ಈ ಹುಡುಗ ಮನೆಯಲ್ಲೇ ಕುಳಿತು ಮಾಡಿದ ಕೆಲಸಕ್ಕೆ ಇಡೀ ದೇಶವೇ ಶಹಬ್ಬಾಸ್ ಅನ್ನುತ್ತಿದೆ

ಒಬ್ಬ ಹುಡುಗ ಮನೆಯಲ್ಲಿ ಕುಳಿತು ಇಡೀ ದೇಶವೇ ಮೆಚ್ಚುವ ಕೆಲಸವನ್ನು ಮಾಡಿದ್ದಾನೆ ಅದೇನು ಆ ಹುಡುಗ ಯಾರು ಎಲ್ಲವನ್ನು ತಿಳಿದುಕೊಳ್ಳೋಣ ಬನ್ನಿ. ಈ ಹುಡುಗ ಸೆಕೆಂಡ್ ಪಿಯುಸಿ ಓದುತ್ತಿದ್ದಾನೆ ಓದುತ್ತಲೇ ಈತ ದೇಶಕ್ಕೆ ಸಹಾಯವಾಗುವಂತಹ ಒಂದು ಮಿಸೈಲ್ ಅನ್ನು ತಯಾರಿಸಿದ್ದಾನೆ ಹುಡುಗನ ಈ ಸಾಧನೆಗೆ ಭಾರತ ಸರ್ಕಾರ ಮತ್ತು ಇಸ್ರೋ ದವರು ಅವನನ್ನು ಹೊಗಳಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಆದರೆ ಇದು ನಮ್ಮ ಶತ್ರು ರಾಷ್ಟ್ರ ಪಾಕಿಸ್ತಾನಕ್ಕೆ ಸ್ವಲ್ಪ ಭಯವನ್ನುಂಟು ಮಾಡಿಸಿದೆ.

ಈಗ ಒಂದು ವರ್ಷದ ಹಿಂದೆ ಅಷ್ಟೇ ಪುಲ್ವಾಮದಲ್ಲಿ ಉಗ್ರರು ನಡೆಸಿದ ದಾಳಿಯ ಘಟನೆ ನೆನಪಿರಬಹುದು. ಆ ಘಟನೆಯನ್ನು ಮನಸಲ್ಲಿ ಇಟ್ಟುಕೊಂಡು ತನ್ನ ದೇಶಕ್ಕೆ ಏನಾದರೂ ತನ್ನಿಂದ ಸಹಾಯ ಮಾಡಬೇಕು ಎಂಬ ಮನೋಭಾವದಿಂದ ಈ ಮಿಸಾಯಿಲ್ ಅನ್ನು ಹುಡುಗ ತಯಾರಿಸಿದ್ದಾನೆ. ಈತ ಸೆಕೆಂಡ್ ಪಿಯುಸಿ ಓದುತ್ತಿರುವ ವಿದ್ಯಾರ್ಥಿಯಾಗಿದ್ದು ಇವನ ಹೆಸರು ಗೌತಮ್.

ಗೌತಮ್ ಎಂಬ ಹುಡುಗ ಮನೆಯಲ್ಲಿ ಕುಳಿತುಕೊಂಡು ಕೇವಲ ಪುಸ್ತಕ ಮತ್ತು ಇಂಟರ್ನೆಟ್ ಗಳ ಸಹಾಯದಿಂದ ಒಂದು ಮಿಸಾಯಿಲ್ ಅನ್ನೋದ್ ಮಾದರಿಯನ್ನು ತಯಾರಿಸಿದ್ದಾನೆ. ಮಿಸೈಲ್ ತಯಾರಿಸುವುದು ಸಾಮಾನ್ಯ ಕೆಲಸವೇನಲ್ಲ ಇದಕ್ಕೆ ಎಷ್ಟು ಬುದ್ಧಿವಂತಿಕೆ ಪರಿಶ್ರಮ ಮತ್ತು ಹಣದ ಅವಶ್ಯಕತೆ ಇರುತ್ತದೆ ಎನ್ನುವುದು ಎಲ್ಲರಿಗೂ ತಿಳಿದ ವಿಷಯ. ಗೌತಮಗೆ ಈ ಮಿಸಾಯಿಲ್ ಅನ್ನು ತಯಾರಿಸಲು ಅವರ ತಾಯಿ ಬಹಳಷ್ಟು ಸಹಾಯ ಮಾಡಿದ್ದಾರೆ. ತಮ್ಮ ಬಳಿ ಹಣ ಇಲ್ಲದೆ ಇರುವಾಗ ಮಗನಿಗೆ ಮಿಸಾಯಿಲ್ ತಯಾರಿಸಲು ಅವನ ತಾಯಿ ಲಕ್ಷಾಂತರ ರೂಪಾಯಿ ಹಣವನ್ನು ಒದಗಿಸಲಾಗದೆ ಇದ್ದಾಗ ಮಗನ ಮೇಲೆ ನಂಬಿಕೆ ಇಟ್ಟು ತಾಯಿ ತನ್ನ ಬಳಿ ಇದ್ದ ಜಮೀನನ್ನು ಮಾರಿ ಅದರಿಂದ ಬಂದ ಹಣವನ್ನು ಮಗನಿಗೆ ಮಿಸಾಯಿಲ್ ತಯಾರಿಸಲು ನೀಡಿದ್ದಾರೆ.

ಈ ಮಿಸೈಲ್ ಅನ್ನು ತಯಾರಿಸಲು ಗೌತಮಿಗೆ ಸುಮಾರು 23 ಲಕ್ಷ ರೂಪಾಯಿ ಖರ್ಚಾಗಿದೆ ಅವನ ಈ ಸಾಧನೆಯನ್ನು ಗಮನಿಸಿದ ಭಾರತ ಸರ್ಕಾರ ಮತ್ತು ಇಸ್ರೋ ಅವನ ಮುಂದಿನ ವಿದ್ಯಾಭ್ಯಾಸದ ಖರ್ಚನ್ನು ಸ್ವತಃ ವಹಿಸಿಕೊಂಡು ಡಾಕ್ಟರ್ ಎಪಿಜೆ ಅಬ್ದುಲ್ ಕಲಾಂ ಅವರ ನಂತರ ಈ ಹುಡುಗ ಗೌತಮನನ್ನು ಮಿಸೈಲ್ ಮ್ಯಾನ್ ಎಂದು ಹಲೋ ಪತ್ರಿಕೆಗಳಲ್ಲಿ ಪ್ರಕಟಿಸಿದ್ದಾರೆ.

ಗೌತಮ್ ಐಐಟಿ ಮಾಡುವ ಕನಸನ್ನು ಹೊಂದಿದ್ದು ಕಳೆದ ವರ್ಷ ಫೆಬ್ರವರಿ 14ರಂದು ನಡೆದ ಪುಲ್ವಾಮ ಘಟನೆ ಗೌತಮನನ್ನು ಈ ಮಿಸಾಯಿಲ್ ತಯಾರಿಸುವಂತೆ ಪ್ರೇರೇಪಿಸಿತ್ತು. ಗೌತಮನ ಮಿಸಾಯಿಲ್ ಪರಿಶೀಲಿಸಿದ ನಂತರ ಇದನ್ನು ದೊಡ್ಡ ಮಟ್ಟದಲ್ಲಿ ಮಾಡಿದರೆ ಭಾರತೀಯ ಸೈನ್ಯಕ್ಕೆ ಏನಾದರೂ ಒಂದು ಸಹಾಯಕ್ಕೆ ಬರಬಹುದು ಎಂದು ಇಸ್ರೋ ದವರು ತಿಳಿಸಿದ್ದಾರೆ

ಇಂದಿನ ಕಾಲದಲ್ಲಿ ವಾಟ್ಸಪ್, ಫೇಸ್ ಬುಕ್, ಟ್ವಿಟರ್, ಟಿಕ್ಟಾಕ್ ಅಂತ ಕಾಲಹರಣ ಮಾಡುತ್ತಿರುವ ವಿದ್ಯಾರ್ಥಿಗಳ ಗುಂಪಿನಲ್ಲಿ ತನ್ನ ತಾಯಿ ನಾಡಿಗಾಗಿ ಏನನ್ನಾದರೂ ಒಂದು ಸಹಾಯವನ್ನು ಮಾಡಬೇಕು ಎಂಬ ಮನೋಭಾವನೆ ಹೊಂದಿರುವ ಗೌತಮನಂತ ಹುಡುಗರು ಕಾಣಸಿಗುವುದು ಅಪರೂಪ.

Leave a Comment

error: Content is protected !!