20 ನೇ ವಯಸ್ಸಿಗೆ ಮೂರು ಮಕ್ಕಳ ತಾಯಿಯಾಗಿದ್ದ ಮಹಿಳೆಗೆ ಗಂಡನ ಮನೆಯಲ್ಲಿ ನೆಮ್ಮದಿ ಇಲ್ಲ ಅಂತ ಮಾಡಿದ ಕೆಲಸವೇನು ನೋಡಿ

ಸಮಾಜದಲ್ಲಿ ಹಲವು ವಿಶೇಷ ವ್ಯಕ್ತಿತ್ವವುಳ್ಳ ಮನುಷ್ಯನರನ್ನು ಕಾಣಬಹುದು, ಆದ್ರೆ ಎಲ್ಲರು ಕೂಡ ಒಂದೇ ರೀತಿಯಲ್ಲಿ ಇರೋದಿಲ್ಲ, ಕೆಲವರು ಸ್ವಾರ್ಥಿಗಳು ಸಿಕ್ಕರೆ ಇನ್ನು ಕೆಲವರು ನಿಸ್ವಾರ್ಥ ಮನೋಭಾವನೆ ಹೊಂದಿರುವಂತವರು ಕೂಡ ಸಿಗುತ್ತಾರೆ. ಈ ತಾಯಿ ತಾನು ಹೆತ್ತ ಮಕ್ಕಳು ಅಲ್ಲದಿದ್ದರೂ ಕೂಡ ಅನಾಥರು ನಿರ್ಗತಿಕರು ಆಗಿರುವಂತ ಮಕ್ಕಳಿಗೆ ಆಶ್ರಯದಾತೆ ಆಗಿದ್ದಾರೆ. ಹೌದು ತಾನು ಭಿಕ್ಷೆ ಬೇಡಿ ಅದರಿಂದ ಬಂದ ಹಣವನ್ನು ಅನಾಥ ಮಕ್ಕಳನ್ನು ಸಾಕಿ ಒಳ್ಳೆಯ ವಿದ್ಯಾಭ್ಯಾಸವನ್ನು ಕೊಟ್ಟಿರುವಂತ ಆಶ್ರಯದಾತೆ ಈ ಸಿಂಧೂ ಸಪ್ಕಾಲ್.

ಇವರ ಬಗ್ಗೆ ಒಂದು ಚಿಕ್ಕ ಸ್ಟೋರಿಯ ರೀತಿಯಲ್ಲಿ ತಿಳಿಯೋಣ ನಿಮಗೆ ಇವರ ಕಾರ್ಯ ವೈಖರಿ ಇಷ್ಟವಾಗಿದ್ದರೆ ಶೇರ್ ಮಾಡಿ ಬೇರೆಯವರಿಗೂ ಸ್ಪೋರ್ತಿಯಾಗಬಹುದು. ಹೆಸರು ಸಿಂಧೂ ಸಪ್ಕಾಲ್ ಎಂಬುದಾಗಿ ಮಹಾರಾಷ್ಟ್ರದ ನವಾರ್ಗಾಂವ್ ಗ್ರಾಮದ ಶ್ರೀಹರಿ ಎಂಬುವರೊಂದಿಗೆ ತಂದೆತಾಯಿಯವರ ಒತ್ತಡಕ್ಕೆ ಮದುವೆಯಾಗಿದ್ದರು. ಇನ್ನು 20 ವರ್ಷ ಆಗುವಷ್ಟರಲ್ಲೇ 3 ಮಕ್ಕಳ ತಾಯಿಯಾದರು. ಗಂಡನ ಮನೆಯಲ್ಲಿ ನೆಮ್ಮದಿಯ ಜೀವನ ಸಿಗಲಿಲ್ಲ ಕಿರುಕೊಳ ನೀಡುತ್ತಿದ್ದರು ಇತ್ತ ತವರು ಮನೆಯಲ್ಲಿ ಕೂಡ ಇವರನ್ನು ಸೇರಿಸಲಿಲ್ಲ ಹೀಗಾಗಿ ಇವರು ತಮ್ಮ ಜೀವನವನ್ನು ಸ್ಮಶಾನದಲ್ಲಿ ಕಳೆಯಲು ಶುರು ಮಾಡಿದ್ದರು.

ಹೀಗೆ ಕಾಲ ಉರುಳುತ್ತ ಮುಂದೊಂದಿನ ತಮ್ಮ ಜೀವನಕ್ಕೆ ಭಿಕ್ಷೆ ಬೇಡಿ ಜೀವನ ನಡೆಸುತ್ತಿದ್ದರು ಹೀಗಿರುವಾಗ ಅನಾಥ ಮಕ್ಕಳು ನಿರ್ಗತಿಕರು ಇವರಿಗೆ ಹತ್ತಿರವಾದರು, ಆ ಮಕ್ಕಳಿಗೆ ಇವರು ಭಿಕ್ಷೆ ಬೇಡಿ ಊಟ ತಿನಸುಗಳನ್ನು ಕೊಡುತ್ತಿದ್ದರು, ಕೆಲ ಮಕ್ಕಳು ಇವರಿಗೆ ಅಮ್ಮ ಎಂಬುದಾಗಿ ಕರೆಯಲಾರಂಭಿಸಿದರು. ಹೀಗೆ ಕಾಲ ಕಳೆಯುತ್ತಾ ಮುಂದೊಂದಿನ ಇವರನ್ನು ಬಿಟ್ಟು ಅನಾಥ ಮಕ್ಕಳಿಗೆ ಬೇರೆ ಕಡೆ ಹೋಗೋಕೆ ಮನಸ್ಸಾಗುವುದಿಲ್ಲ, ಇದರಿಂದ ಈ ಸಿಂಧೂ ತಾಯಿ ಅವರು ಪುಣೆಯ ಹಡಪ್ಸರ್ ಬಡಾವಣೆಯಲ್ಲಿ“ಸನ್ಮತಿ ಬಾಲನಿಕೇತನ”ಸಂಸ್ಥೆಯನ್ನು ಹುಟ್ಟು ಹಾಕಿದರು.

ಅಂದು ಬೆರಳಣಿಕೆಯಷ್ಟು ಇದ್ದ ಮಕ್ಕಳು ಇಂದಿನ ದಿನಗಳಲ್ಲಿ ೧೪೦೦ ಕ್ಕೂ ಹೆಚ್ಚು ಮಕ್ಕಳನ್ನು ಇವರು ಪೋಷಣೆ ಮಾಡಿ ವಿದ್ಯಾಭ್ಯಾಸ ಕೊಟ್ಟಿದ್ದಾರೆ. ಅಂದು ಒಂದು ಸಂಸ್ಥೆಯನ್ನು ತೆರೆದ ಈ ತಾಯಿ ಇಂದು ೫-೬ ಸಂಸ್ಥೆಗಳು ಹುಟ್ಟಿಕೊಂಡಿವೆ, ಸಾವಿರಾರು ಮಕ್ಕಳಿಗೆ ಒಳ್ಳೆಯ ಪೋಷಣೆ ಜೊತೆಗೆ ವಿದ್ಯಾಭ್ಯಾಸವನ್ನು ನೀಡಿ ಸಮಾಜದಲ್ಲಿ ಒಳ್ಳೆಯ ಬದುಕನ್ನು ರೂಪಿಸಿಕೊಳ್ಳುವಂತೆ ಮಾಡಿದ ಈ ಮಹಾನ್ ತಾಯಿಗೆ ನಮ್ಮ ಕಡೆಯಿಂದ ಬಿಗ್ ಸಲ್ಯೂಟ್.

Leave A Reply

Your email address will not be published.

error: Content is protected !!