ಅಂದು ಈ ಹುಡುಗ ಕ್ರಿಯೇಟ್ ಮಾಡಿದ್ದ ಚಿಕ್ಕ ಆ್ಯಪ್ ನಿಂದ ಇಂದು ಇವನು ಎಷ್ಟು ನೂರು ಕೋಟಿ ಸಂಪಾದನೆ ಮಾಡುತ್ತಿದ್ದಾನೆ ಗೊತ್ತಾ

ಈಗಿನ ಆಧುನಿಕ ಯುಗದಲ್ಲಿ ಎಲ್ಲರ ಕೈಯಲ್ಲೂ ಮೊಬೈಲ್ ಫೋನ್. ಈ ಮೊಬೈಲ್ ಫೋನ್ ಗಳಲ್ಲಿ ಒಂದಷ್ಟು ಆಪ್ಸ್ ಇರುತ್ತವೆ. ಇದು ಎಲ್ಲರಿಗೂ ತಿಳಿದಿರುವ ವಿಚಾರ. ಕೆಲವರು ಮೊಬೈಲಿನಿಂದ ಎಷ್ಟೋ ಮಾಹಿತಿಯನ್ನು ಪಡೆಯುತ್ತಾರೆ. ಈಗಂತೂ ಗೂಗಲ್ ಬಗ್ಗೆ ಹೇಳುವುದೇ ಬೇಡ. ಇನ್ನು ಹೆಂಗಸರು ಮೊಬೈಲ್ ಇಂಟರ್ನೆಟ್ ಸಹಾಯದಿಂದ ಅಡುಗೆ ಸಹಿತ ಮಾಡುತ್ತಾರೆ. ಇಲ್ಲೊಬ್ಬ ವ್ಯಕ್ತಿ ಗೂಗಲ್, ಫೇಸ್ಬುಕ್ ನಲ್ಲಿ ಒಂದು ಚಿಕ್ಕ ವಿಡಿಯೋ ನೋಡಿದ 25ವರ್ಷದ ಯುವಕ ಒಂದು ದೊಡ್ಡ ಸಾಧನೆ ಮಾಡಿದ್ದನ್ನು ನೋಡೋಣ.

ಅವರೇ ಫಣೀಂದ್ರ ಅವರು.ಇವರು ಆಂಧ್ರಪ್ರದೇಶದ ನಿಜಾಮಾಬಾದ್ ನವರು. ಎಲೆಕ್ಟ್ರಿಕಲ್ ನಲ್ಲಿ ತಮ್ಮ ಡಿಗ್ರಿಯನ್ನು ತೆಗೆದುಕೊಳ್ಳುತ್ತಾರೆ. ಪೋಸ್ಟ್ ಗ್ರಾಜುಯೆಟ್ ನ್ನು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ನ್ ನಲ್ಲಿ ಮಾಡಿದ್ದಾರೆ. ಟ್ಯಾಕ್ಸ್ ಇನ್ಸ್ಟ್ರುಮೆಂಟ್ ಅನ್ನೋ ಕಂಪನಿಯಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಾರೆ.

2005ರಲ್ಲಿ ದೀಪಾವಳಿ ಹಬ್ಬದ ಸಮಯದಲ್ಲಿ ಇವರಿಗೆ ಮನೆಗೆ ಹೋಗಬೇಕೆಂದುಕೊಂಡಾಗ ಬಸ್ ಟಿಕೆಟ್ ಸಿಗುವುದಿಲ್ಲ. ಆಗ ಅವರು ಅಂದುಕೊಳ್ಳುತ್ತಾರೆ”ಸುಲಭವಾಗಿ ಆನ್ ಲೈನ್ ನಲ್ಲಿ ಟಿಕೆಟ್ ಮಾಡುವಂತಿದ್ದಿದ್ದರೆ ಚೆನ್ನಾಗಿರುತ್ತಿತ್ತು. ನಾನ್ಯಾಕೆ ಆ ಸಿಸ್ಟಮ್ ಕಂಡು ಹಿಡಿಯಬಾರದು” ಎಂದು.ನಂತರ ಬಸ್ ಟಿಕೇಟ್ ಹೇಗೆ ಬುಕ್ ಮಾಡ್ತಾರೆ, ಯಾವ ಯಾವ ಬಸ್ ನ್ನು ಹೇಗೆ ಬುಕ್ ಮಾಡ್ತಾರೆ ಹೀಗೆ ಪ್ರತಿಯೊಂದು ಮಾಹಿತಿ ಸಂಗ್ರಹಿಸುತ್ತಾರೆ. ಆದರೆ ಸುಲಭವಾಗಿ ಮಾಹಿತಿ ಸಿಗುವುದಿಲ್ಲ. ಆಗ ಒಬ್ಬ ಇಂಜಿನಿಯರಿಂಗ್ ಓದುತ್ತಿದ್ದ ಹುಡುಗ ಬಸ್ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದ. ಅವನು ಎಲ್ಲಾ ಮಾಹಿತಿ ನೀಡುತ್ತಾನೆ.

ನಂತರ ತಮ್ಮ ಇಡಿಯಾಗಳನ್ನು ಡಿಗ್ರಿ ಸ್ನೇಹಿತರ ಜೊತೆ ಹಂಚಿಕೊಂಡಾಗ ಎಲ್ಲರೂ ಒಪ್ಪಿಗೆ ಆಗಿ ಅಭಿನಂದಿಸುತ್ತಾರೆ. ಸುಮಾರು5ಲಕ್ಷ ಬಂಡವಾಳದಲ್ಲಿ “ರೆಡ್ ಬಸ್” ಅನ್ನೋ ಪ್ಲಾಟ್ ಫಾರ್ಮ್ ರೆಡಿ ಮಾಡುತ್ತಾರೆ. ಇವರು ಇರುತ್ತಿದ್ದ ರೂಮ್ ಇವರಿ ಗೆ ಆಫೀಸ್ ಆಗುತ್ತದೆ. ಈ ಸೈಟ್ ನ ಬಿಲ್ಡ್ ಮಾಡಿ ದೊಡ್ಡ ಲಾಭ ಪಡೆದು ದೊಡ್ಡ ವ್ಯವಹಾರ ಮಾಡಬೇಕು ಎಂದು ಅಂದು ಕೊಂಡಿರುವುದಿಲ್ಲ. ಇದನ್ನ ಯಾವುದಾದರೂ ಬಸ್ ಓಪರೇಟರ್ಸ್ ಗೆ ಮಾರಿ NGO ಗೆ ಕೊಡೋಣ ಅಂತ ಅಂದುಕೊಂಡಿದ್ದರು. ಆದರೆ ಈ ಸಾಫ್ಟ್ವೇರ್ ನ ಯಾರೂ ಖರೀದಿಸುವುದಿಲ್ಲ.

ಏಕೆಂದರೆ ಇಂಟರ್ನೆಟ್ ಬಳಕೆ ಆಗ ಕಡಿಮೆ. ಐಟಿ ಅಫೀಸ್ ಹತ್ರ ಹೋಗಿ ಇವರು ಮತ್ತು ಇವರ ಸ್ನೇಹಿತರು ಟಿಕೆಟ್ ನ್ನು ಆನ್ ಲೈನ್ ನಲ್ಲಿ ಬುಕ್ ಮಾಡುವಂತೆ ಉತ್ತೇಜಿಸುತ್ತಾರೆ. ಟಿಕೆಟ್ ಗಳನ್ನು ಬುಕ್ ಮಾಡಿಸುತ್ತಾರೆ. ಇದರಿಂದ ಜನರು ತುಂಬಾ ಇಷ್ಟಪಡುತ್ತಾರೆ. ಯಾವುದೇ ಸಮಸ್ಯೆ ಇಲ್ಲದೆ ಆರಾಮಾಗಿ ಕುಳಿತಲ್ಲಿಯೇ ಟಿಕೆಟ್ ಬುಕ್ ಮಾಡಬಹುದು. ಸೀಟ್ ರೆಡ್ ಇದ್ರೆ ಬುಕ್ ಆಗಿದೆ ಅಂತ ಸುಲಭವಾಗಿ ಅರ್ಥ ಮಾಡಿಕೊಳ್ಳಬಹುದು. ಯಾರು ಬೇಕಾದರೂ ಬುಕ್ ಮಾಡುವಂತಹ ಸೈಟ್ ಇದಾಗಿದೆ.

ಈಗ ನಮ್ಮ ದೇಶದಲ್ಲಿ ಇದು ಸುಮಾರು೧೫ ರಾಜ್ಯದಲ್ಲಿ ತನ್ನ ಸೇವೆ ಸಲ್ಲಿಸುತ್ತಿದೆ. 5000ಕ್ಕೂ ಹೆಚ್ಚು ರೂಟ್ ಗಳಿಗೆ ಟಿಕೆಟ್ ಬುಕ್ ಮಾಡಿಸಿಕೊಳ್ಳುತ್ತಾರೆ. ಟಿಕೆಟ್ ನ್ನು ಹೋಮ್ ಡೆಲಿವರಿ ಸಹ ಮಾಡುತ್ತಾರೆ. ಕೆಲವು ರಾಜ್ಯಗಳ ಜೊತೆ ಸೇರಿ ಕೆಲವು ಪ್ರವಾಸೀ ತಾಣಗಳಿಗೆ ತಮ್ಮ ಸರ್ವೀಸ್ ಕೊಡುತ್ತಿದ್ದಾರೆ. 2013ರಲ್ಲಿ ರೆಡ್ ಬಸ್ ವೆಬ್ಸೈಟ್ ನ್ನು ಗೋಯೀಬಿಬೋ ಗ್ರೂಪ್ಪಿಗೆ ಸುಮಾರು ೪೦೦ ಕೋಟಿಗೆ ಮಾರುತ್ತಾರೆ. ಒಟ್ಟಾರೆ ರೆಡ್ ಬಸ್ ಕಂಪನಿಯವರ ಬಳಿ ಆರರಿಂದ ಏಳು ನೂರು ಕೋಟಿ ರೂಪಾಯಿ ಆಸ್ತಿ ಇದೆ. ಇವರು ಪಟ್ಟಂತಹ ಈ ಶ್ರಮ ಇವರಿಗೆ ಊಹಿಸಿಕೊಳ್ಳಲಾರದಷ್ಟು ಪ್ರಯೋಜನ ಮತ್ತು ಲಾಭ ನೀಡಿದೆ.

Leave a Comment

error: Content is protected !!