ಭಾರತೀಯ ಅಂಚೆ ಇಲಾಖೆ ನೇಮಕಾತಿ ಕುರಿತು ಸಂಪೂರ್ಣ ಮಾಹಿತಿ

ಭಾರತೀಯ ಅಂಚೆ ಸೇವೆಯು ಭಾರತ ಸರಕಾರ ನಡೆಸುವ ಸಾರ್ವಜನಿಕ ಅಂಚೆ ವ್ಯವಸ್ಥೆ. ಭಾರತೀಯ ಅಂಚೆ ಸೇವೆ ವಿಶ್ವದಲ್ಲೇ ಅತಿ ದೊಡ್ಡದಾದ ಸಂಪರ್ಕ ಜಾಲವನ್ನು ಹೊಂದಿದೆ. ಮತ್ತು ಇದರ ೧,೫೫,೦೦೦ ಅಂಚೆ ಕಛೇರಿಗಳು ದೇಶಾದ್ಯಂತ ಕಾರ್ಯನಿರ್ವಹಿಸುತ್ತಿವೆ. ಭಾರತ ದೇಶದ ಯಾವುದೇ ಊರಿಗೆ ಹೋದರೂ ನಿಮಗೆ ಅಂಚೆ ಕಛೇರಿ ಕಾಣಸಿಗುವುದರಿಂದ, ಸಾರ್ವಜನಿಕರು ದೇಶದ ಎಲ್ಲಾ ಪ್ರದೇಶಗಳೊಂದಿಗೆ ಸಂಪರ್ಕದಲ್ಲಿರಲು ಸಾಧ್ಯವಾಗಿದೆ.ಪ್ರಪಂಚದ ವಿವಿಧ ಭಾಗಗಳ ಜನರೂ ಸಂಸ್ಥೆಗಳೂ ಸರ್ಕಾರಗಳೂ ಪರಸ್ಪರವಾಗಿ ಸಂಪರ್ಕವನ್ನು ವೃದ್ಧಿಪಡಿಸಿಕೊಳ್ಳುವುದಕ್ಕೂ ವ್ಯವಹಾರಗಳನ್ನು ಬೆಳೆಸುವುದಕ್ಕೂ ನೆರವಾಗಿರುವ ಸಾಧನವೇ ಈ ಅಂಚೆ ವ್ಯವಸ್ಥೆ.

ಇತ್ತೀಚಿನ ದಿನಗಳಲ್ಲಿ ಅಂತರ್ಜಾಲ ಬಳಕೆಯ ಕಾರಣಗಳಿಂದ ಅಂಚೆ ವ್ಯವಸ್ಥೆ ತಕ್ಕ ಮಟ್ಟಿಗೆ ಕಣ್ಮರೆಯಾಗಿದೆ ಆದರೂ ಈ ನಡುವೆ ಅಂಚೆ ಕಚೇರಿ ವಿವಿಧ ಯೋಜನೆಗಳನ್ನು ಸಾಮಾನ್ಯ ಜನರಿಗೆ ಅನುಕೂಲವಾಗುವಂತೆ ಜಾರಿಗೊಳಿಸಿದೆ. ಅಂಚೆ ಕಚೇರಿಗಳಲ್ಲಿ ಉದ್ಯೋಗ ಮಾಡಲು ಇಚ್ಚಿಸುವರಿಗೆ ಇಲ್ಲೊಂದು ಸುವರ್ಣ ಅವಕಾಶ ಏನೆಂದು ಲೇಖನದಲ್ಲಿ ನೋಡೋಣ ಬನ್ನಿ.

ಅಂಚೆ ಇಲಾಖೆ ಹೊಸ ನೇಮಕಾತಿ ನಡೆಯುತ್ತಲಿವೆ 8 ನೇ ತರಗತಿ ಉತ್ತೀರ್ಣ ಆದವರಿಗೆ ಒಳ್ಳೆಯ ಅವಕಾಶ ಯಾವುದೇ ಪರೀಕ್ಷೆ ಅವಶ್ಯಕತೆ ಇಲ್ಲ ಒಟ್ಟು 9 ಹುದ್ದೆಗಳಿಗೆ ನೇಮಕಾತಿ ಇದ್ದು ಅರ್ಜಿಯಲ್ಲಿ ಮೆಕ್ಯಾನಿಕ್ ಮೋಟಾರ್ ಎಲೆಕ್ಟ್ರಿಷಿಯನ್ ಟಿರೆಮನ ಬ್ಲಾಕ್ ಸ್ಮಿತ್ ಹುದ್ದೆಗಳಿಗೆ ಆಹ್ವಾನ ಇದೆ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು ಅಭ್ಯರ್ಥಿ 18-30 ರ ವಯೋಮಿತಿ ಒಳಗೆ ಇರಬೇಕು ಮತೆ ಕನಿಷ್ಟ 8ನೆ ತರಗತಿ ಪಾಸು ಆಗಿರಬೇಕು

ಇಲ್ಲಿ ಯಾವುದೇ ರೀತಿಯ ಎಕ್ಸಾಮ್ ಶುಲ್ಕ ಹಾಗೇ ಎಂಟ್ರಿ ಶುಲ್ಕ ಇರೋಲ್ಲ ನೇರ ಸಂದರ್ಶನ ಇದ್ದು ಅಭ್ಯರ್ಥಿಗಳು ಅರ್ಜಿಯಲ್ಲಿ ತಮ್ಮ ಸಂಪೂರ್ಣ ಮಾಹಿತಿಯನ್ನು ಇಂಗ್ಲಿಷ್ ನಲ್ಲಿ ಪೂರ್ಣ ವಿವರ ತುಂಬಿಸಿ ದ ಸೀನಿಯರ್ ಮ್ಯಾನೇಜರ್ ಮೇಲ್ ಮೋಟರ್ ಸರ್ವೀಸ್ 134/A ಸುಧಾಮ್ ಕಾಲು ಆಹಿರೆ ಮಾರ್ಗ್ ವರ್ಲು ಮುಂಬೈ – 40018 ಈ ವಿಳಾಸಕ್ಕೆ ಫಾರ್ಮ್ ತುಂಬಿಸಿ ಅಂಚೆ ಮೂಲಕ ಕಳುಹಿಸಬೇಕು. ವಿಳಾಸವನ್ನು ಸರಿಯಾಗಿ ಇಂಗ್ಲಿಷ್ನಲ್ಲಿ ಬರೆದು 09-05-2022 ರ ಒಳ್ಗಡೆ ಕಳುಹಿಸಬೇಕು.

ಆಯ್ಕೆ ಅದ ಅಭ್ಯರ್ಥಿಗಳಿಗೆ ಯಾವುದೇ ಆನ್ಲೈನ್ ಪರೀಕ್ಷೆ ಇಲ್ಲ ಹಾಗೂ ಯಾವುದೇ ಶುಲ್ಕ ಇರುವುದಿಲ್ಲ ಅರ್ಜಿಯನ್ನು ಬರ್ತಿ ಮಾಡಿದ ನಂತರ ಅದರ ಜೊತೆ ತಮ್ಮ ಡ್ರೈವಿಂಗ್ ಲೈಸೆನ್ಸ್, ಏಜ್ ಪ್ರೂಫ್,ಹಾಗೂ ಎಜುಕೇಷನ್ ಪ್ರೂಫ್ ಗೆ ಒಂದು ಕಾಪಿ ಅನ್ನು ಜೊತೆಗೆ ಲಗ್ತಿಸಬೇಕು. ನೇಮಕಾತಿ ಅದ ಅಭ್ಯರ್ಥಿ ಗಳಿಗೆ ದೇಶದ ಯಾವುದೇ ಭಾಗದಲ್ಲಿ ಬೇಕಾದರೂ ನೇಮಕಾತಿ ಆಗುವುದು.

Leave a Comment

error: Content is protected !!