ಒಳ್ಳೆ ಆರೋಗ್ಯದ ಗುಟ್ಟೇನು? ಸದ್ಗುರು ಅವರ ಮಾತು ಕೇಳಿ ವಿಡಿಯೋ

ಆರೋಗ್ಯ ಇಲ್ಲದೆ ಜೀವನವಿಲ್ಲ ಅದನ್ನು ಪಡೆಯುವ ಸಾಮರ್ಥ್ಯ ನಮ್ಮಲ್ಲೇ ಇದೆ ಆದರೆ ಅದಕ್ಕಾಗಿ ಸರಿಯಾದ ವಿಧಾನವನ್ನು ಅನುಸರಿಸಬೇಕು. ಸದ್ಗುರು ಅವರ ಪ್ರಕಾರ ಶರೀರ ಹೇಗೆ ರಚಿತವಾಗಿದೆ ನಾವು ಹೇಗೆ ನಮ್ಮ ಶರೀರವನ್ನು ನೋಡಿಕೊಳ್ಳಬೇಕು ಎಂಬ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.

ಈ ದೇಹ ನಿರ್ಮಿತವಾಗಿದ್ದು ಒಳಗಿನ ಅಂತರಾತ್ಮದಿಂದ ಈ ದೇಹದ ಮೆನುಫೆಕ್ಚರರ್ ಒಳಗಿದ್ದಾನೆ. ರಿಪೇರಿ ಕೆಲಸ ಇದ್ದರೆ ಮೆನುಪೆಕ್ಚರರ್ ಹತ್ತಿರ ಹೋಗುತ್ತೀರಾ ಅಥವಾ ಲೋಕಲ್ ಮೆಕ್ಯಾನಿಕ್ ಹತ್ತಿರ ಹೋಗುತ್ತೀರಾ ಮೆನುಪಾಕ್ಚರರ್ ಹತ್ತಿರವೇ ಹೋಗುವುದು ಸರಿ ಆದರೆ ಹೋಗುವುದು ಗೊತ್ತಿಲ್ಲ ಅಂದರೆ ಮೆಕ್ಯಾನಿಕ್ ಹತ್ತಿರ ಹೋಗಿ ಅಸ್ತವ್ಯಸ್ತ ಮಾಡಿಕೊಳ್ಳಬೇಕಾಗುತ್ತದೆ. ಈಗ ಇರುವ ವೈಧ್ಯಕೀಯ ವಿಜ್ಞಾನ ಒಂದುವೇಳೆ ಇಲ್ಲದೇ ಇದ್ದರೆ ಅರ್ಧಕ್ಕಿಂತ ಹೆಚ್ಚು ಜನರು ಸತ್ತು ಹೋಗುತ್ತಿದ್ದರು. 1947 ರಲ್ಲಿ ಭಾರತೀಯರ ಸರಾಸರಿ ಜೀವಿತಾವಧಿ 28 ವರ್ಷಗಳು. ಈಗಿನ ಭಾರತೀಯ ಜೀವಿತಾವಧಿ ವರ್ಷ 64. ವೈಧ್ಯಕೀಯ ಕ್ಷೇತ್ರದಲ್ಲಿ ಆಗಿರುವ ಹಲವು ಆಧುನಿಕ ಬದಲಾವಣೆಗಳು ಜೀವಿತಾವಧಿ ಹೆಚ್ಚಾಗಲು ಕಾರಣವಾಗಿದೆ. ವೈಧ್ಯಕೀಯ ವಿಜ್ಞಾನ ಎನ್ನುವುದು ಬಹಳ ಅಪೂರ್ವವಾದದ್ದು. ಶರೀರವನ್ನು ನಿರ್ಮಿಸಿದ ಮೂಲದ ಬಳಿ ಹೋಗಲು ತಿಳಿದಿದ್ದರೆ ಶರೀರದಲ್ಲಿ ನೀವೆ ನಿರ್ಮಿಸಿಕೊಳ್ಳುವ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಬಹುದು. ಸಾಂಕ್ರಾಮಿಕ ಹಾಗೂ ದೀರ್ಘಕಾಲಿಕ ಎಂಬ ಎರಡು ರೀತಿಯ ಖಾಯಿಲೆಗಳಿವೆ. ಹೊರಗಿನ ವೈರಾಣುಗಳ ಆಕ್ರಮಣದಿಂದ ಸೋಂಕಿನ ರೋಗಗಳು ಕಾಣಿಸಿಕೊಳ್ಳುತ್ತವೆ. ಈ ಸಮಸ್ಯೆಗೆ ವೈದ್ಯರ ಬಳಿ ಹೋಗುವುದು ಪರಿಹಾರವಾಗಿದೆ. ಆದರೆ ನೂರಕ್ಕೆ 70% ರೋಗಗಳು ಸ್ವಯಂಕೃತವಾಗಿದೆ. ಅವು ಶರೀರದ ಒಳಗಿನಿಂದಲೇ ಸೃಷ್ಟಿಯಾಗಿವೆ.

ಈ ಸಮಸ್ಯೆಯನ್ನು ಶರೀರದ ಒಳಗೆ ಸುಲಭವಾಗಿ ಪರಿಹರಿಸಬಹುದು. ದೇಹದ ಪ್ರತಿ ಕಣಗಳು ಆರೋಗ್ಯಕ್ಕೆ ಸೃಷ್ಟಿಯಾಗಿವೆ. ಅದು ನಿಮ್ಮ ವಿರುದ್ಧವಾಗಿ ಕೆಲಸ ಮಾಡುತ್ತಿದೆ ಎಂದರೆ ಅದನ್ನು ನೀವು ಸಂತೋಷವಾಗಿ ಇಟ್ಟಿಲ್ಲ ಎಂದು ಅರ್ಥ. ದೇಹದ ಭಾಗಗಳ ಮೇಲೆ ಹೆಚ್ಚು ಗಮನ ಕೊಡಬೇಕು ಅದಕ್ಕೆ ತನ್ನದೇ ಆದ ವಿಧಾನಗಳಿವೆ ಧ್ಯಾನ, ಯೋಗ, ಒಳ್ಳೆಯ ಮಾತನಾಡುವುದು ಹೀಗೆ ಮಾಡುವುದರಿಂದ ಶರೀರದ ಭಾಗಗಳನ್ನು ಸರಿಯಾಗಿ ನೋಡಿಕೊಳ್ಳಬಹುದು. ಇದು ಪವಾಡವಲ್ಲ ನಮ್ಮ ತರ್ಕದ ಗ್ರಹಿಕೆಗೆ ಮೀರಿದ ವಿಷಯ ನಡೆದರೆ ಅದನ್ನು ಪವಾಡ ಎನ್ನುತ್ತೇವೆ. ಶರೀರದ ಒಳಗಿನ ಭಾಗಗಳ ಬಗ್ಗೆ ಗಮನ ಕೊಡುವುದು ಒಂದು ಆಳವಾದ ತಿಳುವಳಿಕೆ ಅಷ್ಟೆ. ಇದನ್ನು ಪ್ರತಿಯೊಬ್ಬರು ಪಾಲಿಸಲೇಬೇಕು ಆಗ ಮಾತ್ರ ನಮ್ಮ ಶರೀರದ ಭಾಗಗಳು ಸಂತೋಷವಾಗಿ ತಮ್ಮ ಕಾರ್ಯವನ್ನು ಸಮರ್ಪಕವಾಗಿ ನಿರ್ವಹಿಸುತ್ತದೆ. ನಮ್ಮ ಶರೀರದ ಆರೋಗ್ಯವನ್ನು ಕಾಪಾಡಿಕೊಳ್ಳುವ ಸಾಮರ್ಥ್ಯ ನಮ್ಮಲ್ಲೇ ಇದೆ ಆದರೆ ತಾಳ್ಮೆಯಿಂದ ಗಮನವಿಟ್ಟು ಕೆಲಸ ಮಾಡಬೇಕು. ಈ ಮಾಹಿತಿಯನ್ನು ಎಲ್ಲರಿಗೂ ತಪ್ಪದೇ ತಿಳಿಸಿ.

Leave a Comment

error: Content is protected !!