ಮದುವೆಯಾಗಿ ಇಬ್ಬರು ಮಕ್ಕಳಿದ್ದರೂ ಕೂಡ 35 ವರ್ಷದ ಮಹಿಳೆ 21 ವರ್ಷ ಅರ್ಚಕನ ಜೋತೆ ಲವ್ವಿ ಡವ್ವಿ. ಆಮೇಲೆ ಮಧ್ಯರಾತ್ರಿ ಕಾಡಿನಲ್ಲಿ ಅರ್ಚಕ ಮಾಡಿದ್ದೇನು ಗೊತ್ತಾ

ಕೆಲವರು ತಲೆಯಲ್ಲಿ ಏನೇನೋ ಯೋಚನೆಗಳು ಬರುತ್ತೋ ಗೊತ್ತಿಲ್ಲ ತಾವು, ತಮ್ಮವರು, ತಮ್ಮ ಸಂಸಾರ ಅನ್ನೋದನ್ನ ಮರೆತು ಕೆಲವು ಸ್ವಾರ್ಥಕ್ಕೆ, ಪ್ರೀತಿ-ಪ್ರೇಮದ ಆಟಕ್ಕೆ ಬಲಿಯಾಗುತ್ತಾರೆ. ಅದರಲ್ಲೂ ಮಹಿಳೆಯರೇ ಹೆಚ್ಚು ಇಂತಹ ಪರಿಸ್ಥಿತಿಯನ್ನು ತಂದುಕೊಳ್ಳುವುದು ಎಂಬುದೇ ಅಚ್ಚರಿ. ಇಲ್ಲೊಬ್ಬ ಹೆಂಗಸಿನ ಗತಿ ನೋಡಿ. ಮದುವೆಯಾಗಿ ಎರಡು ಮಕ್ಕಳಿದ್ದರೂ ಒಬ್ಬ ಯುವಕನ ಜೊತೆ ಪರಾರಿಯಾಗಿ, ಕೊನೆಗೆ ಆಕೆಯ ಸ್ಥಿತಿ ಹೇಗಾಗಿತ್ತು ಗೊತ್ತಾ?!

ಹೌದು ಇಂತಹ ಒಂದು ವಿಚಿತ್ರ ಘಟನೆ ನಡೆದಿರುವುದು ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಕೊಲ್ಲುಪುರ ಗ್ರಾಮದಲ್ಲಿ. ಆಕೆ 35 ವರ್ಷದ ಗೃಹಿಣಿ. ಮದುವೆಯಾಗಿ ಎರಡು ಮಕ್ಕಳು ಕೂಡಾ ಇದ್ದಾರೆ. ಇದೀಗ ಇನ್ನೊಬ್ಬನ ಪ್ರೀತಿಯಲ್ಲಿ ಬಿದ್ದ ಗೃಹಿಣಿ ಜೂನ್ 12 ನೇ ತಾರೀಖಿನಂದು ಮನೆ ಮಠ ತೊರೆದು ಆತನ ಜೊತೆಗೆ ಪರಾರಿಯಾಗಿದ್ದಳು. ಆಕೆಯ ಪ್ರಿಯಕರ ಮಹದೇಶ್ವರ ದೇವಸ್ಥಾನದ ಅರ್ಚಕರ ಮಗ ಸಂತೋಷ್. ಈತನಿಗೆ ಕೇವಲ 21 ವರ್ಷ ವಯಸ್ಸು. ದೇವಸ್ಥಾನದ ಅರ್ಚಕರ ಬಳಿ ಶಾಸ್ತ್ರ ಕೇಳಲು ಬಂದು ಗ್ರಹಿಣಿ ಸಂತೋಷನ ಪ್ರೀತಿಯಲ್ಲಿ ಬಿದ್ದಿದ್ದಳು. ಇಬ್ಬರೂ ಪ್ರೀತಿಸಲು ಆರಂಭಿಸಿದರು. ನಂತರ ನಿನ್ನನು ನಾನು ಮದುವೆ ಮಾಡಿಕೊಳ್ಳುತ್ತೇನೆ ಎಲ್ಲಿಗಾದರೂ ಹೋಗೋಣ ಎಂದು ಅರ್ಚಕರ ಮಗ ಸಂತೋಷ್ ಗೃಹಿಣಿಯನ್ನು ನಂಬಿಸಿದ್ದ.

ಕೊನೆಗೆ ಗ್ರಹಿಣಿ ಹಿಂದೆ ಮುಂದೆ ಯೋಚನೆ ಮಾಡದೇ ತನ್ನ ಪ್ರಿಯಕರನೊಂದಿಗೆ ಊರನ್ನು ಬಿಟ್ಟಳು. ಸಂತೋಷ್ ಆಕೆಯನ್ನು ಮದುವೆಯಾಗುವುದಾಗಿ ನಂಬಿಸಿದ್ದ. ಜೊತೆಗೆ ದೇವಸ್ಥಾನ ಹಾಗೂ ಇತರ ನಿರ್ಜನ ಪ್ರದೇಶಗಳಲ್ಲಿಯೂ ಆಕೆಯೊಂದಿಗೆ ಸುತ್ತಾಡಿದ. ಜೂನ್ 12 ರಿಂದ 22 ರವರೆಗೆ ಅಂದರೆ ಕೇವಲ ಹತ್ತು ದಿನ ಗ್ರಹಿಣಿಯ ಜೊತೆಗೆ ಇದ್ದ ಯುವಕ ಕೊನೆಗೆ ತನ್ನ ವರಸೆಯನ್ನು ಬದಲಾಯಿಸಿದ್ದಾನೆ. ಮದುವೆಯಾಗ್ತಿನಿ ಬಾ ಅಂತ ಕರೆದುಕೊಂಡು ಹೋದ ಸಂತೋಷ್ ನಮ್ಮ ಮನೆಯಲ್ಲಿ ಮದುವೆಗೆ ಒಪ್ಪಲ್ಲ ಅಂತ ಕ್ಯಾತೆ ತೆಗೆದಿದ್ದಾನೆ.ಗೃಗ್ರಹಿಣಿ ಎಲ್ಲಾದರೂ ದೂರ ಹೋಗಿ ನಾವು ಬದುಕೋಣ ಎಂದರೆ ಆತ ಒಪ್ಪಲಿಲ್ಲ. ಹೋಗಲಿ ಊರಿಗೆ ವಾಪಸ್ ಹೋಗೋಣ ನೀನು ನನಗೆ ತಾಳಿ ಕಟ್ಟು. ನಾವಿಬ್ಬರೂ ಒಂದಾಗಿ ಬದುಕಬಹುದು ಎಂದು ಎಷ್ಟು ಹೇಳಿದರೂ ಆತರ ಕಿವಿಮೇಲೆ ಹಾಕಿಕೊಳ್ಳಲಿಲ್ಲ. ಕೊನೆಗೆ ಇಬ್ಬರೂ ಸಾವಿನಲ್ಲಿ ಒಂದಾಗೋಣ ಎಂದು ಆಕೆಯನ್ನು ನಿರ್ಜನ ಪ್ರದೇಶವೊಂದಕ್ಕೆ ಕರೆದುಕೊಂಡು ಬಂದಿದ್ದ.

ಆ ಪ್ರದೇಶ ಭಾಗಶಃ ಕಾಡು. ಯಾರು ಕೂಗಿದರು ಸುಲಭವಾಗಿ ಕೇಳಿಸದಂತಹ ಪ್ರದೇಶ. ಮಧ್ಯರಾತ್ರಿ 12 ಗಂಟೆ ಸುಮಾರಿಗೆ ನೀನು ಇಲ್ಲೇ ಇರು ಐದು ನಿಮಿಷ ಬರ್ತೀನಿ ಅಂತ ಹೋದ ಸಂತೋಷ್ ನ ಪತ್ತೆಯೇ ಇರರಲಿಲ್ಲ. ಗೃಹಿಣಿ ಅಲ್ಲಿಯೇ ಕಾದುಕಾದು ಸುಸ್ತಾಗಿದ್ದಾಳೆ. ಜೊತೆಗೆ ಕಾಡುಪ್ರಾಣಿಗಳ ಭಯದಿಂದಲೇ ರಾತ್ರಿ ಇಡೀ ಕಾಲ ಕಳೆದಿದ್ದಾಳೆ. ಜೀವವನ್ನು ಕೈಯಲ್ಲಿ ಹಿಡಿದು ಪ್ರಿಯಕರನಿಗಾಗಿ ಕನವರಿಸುತ್ತಾ ದೇವರಿಗೆ ಕೈ ಮುಗಿಯುತ್ತಾ ಕಾಡಿನಲ್ಲಿ ಒಂದು ರಾತ್ರಿಯನ್ನು ಕಳೆದಿದ್ದಾಳೆ.

ಅಂತೂ ಹೇಗೋ ಕತ್ತಲಲ್ಲೇ ನಡೆದುಕೊಂಡು ಕಾಡಂಚಿನ ರಸ್ತೆಯ ಬದಿಯಲ್ಲಿ ಮಹಿಳೆ ಬಂದು ಕುಳಿತಿದ್ದಳು. ಆಕೆಯನ್ನು ನೋಡಿದ ಸ್ಥಳೀಯರು ಆಕೆಯ ಕಥೆಯನ್ನು ಕೇಳಿ, ಹುಲ್ಲಹಳ್ಳಿ ಪೊಲೀಸ್ ಠಾಣೆಗೆ ವಿಷಯ ಮುಟ್ಟಿಸಿದ್ದಾರೆ. ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಗೃಹಿಣಿಯ ಈ ಸ್ಥಿತಿಯ ಬಗ್ಗೆ ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರವಾಗಿ ನನಗೆ ಅನ್ಯಾಯವಾಗಿದೆ ಹೇಗಾದರೂ ನ್ಯಾಯಕೊಡಿಸಿ ಅಂತಹ ಆ ಗೃಹಿಣಿ ಪೊಲೀಸರ ಬಳಿ ಗೋಗರೆದಿದ್ದಾರೆ.

ನನಗೆ ನನ್ನ ಪ್ರಿಯಕರ ಸಂತೋಷ್ ಬೇಕು ಆತನ ಜೊತೆ ಮದುವೆ ಮಾಡಿಸಿ. ನನ್ನನ್ನು ಮದುವೆಯಾಗುವುದಾಗಿ ಹೇಳಿ ಕರೆದುಕೊಂಡು ಬಂದು ಈಗ ನಾಪತ್ತೆಯಾಗಿದ್ದಾನೆ ನನಗೆ ನ್ಯಾಯ ಕೊಡಿಸಿ ಅಂತಹ ಕಣ್ಣೀರಿಟ್ಟಿದ್ದಾಳೆ. ಕೊನೆಗೆ ಪೊಲೀಸರು ಹೇಗೋ ಆಕೆಯ ಮನವೊಲಿಸಿ, ಅವಳನ್ನು ಹಿಂತಿರುಗಿ ಕರೆದುಕೊಂಡು ಬಂದಿದ್ದಾರೆ. ಇದೀಗ ಸಂತೋಷ್ ನ ಹುಡುಕಾಟ ಶುರುವಾಗಿದೆ. ಒಟ್ಟಿನಲ್ಲಿ ಪ್ರೀತಿ-ಪ್ರೇಮ ಅಂತ ಯುವಕನ ಹಿಂದೆ ಬಿದ್ದು ಮಹಿಳೆಯ ಸ್ಥಿತಿ ಯಾವ ಶತ್ರುಗೂ ಬೇಡಪ್ಪಾ ಎಂಬಂತಾಗಿದೆ.

Leave a Comment

error: Content is protected !!