ಕೈತುಂಬಾ ಹಣ ಸಂಪಾದಿಸುತ್ತಾನೆ ಎಂದು ಇಂಜಿನಿಯರ್ ನನ್ನು ಮದುವೆಯಾದ ಯುವತಿ. ಮದುವೆಯಾದ ಮೇಲೆ ಗಂಡನ ಅಸಲಿ ಮುಖವಾಡ ತಿಳಿದು ದೇವರ ಪಾದ ಸೇರಿಕೊಂಡ ನತದೃಷ್ಟ ತಾಯಿ ಮತ್ತು ಮಗು

ಒಂದು ಹೆಣ್ಣಿಗೆ ಮದುವೆಆಯುತು ಎಂದರೆ ಆಕೆ ತನ್ನ ಮುಂದಿನ ಜೀವನವನ್ನು ಗಂಡನೊಂದಿಗೆ ಕಳೆಯಬೇಕು. ಕಷ್ಟವೂ ಸುಖವೂ ಆತನೊಂದಿಗೇ ಜಿವನ ಸಾಗಿಸಬೇಕು. ಆದರೆ ಸಾಕಷ್ಟು ನಮ್ಮ ಲೆಕ್ಕಾಚಾರ ತಪ್ಪಾಗುತ್ತದೆ. ತಂದೆ ತಾಯಿಯಂದಿರೂ ಕೂಡ ಮಗಳ ಮದುವೆಯಾದರೆ ಸಾಕು, ಜವಾಬ್ದಾರಿ ಕಳೆದುಕೊಂಡರೆ ಸಾಕು ಅಂತ ಮಗಳ ಮದುವೆ ಮಾಡಿ ಮುಗಿಸುತ್ತಾರೆ. ಆದರೆ ಅದರ ಪರಿಣಾಮವನ್ನು ಅನುಭವಿಸುವವರು ಮಾತ್ರ ಹೆಣ್ಣು ಮಕ್ಕಳು!

ನಿಖಿತಾ ಎನ್ನುವ ಹೆಣ್ಣು ಮಗಳು ಗಂಡನ ಕಾಟವನ್ನು ತಾಳದೆ ಇಹಲೋಕ ತ್ಯಜಿಸಿದ ಘಟನೆ ದಾವಣಗೆರೆಯಲ್ಲಿ ನಡೆದಿದೆ. ದಾವಣಗೆರೆ ಮೂಲದ ನಿಖಿತಾ 25 ವರ್ಷದ ಯುವತಿ. ಕಳೆದ ವರ್ಷವಷ್ಟೇ ಆಕೆಯ ಮದುವೆಯಾಗಿತ್ತು. ದಾವಣಗೆರೆಯ ಇಂಜನಿಯರ್ ಮನೋಜ್ ಕುಮಾರ್ ಅವರೊಂದಿಗೆ ನಿಖಿತಾ ವಿವಾಹವಾಗಿತ್ತು. ಅವರಿಗೆ ಒಂಬತ್ತು ತಿಂಗಳ ಮಗುವೂ ಇತ್ತು. ಆದರೆ ಇದು ಸುಖ ಸಂಸಾರವಗಿರಲಿಲ್ಲ. ನಿಖಿತಾ ಧನ ಪಿಶಾಚಿ ಮನೋಜ್ ನಿಂದ ಚಿತ್ರಹಿಂ’ಸೆ ಅನುಭವಿಸುತ್ತಿದ್ದಳು. ನಿಖಿತಾ ತಂದೆ ತಾಯಿ ಇಬ್ಬರೂ ದಾವಣಗೆರೆಯಲ್ಲಿ ಶಿಕ್ಷಕರು. ಮಗಳ ಮದುವೆಯ ಸಂದರ್ಭದಲ್ಲಿ ಮನೋಜ್ ಗೆ ಅರು ಲಕ್ಷ ಹಣ ಹಾಗೂ ಚಿನ್ನಾಭರಣಗಳನ್ನು ವರದಕ್ಷಿಣೆಯಾಗಿ ಕೊಟ್ಟಿದ್ದರು. ಆದರೆ ಮನೋಜ್ ಗೆ ಮಾತ್ರ ಇದು ಸಾಲಲಿಲ್ಲ.

ಮನೋಜ್ ತನ್ನ ಅಮ್ಮನ ಮಾತು ಕೇಳಿ ಹೆಂಡತಿಗೆ ಚಿತ್ರಹಿಂ’ಸೆಯನ್ನು ಕೊಡುತ್ತಿದ್ದ. ತನ್ನ ಗಂಡ ಹೇಗೆ ಕಾಟ ಕೊಡುತ್ತಿರುವುದಾಗಿ ನಿಖಿತಾ ಪಾಲಕರಿಗೂ ತಿಳಿಸಿದ್ದಳು. ಇನ್ನು ಈತನ ಜೊತೆ ಬದುಕು ನಡೆಸುವುದು ಕಷ್ಟ ಎಂದು ಅರಿತ ನಿಖಿತಾ ತಾಯಿಯ ಮನೆಗೆ ಹಿಂತಿರುಗಿ ಬಂದಿದ್ದಳು. ಆದರೆ ಮನೋಜ್ ಮಾತ್ರ ಫೋನ್ ಮಾಡಿಯೂ ಹೆಂಡತಿಗೆ ಹಿಂ’ಸೆ ಕೊಡುತ್ತಿದ್ದ. ಹಣಕ್ಕಾಗಿ ಪೀಡಿಸುತ್ತಿದ್ದ. ಇದನ್ನೆಲ್ಲಾ ತದೆದುಕೊಳ್ಳಲಾಗದೆ ನಿಖಿತಾ, ತಾಯಿಯ ಮನೆಯಲ್ಲಿ, ತಂದೆ ತಾಯಿ ಕೆಲಸಕ್ಕೆ ಹೋದಾಗ ತನ್ನ ಒಂಬತ್ತು ತಿಂಗಳ ಮಗುವಿಗೂ ನೇ’ಣು ಬಿಗಿದು ಕೊಂ’ದು ತಾನೂ ಆತ್ಮಹ’ ತ್ಯೆ ಮಾಡಿಕೊಂಡಿದ್ದಾಳೆ ನಿಖಿತಾ!

ತಮ್ಮ ಮಗಳ ಹಾಗೂ ಮೊಮ್ಮಗಳ ಈ ಪರಿಸ್ಥಿತಿ ಗೆ ಅಳಿಯ ಮನೋಜ್ ಕುಮಾರ್ ಕಾರಣ ಅಂತ ನಿಖಿತಾ ತಂದೆ ತಾಯಿ ಪೋಲಿಸರಿಗೆ ದೂರು ನೀಡಿದ್ದಾರೆ. ಜಗಳೂರು ಪೋಲಿಸ್ ಠಾಣೆಯಲ್ಲಿ ಈ ಕೇಸ್ ದಾಖಲಗಿದೆ. ಮಗಳು ಹಾಗೂ ಪ್ರಪಂಚವನ್ನೇ ಕಾಣದ ಮಗುವಿನ ಮರಣವನ್ನು ನೋಡಿ ದಾವಣಗೆರೆ ಜನತೆ ಕಣ್ಣೀರಿಟ್ಟಿದೆ.

Leave a Comment

error: Content is protected !!