ಆ ದಿನ ಒಂದೊತ್ತಿನ ಊಟಕ್ಕಿಲ್ಲದ ವ್ಯಕ್ತಿ ಇಂದು ತನ್ನ ಶ್ರಮದಿಂದ ಎಷ್ಟು ಸಂಪಾದಿಸಿದ್ದಾರೆ ಗೊತ್ತೇ?

ಜೀವನ ಎಂದಮೇಲೆ ಮನುಷ್ಯನನ್ನಾದರೂ ಸಾಧನೆ ಮಾಡಲೇಬೇಕು. ಇಲ್ಲವಾದಲ್ಲಿ ಅವನ ಜೀವನವು ಅರ್ಥವಾಗುತ್ತದೆ. ಇಷ್ಟು ವ್ಯಕ್ತಿಗಳು ಹುಟ್ಟಿನಿಂದ ಹೊಟ್ಟೆಗೆ ಸಹ ಇಲ್ಲದೆ ಕೋಟ್ಯಾಧೀಶ್ವರ ಆದ ಉದಾಹರಣೆಗಳಿವೆ. ಅಂತಹವರಲ್ಲಿ ರೇಣುಕಾ ಆರಾಧ್ಯ ಕೂಡ ಒಬ್ಬರು. ಆದ್ದರಿಂದ ನಾವು ಇಲ್ಲಿ ಅವರ ಸಾಧನೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಮೂಲತಃ ಕರ್ನಾಟಕ ರಾಜ್ಯದ ಬೆಂಗಳೂರು ಜಿಲ್ಲೆಯ ರೇಣುಕಾ ಆರಾಧ್ಯ ಅವರು ಜನಿಸಿದರು. ಇವರ ತಂದೆ ದೇವಸ್ಥಾನದ ನೌಕರಿ ಪೂಜಾರಿ ಆಗಿದ್ದರು. ಆದರೆ ಇವರಿಗೆ ಬರುವ ಸಂಬಳ ಇವರ ಕುಟುಂಬಕ್ಕೆ ಸಾಲುತ್ತಿರಲಿಲ್ಲ. ಆರನೆಯ ತರಗತಿಯ ನಂತರ ರೇಣುಕಾರಾಧ್ಯ ಅವರ ತಂದೆಯವರು ಇವರನ್ನು ಶ್ರೀಮಂತರ ಮನೆಗೆ ಜೀತಕ್ಕೆ ಕಳುಹಿಸುತ್ತಿದ್ದರು. ನಂತರದಲ್ಲಿ ವೇದಗಳ ಪಾಠಕ್ಕೆ ಒಂದು ಮಠಕ್ಕೆ ಕಳುಹಿಸಲಾಯಿತು. ಆದರೆ ಅಲ್ಲಿ ದಿನಕ್ಕೆ ಎರಡು ಹೊತ್ತು ಮಾತ್ರ ಹೊಟ್ಟೆಗೆ ನೀಡಲಾಗುತ್ತಿತ್ತು.

ಅಲ್ಲಿ ಸೀನಿಯರ್ಸ್ ಗಳು ಬಹಳ ಕಿರಿಕಿರಿ ನೀಡುತ್ತಿದ್ದರು. ಆದ್ದರಿಂದ 20ನೇ ತರಗತಿಯಲ್ಲಿ ಇವರು ಸಂಸ್ಕೃತ ಬಿಟ್ಟು ಉಳಿದ ಎಲ್ಲಾ ವಿಷಯಗಳಲ್ಲಿ ಫೇಲಾದರು. ಇದೇ ಸಮಯದಲ್ಲಿ ತನ್ನ ತಂದೆಯನ್ನು ಕಳೆದುಕೊಂಡರು. ಇಡೀ ಕುಟುಂಬದ ಜವಾಬ್ದಾರಿ ಇವರ ಮೇಲೆ ಇತ್ತು. ಹಾಗಾಗಿ ಫ್ಯಾಕ್ಟರಿಗಳಲ್ಲಿ ಕೆಲಸ ಮಾಡುವುದು ಮತ್ತು ಗುಡಿಸುವುದು ಎಲ್ಲವನ್ನು ಮಾಡಿದರು. ನಂತರದಲ್ಲಿ ಒಂದು ಬಾಗ್ ತಯಾರಿಕಾ ಫಾಕ್ಟರಿಗೆ ಸೇರಿಕೊಂಡರು. ಆಗ ಅವರಿಗೆ ತಾನೂ ಏಕೆ ಈ ಉದ್ಯಮ ಮಾಡಬಾರದು ಎಂದು ಅನಿಸಿತು.

ಹಾಗಾಗಿ ಬಾಗ್ ಗಳನ್ನು ತಯಾರಿಸಿ ತಮ್ಮ ಸೈಕಲ್ ಮೇಲೆ ತೆಗೆದುಕೊಂಡು ಹೋಗಿ ಮಾರಾಟ ಮಾಡುತ್ತಿದ್ದರು. ಆದರೆ ಇದು ನಷ್ಟವಾಯಿತು. ನಂತರ ಒಂದು ಕಡೆ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸಕ್ಕೆ ಸೇರಿದರು. ಅದರ ಜೊತೆಗೆ ತೆಂಗಿನ ಮರಹತ್ತಿ ಕಾಯಿ ಕೊಯ್ಯುವ ಕೆಲಸವನ್ನು ಮಾಡಿ ದುಡಿಯುತ್ತಿದ್ದರು. ನಂತರ ಒಬ್ಬ ಡ್ರೈವರ್ ಪರಿಚಯ ಮಾಡಿಕೊಂಡು ಡ್ರೈವಿಂಗ್ ಕಲಿತರು. ಇದೇ ಇವರ ಜೀವನದ ತಿರುವು ಎಂದರೂ ತಪ್ಪಿಲ್ಲ. ಇದರಿಂದ ಮುಂದೆ ಒಳ್ಳೆಯ ಯಶಸ್ಸನ್ನು ಕಾಣುತ್ತಾ ಹೋದರು. ಬಾಡಿಗೆ ಹೊಡೆಯುವುದು, ಸ್ಕೂಲ್ ಗಳಿಗೆ ಟ್ರಿಪ್ ಹೊಡೆಯುವುದು ಎಲ್ಲಾ ಇವರಿಗೆ ಬರುತ್ತಿತ್ತು.

ಹಾಗೆಯೇ ಪುಷ್ಪಾ ಅವರನ್ನು ವಿವಾಹ ಆದರು. 2006ರಲ್ಲಿ ತಮ್ಮ ಬಳಿ ಇದ್ದ ಎಲ್ಲಾ ಟಾಕ್ಸಿಗಳನ್ನು ಮಾರಿ ಇಂಡಿಯನ್ ಸಿಟಿ ಟ್ಯಾಕ್ಸಿ ಕಂಪನಿಯ ಎಲ್ಲವುಗಳನ್ನು ಖರೀದಿ ಮಾಡುತ್ತಾರೆ. ಇದರಿಂದ ಒಳ್ಳೆಯ ಆದಾಯವನ್ನು ಪಡೆಯುತ್ತಾ ಹೋದರು. ಇಂದು ಅದೇ ಪ್ರವಾಸೀ ಕ್ಯಾಬ್ ಆಗಿ ಹೊರ ಹೊಮ್ಮಿದೆ. ಇವತ್ತಿಗೆ 300ಕ್ಕೂ ಹೆಚ್ಚು ಟ್ಯಾಕ್ಸಿಗಳನ್ನು ಇದು ಹೊಂದಿದೆ. ಆದ್ದರಿಂದ ಪ್ರಯತ್ನ ಪಟ್ಟರೆ ಒಂದೆಲ್ಲಾ ಒಂದು ದಿನ ಗುರಿಯನ್ನು ತಲುಪಲು ಸಾಧ್ಯ ಎಂದು ಇವರು ತಿಳಿಸಿಕೊಟ್ಟಿದ್ದಾರೆ ಎಂದು ಹೇಳಬಹುದು.

Leave a Comment

error: Content is protected !!