ಮರಣದಲ್ಲೂ ಮಾನವೀಯತೆ ಮೆರೆದ ರಚನಾ ಕುಟುಂಬ

ಇತ್ತೀಚಿಗಷ್ಟೇ ತೀವ್ರ ಹೃದಯಾಘಾತದಿಂದ ಕೊನೆ ಉಸಿರೆಳೆದ ಆರ್ ಜೆ ರಚನಾ ಇವರ ಮರಣ ನಂತರ ಅವರ ಅಂಗಾಂಗಗಳನ್ನು ಧಾನ ಮಾಡಲು ಅವರ ಕುಟುಂಬದವರು ನಿರ್ಧರಿಸಿದ್ದಾರೆ ಈ ಮೂಲಕ ರಚನಾ ಅವರ ಕುಟುಂಬ ಸವಿನಲ್ಲೂ ಮಾನವೀಯತೆ ಮೆರೆದಿದ್ದಾರೆ ಅಪ್ಪು ಅವರ ನಂತರ ಮತ್ತೆ ಅವರ ಹಾದಿಯಲ್ಲಿ ಅಂಗಾಂಗಗಳನ್ನು ಧಾನ ಮಾಡುವ ಮನೋಭಾವ ಬೆಳಿಯುತ್ತಿರುವುದು ನಮ್ಮ ಹೆಮ್ಮೆ

ಫೆಬ್ರವರಿ 22 ಮಂಗಳವಾರ ಬೆಳಿಗ್ಗೆ ರಚನಾ ಆವರಿಗೆ ಹೃದಯಾಘಾತವಾಗಿದೆ ತಕ್ಷಣ ಅವರನ್ನು ಖಾಸಗಿ ಆಸ್ಪತ್ರೆಗೆ ಕೊಂಡೊಯ್ದರು ಆದರೆ ದುರಾದೃಷ್ಟ ಅವರು ಆಸ್ಪತ್ರೆಯಲ್ಲಿಯೇ ನಿಧನರಾದರು ಹೆಸರಾಂತ ರೇಡಿಯೋ ಮಿರ್ಚಿ ರೇಡಿಯೋ ಸಿಟಿ ಸೇರಿದಂತೆ ಹಲವಾರು ವಾಹಿನಿಗಳಲ್ಲಿ ಮನೆ ಮಾತಾಗಿದ್ದ ರಚನಾ ಅವರು ತಮ್ಮ ವಿಶೇಶ ಕಂಚಿನ ಕಂಠದಿಂದ ಸುಮಾರು ಅಭಿಮಾನಿ ಬಳಗ ಹೊಂದಿದ್ದರು

ಸದಾ ತಮ್ಮ ಮಾತಿನ ಜಾದು ಮೂಲಕ ಅನೇಕರನ್ನು ಆಕರ್ಷಿಸುತ್ತಿದ್ದರು ಇವರ ಕಾರ್ಯಕ್ರಮಗಳನ್ನು ಅನೇಕರು ಇಷ್ಟಪಟ್ಟು ಕೇಳಲು ಬಯಸುತ್ತಿದ್ದರು ಕನ್ನಡದ ಅನೇಕ ನಟ ನಟಿಯರು ಇವರ ಕಾರ್ಯಕ್ರಮಕ್ಕೆ ಭಾಗವಹಿಸಲು ಇಚ್ಚಿಸುತಿದ್ದರು ಹಾಗಂದಮೇಲೆ ಇವರ ಪಾಪ್ಯುಲಾರಿಟಿ ಹಾಗು ಶ್ರಮತೆ ಎಷ್ಟಿದೆ ಎಂದು ಇಲ್ಲಿಯೇ ತಿಳಿಯುತ್ತದ್ದೆ

ರಚನಾ ಅವರು ಕಳೆದ ವರ್ಷಗಳಲ್ಲಿ ಏಕಾಂತವಾಗಿರುತ್ತಿದ್ದರು ಹೆಚ್ಚು ಜನರ ಸಂಪರ್ಕದಲ್ಲಿ ಇರುತ್ತಿರಲಿಲ್ಲ ಎಂದು ಅವರ ಸ್ನೇಹಿತರು ತಿಳಿಸಿದ್ದಾರೆ ಅತಿ ಚಿಕ್ಕವಯಸ್ಸಿನಲ್ಲೇ ಕೇವಲ 39 ರ ವಯಸ್ಸಿನಲ್ಲಿ ಇವರು ಹೃದಯಾಘಾತದಿಂದ ನಮ್ಮನ್ನು ಅಗಲಿದ್ದಾರೆ ಸದಾ ಹಸನ್ಮುಖಿ ಆಗಿರುತ್ತಿದ್ದ ರಚನಾ ಅವರ ಅಗಲಿಕೆ ಅವರ ಕುಟುಂಬ ಹಾಗು ಸ್ನೇಹಿತ ಬಳಗಕ್ಕೆ ತೀವ್ರ ಆಘಾತ ಮೂಡಿಸಿದೆ

Leave a Comment

error: Content is protected !!