ಹಾಲು ಮಾರುವ ಸಾಮಾನ್ಯ ಮಹಿಳೆ ಬ್ಯಾಂಕಿನಲ್ಲಿ ಸಾಲ ಕೇಳಿದಾಗ ಬ್ಯಾಂಕ್ ಮ್ಯಾನೇಜರ್ ಮಾಡಿದ ಕೆಲಸವೇನು ಗೊತ್ತಾ

ಶ್ಯಾಮಲಾ ಎಂಬ ಮಹಿಳೆ ಬಡ ಕುಟುಂಬದಲ್ಲಿ ಹುಟ್ಟು ಬೆಳೆದವಳು. ವಿದ್ಯಾಭ್ಯಾಸ ಕಲಿಯದೆ ವ್ಯವಸಾಯ ಮತ್ತು ಹಾಲು ಮಾರುವ ವ್ಯಾಪಾರವನ್ನು ಶುರು ಮಾಡಿದ್ದಳು. ಹೊಸ ವ್ಯಾಪಾರವನ್ನು ಶುರು ಮಾಡಲು ಶ್ಯಾಮಲಾಗೆ ಎರಡು ಲಕ್ಷ ರೂಪಾಯಿ ಸಾಲ ಬೇಕಿತ್ತು. ತನ್ನ ಆಪ್ತರ ಬಳಿ ಶ್ಯಾಮಲಾ ಸಾಲವನ್ನು ಕೇಳಲು ಶುರು ಮಾಡಿದಳು. ಆಗ ಶ್ಯಾಮಲಾಳ ಆಪ್ತನೊಬ್ಬ ಬ್ಯಾಂಕ್ ಗೆ ಹೋದರೆ ನಿನಗೆ ಬೇಕಾದಷ್ಟು ಸಾಲ ಕೊಡುತ್ತಾರೆ ಎಂದು ಸಲಹೆ ಕೊಡುತ್ತಾನೆ. ಸ್ನೇಹಿತನ ಮಾತನು ಕೇಳಿ ಶ್ಯಾಮಲಾ ಬ್ಯಾಂಕ್ ಗೆ ಹೋಗುತ್ತಾಳೆ.

ಬ್ಯಾಂಕ್ ಮ್ಯಾನೇಜರ್ ಬಳಿ ಹೋಗಿ ಶ್ಯಾಮಲಾ ನಾನು ಹಾಲಿನ ವ್ಯಾಪಾರ ಶುರು ಮಾಡಬೇಕೆ ನನಗೆ ಸಾಲವನ್ನು ಕೊಡುತ್ತೀರಾ ಎಂದು ಕೇಳುತ್ತಾಳೆ. ಆಗ ಬ್ಯಾಂಕ್ ಮ್ಯಾನೇಜರ್ ನೋಡಮ್ಮ, ನಿನಗೆ ನಾನು ಸಾಲ ಕೊಡಬೇಕೆಂದರೆ ನೀನು ನಮ್ಮ ಬ್ಯಾಂಕ್ ಗೆ ಶ್ಯೂರಿಟಿ ಕೊಡಬೇಕು ಎಂದು ಹೇಳುತ್ತಾನೆ. ಆಗ ಮಹಿಳೆ ಶ್ಯೂರಿಟಿ ಅಂದರೆ ಏನು ಎಂದು ಕೇಳುತ್ತಾಳೆ ಆಗ ಬ್ಯಾಂಕ್ ಮ್ಯಾನೇಜರ್ ಶ್ಯೂರಿಟಿ ಎಂದರೆ ನೀನು ನಮ್ಮಲ್ಲಿ ಸಾಲ ಪಡೆದಿದ್ದಕ್ಕೆ ನಮ್ಮ ಬ್ಯಾಂಕ್ ಗೆ ನೀನು ನಿನ್ನ ಆಸ್ತಿಯನ್ನು ಆತ ಅಡವಿಡಬೇಕು ಎಂದು ಹೇಳುತ್ತಾನೆ.

ಆಗ ಮಹಿಳೆ ತನ್ನ ಬಳಿ ಅಡವಿಡಲಿಕ್ಕೆ ಜಮೀನು ಮತ್ತು ಕುದುರೆ ಇದೆ. ಅದು ಬಿಟ್ಟು ಬೇರೆ ಏನೂ ಇಲ್ಲ ಎಂದು ಹೇಳುತ್ತಾಳೆ. ಆಗ ಬ್ಯಾಂಕ್ ಮೆನೇಜರ್ ಹಾಗಾದರೆ ನೀನು ನಿನ್ನ ಜಮೀನಿನನ್ನು ಅಡವಿಟ್ಟು ಸಾಲ ತೆಗೆದುಕೋ ಎಂದು ಹೇಳುತ್ತಾನೆ. ತಕ್ಷಣ ಮಹಿಳೆ ಜಮೀನನ್ನು ಅಡವಿಟ್ಟು ಎರಡು ಲಕ್ಷ ರೂಪಾಯಿಗಳ ಸಾಲ ತೆಗೆದುಕೊಳ್ಳುತ್ತಾಳೆ. ಸಾಲ ತೆಗೆದುಕೊಂಡ ಎರಡೇ ವರ್ಷಕ್ಕೆ ಬಡ್ಡಿ ಸಮೇತ ಮಹಿಳೆ ಅಸಲನ್ನು ಕೂಡ ತೀರಿಸಿ ಬಿಡುತ್ತಾಳೆ. ಇದನ್ನು ನೋಡಿ ಬ್ಯಾಂಕ್ ಮೆನೇಜರ್ ಒಂದು ಸೆಕೆಂಡ್ ಶಾಕ್ ಆಗುತ್ತಾನೆ.

ಮಹಿಳೆ ಶ್ಯಾಮಲಾ ಬಳಿ ಬ್ಯಾಂಕ್ ಮ್ಯಾನೇಜರ್ ಇಷ್ಟು ಬೇಗ ಹೇಗೆ ಸಾಲ ತೀರಿಸೋಕೆ ಸಾಧ್ಯವಾಯಿತು ಎಂದು ಕೇಳುತ್ತಾನೆ. ಆಗ ಮಹಿಳೆ ಶಾಮಲ ತನ್ನ ವ್ಯಾಪಾರ ದ್ವಿಗುಣವಾಗಿ ಒಂದೇ ವರ್ಷದಲ್ಲಿ ನನಗೆ ಅತ್ಯಧಿಕ ಲಾಭ ಬಂದಿದೆ ಎಂದು ಹೇಳುತ್ತಾಳೆ. ನಾನು ಈಗ ಲಕ್ಷಾಧಿಪತಿ ಆಗಿದ್ದೇನೆ ಎಂದು ಮಹಿಳೆ ಹೇಳುತ್ತಾಳೆ. ಆಗ ಶ್ಯಾಮಲಾ ಬಳಿ ಬ್ಯಾಂಕ್ ಮೆನೇಜರ್ ನಿನ್ನ ಬಳಿ ಇರುವ ಲಕ್ಷ ಲಕ್ಷ ಹಣವನ್ನು ಮನೆಯಲ್ಲಿ ಕೂಡಿಡುವ ಬದಲು ಬ್ಯಾಂಕ್ ಗೆ ತಂದು ಡೆಪಾಸಿಟ್ ಮಾಡಿದರೆ ನಿನಗೆ ಬಡ್ಡಿ ಹಣ ಸಿಗುತ್ತೆ ಎಂದು ಹೇಳುತ್ತಾನೆ. ಆಗ ಮಹಿಳೆ ಬ್ಯಾಂಕ್ ಮೇನೇಜರ್ ಮುಂದೆ ಇದ್ದ ಕುರ್ಚಿ ಮೇಲೆ, ಕಾಲು ಮೇಲೆ ಕಾಲು ಹಾಕಿಕೊಂಡು ಕುಳಿತುಕೊಂಡು ಈ ಮಾತನ್ನು ಹೇಳುತ್ತಾಳೆ.. ನೋಡಪ್ಪ, ನಾನು ನನ್ನ ಬಳಿ ಇರುವ ಲಕ್ಷಗಟ್ಟಲೆ ಹಣವನ್ನು ನಿಮ್ಮ ಬ್ಯಾಂಕ್ ನಲ್ಲಿಟ್ಟರೆ ನನಗೆ ನೀವು ಏನು ಶ್ಯೂರಿಟಿ ಕೊಡುತ್ತೀರಾ ಎಂದು ಕೇಳುತ್ತಾಳೆ. ಶ್ಯಾಮಲ ಕೇಳಿದ ಈ ಪ್ರಶ್ನೆಗೆ ಒಂದು ಸೆಕೆಂಡ್ ಬ್ಯಾಂಕ್ ಮ್ಯಾನೇಜರ್ ದಂಗಾಗಿ ಬಿಡುತ್ತಾನೆ. ಮಹಿಳೆಗೆ ಕೈಮುಗಿದು ವಾಪಸ್ಸು ಕಳಿಸುತ್ತಾನೆ.

Leave A Reply

Your email address will not be published.

error: Content is protected !!