ರಾತ್ರೋರಾತ್ರಿ ಐಪಿಎಲ್ ನಿಂದ ಹಣ ಗೆದ್ದು ಕೋಟ್ಯಾಧೀಶನಾದ ಕಾರ್ ಡ್ರೈವರ್. ಐಪಿಎಲ್ ಮ್ಯಾಚ್ ನಿಂದ ಈತನಿಗೆ ಬಂದ ಹಣವೆಷ್ಟು ಗೊತ್ತಾ

ಒಬ್ಬ ಮನುಷ್ಯನ ಅದೃಷ್ಟ ಅಥವಾ ಹಣೆಬರಹ ಯಾವಾಗ ಬೇಕಾದರೂ ಬದಲಾಗಬಹುದು. ರಾತ್ರೋರಾತ್ರಿ ಬಡವನಾಗಿದ್ದವನು ಶ್ರೀಮಂತನಾಗಬಹುದು ಹಾಗೆ ಶ್ರೀಮಂತನಾಗಿದ್ದವನು ಬಡವನೂ ಆಗಬಹುದು. ಇವೆಲ್ಲ ಸಿನಿಮಾಗಳಲ್ಲಿ ಮಾತ್ರ ನಾವು ನೋಡಿರುತ್ತೇವೆ ನಿಜ ಜೀವನದಲ್ಲೂ ಕೂಡ ಈ ರೀತಿ ನಡೆಯುತ್ತದೆ ಎಂದು ನಮಗೆಲ್ಲಾ ಪ್ರಶ್ನೆ ಹುಟ್ಟುತ್ತದೆ. ಸ್ನೇಹಿತರೆ ಬಿಹಾರದ ಮೂಲದ ರಮೇಶ್ ಎಂಬಾತ ಐಪಿಎಲ್ ಆಟದಿಂದ ರಾತ್ರೋರಾತ್ರಿ ಕೋಟ್ಯಂತರ ರೂಪಾಯಿಗಳನ್ನು ಗೆದ್ದು ಕೋಟ್ಯಾಧೀಶನಾಗಿದ್ದಾನೆ. ಒಂದೇ ಒಂದು ರಾತ್ರಿಯಲ್ಲಿ ಡ್ರೀಮ್ 11 ಆಟದ ಮೂಲಕ ಈತ ಕೋಟ್ಯಾಧೀಶನಾಗಿದ್ದಾನೆ.

ಐಪಿಎಲ್ ಆಟವು ವಿಶ್ವದಲ್ಲೇ ಅತಿ ಹೆಚ್ಚು ವೀಕ್ಷಿಸಲ್ಪಡುವ ಕ್ರಿಕೆಟ್ ಲೀಗ್ ಆಗಿದೆ. ಐಪಿಎಲ್ 2022 ರ ಸೀಜನ್ ಮುಗಿಯುವ ಹಂತದಲ್ಲಿದೆ. ಐಪಿಎಲ್ ನಲ್ಲಿ ದಿನನಿತ್ಯ ರೋಚಕ ಪಂದ್ಯಗಳು ನಡೆಯುತ್ತಿವೆ. ಇದೀಗ ಬಿಹಾರದ ಸರನ್ ಜಿಲ್ಲೆಯ ನಿವಾಸಿ ಕಾರ್ ಡ್ರೈವರ್ ರಮೇಶ್ ಕುಮಾರ್ ಎಂಬಾತನ ಬದುಕು ಐಪಿಎಲ್ ನಿಂದ ರಾತ್ರೋರಾತ್ರಿ ಬದಲಾಗಿದೆ. ಐಪಿಎಲ್ ಆಟದಿಂದ ಈತನಿಗೆ ಹೇಗೆ ಕೋಟ್ಯಾಂತರ ಹಣ ಬಂತು ಅದು ನಿಮಗೆ ಆಶ್ಚರ್ಯವಾಗಬಹುದು.

ನೀವೆಲ್ಲಾ ಡ್ರೀಮ್ 11 ಆ್ಯಪ್ ನ ಹೆಸರನ್ನು ಕೇಳಿರುತ್ತೀರಿ ಇದು ಒಂದು ಫ್ಯಾಂಟಸಿ ಗೇಮಿಂಗ್ ಆ್ಯಪ್. ಈ ಆ್ಯಪ್ ನಲ್ಲಿ ನೀವು ನಿಮ್ಮ ಇಷ್ಟವಾದ ಹನ್ನೊಂದು ಆಟಗಾರರ ತಂಡವನ್ನು ರಚಿಸಿ ಕಾಂಟೆಸ್ಟ್ ಗಳಲ್ಲಿ ಭಾಗವಹಿಸಬೇಕಾಗುತ್ತದೆ. ಬಿಹಾರದ ರಮೇಶ್ ಎಂಬ ವ್ಯಕ್ತಿ ಕೂಡ ಇದೇ ಆ್ಯಪ್ ನ ಮೂಲಕ ಕೋಟ್ಯಾಂತರ ಹಣವನ್ನು ಕಳಿಸಿದ್ದಾನೆ. ಮೇ 3 ನೇ ತಾರೀಕಿನ ದಿನದಂದು ಪಂಜಾಬ್ ಕಿಂಗ್ಸ್ ಮತ್ತು ಗುಜರಾತ್ ಟೈಟನ್ಸ್ ವಿರುದ್ಧ ರೋಚಕ ಪಂದ್ಯ ನಡೆದಿತ್ತು. ಈ ಪಂದ್ಯ ನಡೆದ ಬಿಹಾರ್ ನ ರಮೇಶ್ ಕುಮಾರ್ ಡ್ರೀಮ್ 11 ನಲ್ಲಿ ಟೀಮ್ ಮಾಡಿ ದೊಡ್ಡ ಕಂಟೆಸ್ಟ್ ನಲ್ಲಿ ಸೇರಿಕೊಂಡಿದ್ದ. ರಮೇಶ್ ಕೇವಲ 59 ರೂಪಾಯಿಗಳನ್ನು ಖರ್ಚು ಮಾಡಿ ಡ್ರೀಮ್ 11 ನಲ್ಲಿ ತನ್ನ ಟೀಮ್ ರೆಡಿ ಮಾಡಿದ್ದ.

ಲಕ್ಷಾಂತರ ಜನ ರಮೇಶ್ ಸೇರಿಕೊಂಡಿದ್ದ ಕಂಟೆಸ್ಟ್ ನಲ್ಲಿ ಸೇರಿಕೊಂಡಿದ್ದರು. ಆ ಮ್ಯಾಚ್ ನಲ್ಲಿ ಶಿಖರ್ ಧವನ್ ಅವರು 62 ರನ್ ಗಳನ್ನು ಪಡೆದು ನಾಟ್ ಔಟ್ ಆಗಿದ್ದರು. ಮತ್ತು ಕಗಿಸೊ ರಬಾಡಾ ಅವರು 4 ವಿಕೆಟ್ ಗಳನ್ನು ಪಡೆದಿದ್ದರು. ಈ ಡ್ರೈವರ್ ರಮೇಶ್ ಡ್ರೀಮ್ ಇಲೆವೆನ್ ನಲ್ಲಿ ಕಗಿಸೊ ರಬಾಡಾ ನನ್ನು ನಾಯಕನಾಗಿ ಮಾಡಿದ್ದ ಮತ್ತು ಧವನ್ ನನ್ನು ಉಪನಾಯಕನಾಗಿ ಮಾಡಿದ್ದ. ರಮೇಶನ ಅದೃಷ್ಟಕ್ಕೆ ಈ ಇಬ್ಬರೂ ಪಂಜಾಬ್ ನ ಆಟಗಾರರು ಕೂಡ ಆ ದಿನ ಚೆನ್ನಾಗಿ ಆಡಿದ್ದರು. ಹಾಗೆ ರಮೇಶ್ ತನ್ನ ಟೀಮ್ ನಲ್ಲಿ ಹಾಕಿದ್ದ ಉಳಿದ ಆಟಗಾರರಾದ ಗುಜರಾತ್ ಟೈಟನ್ಸ್ ತಂಡದ ಸುದರ್ಶನ್(65* ರನ್) ಮತ್ತು ಪಂಜಾಬ್ ಕಿಂಗ್ಸ್ ತಂಡದ ರಾಜಪಕ್ಷ (40 ರನ್) ಕೂಡ ಚೆನ್ನಾಗಿ ಬ್ಯಾಟಿಂಗ್ ಮಾಡಿದ್ದರು.

ಆ ದಿನ ರಮೇಶ್ ಮ್ಯಾಚ್ ನೋಡದೆ ಮಲಗಿದ್ದ ಆದರೆ ಬೆಳಿಗ್ಗೆ ಎದ್ದು ಅವನ ಮೊಬೈಲ್ ನೋಡಿ ಶಾಕ್ ಆಗಿದ್ದಾನೆ .ಅವನ ಮೊಬೈಲ್ ಗೆ 2 ಕೋಟಿ ರೂಪಾಯಿಗಳನ್ನು ಗೆದ್ದಿರುವ ಮೆಸೇಜ್ ಬಂದಿತ್ತು. ಇಡೀ ದೇಶದಲ್ಲೇ ಈತನ ಟೀಮ್ ನಂಬರ್ ೧ ಸ್ಥಾನ ಗಳಿಸಿತ್ತು. ಡ್ರೀಮ್ ಕಡೆಯಿಂದ ಇವನಿಗೆ ಎರಡು ಕೋಟಿ ರುಪಾಯಿಗಳ ಬಹುಮಾನ ಸಿಕ್ಕಿದೆ. ಆದರೆ ಟ್ಯಾಕ್ಸ್ ಕಡಿತದಿಂದ ಒಂದು ಕೋಟಿ ನಲವತ್ತು ಲಕ್ಷ ರೂಪಾಯಿಗಳು ಈತನ ಅಕೌಂಟ್ ಗೆ ಕ್ರೆಡಿಟ್ ಆಗಿದೆ. ಈ ಹಣದಿಂದ ರಮೇಶನ ಜೀವನವೇ ಬದಲಾಗಿದೆ ರಾತ್ರೋರಾತ್ರಿ ಕೋಟ್ಯಾಧೀಶನಾಗಿದ್ದಾನೆ. ಬಂದ ಹಣವನ್ನು ರಮೇಶ್ ತನ್ನ ಮಕ್ಕಳ ವಿದ್ಯಾಭ್ಯಾಸಕ್ಕೋಸ್ಕರ ಬಳಸುತ್ತೇನೆ. ಮತ್ತು ಉಳಿದ ಹಣವನ್ನು ಸಮಾಜಸೇವೆಗಾಗಿ ಬಳಸುತ್ತೇನೆ ಎಂದು ಹೇಳಿದ್ದಾನೆ.

Leave A Reply

Your email address will not be published.

error: Content is protected !!