ಉರಿಮೂತ್ರ ನಿವಾರಿಸುವ ಜೊತೆಗೆ ಮೂತ್ರದಲ್ಲಿನ ಕಲ್ಲು ಕರಗಿಸುವ ಕಲ್ಲಂಗಡಿ!

ಸಾಮಾನ್ಯವಾಗಿ ಕಲ್ಲಂಗಡಿ ಹಣ್ಣನ್ನು ಬೇಸಿಗೆಯಲ್ಲಿ ಹೆಚ್ಚಾಗಿ ಸೇವಿಸುತ್ತಾರೆ, ಕಲ್ಲಂಗಡಿ ದೇಹಕ್ಕೆ ತಂಪು ನೀಡುವುದರ ಜತೆಗೆ ದೇಹದಲ್ಲಿನ ಕೆಲವೊಂದು ಸಮಸ್ಯೆಗಳಿಗೆ ನಿಯಂತ್ರಣ ಹಾಕುತ್ತದೆ. ಹೌದು ಕಲ್ಲಂಗಡಿ ಹಣ್ಣು ಸೇಚನೆಯಿಂದ ದೇಹಕ್ಕೆ ಎಷ್ಟೆಲ್ಲ ಲಾಭವಿದೆ ಹಾಗೂ ಇದರಲ್ಲಿರುವಂತ ಔಷದಿ ಗುಣಗಳು ಯಾವುವು ಅನ್ನೋದನ್ನ ಈ ಮೂಲಕ ತಿಳಿಯುವುದಾದರೆ, ಮೊದಲನೆಯದಾಗಿ ಉರಿ ಮೂತ್ರ ನಿವಾರಣೆಗೆ ಹೇಗೆ ಸಹಕಾರಿ ಅನ್ನೋದನ್ನ ತಿಳಿಯೋಣ,

ಎರಡರಿಂದ ನಾಲ್ಕು ಚಮಚಗಳಷ್ಟು ಕಲ್ಲಂಗಡಿಯ, ಬೀಜಗಳನ್ನು ಅಕ್ಕಿ ತೊಳೆದ ಎರಡನೆಯ ನೀರಿನಲ್ಲಿ ಅರೆದು ಸೋಸಿ, ಆ ನೀರನ್ನು ದಿನಕ್ಕೆ ಎರಡು ಬಾರಿ ನಾಲ್ಕುರು ದಿನಗಳ ಕಾಲ ಕುಡಿದರೆ ಉರಿ ಮೂತ್ರ ಗುಣವಾಗುತ್ತದೆ. ಇನ್ನು ಮೂತ್ರದಲ್ಲಿನ ಕಲ್ಲು ಕರಗಿಸಲು ಕಲ್ಲಂಗಡಿ ಹೇಗೆ ಉಪಯೋಗಕಾರಿ ಅನ್ನೋದನ್ನ ತಿಳಿಯುವುದಾದರೆ, ಕಲ್ಲಂಗಡಿ ಹಣ್ಣಿನ ರಸಕ್ಕೆ ಜೀರಿಗೆ ಪುಡಿ ಮತ್ತು ಸಕ್ಕರೆ ಬೆರಸಿ ಕುಡಿದರೆ ಮೂತ್ರ ತಡೆ ನಿವಾರಣೆಯಾಗುತ್ತದೆ. ಮೂತ್ರದಲ್ಲಿನ ಕಲ್ಲು ಕರಗುತ್ತದೆ ಇದನ್ನು ೩೦ ರಿಂದ ೪೦ ದಿನಗಳ ಕಾಲ ಮಾಡಬೇಕಾಗುತ್ತದೆ.

ನಿತ್ಯವೂ ಕಲ್ಲಂಗಡಿ ಬೀಜದ ಪುಡಿಯನ್ನು ಸಕ್ಕರೆಯೊಂದಿಗೆ ಸೇವಿಸಿದರೆ ಅದು ಶಕ್ತಿ ವರ್ಧಕ ದೇಹಕ್ಕೆ ಟಾನಿಕ್ ನಂತೆ ಕೆಲಸ ಮಾಡುತ್ತದೆ ದೇಹದಲ್ಲಿನ ಅಧಿಕ ರಕತ ಒತ್ತಡವನ್ನು ಕಡಿಮೆಗೊಳಿಸುತ್ತದೆ . ಬೀಜದ ಎಣ್ಣೆಯು ಜಂತು ಹುಳುಗಳನ್ನು ನಾಶ ಗೊಳಿಸುತ್ತದೆ. ಇನ್ನು ಕಲ್ಲಂಗಡಿ ಹಣ್ಣಿನ ರಸ ಜ್ವರಹರವಾಗಿದೆ.

ಹೃದಯಾಘಾತದಿಂದ ರಕ್ಷಿಸುತ್ತದೆ ಕಲ್ಲಂಗಡಿ ಹೌದು ಕಲ್ಲಂಗಡಿ ಹಣ್ಣಿನ ರಸದಲ್ಲಿ ಲ್ಯೂಕೋಪಿನ್ ಎಂಬ ಅಂಶವಿದ್ದು ಇದು ಹೃದಯಾಘಾತದಿಂದ ರಕ್ಷಣೆ ಒದಗಿಸುತ್ತದೆ. ಅಷ್ಟೇ ಅಲ್ಲದೆ ಕಲ್ಲಂಗಡಿ ಹಣ್ಣು ಮಧ್ಯ ಸೇವನೆಯ ದುಷ್ಪರಿಣಾಮಗಳನ್ನು ಕಡಿಮೆಗೊಳಿಸುತ್ತದೆ. ಇನ್ನು ಮುಖದ ಸೌಂದರ್ಯಕ್ಕೂ ಕಲ್ಲಂಗಡಿ ಸಹಕಾರಿ ಕಲ್ಲಂಗಡಿ ಹಣ್ಣಿನ ರಸದಿಂದ ಮುಖವನ್ನು ಆಗ್ಗಾಗೆ ಮಾಲೀಸು ಮಾಡಿದರೆ ಮುಖದ ಮೇಲಿನ ಕಲೆಗಳು ಮಾಯವಾಗಿ ಕಾಂತಿ ಹೆಚ್ಚುತ್ತದೆ.

Leave A Reply

Your email address will not be published.

error: Content is protected !!