ನೀವೇನಾದ್ರು ಪ್ಲಾಸ್ಟಿಕ್ ಬಾಟಲ್ ನಲ್ಲಿ ನೀರು ಕುಡಿದ್ರೆ ಏನಾಗುತ್ತೆ ಗೊತ್ತೇ?

ಸಾಕಷ್ಟು ಜನರು ಪ್ರಯಾಣದ ವೇಳೆ ಅಂಗಡಿಯಲ್ಲಿ ದೊರೆಯುವ ಪ್ಲಾಸ್ಟಿಕ್ ನೀರಿನ ಬಾಟಲಿಗಳನ್ನು ಖರೀದಿಸಿ ಆಯಾಸ ನೀಗಿಸಿಕೊಳ್ಳುತ್ತಾರೆ. ನಂತರ ಅದೇ ಬಾಟಲಿಯನ್ನು ಮತ್ತೆ ಬಳಸಿಕೊಂಡು ನೀರು ಕುಡಿಯುತ್ತಾರೆ. ಆದರೆ ಆ ಬಾಟಲಿಗಳನ್ನು ಮತ್ತೆ ಬಳಸುವುದು ಎಷ್ಟು ಅಪಾಯಕಾರಿ ಎನ್ನುವುದನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ವಿಶೇಷವಾಗಿ ಅಂಗಡಿಗಳಲ್ಲಿ ಸಿಗುವ ಪ್ಲಾಸ್ಟಿಕ್ ಬಾಟಲಿಗಳಲ್ಲಿ ಅಂಟಿಸಿರುವ ಸ್ಟಿಕರ್ಸ್​​ಗಳ ಮೇಲೆ ಒಮ್ಮೆ ಕಣ್ಣು ಹಾಯಿಸಿನೋಡಿ. ತ್ರಿಕೋನಾಕರಾದ ಗುರುತಿನ ನಡುವೆ ಇಲ್ಲವೆ ಅಕ್ಕ ಪಕ್ಕದಲ್ಲಿ PET, PC, PP, PETE, PVC, HDPE, HDP, LDPE ಎಂದು ಬರೆದಿರಲಾಗುತ್ತದೆ. ಈ ಪದಗಳು ಏನು ಹೇಳುತ್ತವೆ? ಎಂದು ತಿಳಿಯುವುದಾದರೆ ಈ ಪದಗಳು ನೀವು ಬಳಸುತ್ತಿರುವ ಪ್ಲಾಸ್ಟಿಕ್ ಬಾಟಲಿಯ ಗುಣಮಟ್ಟವನ್ನು ಹೇಳುತ್ತದೆ. ಅಂದರೆ ಈ ಪ್ಲಾಸ್ಟಿಕ್ ಬಾಟಲಿಯು ಬಳಕೆಗೆ ಯೋಗ್ಯವೇ ಅಲ್ಲವೇ? ಎಂಬುದನ್ನು ತಿಳಿಸುತ್ತದೆ. ನೀರಿನ ಬಾಟಲಿಯ ಬುಡದಲ್ಲಿ PET ಅಥವಾ PETE ಬರೆದುಕೊಂಡಿದ್ದರೆ ಎಚ್ಚರ. ಏಕೆಂದರೆ ಅಂತಹ ಬಾಟಲಿಗೆ ನೀರು ಹಾಕಿ ಬಳಸಿದರೆ ಅದರಲ್ಲಿ ವಿಷ ಪದಾರ್ಥ ಬಿಡುಗಡೆಯಾಗುತ್ತದೆ. ಆದ್ದರಿಂದ ಇಂತಹ ಬಾಟಲಿಗಳ ನೀರು ಕುಡಿಯುವುದು ಸುರಕ್ಷಿತವಲ್ಲ. PS ಎಂದು ಬರೆದುಕೊಂಡಿರುವ ಪ್ಲಾಸ್ಟಿಕ್‌ ಅನ್ನು ಮಗ್‌ಗಳನ್ನು ತಯಾರಿಸಲು ಬಳಸುತ್ತಾರೆ. ಇಂತಹ ಮಗ್‌ಗಳಲ್ಲಿ ಕಾಫಿ, ಟೀ, ಹಾಲಿನಂಥ ಬಿಸಿ ಪದಾರ್ಥಗಳನ್ನು ಹಾಕಿದರೆ ಅವು ಕಾರ್ಸಿನೋಜೆನಿಕ್ ಅನ್ನು ಬಿಡುಗಡೆ ಮಾಡುತ್ತವೆ.

ಬಾಟಲಿ ನೀರು ಶುದ್ಧವಾಗಿರುತ್ತದೆ ಯಾವುದೇ ರಾಸಾಯನಿಕಗಳಿರುವುದಿಲ್ಲ ಎಂಬ ನಂಬಿಕೆ ಜನರಲ್ಲಿ ಇದೆ. ಆದರೆ ಬಾಬಾ ಅಟೋಮಿಕ್‌ ರಿಸರ್ಚ್‌ ಸೆಂಟರ್ (BARC) ಪ್ರತೀ ಬಾರಿ ನೀವು ಬಾಟಲಿ ನೀರು ಕುಡಿಯುವಾಗ ಸಾಕಷ್ಟು ರಾಸಾಯನಿಗಳು ನಿಮ್ಮ ದೇಹಕ್ಕೆ ಸೇರುತ್ತದೆ ಎಂದು ಹೇಳಿದೆ. ಸಂಶೋಧನೆ ಪ್ರಕಾರ ನೀರಿನ ಶುದ್ಧೀಕರಣದ ವೇಳೆ ಹಾಗೂ ಬಾಟಲಿ ತುಂಬುವಾಗ ಸಾಕಷ್ಟು ರಾಸಾಯನಿಕಗಳು ನೀರಿನಲ್ಲಿ ಬೆರೆಯುತ್ತವೆ. ಈ ನೀರನ್ನು ಕುಡಿಯುವುದರಿಂದ ಆರೋಗ್ಯಕ್ಕಿಂತ ಅನಾರೋಗ್ಯವೇ ಹೆಚ್ಚು. ನೀರಿಗೆ ಸಂಬಂಧಿತ ಅನೇಕ ಕಾಯಿಲೆಗಳು ಬಾಟಲಿ ನೀರಿನಿಂದ ಬರುತ್ತಿದೆ ಆದ್ದರಿಂದ ಬಾಟಲಿ ನೀರಿನಿಂದ ದೂರವಿರಲು ವೈದ್ಯರೇ ಸಲಹೆ ನೀಡುತ್ತಿದ್ದಾರೆ. ಇತ್ತೀಚಿನ ಹತ್ತು ವರ್ಷಗಳಲ್ಲಿ ನೀರಿನಿಂದ ಬರುವ ಕಾಯಿಲೆಗಳು ಹೆಚ್ಚಾಗಿ ಕಂಡು ಬರುತ್ತಿದೆ. ಪ್ರಸಿದ್ಧ ಸೆಲೆಬ್ರಿಟಿ ನ್ಯೂಟ್ರಿಷಿಯನ್‌ ರುಜುತಾ ದಿವೇಕರ್‌ ಬಾಟಲ್‌ ನೀರಿಗೆ ಕಡಾಖಂಡಿತವಾಗಿ ತಿರಸ್ಕರಿಸಿ. ನೈಸರ್ಗಿಕವಾಗಿ ದೊರೆಯುವ 3 ಲೀಟರ್‌ನಿಂದ ಒಂದು ಲೀಟರ್‌ ಬಾಟಲಿ ನೀರು ತಯಾರಿಸಲಾಗುವುದು. ನಂತರ ಈ ನೀರನ್ನು ಅಧಿಕ ಬೆಲೆಗೆ ಮಾರಾಟ ಮಾಡಲಾಗುವುದು. ಅಲ್ಲದೆ ಬಾಟಲಿ ನೀರು ತುಂಬಲು ಬಳಸುವ ಪ್ಲಾಸ್ಟಿಕ್ ಭೂಮಿಯಲ್ಲಿ ಕರಗುವುದಿಲ್ಲ. ಆದ್ದರಿಂದ ಪ್ರಕೃತಿಗೆ ಹಾನಿಕಾರಕ ಎಂದಿದ್ದಾರೆ.

ನಾವು ಏನನ್ನು ಕುಡಿಯುತ್ತೇವೆ ಏನನ್ನು ತಿನ್ನುತ್ತೇವೆ ಮತ್ತು ಹೇಗೆ ತಿಂದು ಕುಡಿದು ಮಾಡುತ್ತೇವೆ ಎನ್ನುವುದರ ಮೇಲೆ ನಮ್ಮ ದೇಹದ ಆರೋಗ್ಯ ನಿರ್ಧಾರಿತ ಆಗಿರುತ್ತದೆ. ಈಗ ಮಾಡರ್ನ್ ಯುಗ ಆದರೂ ಸಹ ದೇವಸ್ಥಾನಗಳಲ್ಲಿ ಇನ್ನೂ ತಾಮ್ರದ ಪಾತ್ರೆಯಲ್ಲಿ ತೀರ್ಥ ಕೊಡುತ್ತಾರೆ. ಆಧುನಿಕ ಯುಗ ಬಹಳಷ್ಟು ಮುಂದುವರೆದಿದೆ ಎಂದು ಪ್ಲಾಸ್ಟಿಕ್ ಕಂಟೇನರ್ ಗಳಲ್ಲಿ ಸಹ ತೀರ್ಥ ನೀಡಬಹುದಿತ್ತು. ಆದರೆ ಹಾಗೆ ಮಾಡದೇ ಇನ್ನೂ ತಾಮ್ರದ ಪಾತ್ರೆಯಲ್ಲಿ ತೀರ್ಥ ಕೊಡಲು ಕಾರಣ ನಾವು ನೀರನ್ನ ಯಾವುದರಲ್ಲಿ ಇಡುತ್ತೇವೆ ಅದರ ಗುಣವನ್ನು ಹೀರಿಕೊಳ್ಳುವ ಶಕ್ತಿ ನೀರಿಗೆ ಇದೆ. ನಮಗೆ ತಿಳಿದೇ ಇದೆ ನೀರಿಗೆ ಬಣ್ಣ ಆಕಾರ ಗಾತ್ರ ಯಾವುದೂ ಇಲ್ಲ ನಾವು ಯಾವ ಪಾತ್ರೆಗೆ ಹಾಕುತ್ತೇವೆ ಅದರ ಆಕಾರ ಪಡೆದುಕೊಳ್ಳುತ್ತದೆ ಎಂದು. ಹಾಗೆಯೇ ಅದೇ ಪಾತ್ರೆ ಅಥವಾ ಮೆಟಲ್ ನ ಗುಣವನ್ನೂ ಸಹ ಹೀರಿಕೊಳ್ಳುತ್ತದೆ. ಪ್ಲಾಸ್ಟಿಕ್ ಬಳಕೆ ಮಾಡುವುದರಿಂದ ಕ್ಯಾನ್ಸರ್ ಮಾರಕ ರೋಗ ಬರುವುದು. ಇನ್ನು ಕೆಲವೊಮ್ಮೆ ಅನಿವಾರ್ಯ ಕಾರಣಗಳಿಂದಾಗಿ ಪ್ಲಾಸ್ಟಿಕ್ ಬಳಕೆ ಮಾಡಲೇಬೇಕಾಗುವುದು ಆಗ ಏನಾದರೂ ಬಿಸಿ ಪದಾರ್ಥವನ್ನು ಏನಾದರೂ ಪ್ಲಾಸ್ಟಿಕ್ ಲೋಟ ಅಥವಾ ಪ್ಲಾಸ್ಟಿಕ್ ವಸ್ತುವಿನಲ್ಲಿ ಹಾಕಿ ತಿಂದರೆ ಆಗ ಅನಾಹುತ ತಪ್ಪಿದ್ದಲ್ಲ ಕಟ್ಟಿಟ್ಟ ಬುತ್ತಿ ಎನ್ನಬಹುದು.

Leave A Reply

Your email address will not be published.

error: Content is protected !!