ಕನ್ನಡಿಗರ ಮನಸ್ಸು ಗೆದ್ದ ನಟಿ ಸಾಯಿ ಪಲ್ಲವಿ, ಕನ್ನಡಿಗರಿಗಾಗಿ ಏನ್ ಮಾಡಿದ್ದಾರೆ ನೋಡಿ

ದಕ್ಷಿಣ ಭಾರತದ ಕೆಲವು ಪ್ರಮುಖ ನಟಿಯರಲ್ಲಿ ಸಾಯಿಪಲ್ಲವಿ ಕೂಡ ಒಬ್ಬರು. ಸಾಯಿ ಪಲ್ಲವಿ ಅವರನ್ನು ಬಹಳಷ್ಟು ಜನರು ಇಷ್ಟಪಡುತ್ತಾರೆ, ಅವರ ಸಿನಿಮಾಗಳನ್ನು ಇಷ್ಟಪಟ್ಟು ನೋಡುತ್ತಾರೆ. ಸಾಯಿ ಪಲ್ಲವಿ ಅವರ ಅಭಿಮಾನಿಗಳು ಬಹುತೇಕ ತಮಿಳು, ತೆಲುಗು, ಮಲಯಾಳಂ, ಕನ್ನಡ ಭಾಷೆಗಳಲ್ಲಿ ಇದ್ದಾರೆ. ಸಾಯಿ ಪಲ್ಲವಿಯವರು ಉತ್ತಮವಾಗಿ ನಟಿಸುವುದಲ್ಲದೆ ಡ್ಯಾನ್ಸರ್ ಕೂಡ ಹೌದು. ಸಾಯಿ ಪಲ್ಲವಿ ಅವರು ಕನ್ನಡಿಗರು ಖುಷಿಪಡುವ ಕೆಲಸ ಮಾಡಿದ್ದಾರೆ ಹಾಗಾದರೆ ಅದೇನೆಂದು ಈ ಲೇಖನದಲ್ಲಿ ನೋಡೋಣ.

ದಕ್ಷಿಣ ಭಾರತದ ಫೇವರೇಟ್ ನಟಿ ಸಾಯಿ ಪಲ್ಲವಿ. ಅವರ ಹೆಸರು ಕೇಳಿದರೆ ಸಾಕು ಪಡ್ಡೆ ಹುಡುಗರ ಮನಸಲ್ಲಿ ಲವ್ ಶುರುವಾಗುತ್ತದೆ, ಹೃದಯದ ಬಡಿತ ಜೋರಾಗುತ್ತದೆ. ಸ್ಕ್ರೀನ್ ಮೇಲೆ ಬಂದರೆ ಪಕ್ಕದಲ್ಲೆ ಬಂದು ನಿಂತ ಹಾಗೆ ರೋಮಾಂಚನವಾಗುತ್ತದೆ. ತಮಿಳು, ತೆಲುಗು, ಮಲಯಾಳಂನಲ್ಲಿ ನಟಿಸುವ ನಟಿಯರು ಹೆಚ್ಚು ಇಷ್ಟವಾಗುವುದು ಅವರ ಸಿಂಪಲ್ ಲುಕ್ ಗೆ. ಪಡ್ಡೆ ಹುಡುಗರ ನಿದ್ದೆ ಕೆಡಿಸಲು ಹಾಫ್ ಬಟ್ಟೆ ತೊಡಬೇಕಾಗಿಲ್ಲ, ಹಾರ್ಟ್ ಫುಲ್ ನಟನೆ ಮಾಡಲು ಗೊತ್ತಿದ್ದರೆ ಸಾಕು ಇಂತಹ ಲೀಸ್ಟ್ ನಲ್ಲಿ ಇರುವವರು ಸಾಯಿ ಪಲ್ಲವಿ. ಅವರ ಮುಖದಲ್ಲಿ ಮೊಡವೆಗಳಿವೆ ಆದರೆ ಯಾವ ನಿರ್ದೇಶಕರು ಅವರನ್ನು ರಿಜೆಕ್ಟ್ ಮಾಡಿಲ್ಲ ಬದಲಿಗೆ ಮತ್ತಷ್ಟು ಆಫರ್ ಗಳು ಅವರನ್ನು ಹುಡುಕಿಕೊಂಡು ಬಂದವು.

ಮಲೆಯಾಳಂ ಭಾಷೆಯ ಪ್ರೇಮಂ ಸಿನಿಮಾ ನೋಡಿದವರಿಗೆ ಸಾಯಿ ಪಲ್ಲವಿ ಇಷ್ಟವಾಗದೆ ಇರಲು ಸಾಧ್ಯವಿಲ್ಲ. ಕನ್ನಡಿಗರಿಗೂ ಇಷ್ಟವಾಗುವ ನ್ಯಾಚುರಲ್ ಬ್ಯೂಟಿ ಮಲರ್ ಆಗಿ ಮನಸ್ಸು ಗೆದ್ದರು. ಇದೀಗ ಸಹಜ ಸುಂದರಿ ಸಾಯಿ ಪಲ್ಲವಿ ಅವರು ಒಂದು ಕೆಲಸ ಮಾಡುವ ಮೂಲಕ ಕನ್ನಡಿಗರಿಂದ ಶಭಾಷ್ ಎನಿಸಿಕೊಂಡಿದ್ದಾರೆ. 1992 ಮೇ 9ರಂದು ತಮಿಳು ನಾಡಿನ ಕೊಯಂಬತ್ತೂರಿನ ಕೋಟೆಗಿರಿಯಲ್ಲಿ ಜನಿಸಿದರು.

ಇವರು ಮೊದಲು ಬಣ್ಣ ಹಚ್ಚಿದ್ದು ಮಲೆಯಾಳಂ ಭಾಷೆಯಲ್ಲಿ. ಸಾಯಿ ಪಲ್ಲವಿ ಅವರು ಡಾಕ್ಟರ್ ಕೂಡ ಹೌದು. ಸಾಯಿ ಪಲ್ಲವಿ ಅವರು ಈಗಾಗಲೆ 10 ಹಿಟ್ ಚಿತ್ರಗಳನ್ನು ಕೊಟ್ಟಿದ್ದಾರೆ. ಸಾಯಿ ಪಲ್ಲವಿ ನಟಿಸಿದ ಚಿತ್ರ ನೋಡಲು ಅದೇನೊ ಖುಷಿ. ಸಾಯಿ ಪಲ್ಲವಿ ಅವರು ಸಾವಿರಾರು ಸಿನಿಮಾಗಳಲ್ಲಿ ನಟಿಸಿದ್ದರೂ ಮಲೆಯಾಳಂನಲ್ಲಿ ಪ್ರೇಮಂ ಸಿನಿಮಾದಲ್ಲಿ ಮಲರ್ ಆಗಿ ಕಾಣಿಸಿಕೊಂಡ ಸಾಯಿ ಪಲ್ಲವಿ ಎಲ್ಲರಿಗೂ ಇಷ್ಟವಾದರು.

ಸಾಯಿ ಪಲ್ಲವಿ ಕಾಳಿ, ವರುಣ್ ತೇಜ್ ಜೊತೆ ಫಿದಾ ಸಿನಿಮಾದಲ್ಲಿ ನಟಿಸಿದ್ದಾರೆ. ಸಾಯಿ ಪಲ್ಲವಿ ಅವರು ಇನ್ನುಮುಂದೆ ನಟಿಸುವುದಿಲ್ಲ ಎಂಬ ಗಾಸಿಪ್ ಬಹು ಜನರ ಹಾರ್ಟ್ ಬ್ರೇಕ್ ಮಾಡಿತ್ತು ಆದರೆ ಸಿನಿ ಅಭಿಮಾನಿಗಳು ಬೇಸರ ಪಡುವ ಅವಶ್ಯಕತೆ ಇಲ್ಲ. 30ರ ವಯಸ್ಸಿನ ಸಾಯಿ ಪಲ್ಲವಿ ತಮ್ಮ ಮುಂದಿನ ಚಿತ್ರವನ್ನು ಪ್ರಕಟಿಸಿದ್ದಾರೆ. ಅವರ ಕಾರ್ಗಿ ಚಿತ್ರದ ಶೂಟಿಂಗ್ ಪ್ರಾರಂಭವಾಗಿದೆ.

ಈ ಸಿನಿಮಾ ತಮಿಳು, ತೆಲುಗು, ಕನ್ನಡ ಎಲ್ಲ ಭಾಷೆಯಲ್ಲಿ ತೆರೆ ಕಾಣುತ್ತಿದೆ ಈ ವಿಷಯಕ್ಕೆ ಕನ್ನಡಿಗರು ಬಹಳ ಸಂತೋಷ ಪಟ್ಟಿದ್ದಾರೆ. ಅದ್ಯಾರೊ ನ್ಯಾಷನಲ್ ಸ್ಟಾರ್ ಎನಿಸಿಕೊಂಡವರು ಯಾವುದೊ ವೇದಿಕೆ ಮೇಲೆ ನಿಂತು ಕನ್ನಡ ಗೊತ್ತಿಲ್ಲ ಎಂದು ಕನ್ನಡದ ಋಣ ಮರೆತು ಸೌತ್ ನಲ್ಲಿ ಸೆಟ್ಲ್ ಆದರು. ಕನ್ನಡದವರಲ್ಲದ ನ್ಯಾಚುರಲ್ ಬ್ಯೂಟಿ ಸಾಯಿ ಪಲ್ಲವಿ ಕನ್ನಡವನ್ನು ಕಲಿತು ತಮ್ಮ ಕಾರ್ಗಿ ಚಿತ್ರವನ್ನು ಕನ್ನಡದಲ್ಲಿ ಡಬ್ ಮಾಡುತ್ತಿದ್ದಾರೆ.

ಈ ವಿಷಯವನ್ನು ಕೇಳಿದ ಮೇಲೆ ಕನ್ನಡಿಗರು ಸಾಯಿ ಪಲ್ಲವಿ ಅವರನ್ನು ಇಷ್ಟ ಪಡದೆ ಇರಲು ಸಾಧ್ಯವೇ ಇಲ್ಲ. ಸಾಯಿ ಪಲ್ಲವಿ ಅವರು ಕನ್ನಡವನ್ನು ಕಲಿತು ಡಬ್ ಮಾಡಿದ ಕಾರ್ಗಿ ಚಿತ್ರವನ್ನು ಚಿತ್ರಮಂದಿರಕ್ಕೆ ಹೋಗಿ ನೋಡೋಣ. ಸಾಯಿ ಪಲ್ಲವಿ ಬಗ್ಗೆ ನಿಮ್ಮ ಅನಿಸಿಕೆಯನ್ನು ತಿಳಿಸಿ ಜೊತೆಗೆ ಈ ಲೇಖನವನ್ನು ಹೆಚ್ಚಿನ ಕನ್ನಡಿಗರಿಗೆ ಕಳುಹಿಸಿ.

Leave a Comment

error: Content is protected !!