಿಯಲ್ಲಿ ಮೊಬೈಲ್ ನೋಡುವುದು ಮತ್ತು ಅತಿ ಹೆಚ್ಚು ಕಂಪ್ಯೂಟರ್ ನೋಡುವುದರಿಂದ ಮತ್ತು ಆರೋಗ್ಯಕರ ಆಹಾರ ಸೇವನೆ ಮಾಡದೇ ಇರುವುದರಿಂದ ಕಣ್ಣಿನಲ್ಲಿ ಇರುವ

Leave A Reply

Your email address will not be published.

error: Content is protected !!