ಆನ್ ಲೈನ್ ನಲ್ಲಿ ಒಂದೂವರೆ ಕೋಟಿ ರೂಪಾಯಿಗಳ ವ್ಯವಹಾರ ಮಾಡಿದ್ದ ಸಾಮಾನ್ಯ ಮಹಿಳೆ ಏಕೆ ಗೊತ್ತಾ ? ಕೊನೆಗೂ ಹೊರಬಿತ್ತು ಶಾಕಿಂಗ್ ರಹಸ್ಯ

ಕೇರಳ ರಾಜ್ಯದ ಚೆಲಾಯಿಲ್ ಮೂಲದ ಬಿಜಿಶಾ ಎಂಬ ಮಹಿಳೆ ಕಳೆದ ವರ್ಷ ಡಿಸೆಂಬರ್ ತಿಂಗಳಿನಲ್ಲಿ ನಿಗೂಢವಾಗಿ ಮೃ’ ತಪಟ್ಟಿದ್ದಳು. ಈಕೆ ಸಾಧಾರಣ ಮಧ್ಯಮ ವರ್ಗದ ಮಹಿಳೆ ಖಾಸಗಿ ಟೆಲಿಕಾಂ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು. 2021 ಡಿಸೆಂಬರ್12 ರಂದು ಬಿಜಿಶಾ ಮನೆಯಲ್ಲಿ ನೇ’ ಣುಬಿಗಿದುಕೊಂಡು ಇಹಲೋಕ ತ್ಯಜಿಸಿದ್ದಳು. ಸಿಸಿಬಿ ಪೊಲೀಸರು ತನಿಖೆ ನಡೆಸಿದಾಗ ಈಕೆಯ ಮೊಬೈಲ್ ನಿಂದ ಒಂದೂವರೆ ಕೋಟಿ ರುಪಾಯಿಗಳು ವ್ಯವಹಾರ ವಾಗಿರುವ ವಿಷಯ ಗೊತ್ತಾಗುತ್ತದೆ. ಖಾಸಗಿ ಟೆಲಿಕಾಂ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಸಾಧಾರಣ ಮಹಿಳೆ ಒಂದೂವರೆ ಕೋಟಿ ರುಪಾಯಿಗಳ ವ್ಯವಹಾರ ಮಾಡುತ್ತಾಳೆಂದರೆ ಹೇಗೆ ಸಾಧ್ಯ.

ಇತ್ತ ತನಿಖೆಯನ್ನು ಕೈಗೆತ್ತಿಕೊಂಡ ಪೊಲೀಸರಿಗೆ ಇದು ದೊಡ್ಡ ಸವಾಲಾಗಿತ್ತು. ತನಿಖೆಯ ಪ್ರಾರಂಭದ ಹಂತದಲ್ಲೇ ಪೊಲೀಸರಿಗೆ ಒಂದೂವರೆ ಕೋಟಿ ವ್ಯವಹಾರ ನಡೆದಿರುವ ವಿಷಯ ಗೊತ್ತಿದ್ದರೂ ಸಹ ಅದರ ಮೂಲ ಕಾರಣ ಹುಡುಕೋಕೆ ಸಾಧ್ಯವಾಗಿರಲಿಲ್ಲ. ಸುಮಾರು 4 ತಿಂಗಳು ಕಳೆದ ಮೇಲೆ ಇದೀಗ ಪೊಲೀಸರಿಗೆ ಬಿಜಿಶಾ ಬಂಡವಾಳ ಗೊತ್ತಾಗಿದೆ. ಬಿಜಿಶಾ ನಿಗೂಢ ರಹಸ್ಯ ಇದೀಗ ಬಯಲಾಗಿದೆ.

ಈ ಮಹಿಳೆ ಒಂದೂವರೆ ಕೋಟಿ ರುಪಾಯಿಗಳ ಹಣವನ್ನು ವ್ಯವಹಾರ ಮಾಡಿರುವ ವಿಷಯ ಮನೆಯವರಿಗಾಗಲಿ ಅಥವಾ ಸಂಬಂಧಿಕರಿಗೆ ಸ್ನೇಹಿತರಿಗೆ ಯಾರಿಗೂ ತಿಳಿದಿರಲಿಲ್ಲ. ಪೊಲೀಸರು ಈಕೆಯ ಮೊಬೈಲ್ ಫೋನನ್ನು ಹ್ಯಾಕ್ ಮಾಡಿ ನೋಡಿದಾಗ ಅವರಿಗೆ ಒಂದು ಕುತೂಹಲದ ವಿಷಯ ಗೊತ್ತಾಗುತ್ತೆ. ಅದೇನೆಂದರೆ ಈ ಮಹಿಳೆ ಆನ್ ಲೈನ್ ಗೇಮ್ ನಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದಳು. ಬಿಜಿಶಾ ಪ್ರತಿದಿನ ಆನ್ ಲೈನ್ ರಮ್ಮಿ ಗೇಮ್ ಆಡುತ್ತಿದ್ದಳು. ಆನ್ ಲೈನ್ ರಮ್ಮಿ ಒಂದು ಬೆ’ಟ್ಟಿಂ’ಗ್ ಆಟ.

ಕೊರೊನಾ ಸಮಯದಲ್ಲಿ ಕೆಲಸವಿಲ್ಲದೆ ಮನೆಯಲ್ಲಿ ಕೂತಾಗ ಈಕೆ ಆನ್ ಲೈನ್ ರಮ್ಮಿ ಆಟದ ಚ’ಟ’ಕ್ಕೆ ಬಿದ್ದಿದ್ದಳು. ಪ್ರತಿ ದಿನವೂ ಕೂಡ ಈಕೆ ಆನ್ ಲೈನ್ ಗೇಮ್ ಆಡುತ್ತಿದ್ದಳು. ಪ್ರಾರಂಭದಲ್ಲಿ ಈಕೆಗೆ ಈ ಆನ್ ಲೈನ್ ಗೇಮ್ ಆಡುವುದರಿಂದ ಸ್ವಲ್ಪ ಹಣ ಬರುತ್ತಿತ್ತು. ದುರಾಸೆಗೆ ಬಿದ್ದ ಮಹಿಳೆ ಬಂದ ಹಣವನ್ನೆಲ್ಲಾ ಅದೇ ಗೇಮ್ ನಲ್ಲಿ ಹಾಕಿ ವ್ಯವಹಾರ ಮಾಡುತ್ತಿದ್ದಳು. ಈ ಆನ್ ಲೈನ್ ಗೇಮ್ ಆಡೋಕೆ ಈಕೆ ಒಂದೂವರೆ ಕೋಟಿ ರುಪಾಯಿಗಳನ್ನು ವ್ಯವಹಾರ ಮಾಡಿದ್ದಾಳೆ ಎಂದರೆ ನೀವೆಲ್ಲಾ ನಂಬಲೇ ಬೇಕು. ಆದರೆ ಈಕೆಗೆ ಒಂದೂವರೆ ಕೋಟಿ ರುಪಾಯಿಗಳು ಎಲ್ಲಿಂದ ಬಂತು ಎಂದು ಪೊಲೀಸರು ತನಿಖೆ ನಡೆಸಿದರು.

ಬಿಜಶಾ ಎಂಬ ಈ ಮಹಿಳೆಯ ತಂದೆ ತಾಯಿಯರು ಮಗಳ ಮದುವೆಗೆಂದು ಮೂವತ್ತೈದು ಲಕ್ಷ ರೂಪಾಯಿಗಳನ್ನು ಉಳಿಸಿದ್ದರು. ತನ್ನ ಮದುವೆಗೆ ತಂದೆ ತಾಯಿ ತೆಗೆದಿಟ್ಟಿದ್ದ ಹಣವನ್ನು ಕೂಡ ಆನ್ ಲೈನ್ ಗೇಮ್ ಆಡೋಕೆ ಬಳಸಿದ್ದಳು. ಅಷ್ಟೇ ಅಲ್ಲ ತಾನು ಕಂಪನಿಯಲ್ಲಿ ದುಡಿದು ಬಂದ ಹಣವನ್ನೆಲ್ಲ ಗೇಮ್ ಆಡೋಕೆ ಖರ್ಚು ಮಾಡಿದ್ದಾಳೆ. ಹಾಗೆ ತನ್ನ ಬಳಿಯಿದ್ದ ಚಿನ್ನ ಒಡವೆಗಳನ್ನೆಲ್ಲ ಬ್ಯಾಂಕ್ ನಲ್ಲಿ ಅಡ ಇಟ್ಟು ಸಾಲ ಕೂಡ ತೆಗೆದುಕೊಂಡಿದ್ದಳು. ಇಷ್ಟೇ ಅಲ್ಲ ಇದಾದ ಮೇಲೆ ಬ್ಯಾಂಕ್ ನಲ್ಲಿ ತನ್ನ ಹೆಸರಿನಲ್ಲೇ ಲೋನ್ ಕೂಡ ತೆಗೆದುಕೊಂಡಿದ್ದಾಳೆ. ದಿನೇದಿನೇ ಲಕ್ಷಾನುಗಟ್ಟಲೆ ವ್ಯವಹಾರವನ್ನು ಮಾಡಿ ಹಣವನ್ನು ಕಳೆದುಕೊಳ್ಳುತ್ತಿದ್ದಳು.

ಕೊನೆಗೆ ಈಕೆಗೆ ಸಾಲವನ್ನು ಮರುಪಾವತಿ ಮಾಡೋಕೆ ಸಾಧ್ಯವಾಗಲಿಲ್ಲ. ಬ್ಯಾಂಕ್ ಗೆ ಬಡ್ಡಿಯನ್ನು ಕೂಡ ಮರುಪಾವತಿ ಮಾಡೋಕೆ ಈಕೆ ವಿಫಲನಾಗುತ್ತಾಳೆ. ಆಗ ಬ್ಯಾಂಕ್ ನವರು ಬಿಜಿಶಾಳ ಸ್ನೇಹಿತರಿಗೆ ಹಣವನ್ನು ಮರುಪಾವತಿ ಮಾಡುವಂತೆ ಸಂದೇಶಗಳನ್ನು ರವಾನಿಸಿದ್ದಾರೆ. ದಿನೇದಿನೇ ಈಕೆಯ ಮೇಲೆ ಒತ್ತಡ ಹೆಚ್ಚಾಗುತ್ತದೆ ಈ ಒತ್ತಡವನ್ನು ತಡೆದುಕೊಳ್ಳಲಾಗದೆ ಬಿದಿಶಾ ಆ ‘ತ್ಮ,ಹತ್ಯೆಗೆ ಶರಣಾಗಿದ್ದಾಳೆ. ನೋಡಿ ಸ್ನೇಹಿತರೇ, ಆನ್ ಲೈನ್ ಗೇಮ್ ಗಳು ನಮ್ಮನ್ನು ದಾಸರನ್ನಾಗಿ ಮಾಡಿ ನಮ್ಮ ಜೀವನವನ್ನೇ ಹಾಳು ಮಾಡುತ್ತವೆ. ನೀವು ಕೂಡ ಈ ರೀತಿಯ ಗೇಮ್ ಗಳನ್ನು ಆಡುತ್ತಿದ್ದರೆ ದಯವಿಟ್ಟು ನಿಲ್ಲಿಸಿ ನಿಮ್ಮ ಕುಟುಂಬದವರನ್ನು ರಕ್ಷಿಸಿ.

Leave a Comment

error: Content is protected !!