ಪಾಕಿಸ್ತಾನ ಹಾಗೂ ಶ್ರೀಲಂಕಾ ತಂಡಗಳ ವಿರುದ್ಧ ಭಾರತದ ಸೋಲಿಗೆ ಈ ಒಬ್ಬ ಆಟಗಾರನೇ ಕಾರಣ?

ಈಗಾಗಲೇ ನಿಮಗೆ ತಿಳಿದಿರುವಂತೆ ಅಧಿಕೃತವಾಗಿ ಭಾರತೀಯ ಕ್ರಿಕೆಟ್ ತಂಡ ಈ ಬಾರಿಯ ಏಷ್ಯಾ ಕಪ್ ಟೂರ್ನಮೆಂಟ್ ನಿಂದ ಹೊರ ಬಿದ್ದಿದೆ ಎಂದು ಹೇಳಬಹುದಾಗಿದೆ. ಮೊದಲನೇ ಹಂತದಲ್ಲಿ ಅತ್ಯುತ್ತಮವಾಗಿ ಪ್ರದರ್ಶನ ನೀಡಿದ ಭಾರತೀಯ ಕ್ರಿಕೆಟ್ ತಂಡ ಸೂಪರ್ ಫೋರ್ ಹಂತದಲ್ಲಿ ಸಂಪೂರ್ಣವಾಗಿ ಎಡವಿದೆ.

ಹೌದು, ಸೂಪರ್ ಫೋರ್ ಹಂತದಲ್ಲಿ ಮೊದಲಿಗೆ ಪಾಕಿಸ್ತಾನ ತಂಡದ ವಿರುದ್ಧ ಸೋತ ಭಾರತೀಯ ಕ್ರಿಕೆಟ್ ತಂಡ ನಂತರ ನಿನ್ನೆ ನಡೆದಿರುವ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಸೋಲುವ ಮೂಲಕ ಅಧಿಕೃತವಾಗಿ ಈ ಬಾರಿಯ ಏಷ್ಯಾ ಕಪ್ ಟೂರ್ನಮೆಂಟ್ ಇಂದ ಹೊರಹೋಗುವ ತಂಡ ಎಂಬುದು ಖಚಿತವಾಗಿದೆ. ಆದರೆ ಈ ಎರಡು ಪಂದ್ಯಗಳಲ್ಲಿ ಕೂಡ ಒಂದು ಸ್ವಾಮ್ಯತೆ ಇದೆ. ಭಾರತೀಯ ಕ್ರಿಕೆಟ್ ತಂಡ ಎರಡು ಪಂದ್ಯಗಳಲ್ಲಿ ಸೋಲಲು ಹಲವಾರು ಆಟಗಾರರ ಕಾರಣ ಇದೆ ಆದರೆ ಈ ಒಬ್ಬ ಆಟಗಾರ ಮಾತ್ರ ಕಾಮನ್ ಆಗಿದ್ದಾರೆ.

ಬಹುಶಃ ಏಷ್ಯಾ ಕಪ್ ನಂತರ ಇವರು ಭಾರತೀಯ ಕ್ರಿಕೆಟ್ ತಂಡದಿಂದ ಅದರಲ್ಲೂ ವಿಶೇಷವಾಗಿ ಟಿ20 ತಂಡದಿಂದ ಹೊರ ಹೋದರು ಕೂಡ ಆಶ್ಚರ್ಯ ಪಡಬೇಕಾಗಿಲ್ಲ. ಹೌದು ನಾವು ಮಾತನಾಡುತ್ತಿರುವುದು ಭಾರತೀಯ ಕ್ರಿಕೆಟ್ ತಂಡದ ಅನುಭವಿ ಬೌಲರ್ ಆಗಿರುವ ಭುವನೇಶ್ವರ್ ಕುಮಾರ್ ಅವರ ಬಗ್ಗೆ. ಎರಡು ಪಂದ್ಯಗಳಲ್ಲಿ 19ನೇ ಓವರ್ ಅನ್ನು ಭುವನೇಶ್ವರ್ ಕುಮಾರ್ ಅವರು ಎಸೆದಿರುತ್ತಾರೆ.

ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ 19ನೇ ಓವರ್ ಅನ್ನು ಎಸೆದಿರುವ ಭುವನೇಶ್ವರ್ ಕುಮಾರ್ ಬರೋಬ್ಬರಿ 19 ರನ್ನುಗಳನ್ನು ನೀಡಿ ಸೋಲಿಗೆ ನೇರವಾಗಿ ಕಾರಣರಾಗುತ್ತಾರೆ. ಶ್ರೀಲಂಕಾ ವಿರುದ್ಧವೂ ಕೂಡ 19ನೇ ಓವರ್ ನಲ್ಲಿ ಬರೋಬ್ಬರಿ 14 ರನ್ನುಗಳನ್ನು ನೀಡುತ್ತಾರೆ. ಒಬ್ಬ ಅನುಭವಿ ಬೌಲರ್ ಆಗಿ ಇಷ್ಟೊಂದು ದುಬಾರಿಯಾಗುವುದು ಅದು ಕೂಡ ವಿಶೇಷವಾಗಿ ಕೊನೆಯ ಕ್ಷಣದಲ್ಲಿ ನಿಜಕ್ಕೂ ಕೂಡ ಭುವನೇಶ್ವರ್ ಕುಮಾರ್ ಅವರ ಸಾಮರ್ಥ್ಯದ ಮೇಲೆ ಅನುಮಾನ ಮೂಡುವಂತೆ ಮಾಡುತ್ತದೆ.

Leave A Reply

Your email address will not be published.

error: Content is protected !!