ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದರೂ ಸಹ ಯೋಗಿ ಅವರ ಅಕ್ಕ ಚಾಯ್ ಪಕೋಡ ಮಾರಿ ಜೀವನ ನಡೆಸುತ್ತಿರುವುದು ಯಾಕೆ ಗೊತ್ತಾ

ಹಲವು ಮಂದಿ ಹಣ ಹೆಸರು ಗಳಿಸಿದ ಮೇಲೆ ಐಷಾರಾಮಿ ಜೀವನವನ್ನು ಬದುಕಲಿಕ್ಕೆ ಇಷ್ಟಪಡುತ್ತಾರೆ ಆದರೆ ಕೆಲವು ಜನರು ಮಾತ್ರ ಹಣ ಆಸ್ತಿ ಇದ್ದರೂ ಕೂಡ ಸರಳ ಜೀವನವನ್ನು ಬದುಕಲು ಇಚ್ಛೆ ಪಡುತ್ತಾರೆ. ಎಲ್ಲ ಇದ್ದರೂ ಏನೂ ಇಲ್ಲದ ಹಾಗೆ ಬದುಕುವುದು ನಿಜಕ್ಕೂ ಸುಲಭದ ಮಾತಲ್ಲ. ಗೆಳೆಯರೆ ಇಂದು ಉತ್ತರಾಖಂಡದ ಪೌಡಿ ಗಢವಾಲಾ ಜಿಲ್ಲೆಯ ಕುಠಾರ್ ಹಳ್ಳಿ ನಿವಾಸಿ ಶಶಿ ದೇವಿ ಎಂಬ ಮಹಿಳೆಯ ಕುತೂಹಲ ಬಗೆಯನ್ನು ತಿಳಿದುಕೊಳ್ಳೋಣ ಬನ್ನಿ.

ನಮ್ಮ ದೇಶದ ದೊಡ್ಡ ರಾಜ್ಯ ಎನಿಸಿಕೊಂಡಿರೋ ಉತ್ತರಪ್ರದೇಶದ ಮುಖ್ಯಮಂತ್ರಿಗಳಾದ ಯೋಗಿ ಆದಿತ್ಯನಾಥ್ ಅವರ ಬಗ್ಗೆ ನೀವೆಲ್ಲಾ ಕೇಳಿರುತ್ತೀರಾ. ಯೋಗಿ ಆದಿತ್ಯನಾಥ್ ಅವರ ಕುಟುಂಬದವರ ಬಗ್ಗೆ ನಿಮಗೆ ಗೊತ್ತಿರಲಿಕ್ಕಿಲ್ಲ. ಯೋಗಿ ಆದಿತ್ಯನಾಥ್ ಅವರಿಗೆ ಶಶಿದೇವಿಯ ಎಂಬ ಹಿರಿಯ ಅಕ್ಕ ಇದ್ದಾಳೆ. ಕುತೂಹಲಕಾರಿ ವಿಷಯವೇನೆಂದರೆ ಸಿಸಿಟಿವಿ ಅವರು ಚಹಾ ಪಕೋಡ ಮಾರಿ ಜೀವನ ನಡೆಸುತ್ತಿದ್ದಾರೆ. ತನ್ನ ತಮ್ಮ ಉತ್ತರಪ್ರದೇಶದ ಮುಖ್ಯಮಂತ್ರಿಯಾದರು ಸಹ ಅಕ್ಕ ಚಹಾ ಮಾರಿ ಜೀವನ ನಡೆಸುತ್ತಿರುವುದು ಯಾಕೆ ಎಂದು ಹಲವರಿಗೆ ಪ್ರಶ್ನೆ ಕಾಡುತ್ತೆ.

ಯೋಗಿ ಆದಿತ್ಯನಾಥ್ ಅವರಿಗಿಂತ ಶಶಿ ದೇವಿಯವರು 6 ವರ್ಷ ದೊಡ್ಡವರು. ಚಿಕ್ಕವಯಸ್ಸಿನಲ್ಲಿ ತನ್ನ ತಮ್ಮನ ಲಾಲನೆ ಪಾಲನೆ ಮಾಡಿದವರು.ಶಶಿ ದೇವಿ ತನ್ನ ಪ್ರೀತಿಯ ತಮ್ಮನಿಗೆ ಊಟವನ್ನು ತಿನ್ನಿಸುತ್ತಿದ್ದಳು. ಚಿಕ್ಕ ವಯಸ್ಸಿನಲ್ಲಿ ಸಾಕಿ ಸಲುಹಿದ ಅಕ್ಕ ಚಹಾ ಮಾರುತ್ತಿದ್ದರು ಸಹ ಯೋಗಿ ಆದಿತ್ಯನಾಥ್ ಅವರು ಯಾಕೆ ಸಹಾಯ ಮಾಡುತ್ತಿಲ್ಲ ಎಂದು ನಮಗೆಲ್ಲ ಪ್ರಶ್ನೆ ಮೂಡುತ್ತದೆ. ಯೋಗಿ ಆದಿತ್ಯನಾಥ್ ಅವರು 2017 ನೇ ಇಸವಿಯಲ್ಲಿ ಸನ್ಯಾಸತ್ವವನ್ನು ಸ್ವೀಕರಿಸಿದ್ದಾರೆ. ಯೋಗಿಯವರು ಸನ್ಯಾಸತ್ವ ಸ್ವೀಕರಿಸಿ ನಂತರ ಅಕ್ಕ ಮತ್ತು ತಮ್ಮನ ಬಾಂಧವ್ಯ ದೂರವಾಗುತ್ತದೆ.

ಸನ್ಯಾಸತ್ವ ಸ್ವೀಕರಿಸಿದ ನಂತರ ಯೋಗಿ ಆದಿತ್ಯನಾಥ್ ಅವರು ಮನೆಯ ಊಟವನ್ನು ಸೇವನೆ ಮಾಡುವುದನ್ನು ತ್ಯಜಿಸುತ್ತಾರೆ ಮತ್ತು ಮನೆಯವರ ಜೊತೆ ಇದ್ದ ಸಂಬಂಧವನ್ನು ಮಲ್ಲಿಗೆ ಕೊನೆಗೊಳಿಸುತ್ತಾರೆ. ಯೋಗಿ ಆದಿತ್ಯನಾಥ್ ಅವರು ಮುಖ್ಯಮಂತ್ರಿಯಾದರೂ ಸಹ ಅವರ ಕಡೆಯಿಂದ ಯಾವುದೇ ರೀತಿಯ ಆರ್ಥಿಕ ಸಹಾಯವು ಕುಟುಂಬಕ್ಕೆ ಸಿಗಲಿಲ್ಲ. ಯೋಗಿ ಆದಿತ್ಯನಾಥ್ ಅವರು ಯಾವಾಗಲೂ ಸರಳ ಹಾಗೂ ಸುಸಂಸ್ಕೃತ ಜೀವನವನ್ನು ನಡೆಸಿಕೊಂಡು ಬಂದವರು. ಆದ್ದರಿಂದ ತನ್ನ ಕುಟುಂಬದವರು ಕೂಡ ಸರಳ ಜೀವನವನ್ನು ನಡೆಸಬೇಕು ಎನ್ನುವುದು ಯೋಗಿ ಆದಿತ್ಯನಾಥ್ ಅವರ ಆಶೆ.

ಯೋಗಿ ಆದಿತ್ಯನಾಥ್ ಅವರ ಹಾಗೆ ಅವರ ಅಕ್ಕ ಶಶಿ ದೇವಿ ಕೂಡ ಸರಳ ಜೀವನವನ್ನೇ ಇಷ್ಟಪಡುತ್ತಾರೆ. ಚಹಾ ಮತ್ತು ಪಕೋಡವನ್ನು ಮಾರಿ ಜೀವನ ನಡೆಸುತ್ತಿದ್ದರು ಸಹ ಒಂದು ಬಾರಿ ಬಾರಿ ಕೂಡ ತನ್ನ ತಮ್ಮನ ಬಳಿ ಸಹಾಯ ಹಸ್ತ ಚಾಚಿಲ್ಲ. ಪ್ರತಿ ವರ್ಷ ತನ್ನ ತಮ್ಮನಿಗೆ ರಕ್ಷಾಬಂಧನದಂದು ರಾಕಿಯನ್ನು ಕಳಿಸುತ್ತಾಳೆ. ನನ್ನ ತಮ್ಮ ಇಪ್ಪತ್ತು ಕೋಟಿ ಜನರ ರಕ್ಷಣೆ ಮಾಡುವ ಹೊರೆ ಹೊತ್ತಿದ್ದಾರೆ ಆದ್ದರಿಂದ ಅವನು ನನ್ನ ಮೇಲೆ ಕಾಳಜಿ ವಹಿಸದೆ ಇದ್ದರೂ ಪರವಾಗಿಲ್ಲ. ಜನರ ಅಭಿವೃದ್ಧಿಯೇ ನನ್ನ ಅಭಿವೃದ್ಧಿ ಎಂದು ಹೇಳಿ ದೊಡ್ಡತನವನ್ನು ಮೆರೆದಿದ್ದಾಳೆ.

ಶಶಿ ದೇವಿಯವರಿಗೆ ಓರ್ವ ಮಗ ಮತ್ತು ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ತನ್ನ ಗಂಡನೊಂದಿಗೆ ರಿಷಿ ಕೃಷಿಯಲ್ಲಿ 2 ಅಂಗಡಿಯನ್ನು ನಿಭಾಯಿಸುತ್ತಿದ್ದಾಳೆ. ಈಕೆ ಕೊನೆಯದಾಗಿ ಯೋಗಿ ಆದಿತ್ಯನಾಥ್ ಅವರನ್ನು ಭೇಟಿ ಮಾಡಿದ್ದು ಮಾರ್ಚ್ 2017 ರಂದು. ತದನಂತರ ಎಂದೂ ಕೂಡ ಯೋಗಿ ಅವರನ್ನು ಭೇಟಿ ಮಾಡಲು ಹೋಗಲಿಲ್ಲ ಹಾಗೆ ಯೋಗಿ ಅವರು ಕೂಡ ಅಕ್ಕನನ್ನು ಭೇಟಿ ಮಾಡಲು ಬಂದಿಲ್ಲ ನೀವು ಯೋಗಿ ಆದಿತ್ಯನಾಥ್ ಅವರನ್ನು ಭೇಟಿ ಮಾಡುತ್ತೀರಾ ಎಂದು ಕೇಳಿದ ಪ್ರಶ್ನೆಗೆ ಶಶಿ ದೇವಿಯವರು ನಾನು ನನ್ನ ತಮ್ಮನನ್ನು ಭೇಟಿ ಮಾಡಲು ಹೋಗುವುದಿಲ್ಲ ಅವನೇ ನನ್ನ ಹತ್ತಿರ ಒಂದಲ್ಲ ಒಂದು ದಿನ ಬರುತ್ತಾನೆ ಎಂದು ಉತ್ತರ ನೀಡಿದ್ದಾರೆ.

Fe story

Leave a Comment

error: Content is protected !!