
ತಳ್ಳೋ ಗಾಡೀಲಿ ಬಟ್ಟೆ ವ್ಯಾಪಾರ ಮಾಡ್ತಿದ್ದ ವ್ಯಕ್ತಿ, ಇಂದು ಕಂಡಿರುವ ಯಶಸ್ಸು ನಿಜಕ್ಕೂ ಸ್ಪೂರ್ತಿದಾಯಕ
ಪ್ರತಿ ಮನುಷ್ಯನಿಗೂ ತಾನು ಬೆಳೆದು ಆರ್ಥಿಕವಾಗಿ ಅಭಿವೃದ್ದಿಕಾಣಬೇಕು ಅನ್ನೋ ಛಲ ಇದ್ದೆ ಇರುತ್ತದೆ, ಇನ್ನು ಕೆಲವರು ಜೀವನದಲ್ಲಿ ಯಶಸ್ಸು ಕಾಣಲೇ ಬೇಕು ಅನ್ನೋ ಛಲ ಹೊಂದಿರುತ್ತಾರೆ. ಪ್ರತಿಯೊಬ್ಬರ ಲೈಫ್ ಅಲ್ಲಿ ಒಂದಲ್ಲ ಒಂದು ಗುರಿ ಇದ್ದೆ ಇರುತ್ತದೆ. ಈ ಮೂಲಕ ನಾವು ಒಬ್ಬ ವ್ಯಕ್ತಿಯ ಯಶಸ್ಸಿನ ಹಾದಿ ಹೇಗಿತ್ತು ಅನ್ನೋದನ್ನ ಈ ಮೂಲಕ ತಿಳಿದುಕೊಳ್ಳೋಣ ಇವರ ಲೈಫ್ ಸ್ಟೋರಿ ನಿಜಕ್ಕೂ ಸ್ಪೂರ್ತಿದಾಯಕವಾಗಬಹುದು, ನಿಮಗೆ ಈ ಸಕ್ಸಸ್ ಸ್ಟೋರಿ ಇಷ್ಟವಾದಲ್ಲಿ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ ಇದರಿಂದ ತಮ್ಮ ಲೈಫ್ ನಲ್ಲೂ ಛಲ ಬರಬಹುದು.
ಒಬ್ಬ ಮಾಧ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿದ ಈ ವ್ಯಕ್ತಿಯ ಹೆಸರು ಚಂದ್ರ ಬಿಹರಿ ಅಗರ್ವಾಲ್ ಎಂಬುದಾಗಿ ಇವರು ಹುಟ್ಟಿನಿಂದಲೇ ಏನು ಶ್ರೀಮಂತರಲ್ಲ ತಮ್ಮ ಹೊಟ್ಟೆ ಪಾಡಿಗಾಗಿ ರಸ್ತೆ ಬದಿಯಲ್ಲಿ ಚಿಕ್ಕ ಪುಟ್ಟ ವ್ಯಾಪಾರ ಮಾಡುತ್ತಿದ್ದವರು. ಹೌದು ತಮ್ಮ ತಾಯಿ ರಸ್ತೆ ಬದಿ ಚಿಕ್ಕ ಗಾಡೀಲಿ ಊಟ ತಿಂಡಿ ವ್ಯಾಪಾರ ಮಾಡುತ್ತಿದ್ದರು, ಇವರಿಗೆ ಸಹಾಯ ಮಾಡಬೇಕು ಅನ್ನೋ ಉದ್ದೇಶದಿಂದ ಇವರು ೧೦ ವರ್ಷದ ಹುಡುಗ ಆಗಿದ್ದರಿಂದ ತಮ್ಮ ಅಮ್ಮನಿಗೆ ಸಹಾಯ ಮಾಡುವ ಜೊತೆಗೆ ಚಿಕ್ಕ ಪುಟ್ಟ ಕೆಲಸ ಮಾಡುತ್ತಿದ್ದರು. ಹೀಗೆ ದಿನ ಕಳೆದಂತೆ ಒಂದು ಬಟ್ಟೆ ಅಂಗಡಿಯಲ್ಲಿ ಕೆಲಸಕ್ಕೆ ಸೇರುತ್ತಾರೆ ಅಲ್ಲಿ ಇವರಿಗೆ 300 ರೂಪಾಯಿ ಸಂಬಳ ಸಿಗುತ್ತದೆ ಈ ಹಣ ಅಂದಿನ ದಿನಕ್ಕೆ ದೊಡ್ಡದಾಗಿತ್ತು.
ಹೀಗೆ ತನ್ನ ಜೀವನವನ್ನು ಕಳೆಯುತ್ತಿದ್ದ ವ್ಯಕ್ತಿ ಆ ದಿನಗಳಲ್ಲಿ ಬಡತನ ಇರುವ ಕಾರಣಕ್ಕೆ ತಾನು ಶಿಕ್ಷಣ ಪಡೆಯದೇ ತನ್ನ ತಂಗಿ ಹಾಗು ತಮ್ಮನನ್ನು ಶಿಕ್ಷಣ ಕೊಡಿಸುತ್ತಾರೆ, ಆ ದಿನಗಳಲ್ಲಿ ಆರ್ಥಿಕ ಪರಿಸ್ಥಿತಿ ಸುಧಾರಿಸುವ ಕಾರಣಕ್ಕೆ ೧೦ ರಿಂದ ೧೨ ಗಂಟೆಯವರೆಗೆ ಚಂದ್ರ ಬಿಹಾರಿಯವರು ಕೆಲಸ ಮಾಡುತ್ತಿದ್ದರು. ಹೀಗೆ ಕಾಲಕಳೆದಂತೆ ತಮ್ಮನ ಮದುವೆ ಮಾಡಿ ಮಿಕ್ಕಿದ 5 ಸಾವಿರ ರೂಪಾಯಿ ಹಣದಲ್ಲಿ ಸೀರೆ ವ್ಯಾಪಾರ ಜೈಪುರದಲ್ಲಿ ಮಾಡುತ್ತಾರೆ ಇದರಲ್ಲಿ ಸ್ವಲ್ಪ ಮಟ್ಟಿಗೆ ಅಭಿವೃದ್ಧಿ ಹೊಂದುತ್ತಾರೆ, ಹೀಗೆ ದಿನಗಳು ಉರುಳುತ್ತಿದ್ದಂತೆ ಸೀರೆ ವ್ಯಾಪಾರದ ಅಂಗಡಿಗೆ ವಿವಿಧ ಕಡೆಯಿಂದ ಜನ ಬಂದು ಇವರ ಬಳಿ ಸೀರೆ ತಗೆದುಕೊಳ್ಳುತ್ತಿದ್ದರು ವ್ಯಾಪಾರಲ್ಲಿ ತಕ್ಕ ಮಟ್ಟಿಗೆ ಲಾಭವಾಗಿ ತಿಂಗಳಿಗೆ ೮೦ ರಿಂದ ೯೦ ಸಾವಿರ ಲಾಭಗಳಿಸುತ್ತಿದ್ದರು.
ಮುಂದಿನ ದಿನಗಳಲ್ಲಿ ಒಂದು ದಿನ 10 ಲಕ್ಷದ ಬಂಡವಾಳವನ್ನು ಚಿನ್ನದ ಮೇಲೆ ಹೂಡಿಕೆ ಮಾಡಿ ತುಂಬ ಲಾಭ ಗಳಿಸುತ್ತಾರೆ. ಹೀಗೆ ಲಾಭ ಪಡೆಯುತ್ತ ಒಂದು ದಿನ ಇವರು ಆಭರಣ ಮಳಿಗೆಗಳನ್ನು ಓಪನ್ ಮಾಡಿ ಕೋಟಿ ಕೋಟಿ ದುಡಿಮೆಮಾಡಲು ಶುರು ಮಾಡುತ್ತಾರೆ ಅಂದಿನಿಂದ ಇಂದಿನವರೆಗೆ ವ್ಯಾಪಾರದಲ್ಲಿ ಅಭಿವೃದ್ಧಿ ಕಂಡಿದ್ದಾರೆ. ಇಂದು ಕೋಟಿ ಆಸ್ತಿಯ ಒಡೆಯನಾಗಿದ್ದಾರೆ. ನಿಜಕ್ಕೂ ಜೀವನದಲ್ಲಿ ಶ್ರಮ ಹಂಬಲ ಇದ್ರೆ ಖಂಡಿತ ಯಶಸ್ಸಿನ ದಾರಿ ಕಷ್ಟ ಆದ್ರೂ ಸಿಕ್ಕೇ ಸಿಗುತ್ತದೆ ಅನ್ನೋ ನಂಬಿಕೆ ಇದ್ರೆ ಜಯ ನಿಮ್ಮದಾಗುತ್ತದೆ ಅನ್ನೋದನ್ನ ಇವರು ಒಬ್ಬ ಬೆಸ್ಟ್ ಉದಾಹರಣೆಯಾಗಿದ್ದಾರೆ.