
ಪ್ರೀತಿಸಿ ಮದುವೆಯಾದ ನಾಲ್ಕೇ ತಿಂಗಳಿನಲ್ಲಿ ಯಮಲೋಕ ಸೇರಿಕೊಂಡ ಎಂಜಿನಿಯರ್ ಮಹಿಳೆ. ಈಕೆ ಕೊನೆಯದಾಗಿ ಬರೆದಿಟ್ಟಿದ್ದ ಪತ್ರದಲ್ಲಿ ಸಿಕ್ಕಿದೆ ಸ್ಫೋಟಕ ಮಾಹಿತಿ
ದೇವರು ಮನುಷ್ಯನನ್ನು ಹುಟ್ಟಿಸಿ ಭೂಲೋಕವನ್ನು ಅನುಭವಿಸು ಎಂದು ಬಿಟ್ಟ. ಆದರೆ ಕೆಲವು ಮನುಷ್ಯರು ಅರ್ಧಕ್ಕೆ ತಮ್ಮ ಜೀವನದ ಪಯಣವನ್ನು ಮುಗಿಸಿ ಆ ದೇವರ ಬಳಿ ಸೇರಿಕೊಂಡು ಬಿಡುತ್ತಾರೆ. ತಮ್ಮ ಜೀವವನ್ನು ತಾವೇ ಕೊನೆಗೊಳಿಸುವುದು ದೇವರಿಗೆ ಮೋಸ ಮಾಡಿದಂತೆ. ದಿನೇ ದಿನೇ ಆತ್ಮಹ’ತ್ಯೆ’ ಕೇಸ್ ಗಳು ಜಾಸ್ತಿಯಾಗುತ್ತಿವೆ. ಅದರಲ್ಲೂ ವಿಶೇಷವಾಗಿ ನವವಿವಾಹಿತೆಯರು ಈ ರೀತಿಯ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವ ಘಟನೆಗಳು ಜಾಸ್ತಿ ಕೇಳಿಬರುತ್ತಿವೆ.
ಬೆಂಗಳೂರಿನಲ್ಲಿ ಇಂಜಿನಿಯರ್ ಕೆಲಸ ಮಾಡುತ್ತಿದ್ದ ನವವಿವಾಹಿತ ಮಹಿಳೆ ನೇ’ಣು’ ಬಿಗಿದುಕೊಂಡು ಸಾ’ವ’ನ್ನಪ್ಪಿದ ದುಃಖಕರ ಘಟನೆ ನಡೆದಿದೆ. ಚಿಕ್ಕಮಗಳೂರು ಜಿಲ್ಲೆ ಬೋಳನಹಳ್ಳಿಯ ಅಂಜು ಎಂಬ 28 ವರ್ಷದ ಮಹಿಳೆ ಈ ಕೃತ್ಯವನ್ನು ಮಾಡಿಕೊಂಡಿದ್ದಾಳೆ. ಇಂಜಿನಿಯರಿಂಗ್ ಪದವಿ ಪಡೆದು ಇಂಜಿನಿಯರ್ ಆಗಿ ಅಂದು ಬೆಂಗಳೂರಿನಲ್ಲಿ ಟೆಕ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು. ಈ ಸಮಯದಲ್ಲಿ ಅಂಜನ್ ಕಣಿಯಾರ್ ಎಂಬ ಪುರುಷನ ಪರಿಚಯವಾಗಿ ಇಬ್ಬರ ಮಧ್ಯೆ ಪ್ರೀತಿ ಬೆಳೆದಿತ್ತು.
ಅಂಜು ಮತ್ತು ಅಂಜನ್ ಇಬ್ಬರೂ ಕೂಡ ಮನೆಯವರ ಅಭಿಪ್ರಾಯದ ಮೇರೆಗೆ ಕಳೆದ ನಾಲ್ಕು ತಿಂಗಳ ಹಿಂದೆ ಸಪ್ತಪದಿ ತುಳಿದಿದ್ದರು. ಮದುವೆಯಾದ ಮೇಲೆ ಅಂಜು ಸಿಲಿಕಾನ್ ಸಿಟಿಯ ಸುಬ್ರಹ್ಮನಗರದಲ್ಲಿ ತನ್ನ ಗಂಡನ ಮನೆಯಲ್ಲಿ ವಾಸ ಮಾಡಲು ಪ್ರಾರಂಭ ಮಾಡಿದಳು. ಪ್ರೀತಿ ಮಾಡಿ ಮದುವೆಯಾಗಿದ್ದ ಈ ಜೋಡಿಯಲ್ಲಿ ಮದುವೆಯಾಗುತ್ತಿದ್ದಂತೆ ಬದಲಾವಣೆ ಕಂಡುಬಂತು. ಇಬ್ಬರ ಮಧ್ಯೆ ಭಿನ್ನಾಭಿಪ್ರಾಯ, ಜಗಳ, ಕೌಟುಂಬಿಕ ಕಲಹಗಳು ಶುರುವಾದವು. ಈ ವಿಷಯ ಅಂಜು ಪೋಷಕರಿಗೆ ಕೂಡ ತಿಳಿದಿತ್ತು.
ಗಂಡನ ಮನೆಯಲ್ಲಿ ಬದುಕಲು ನನಗೆ ತುಂಬಾ ಕಷ್ಟ ಆಗುತ್ತಿದೆ. ನನ್ನ ಗಂಡ ಮತ್ತು ಅತ್ತೆ ನನಗೆ ಪ್ರತಿದಿನ ತುಂಬಾ ಕಷ್ಟವನ್ನು ಕೊಡುತ್ತಿದ್ದಾರೆ ಎಂದು ಸ್ವತಃ ಅಂಜು ತನ್ನ ಪೋಷಕರಿಗೆ ಹದಿನೈದು ದಿನಗಳ ಹಿಂದೆಯಷ್ಟೆ ತಿಳಿಸಿದ್ದಳು. ಇದ್ದಕ್ಕಿದ್ದಂತೆ ಶನಿವಾರ (ಜೂನ್ 4) ದಂದು ಇಂದು ತನ್ನ ಗಂಡನ ಮನೆಯಲ್ಲಿ ಸಂಜೆ ಸುಮಾರು 4 ಗಂಟೆ ಗೆ ಆ’ತ್ಮಹ’ತ್ಯೆ ಮಾಡಿಕೊಂಡಿದ್ದಾಳೆ. ವಿಷಯ ತಿಳಿದ ತಕ್ಷಣವೇ ಸಂಜುವಿನಂತ ಪೋಷಕರು ಶಾಕ್ ಆಗಿದ್ದಾರೆ. ಕೊನೆಯದಾಗಿ ಅಂಜು ಈ ರೀತಿ ಪತ್ರ ಬರೆದಿಟ್ಟು ತನ್ನ ಜೀವವನ್ನು ತೆಗೆದುಕೊಂಡಿದ್ದಾಳೆ..
“ನನ್ನ ಸಾ’ವಿ’ಗೆ ನಾನೇ ಕಾರಣ. ನನ್ನ ಮನಸ್ಥಿತಿ ಸರಿ ಇಲ್ಲ.ನಾನು ಏನು ಮಾಡ್ತಿದ್ದೀನಿ ಗೊತ್ತಾಗ್ತಿಲ್ಲ ಅಂಜನ್. ನನಗೆ ಬೆನ್ನು ನೋವಿದೆ. ಆದರೂ ಹೇಳಿಕೊಳ್ಳಲು ಸಾಧ್ಯವಾಗುತ್ತಿಲ್ಲ. ನಿನ್ನ ಮೇಲೆ ಕೋಪ ಹಠ ಮಾಡಿಕೊಳ್ಳುತ್ತಿದ್ದೆ. ನನಗೆ ಬೇಸರವಾಗುತಚತಿತ್ತು. ನನ್ನ ಜೊತೆ ಇದ್ದರೂ ದೂರ ಇದ್ದೀಯಾ ಅಂತಾ ನನಗೆ ಅನ್ನಿಸ್ತಿದೆ. ಏನು ಬರೆಯಬೇಕು ಅಂತ ಗೊತ್ತಾಗ್ತಿಲ್ಲ. ಟಾಟಾ, ಗುಡ್ ಬೈ ಇನ್ಯಾವತ್ತೂ ನಿನಗೆ ತೊಂದರೆ ಕೊಡೋದಕ್ಕೆ ಬರೋದಿಲ್ಲ. ಅಮ್ಮಾ ಐ ಲವ್ ಯೂ, ಹಠ ಮಾಡಿಕೊಂಡು ಇಲ್ಲಿಗೆ ಬಂದೆ. ಹಠ ಮಾಡಿಕೊಂಡು ಹೋಗ್ತಿದ್ದೀನಿ. ಅಮ್ಮಾ ನನ್ನನ್ನು ದಯವಿಟ್ಟು ಕ್ಷಮಿಸು ಎಂದು ಪತ್ರದಲ್ಲಿ ಅಂಜು ತಿಳಿಸಿದ್ದಾಳೆ” . ಪೋಷಕರು ತನ್ನ ಮಗಳ ಈ ಸ್ಥಿತಿಗೆ ಅಂಜುವಿನ ಗಂಡನ ಮನೆಯವರೇ ಕಾರಣ ಎಂದು ದೂರನ್ನು ದಾಖಲಿಸಿದ್ದಾರೆ. ನವವಿವಾಹಿತೆಯರು ಕುಟುಂಬದಲ್ಲಿ ಉಂಟಾಗುವ ಕಲಹ ಗಳಿಂದ ಬೇಸತ್ತು ಬದುಕನ್ನೆ ಕೊನೆಗೊಳಿಸುವ ನಿರ್ಧಾರವನ್ನು ತೆಗೆದುಕೊಳ್ಳುತ್ತಿರುವರು ಸಮಾಜದಲ್ಲಿ ಹೆಚ್ಚುತ್ತಿರುವುದುಕೂಡ ನಿಜಕ್ಕೂ ಬೇಸರದ ವಿಷಯ.