
ರಾಜ್ಯ ಸರ್ಕಾರದಿಂದ ಅಬಕಾರಿ ಇಲಾಖೆಯಲ್ಲಿ ಅರ್ಜಿ ಆಹ್ವಾನ ಆಸಕ್ತರು ಅರ್ಜಿ ಸಲ್ಲಿಸಿ
ಕರ್ನಾಟಕ ರಾಜ್ಯ ಸರ್ಕಾರವು ಅಬಕಾರಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಸಲ್ಲಿಸಲು ಆಹ್ವಾನಿಸಲಾಗಿದೆ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಕರ್ನಾಟಕ ಸಾರ್ವಜನಿಕ ಸೇವಾ ಆಯೋಗದ ಅಧಿಕೃತ ವೆಬ್ ಸೈಟ್ ಗೆ ಭೇಟಿನೀಡಿ ಆನ್ ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ
ಅರ್ಜಿ ಆಹ್ವಾನಕ್ಕೆ ಸಂಬಂಧಿಸಿದಂತೆ ವಿವರಗಳು ಈ ಕೆಳಕಂಡಂತಿವೆ
ಕರ್ನಾಟಕ ಸಾರ್ವಜನಿಕ ಸೇವಾ ಆಯೋಗದ ಗ್ರೂಪ್ ಎ ನ ಆರಕ್ಷಕ ಉಪಾದೀಕ್ಷಕರು ಸಹಾಯಕ ಆಯುಕ್ತರು ಮತ್ತು ಗ್ರೂಪ್ ಬಿ ನ ತಹಸೀಲ್ದಾರ್ ತೆರಿಗೆ ಅಧಿಕಾರಿ ಸಹಾಯಕ ಅಧೀಕ್ಷಕರು ಅಬಕಾರಿ ಉಪ ಅಧಿಕ್ಷಕರುಹಾಗೂ ಸಹಾಯಕ ನಿರ್ಧೇಶಕರು ಸೇರಿದಂತೆ ಒಟ್ಟು 106 ಹುದ್ದೆಗಳಿಗಾಗಿ ಅರ್ಜಿ ಆಹ್ವಾನಿಸಲಾಗಿದ್ದು ಉದ್ಯೋಗದ ಸ್ಥಳವು ಕರ್ನಾಟಕದಾದ್ಯಂತ ಎಲ್ಲಿ ಬೇಕಾದರೂ ಆಯ್ಕೆ ಪ್ರಕ್ರಿಯೆಯಲ್ಲಿ ನಿಗಧಿಸಬಹುದಾಗಿದೆ
ಅರ್ಜಿ ಸಲ್ಲಿಸಲು ಇಚ್ಛಿಸುವ ಅಭ್ಯರ್ಥಿಗಳು ಯಾವುದೇ ಪದವಿ ಮಾನ್ಯತೆ ಪಡೆದ ಮಂಡಳಿ ಅಥವಾ ಸರ್ಕಾರದ ಮಾನ್ಯತೆ ಪಡೆದ ವಿಶ್ವ ವಿದ್ಯಾಲಯದಿಂದ ಪದವಿಯನ್ನು ಪೂರೈಸಿರಬೇಕು ಮತ್ತು ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ ಫೆಬ್ರವರಿ 6 2020 ಆಗಿದ್ದು ಮಾರ್ಚ್ 6 2020 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ ಅಲ್ಲದೆ ಮಾರ್ಚ್ 7 2020 ಪರೀಕ್ಷಾ ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕವಾಗಿದೆ ಮತ್ತು ಈ ಸಂಬಂಧ ಪರೀಕ್ಷೆಯನ್ನು 17 ಮೇ 2020 ಕ್ಕೆ ನಿಗದಿಪಡಿಸಲಾಗಿದೆ
ಹಾಗೂ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳ ವಯೋಮಿತಿ ಕನಿಷ್ಠ 21 ವರ್ಷ ತುಂಬಿರಬೇಕು ಸಾಮಾನ್ಯವರ್ಗಕ್ಕೆ ಸೇರಿದ ಅಭ್ಯರ್ಥಿಗಳಿಗೆ ಗರಿಷ್ಠ 35 ವರ್ಷದ ವರೆಗೆ ವಯೋಮಿತಿಯನ್ನು ನಿಗಧಿಸಲಾಗಿದ್ದು ಪರಿಶಿಷ್ಟ ಜಾತಿ ಪಂಗಡ ಸೇರಿದಂತೆ ಬೇರೆಯ ವರ್ಗಕ್ಕೆ ಸೇರಿದ ಅಭ್ಯರ್ಥಿಗಳಿಗೆ ಗರಿಷ್ಠ 40 ವರ್ಷ ವಯೋಮಿತಿಯನ್ನು ನಿಗಧಿಸಲಾಗಿದೆ
ಸಾಮಾನ್ಯ ವರ್ಗದ ಅಭ್ಯರ್ಥಿಗಳು ರು 600/- ಓಬಿಸಿ ಅಭ್ಯರ್ಥಿಗಳು ರೂ 300/- ಮತ್ತು ಪರಿಶಿಷ್ಟ ಜಾತಿ ಮತ್ತು ಪಂಗಡ ಸೇರಿದಂತೆ ಮಿಕ್ಕೆಲ್ಲಾ ಅಭ್ಯರ್ಥಿಗಳಿಗೆ ರೂ 35/- ಗಳನ್ನು ಪರೀಕ್ಷಾ ಅರ್ಜಿ ಶುಲ್ಕವಾಗಿ ನಿಗಧಿಪಡಿಸಲಾಗಿದೆ ಪರೀಕ್ಷೆ ಆಧಾರದ ಮೇಲೆ ಆಯ್ಕೆ ಪ್ರಕ್ರಿಯೆ ನಡೆಯಲಿದ್ದು ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಈ ಮಾಹಿತಿಯನ್ನು ಸದುಪಯೋಗ ಪಡಿಸಿಕೊಳ್ಳಲು ಕೋರಿದೆ