
ಯಾವುದೇ ಡಿಗ್ರಿ ಇಲ್ಲದೆ ದುಡಿಯುವ ಛಲದೊಂದಿಗೆ ಕೋಟ್ಯಂತರ ರೂಪಾಯಿಗಳ ಒಡತಿಯಾದಳು ಈ ಹೆಣ್ಣುಮಗಳು
ಬುದ್ಧಿವಂತಿಕೆ, ಚಾಣಾಕ್ಷತನ ನಮ್ಮ ಜೊತೆಯಲ್ಲಿ ಇದ್ದರೆ ಯಾವುದೇ ಡಿಗ್ರೀ ಸಂಪಾದಿಸಿಯೇ ನಾವು ದುಡಿಯಬೇಕು ಅಂತ ಏನು ಇಲ್ಲ. ಕಡಿಮೆ ಓಡಿದವರ್ಯಾರು ದಡ್ಡರಲ್ಲ ಹೆಚ್ಚು ಓದಿದ ಮಾತ್ರಕ್ಕೆ ಅವರು ಅತಿ ಬುದ್ಧಿವಂತರು ಎಂದೂ ಅಲ್ಲ. ಇಲ್ಲಿ 28 ವರ್ಷದ ಹೆಣ್ಣು ಮಗಳೊಬ್ಬಳು ತನ್ನ ಚಿಕ್ಕ ವಯಸ್ಸಿನಲ್ಲೇ ಕೋಟ್ಯಂತರ ರೂಪಾಯಿಗಳ ಒಡತಿ ಆಗಿದ್ದಾಳೆ. ಅವಳು ಇಷ್ಟು ಚಿಕ್ಕ ವಯಸ್ಸಿನಲ್ಲಿ ಅಷ್ಟು ದೊಡ್ಡ ಸಾಧನೆ ಮಾಡಿದ್ದಾದರೂ ಹೇಗೆ ಅಂತ ತಿಳಿಸಿಕೊಡ್ತೀವಿ.
ಈಕೆಯ ಹೆಸರು ದೀಪಾಲಿ ಹುಟ್ಟಿದ್ದು ಗ್ವಾಲಿಯರ್ ನಲ್ಲಿ. ತಂದೆ ಮಗಳನ್ನ ಮುದ್ದಾಗಿ ಸಾಕಿ ಚೆನ್ನಾಗಿ ವಿಧ್ಯಾಭ್ಯಾಸ ಕೊಡಿಸುತ್ತ ಇದ್ದರು. ದೀಪಾಲಿ ಗೆ ಕೂಡ ತಾನು ಚೆನ್ನಾಗಿ ಓದಿ ಐಎಎಸ್ ಪಾಸ್ ಮಾಡಬೇಕೆಂಬ ಆಸೆ. ಆದರೆ ಈಕೆ ಪಿಯುಸಿ ಯಲ್ಲಿ ಇದ್ದಾಗ ಇವಳ ತಂದೆಯ ಬ್ಯುಸಿನೆಸ್ ನಷ್ಟಕ್ಕೆ ಸಿಲುಕಿ ಮಗಳನ್ನು ಓದಿಸಲು ಹಣ ಇಲ್ಲದಂತಾಯಿತು. ತನ್ನ ಓದಿಗಾಗಿ ತಂದೆ ಪಡುತ್ತಿರುವ ಕಷ್ಟ ನೋಡಿ ಓದನ್ನು ಅರ್ಧಕ್ಕೆ ನಿಲ್ಲಿಸಿ ತಂದೆಗೆ ಸಹಾಯ ಮಾಡಲು ಟಿಫಿನ್ ತಯಾರಿಸಿ ರಸ್ತೆಯ ಬದಿಯಲ್ಲಿ ಮಾರಾಟ ಮಾಡುವ ಮತ್ತು ಹಾಸ್ಟೆಲ್ ಗೆ ಅಡುಗೆ ಮಾಡಿಕೊಟ್ಟು ಅದರಿಂದ ಬಂದ ಹಣದಿಂದ ಮನೆಯನ್ನು ನಿರ್ವಹಿಸುತ್ತಿದ್ದಳು. ಆದರೂ ಕೈಯ್ಯಲ್ಲಿ ಹಣ ನಿಲ್ಲುತ್ತಿರಲಿಲ್ಲ.
ಆಗ ದೀಪಾಲಿ ಕೆಲಸ ಹುಡುಕಿಕೊಂಡು ಇಂದೋರ್ ಗೆ ಹೋಗಿ ಅಲ್ಲಿ ದಾಸ್ತಾನು ಅಂಗಡಿಯಲ್ಲಿ ಕೆಲಸಕ್ಕೆ ಸೇರಿಕೊಳ್ಳುತ್ತಾಳೆ. ಹೀಗೆ ಒಂದು ತಿಂಗಳು ಕಳೆದಮೇಲೆ ಪ್ರತಿದಿನ ಮಾರುಕಟ್ಟೆ ನೋಡುತ್ತಿದ್ದ ದೀಪಾಲಿ ತನೆಗೆ ಮಧ್ಯವರ್ತಿ ಕೆಲಸ ಮಾಡಿ ವ್ಯಾಪಾರ ಮಾಡಬಾರದು ಅಂತ ಅನಿಸಿ ಅದರಂತೆ ಕಮೊಡಿಟಿ ಮತ್ತು ಗೋಧಿ ವ್ಯಾಪಾರದಲ್ಲಿ ತೊಡಗಿಕೊಳ್ಳುತ್ತಾಳೆ. ಬರಿ ಗಂಡಸರೇ ಮಾಡುವ ಟ್ರೇಡಿಂಗ್ ಕೆಲಸವನ್ನು ದೀಪಾಲಿ ಶುರು ಮಾಡಿದಾಗ ಎಲ್ಲರೂ ಅಪಹಾಸ್ಯ ಮಾಡಿದರು.
ಯಾರು ಎಷ್ಟೇ ಅವಮಾನ ಮಾಡಿದರು ಛಲ ಬಿಡದೇ ದುಡಿದು ಕೊನೆಗೆ ತನ್ನದೇ ಸ್ವಂತ ಟ್ರೇಡಿಂಗ್ ಫಾರಂ ಅನ್ನು ಪ್ರಾರಂಭಿಸಿ, ರೈತರು ಮತ್ತು ವ್ಯಾಪಾರಸ್ಥರ ನಂಬಿಕೆಗಳಿಸಿ ಕೇವಲ ಒಂದು ವರ್ಷದಲ್ಲಿ ಅರವತ್ತು ಕೋಟಿ ರೂಪಾಯಿ ದುಡಿದಳು. ಫುಲ್ ಟೈಮ್ ಟ್ರೇಡಿಂಗ್. ಮಾಡುತ್ತಿರುವ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರಳಾದಳು. ದೃಢವಾದ ಮನಸ್ಸು, ನಂಬಿಕೆ, ಛಲ ಇದ್ದರೆ ಏನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಇದು ಒಂದು ಜೀವಂತ ಉದಾಹರಣೆ.